ಅನ್ ಸೈಕ್ಲೋಪೀಡಿಯಾ - (ವಿಷಯ)ಮುಕ್ತ ವಿಶ್ವಕೋಶ
ಬರಹ
ವಿಕಿಪೀಡಿಯಾದಲ್ಲಿ ಬೇಕಾದ ಮಾಹಿತಿ ಸಿಗದೆ ತಲೆ ಕೆಟ್ಟು ಹೋಗಿದೆಯೇ? ವಿಕಿಪೀಡಿಯಾದಲ್ಲಿ ಬಳಸುತ್ತಿರುವ ಭಾಷೆ ಬೇರೆ ಗ್ರಹದ್ದು ಅನ್ನೋ ಅನುಮಾನ ಬರುತ್ತಿದೆಯೇ... ಇಲ್ಲೆದೆ ಎಲ್ಲಕ್ಕೂ ಪರಿಹಾರ. ಅನ್ಸೈಕ್ಲೋಪೀಡಿಯಾ - the content free encyclopedia.
ಅನ್ಸೈಕ್ಲೋಪೀಡಿಯ (ಚಿಕ್ಕದಾಗಿ- ಅನ್ ಸೈಕ್), ಅಂತರ್ಜಾಲದ ವಿಶ್ವಕೋಶೀಯ ಅನುಭವದ ಉಪಯುಕ್ತತೆಯನ್ನು, ವಾಸ್ತವದ ನಿಖರತೆಯನ್ನು ಮತ್ತು ಪರಮಸತ್ಯತೆಯನ್ನು ಇನ್ನೂ ಹೆಚ್ಚಿಸುವ ಒಂದು ಪ್ರಯತ್ನ. ಸದ್ಯಕ್ಕೆ ವಿಕಿಪೀಡಿಯ ಪ್ರಪಂಚದಾದ್ಯಂತ ಅತಿ ಹೆಚ್ಚು ಹರಡಿರುವ ವಿಶ್ವಕೋಶದ ಪ್ರಯತ್ನವಾದರೂ ಈ ಯೋಜನೆಯ ಪರಿಕಲ್ಪನೆ ಶುರುವಾದದ್ದು ಅನ್ಸೈಕ್ಲೋಪೀಡಿಯದಿಂದ. ಅನ್ಸೈಕ್ಲೋಪೀಡಿಯ ಇಂದಿಗೂ ವಿಕಿಪೀಡಿಯಗಿಂತಾ ಮುಂದುವರೆದ ತಂತ್ರಜ್ಞಾನವನ್ನು ಬಳಸಿ ಸತ್ಯವನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದೆ. ದಯವಿಟ್ಟು ಅನ್ಸೈಕ್ಲೋಪೀಡಿಯ ಬಳಸಿ. ಸತ್ಯವನ್ನು ಅರಿಯಿರಿ.