ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಓದಿದ್ದು ಕೇಳಿದ್ದು ನೋಡಿದ್ದು-3

 

ಎಚ್ಚೆಸ್ಕೆ ಇನ್ನಿಲ್ಲ

"ವಾರದ ವ್ಯಕ್ತಿ" ಮತ್ತು "ವಾರದಿಂದ ವಾರಕ್ಕೆ"(ನಂತರ ಸುದ್ದಿಯ ಹಿನ್ನೆಲೆ ಎಂದು ಬದಲಾಯಿಸಲಾಯಿತು)  ಅಂಕಣವನ್ನು ಸುಧಾ ವಾರಪತ್ರಿಕೆಯಲ್ಲಿ ಬರೆಯುತ್ತಿದ್ದ "ಸಮದರ್ಶಿ" ಎಚ್ ಎಸ್ ಕೃಷ್ಣಸ್ವಾಮಿ ಅಯ್ಯಂಗಾರ್ ಇನ್ನಿಲ್ಲ.

................................................................................................................

ತಿಳಿ ಹಾಸ್ಯ ಮರೆತಿಲ್ಲ!

ನ್ನಡದಲ್ಲಿ ಹಾಸ್ಯಕ್ಕೊಂದು ಹೊಸ ಆಯಾಮ. ಹೊಸ ಪರಿಧಿ. ಕುವೆಂಪುರವರು "ಬೂಟಾಟಿಕೆ"ಯೆಂದು ಕರೆದ ರಾಜಕೀಯ ನಾಟಕದೊಳು ಇರುವ ಹಾಸ್ಯದ ಘಮಲು ಇನ್ನು ತನ್ನದೇ ಆದ ಸೂರಿನಡಿ ಕಾಣಿಸಿಕೊಳ್ಳುವುದು.

ಹೊಸ ವಿಳಾಸ: ಮಜಾವಾಣಿ.ನೆಟ್

ತಿಳಿ ಹಾಸ್ಯ ಮರೆತಿಲ್ಲ, ಸತ್ಯದ ಸುಳಿವಿಲ್ಲ, ಅಣಕು ಮಾಡುವುದು ಹಿಡಿದು ಸುದ್ದಿಯ ಜಾಡು ಎನ್ನುತ್ತಾರೆ ಬ್ಯೂರೋ ಸದಸ್ಯರೊಬ್ಬರು.

ಮತ್ತೊಬ್ಬ ಸದಸ್ಯರು ಬರೆದು ತಿಳಿಸುವಂತೆ:

"ಮಜಾವಾಣಿಗೆ ನೀವೂ ಬರೆಯಬಹುದು! ತಿಳಿ ಹಾಸ್ಯ ತಿಳಿದಿರಬೇಕು, ಹಾಸ್ಯ ಪ್ರಜ್ಞೆಯಿಲ್ಲದವರಿಂದ ಬೈಸಿಕೊಳ್ಳಲು ರೆಡಿಯಾಗಿರಬೇಕು"

ನೀವು ರೆಡೀನಾ? ಮೇಲೆ ಕ್ಲಿಕ್ ಮಾಡಿ!

ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ... (ಕಥೆ)

ಇವತ್ತು ಶಿಕಾಗೋದಲ್ಲಿ ಅಕ್ಕ ಕನ್ನಡ ಸಮ್ಮೇಳನ ಶುರುವಾಗ್ತಿದೆ.

ಶಿಕಾಗೋ ಇಲ್ಲಿಂದ ದೂರ, ಬಿಡಿ. ಹೋಗೋದು ಕಷ್ಟ. ಆದ್ರೆ ಅಲ್ಲಿ ಬಿಡುಗಡೆ ಆಗೋ ಸ್ಮರಣಸಂಚಿಕೆಗೆ ಅಂತ ಒಂದು ಕಥೆ ಕಳಿಸಿದ್ದೆ ಕೆಲವು ತಿಂಗಳ ಹಿಂದೆ.

ಕೆಲವು ವಾರಗಳ ಹಿಂದೆ ಸಾಹಿತ್ಯ ಸಂಚಿಕೆಯ ಸಂಚಾಲಕರು  ಫೋನ್ ಮಾಡಿ, ನಾನು ಕಳಿಸಿದ್ದ ಕಥೆ ಪ್ರಕಟವಾಗುತ್ತೆ ಈ ಸಂಚಿಕೇಲಿ ಅಂತ ಹೇಳಿದರು. :)

ಗೆಳತಿಗಾಗಿ ಒಂದು ಕವನ

ಓ ಗೆಳತಿ..
ನಿತ್ಯ ನಿನಗಾಗಿ ಕವನ ಬರೆಯಲು
ನನ್ನಾಣೆಗೂ ನಾ ಕವಿಯಲ್ಲ│
ಕಾವ್ಯ, ಕವನದ ಒಗಟು│
ನನಗೆ ತಿಳಿಯದ ಗುಟ್ಟು│

ಅದರೆ ಏನು ಮಾಡಲಿ?
ನಿನ್ನೊಮ್ಮೆ ನೆನೆದ ಕ್ಷಣದಲಿ│
ಮನದ ಭಾವಗಳ ಸರಮಾಲೆ
ಪದಗಳ ರೂಪದಲಿ ಉದ್ಭವಿಸಿ│
ನರನಾಡಿಗಳಲಿ ಸಾಲು ಸಾಲಾಗಿ ಹರಿದು│
ಉಸಿರಿನ ಕಣಗಳಲಿ ಪ್ರಾಸಬದ್ಧವಾಗಿ ಬೆರೆತು│

ಎದೆಯ ಗುಡಿಯ ಒಳಗೆ ಒಂದು ಹೊಸ ಮಿಡಿತ│

ಅನ್ ಸೈಕ್ಲೋಪೀಡಿಯಾ - (ವಿಷಯ)ಮುಕ್ತ ವಿಶ್ವಕೋಶ

ವಿಕಿಪೀಡಿಯಾದಲ್ಲಿ ಬೇಕಾದ ಮಾಹಿತಿ ಸಿಗದೆ ತಲೆ ಕೆಟ್ಟು ಹೋಗಿದೆಯೇ? ವಿಕಿಪೀಡಿಯಾದಲ್ಲಿ ಬಳಸುತ್ತಿರುವ ಭಾಷೆ ಬೇರೆ ಗ್ರಹದ್ದು ಅನ್ನೋ ಅನುಮಾನ ಬರುತ್ತಿದೆಯೇ... ಇಲ್ಲೆದೆ ಎಲ್ಲಕ್ಕೂ ಪರಿಹಾರ. ಅನ್ಸೈಕ್ಲೋಪೀಡಿಯಾ - the content free encyclopedia.

ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 5, 2008 ರ ಸಂಚಿಕೆಯಲ್ಲಿನ ಲೇಖನ.)

ಮೂರು ವರ್ಷಗಳ ಹಿಂದೆ ಸ್ನೇಹಿತರೊಬ್ಬರು ಒಂದು ಕನ್ನಡ ಕಾದಂಬರಿಯನ್ನು ಓದಲು ತಂದುಕೊಟ್ಟರು. ನಾನೇನೂ ಕೇಳಿರಲಿಲ್ಲ. ಚೆನ್ನಾಗಿದೆ, ಓದಿ, ಎಂದು ಅವರೆ ಕೊಟ್ಟಿದ್ದು. ಆರಂಭಿಸಿದಾಗಿನಿಂದ ಬಹುಶಃ ಎಷ್ಟು ಸಾಧ್ಯವೊ ಅಷ್ಟು ಬೇಗ ಓದಿ ಮುಗಿಸಿದ ನೆನಪು. ಮಂಗಳೂರಿನ ಸುತ್ತಮುತ್ತ ಸ್ವಾತಂತ್ರ್ಯಪೂರ್ವದ ಸಮಯದಲ್ಲಿ ನಡೆಯುವ ಕತೆ ಅದು. ಬ್ರಾಹ್ಮಣರ ಮನೆಯ ಹುಡುಗಿಯೊಬ್ಬಳು ಮುಸ್ಲಿಂ ಯುವಕನನ್ನು ಪ್ರೇಮಿಸಿ ಮದುವೆಯೂ ಆಗುವ ಕತೆ. ಮಂಗಳೂರಿನ ಸುತ್ತಮುತ್ತ ಇವತ್ತು ಇರುವ ಜನಾಂಗದ್ವೇಷವನ್ನು ನೆನಸಿಕೊಂಡರೆ ಇವತ್ತಿನ ಸಂದರ್ಭದಲ್ಲಿ ಮೈನಡುಗಿಸುವ ಕಲ್ಪನೆ ಅದು. ಈ ಕತೆಗೆ ಹಿನ್ನೆಲೆಯಾಗಿ ಇರುವುದು ಗಾಂಧೀಜಿ ಮಂಗಳೂರಿಗೆ ಬರುವ ಎಳೆ. ಗಾಂಧೀಜಿಯ ಆಗಮನ ಯಾವಯಾವ ಜನವರ್ಗದಲ್ಲಿ ಯಾವಯಾವ ತರಹದ ತಲ್ಲಣಗಳನ್ನೂ, ಪಲ್ಲಟಗಳನ್ನೂ, ಮೌನಕ್ರಾಂತಿಯನ್ನೂ ಮಾಡುತ್ತದೆ ಎನ್ನುವುದನ್ನು ಅದ್ಭುತವಾಗಿ ತೋರಿಸುವ ಕಾದಂಬರಿ ಅದು. ಒಂದು ಐತಿಹಾಸಿಕ ಘಟನೆಯನ್ನು ಎಳೆಯಾಗಿ ಇಟ್ಟುಕೊಂಡು ಅದರ ಸುತ್ತ ಕಾದಂಬರಿ ಕಟ್ಟುವುದು ಕನ್ನಡದಲ್ಲಿ ಬಹಳ ಕಮ್ಮಿ. ಲೇಖಕರು ತೆಗೆದುಕೊಂಡ ವಿಷಯ, ಅದಕ್ಕೆ ಅವರು ಅಂತಿಮವಾಗಿ ಕೊಟ್ಟ ಅಂತ್ಯ, ಅವರ ಚಿಂತನೆಗಳು, ಆಲೋಚನೆಗಳು ಆದರ್ಶಪ್ರಾಯವಾದವು. ಅಲ್ಲಿಯವರೆಗೂ ನಾನು ಆ ಲೇಖಕರ ಹೆಸರನ್ನೇ ಕೇಳಿರಲಿಲ್ಲ ಎನ್ನುವುದು ನನಗೆ ಒಂದು ರೀತಿಯ ಅವಮಾನದ ವಿಷಯವಾಗಿಬಿಟ್ಟಿತು. ಆ ಕಾದಂಬರಿಯ ಹೆಸರು, "ಗಾಂಧಿ ಬಂದ." ಬರೆದವರು, "ತುಳುನಾಡಿನ ಹೆಣ್ತನದ ಸ್ವಾಭಿಮಾನಿ ದೇವತೆ 'ಸಿರಿ'ಯ ಖಾಸಾ ತಂಗಿಯಂತಿರುವ" ಎಚ್. ನಾಗವೇಣಿ.

ಎರಡು ತಿಂಗಳ ಹಿಂದೆ ನಡೆದ ಪದ್ಮಪ್ರಿಯಾರ ಪ್ರಕರಣ ನಿಮಗೆ ನೆನಪಿರಬಹುದು. ಈ ಪ್ರಕರಣ

ನಿನ್ನಿಂದ

ಕತ್ತಲೆ ತುಂಬಿರುವ ಬಾಳಲ್ಲಿ
ನೀ ಬಂದೆ ಬೆಳಕು ಚೆಲ್ಲಿ
ಹತ್ತಿ ಉರಿಯುತ್ತಿತ್ತು ಬೇಸರ ಮನದಲ್ಲಿ
ಮಾಯವಾಯಿತು ಬೇಸರ ನೀ ಪಕ್ಕ ನಿಂತಲ್ಲಿ !!

-Vರ ( Venkatesha ರಂಗಯ್ಯ )

ನಮ್ಮಧ್ವನಿ

ನಮ್ಮಧ್ವನಿ ಸಮುದಾಯ ರೇಡಿಯೋ ಕೆಂದ್ರ ಬೆಂಗಳೂರುನಿಂದ ಸುಮಾರು 80 ಕಿ.ಮೀ ದೂರದಲ್ಲಿ ಬೂದಿಕೋಟೆಯಲ್ಲಿ ಇದೆ. ಬೂದಿಕೋಟೆ ಕೋಲಾರ ಜಿಲ್ಲೆ, ಬಂಗಾರಪೇಟೆ ತಾಲ್ಲೂಕಿನಲ್ಲಿದೆ. ನಮ್ಮಧ್ವನಿಯನ್ನು ಬೂದಿಕೋಟೆಯಲ್ಲಿ 2002 ರಲ್ಲಿ ಪ್ರಾರಂಭಿಸಿದರು.

ಟೋಪಿ ಹಳೆಯದಾದರೇನು?! ಕೋತಿ ನವನವೀನ!

ಇದು ನನಗೆ ನನ್ನ ಸ್ನೇಹಿತರೊಬ್ಬರಿಂದ ಬಂದ ಈ-ಮೇಲ್ ನ ಕನ್ನಡ ಅನುವಾದ.....................................................
-------------------------------------------------------------------------------------------------------------

ಇದೊಂದು ಹಳೆಯ ಕತೆ ಅಂತ ತಿಳ್ಕೋಬೇಡಿ. ಈ ಹಳೆಯ ಕತೆಗೆ ಹೊಸ ಭಾಗವೊಂದು ಸೇರ್ಪಡೆಯಗಿದೆ. ಕುತೂಹಲಕಾರಿಯಾಗಿದೆ!