ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಲಿನಕ್ಸಾಯಣ - ೧೩ - ನುಡಿ ಫಾಂಟ್ ನಲ್ಲಿ ಎನ್ಕೋಡ್ ಮಾಡಿದ ಪುಟ ಓದಲಿಕ್ಕೆ ಸಹಾಯ

ಇದು ಲಿನಕ್ಸಾಯಣ - ೧೨ ರಲ್ಲಿ ಬರಹ ಎನ್ಕೋಡಿಂಗ್ ಬಗ್ಗೆ ತಿಳಿಸಿದ್ದೆನಲ್ಲ ಅದೇ ರೀತಿ.

ಮೊದಲು ಕನ್ಸೋಲಿಗೆ ಹೋಗಿ, ಕೆಳಕಂಡ ಕಮ್ಯಾಂಡ್ ಗಳನ್ನ ರನ್ ಮಾಡಿ.

(ಗಮನಿಸಿ: ಇಲ್ಲಿ $ ಅನ್ನೋದು ನಿಮ್ಮ ಕನ್ಸೋಲಿನಲ್ಲಿನ ಪ್ಮ್ರಾಂಟ್.)

1) ಮೊದಲಿಗೆ ನುಡಿ ಫಾಂಟ್ ಡೌನ್ ಲೋಡ್ ಮಾಡಿ

$ wget http://freeganita.com/ka/NUDI%20KVK%20E.TTF  

ಕಲ್ಪನೆಯ ಒಂದು ಕ್ಷಣ...

ನೀ ಬರುವ ಮೊದಲೇ ಇದು ಮರೆಯಾಗಿತ್ತು...
ನಿನ್ನ ಚೆಲುವಿನ ಹಾಗೆ...

ಹೃದಯದಲ್ಲಿ ಇದು ಅರಳುವ ಮೊದಲೇ
ಒಂದೇ ಒಂದು ಕ್ಷಣವಾಗಿತ್ತು...
ನಿನ್ನ ಪ್ರೀತಿಯ ಹಾಗೆ...

ಕಲ್ಪನೆಯ ಈ ಒಂದು ಕ್ಷಣ ಆಗ ಕೇವಲ
ಒಂದು ಮಿಡಿತವಾಗಿತ್ತು...ನಿನ್ನ ಮೋಹ
ನನ್ನೆದೆಯಲಿ ಕಾಲಿಡುವ ಮೊದಲೇ..

-ರೇವನ್...

ಹೆಣ್ಣು ಎಕ್ಸ್‌ಪೋಸಿಂಗ್ ಇಲ್ಲದೆ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲವೇ

ಮೊದಲಿನಿಂದಲೂ ಅಂದರೆ ಬಹುಷ: 1975ರ ನಂತರ ಸಿನಿಮಾಗಳಲ್ಲಿ ಎಕ್ಸ್ಪ್‌ಪೋಸಿಂಗ್ ಒಂದು ಅನಿವಾರ್ಯ ದೃಶ್ಯಗಳಾಗಿವೆ

ಸಾತೋಪಂಥ್ ಸರೋವರ

ಸಾತೋಪಂಥ್ ಸರೋವರ ಹಿಮಾಲಯದ ಮಡಿಲಲ್ಲಿ ಅನೇಕ ಪರ್ವತ ಶಿಖರಗಳ ಮಧ್ಯೆ ಸ್ಥಿತವಾಗಿರುವ ಒಂದು ಸಣ್ಣ ಸರೋವರ. ಇದು ಚೌಕಂಭಾ, ನೀಲಕಂಠ್ , ಪಾರ್ವತಿ, ಸ್ವರ್ಗರೋಹಿಣಿ ಮುಂತಾದ ಅನೇಕ ಪರ್ವತಗಳ ನಡುವಿನ ಕಣಿವೆಯಲ್ಲಿರುವ ಈ ಸರೋವರ ಬಹಳ ಪವಿತ್ರ ಸ್ಥಳ. ತ್ರಿಕೋನಾಕಾರದಲ್ಲಿರುವ ಈ ಸರೋವರದ ಮೂರು ತುದಿಗಳಲ್ಲಿ ತ್ರಿಮೂರ್ತಿಗಳು ಸ್ಥಿತವಾಗಿರುವರೆಂದು ನಂಬಿಕೆ.
ಸಾತೋಪಂಥ್ ಯಾತ್ರೆ ಬದರಿನಾಥದಿಂದ ಪ್ರಾರಂಭವಾಗುತ್ತದೆ. ಅಲ್ಲಿಂದ ೩ಕಿ.ಮೀ. ದೂರದಲ್ಲಿ ಮಾನಾ ಎಂಬ ಹಳ್ಳಿ ಸಿಗುತ್ತದೆ. ಇಲ್ಲಿಂದ ಮುಂದೆ ಜನ ಸಂಚಾರ ಇರುವುದಿಲ್ಲ. ರಾತ್ರಿ ತಂಗಲು ಟೆಂಟ್ ಗಳನ್ನೂ, ತಿನ್ನಲು ಆಹಾರವನ್ನೂ ಕೊಂಡೊಯ್ಯಬೇಕಾಗುತ್ತದೆ. ೨೫ಕಿ.ಮೀ. ದೂರದಲ್ಲಿರುವ ಈ ಸರೋವರಕ್ಕೆ ಹೋಗಿಬರಲು ನಮಗೆ ಬೇಕಾಗಿದ್ದು ೫ ದಿನಗಳು.
ದಾರಿ ಬಹಳ ದುರ್ಗಮವಾಗಿದ್ದು ಕೊರೆಯುವ ಚೆಳಿಯಲ್ಲಿ ಹಿಮನದಿಗಳ ಮೇಲೆ ಜಾರುತ್ತಾ, ಬೀಳುತ್ತ, ಉರುಳುವ ಬಂಡೆಗಳ ನಡುವೆ ಸಾಗಬೇಕಾಗುತ್ತದೆ. ದಾರಿಯಲ್ಲಿ ದೂರದ ಬೆಟ್ಟಗಳಲ್ಲಿ ಆಗುತ್ತಿರುವ ಅವಲಾಂಚೆಗಳ ಸದ್ದು ಗುಡುಗಿನಂತೆ ಕೇಳಿಸುತ್ತಿರುತ್ತದೆ.
ಇನ್ನೊಂದು ವಿಶೇಷವೇನೆಂದರೆ ಪಾಂಡವರು ಸ್ವರ್ಗಕ್ಕೆ ಹೊರಟದ್ದು ಈ ದಾರಿಯಲ್ಲೇ ಅಂತೆ. ಸಾತೋಪಂಥ್ ಸರೋವರದವರೆಗೂ ತಲುಪಿದ್ದು ಬರೀ ಧರ್ಮರಾಯ ಮಾತ್ರ. ಸ್ವರ್ಗರೋಹಿಣಿ ಹಿಮನದಿಯ ಮೇಲೆ ನಡೆದು ಹೋದಾಗ ಅವನಿಗೆ ಸ್ವರ್ಗದ ಮೆಟ್ಟಿಲುಗಳು ಕಂಡವಂತೆ. ನಮಗಂತೂ ಸಾತೋಪಂಥದ ದಾರಿಯೇ ಭೂಮಿಯ ಮೇಲಿನ ಸ್ವರ್ಗ ಎನಿಸಿತು.

ಸೇಡು!

ದಡವ ಅಪ್ಪಿ ಹರಿವ ನದಿಯ ಎದೆಯಲ್ಲಿ
ಮೀನುಗಾರಾನ್ಯಾರೋ ಎಂದೋ
ಊರಿದ ಬೆಂಕಿ ಇಂದು ಸಣ್ಣ ಎರೆಹುಳುಗಳಾಗಿ
ಮೀನುಗಳನ್ನು ಗಾಳಕ್ಕೆ ಸಿಕ್ಕಿಸುತ್ತಿವೆ....

ಪ್ರಳಯ ೨೦೧೧

ಎಲ್ಲರ ಬಾಯಲ್ಲೂ ಅದೇ ಮಾತು.ಮನೆಲ್ಲೂ ಅದೇ, ಆಫೀಸಲ್ಲೂ ಅದೇ.೨೦೧೨ಕ್ಕೆ ಪ್ರಳಯವ೦ತೆ.ಪ್ರಳಯವೆ೦ದರೆ ಪ್ರವಾಹದ ಥರವಲ್ಲ.ಇಡಿ ಜಗತ್ತನ್ನೆ ಅ೦ತ್ಯಗೊಳಿಸಲಿರುವ ರುದ್ರತಾ೦ಡವ; ಮಹಾಪ್ರಳಯ.ಜಗತ್ತೆಲ್ಲಾ ನೀರಿನಲ್ಲಿ ಮುಳುಗಿಹೊಗುತ್ತ೦ತೆ ಎ೦ದು ಕೆಲವರೆ೦ದರೇ,ಸೂರ್ಯನೇ ಮುಗಿದುಹೋಗುತ್ತಾನ೦ತೆ, ಅ೦ಧಕಾರದಲ್ಲಿ ರೋಗರುಜಿನ, ಕ್ರೈಮ್ ಗಳು ಜಾಸ್ತಿಯಾಗಿ ಎಲ್ಲರೂ ಸಾಯುತ್ತಾರ೦ತ

ನನ್ನ ಲೇಖನಗಳನ್ನು ಸದ್ಯಕ್ಕೆ ಮುಗಿಸಿದ್ದೇನೆ

ಹೆಚ್ಚಿನ ಪ್ರಶ್ನೆಗಳಿಲ್ಲದಿರುವುದಱಿಂದ ಪ್ರತಿಕ್ರಿಯೆಗಳನ್ನು ಈ ಕೆೞಗಿನ ಲೇಖನಗಳಿಗೆ ಸದ್ಯಕ್ಕೆ ನಿಲ್ಲಿಸಿದ್ದೇನೆ.
೧) ಕನ್ನಡ ತಮಿೞಿಗಿಂತ ಹೞೆಯದೇ?
೨) ಱ ಮತ್ತು ೞ ವಿಚಾರ
೩) ಸುಭಾಷಿತಗಳು
೪) ’ನಾಱು’ ಪದದ ಅರ್ಥ
೫)ಮರಗಳ ಮಹತ್ವ
೬)ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
೭) ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
೮) ಅವನಿವನುವನ್

ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ?

ಕೆಲವು ವೆಬ್ ಸೈಟ್ ಗಳನ್ನ ಬರಹ ಉಪಯೋಗಿಸಿಕೊಂಡು ಸಿದ್ದ ಪಡಿಸಲಾಗಿದೆ. ಉದಾಹರಣೆಗೆ ಕರ್ನಾಟಕದ ಹೊಸ ಪಾಸ್ಪೋರ್ಟ್ ನ ವೆಬ್ಸೈಟ್. ಇದರ ಕನ್ನಡ ಪುಟ ಇಲ್ಲಿದೆ.  ಬರಹದಲ್ಲಿ ಎನ್ಕೋಡ್ ಮಾಡಿದ ಈ ಪುಟಗಳನ್ನ ಲಿನಕ್ಸ್ ನಲ್ಲಿ ಓದೋದ್ ಹ್ಯಾಗೆ?