ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ

(ನಗೆ ನಗಾರಿ ಸಾಹಿತ್ಯ ಬ್ಯೂರೋ)

ಮಾಜಿ ಕವಿಗಳು, ಹಾಲಿ ಚಿಂತಕರಾದ ಶ್ರೀಯುತ ಪಾಪಣ್ಣನವರು ನಮ್ಮ ವರದಿಗಾರನನ್ನು ಖಾಸಗಿ ನಿವಾಸಕ್ಕೆ ಕರೆಸಿಕೊಂಡು ನೀಡಿದ ಸಂದರ್ಶನದಲ್ಲಿ ‘ನೂರು ವರ್ಷಗಳ ಕಾಲ ಎಲ್ಲಾ ಬಗ್ಗೆಯ ಕಾವ್ಯವನ್ನು ಬ್ಯಾನ್ ಮಾಡಬೇಕು’ ಎಂದು ಸರ್ಕಾರಕ್ಕೆ ಕ್ರಾಂತಿಕಾರಕ ಶಿಫಾರಸ್ಸನ್ನು ಮಾಡಿದ್ದಾರೆ. ಪುಸ್ತಕ, ಪತ್ರಿಕೆ, ಸಿನೆಮಾ, ಸಿನೆಮಾ ಹಾಡು, ಸಿನೆಮಾ ಹಾಡಿನ ಸಾಹಿತ್ಯದಲ್ಲಿ ಸಾಲು ಹೀಗೆ ಯಾವುದಾದರೊಂದನ್ನು ಬ್ಯಾನ್ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹ ಪಡಿಸುತ್ತಾ ಓಡಾಡುತ್ತಿದ್ದ ಪುಡಿ ಸಂಘಟನೆಗಳೆಲ್ಲವೂ ಪಾಪಣ್ಣನವರ ಮಾತನ್ನು ಕೇಳಿ ಬೆಚ್ಚಿ ಬಿದ್ದು ಎದ್ದು ಕುಳಿತಿವೆ.

ಮರಣವೇ ನೀನೇಕೆ ಕಾಡುವೆ?

ಮರಣವೇ ನೀನೇಕೆ ಕಾಡುವೆ
ನಿನಗೆ ನೀಡಲು ನನ್ನೊಡಲಲ್ಲಿ
ಏನಿದೆ ಹೇಳು?

ಬರೀ ಮಾಂಸದ ಮುದ್ದೆ
ದೇಹದಲಿ, ರಕ್ತ ಹೀರಲು ಬರುವಿಯಾ ನೀನು
ಅದೂ ಖಾಲಿಯಾಗಿದೆ ಎಂದೋ

ನರವ್ಯೂಹಗಳಲ್ಲಿ ಜಾಲಾಡಿದರೆ
ನಿನಗೆ ದಕ್ಕಬಹುದು ಒಂದಿಷ್ಟು
ಧಮನಿಗಳಲ್ಲೋಡುತಿಹ ಕಿಚ್ಚಿನಾ ಕಿಡಿಗಳು
ಎಚ್ಚರಿಕೆ! ತರಬಹುದು ಇದು ನಿನಗೆ ಆಘಾತ!!

ನಾನಂದು ನಿನ್ನ ಕಾಲ್ತುಳಿತದೊಳು

ತೆರೆ, ತೆಱೆ

ತೆರೆ=ಪರದೆ
ತೆಱೆ=ಮುಚ್ಚಿದ್ದನ್ನು ತೆಗೆ, ಅನಾವರಣಗೊಳಿಸು
ಉದಾಹರಣೆ:- ಕದ ತೆಱೆ= ಬಾಗಿಲು ತೆಗೆ.

ಮನದೊಳಗಿನ ಅಜ್ಞಾನದ ತೆರೆ ತೆಱೆದಾಗಲೆ ಅಱಿವಾಗುವುದಲ್ತೇ?

"ಕನ್ನಡ+ತಮಿಳ್" = ?

ಬಹಳ ಹಿಂದೆ "ಕನ್ನಡ+ತಮಿಳ್" ಎರಡೂ ನಾಡಿನಲ್ಲಿ ಒಂದೇ ನುಡಿ ಇದ್ದಾಗ ಬಳಸುತ್ತಿದ್ದ ನುಡಿಯ ಹೆಸರೇನು?
ಇದರ ಬಗ್ಗೆ ಚರ್ಚೆ ನಡೆದಿತ್ತು ಎಂದು ಎಣಿಸುತ್ತೇನೆ..

--ಶ್ರೀ

ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?

ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?

ಸಂಪದ ದಲ್ಲಿ ಕೆಲವು ನಾಳುಗಳ ಹಿಂದೆ ಮಾತುಕತೆ ಆಗಿತ್ತು ಹುಡುಕಿದರೆ ಸಿಕ್ತಾ ಇಲ್ಲ..

--ಶ್ರೀ

ನೆನಪುಗಳು

ಕಣ್ಣ ಮುಚ್ಚುವುದಿಲ್ಲ, ಕನಸು ಕಾಣುವುದಿಲ್ಲ,
ತಂಗಾಳಿಯ ತಂಪನ್ನ ಸವಿಯುವುದಿಲ್ಲ,
ಹುಣ್ಣೆಮೆ ಚಂದ್ರನ ಎದುರಲ್ಲಿ ನಿಲ್ಲುವುದಿಲ್ಲ,
ನಡೆವಾಗ ಹೆಜ್ಜೆಯ ಸಪ್ಪಳ ಕೇಳುವುದಿಲ್ಲ,
ದೇವರನ್ನು ಕಣ್ಣಮುಚ್ಚಿ ಪ್ರಾರ್ಥಿಸುವುದಿಲ್ಲ,
................................................ಆದರೆ
ಹೇಗೆ ಗೆಳೆಯ ಉಸಿರಾಡುವುದ ನಿಲ್ಲಿಸಲಿ,

ಕಾಡಬೇಡ ಹೀಗೆ, ಬೇಡ ನಿನ್ನ ನೆನಪುಗಳ

ಕನಸಾ,,,,,,,,,,,,,,,,

ಬಯಸಿದ್ದಲ್ಲ, ತಾನಾಗೆ ದೊರಕಿದ್ದು ,
ತಾನಾಗೆ ದೂರವಾಗೆ ಅಸಹಜತೆ ಎನಿಲ್ಲ,

ತನ್ನದಲ್ಲ, ತನ್ನದು ಆಗಿರಲಿಲ್ಲ,
ತನ್ನದಾಗೆ ಉಳಿಯುವ ಬಯಕೆಯನ್ನು ಕೊಟ್ಟಿರಲಿಲ್ಲ,

ನನ್ನವ ನೀ ನಾಗಲಾರೆ,
ಗೆಳೆಯನಾಗಿ ಬಯಸಿದ್ದೆ, ಇನಿಯನಾಗಲ್ಲ,

ಸ್ನೇಹ ಹಸ್ತವ ಚಾಚಿದ್ದೆ, ಪ್ರೇಮದ್ದಲ್ಲ,
ದೂರಾಗೆ ನೋವಾಗುವುದು ಸಹಜ,

ಈ ಬದುಕಲಿ ಎಲ್ಲ ನಿಜ ನಿಜ ನಿಜ ಅಷ್ಟೆ ಅಲ್ಲವ, ಗೆಳೆಯ,

ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!

"The mother earth has everything for man's aid; but not for his greed!"
-Mahatma Gandhiji.

ಸಂಪೂರ್ಣ ಮಲೀನವಾಗಿ ನಿಂತ ಧಾರವಾಡದ ಕೆಲಗೇರಿ ಕೆರೆಯ ಶೋಚನೀಯ ಸ್ಥಿತಿ ನಮ್ಮ ದುರಾಸೆಯ ಮುಖವಾಡ ಕಳಚಿ, ವಸ್ತುಸ್ಥಿತಿಯತ್ತ ಗಮನಹರಿಸಲು ಒತ್ತಾಯಿಸುತ್ತದೆ.

ಶರಣರ ಬದುಕನ್ನು ಮರಣದಲ್ಲಿ ನೋಡು

ಹೀಗೊಂದು ಕೇಳ್ಮೆ ಕನ್ನಡದಲ್ಲಿ ಇದೆ. ನಾನು ಕೇಳಿದಪ್ರಕಾರ ಇದರರ್ಥ ಅವರಿಗೊದಗಿಬಂದ ಸಾವು, ಸನ್ನಿವೇಶಗಳು ಯಾತನಾರಹಿತ ಕ್ಷಣಗಳು ಅವರು ಹೇಗೆ ಬದುಕಿದರೆಂದು ಸೂಚಿಸುತ್ತದೆ ಎಂದು. ಸಾಮಾನ್ಯವಾಗಿ ಸಾವು ಮನುಷ್ಯನ ಜೀವನದಲ್ಲಿ ಭೌತಿಕವಾಗಿ ಅತ್ಯಂತ ನೋವಿನ ಕ್ಷಣ ಎನ್ನುತ್ತಾರೆ.