ನೆನಪುಗಳು
ಕಣ್ಣ ಮುಚ್ಚುವುದಿಲ್ಲ, ಕನಸು ಕಾಣುವುದಿಲ್ಲ,
ತಂಗಾಳಿಯ ತಂಪನ್ನ ಸವಿಯುವುದಿಲ್ಲ,
ಹುಣ್ಣೆಮೆ ಚಂದ್ರನ ಎದುರಲ್ಲಿ ನಿಲ್ಲುವುದಿಲ್ಲ,
ನಡೆವಾಗ ಹೆಜ್ಜೆಯ ಸಪ್ಪಳ ಕೇಳುವುದಿಲ್ಲ,
ದೇವರನ್ನು ಕಣ್ಣಮುಚ್ಚಿ ಪ್ರಾರ್ಥಿಸುವುದಿಲ್ಲ,
................................................ಆದರೆ
ಹೇಗೆ ಗೆಳೆಯ ಉಸಿರಾಡುವುದ ನಿಲ್ಲಿಸಲಿ,
ಕಾಡಬೇಡ ಹೀಗೆ, ಬೇಡ ನಿನ್ನ ನೆನಪುಗಳ
ಓಕುಳಿ, ಕಣ್ಣುಗಳು ನೋಯುತ್ತಿವೆ,
ಕನಸುಗಳು ಕಾಡುತ್ತಿವೆ, ತಂಗಾಳಿ ಕರೆಯುತ್ತಿದೆ,
ದೇವರ ಮುಂದೆ ನಂದಾದೀಪ ಬೆಳಗ ಬೇಕಿದೆ,
ಇದು ಯಾವುದು ಸಾದ್ಯವಾಗದೆ, ಹೋದರೆ
ಖಂಡಿತಾ ಗೆಳೆಯ ಉಸಿರಾಡುವುದೇ ನಿಲ್ಲಿಸಿ ಬಿಡುವೇ.
Rating
Comments
ಉ: ನೆನಪುಗಳು