ಸ್ಟೇಟಸ್ ಕತೆಗಳು (ಭಾಗ ೧೨೬೪) - ಮಸಣ

ಮಸಣದ ಗೋಡೆಗಳು ಹೊರಗಿನಿಂದ ಜಗತ್ತು ನೋಡುತ್ತಿರುವೆ. ಅಲ್ಲಿ ಮಾಡುವ ನಾಟಕಗಳು ಆಡುವ ಅಬ್ಬರಗಳು ಮೋಸ ವಂಚನೆ ಪ್ರೀತಿ ನೋವು ಎಲ್ಲವನ್ನು ನೋಡಿ ತಮ್ಮೊಳಗೆ ಅದುಮಿ ಹಿಡಿದಿಟ್ಟುಕೊಳ್ಳುತ್ತಿದೆ. ದಿನ ಕಳೆದಂತೆ ಮತ್ತೆ ಅದೇ ಮುಖಗಳು ಈ ಮಸಣದೊಳಕ್ಕೆ ಬಂದು ಕಣ್ಣೀರು ಸುರಿಸುತ್ತಾ ತಾವೇನೋ ಕಳೆದುಕೊಂಡಿದ್ದೇವೆ ಅನ್ನೋ ರೀತಿ ಮಾತನಾಡುವುದನ್ನು ಕಂಡು ಸುಮ್ಮನೆ ನಗುತ್ತಿವೆ. ಮಸಣಕ್ಕೊಂದು ಆಸೆ ತಮಗೆ ಯಾರು ಪರಿದಿ ಹಾಕಬಾರದಿತ್ತು ಎಲ್ಲರೂ ಎಲ್ಲವನ್ನು ನೋಡಿ ತಿಳಿದುಕೊಳ್ಳಬೇಕು ಸತ್ಯ ಹೊರ ಜಗತ್ತಿಗೆ ಸುಲಭದಲ್ಲಿ ಅರ್ಥವಾಗುತ್ತಿತ್ತು . ಈಗ ಮಸಣದೊಳಗಿನ ಮಾತು ಹೊರಗಿನ ಮನಸ್ಸುಗಳಿಗೆ ತಲುಪುತ್ತಿಲ್ಲ ಮಣ್ಣಾಗುವ ಆಲೋಚನೆ, ಮಸಣದೊಳಗಿಂದ ದಾಟಿ ಜನರ ಮನಸೊಳಗೆ ತಲುಪಲಿ ಎನ್ನುವುದೇ ಮಸಣದ ಗೋಡೆಗಳ ಆಶಯ. ಹಾಗಾದರೆ ಮನುಷ್ಯ ಒಂದಷ್ಟು ಸ್ವಾರ್ಥ ಕಳೆದುಕೊಂಡು ಒಳ್ಳೆಯವನಾಗಿ ಬಿಡಬಹುದು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ