ಲಿನಕ್ಸಾಯಣ - ೧೩ - ನುಡಿ ಫಾಂಟ್ ನಲ್ಲಿ ಎನ್ಕೋಡ್ ಮಾಡಿದ ಪುಟ ಓದಲಿಕ್ಕೆ ಸಹಾಯ

ಲಿನಕ್ಸಾಯಣ - ೧೩ - ನುಡಿ ಫಾಂಟ್ ನಲ್ಲಿ ಎನ್ಕೋಡ್ ಮಾಡಿದ ಪುಟ ಓದಲಿಕ್ಕೆ ಸಹಾಯ

ಇದು ಲಿನಕ್ಸಾಯಣ - ೧೨ ರಲ್ಲಿ ಬರಹ ಎನ್ಕೋಡಿಂಗ್ ಬಗ್ಗೆ ತಿಳಿಸಿದ್ದೆನಲ್ಲ ಅದೇ ರೀತಿ.

ಮೊದಲು ಕನ್ಸೋಲಿಗೆ ಹೋಗಿ, ಕೆಳಕಂಡ ಕಮ್ಯಾಂಡ್ ಗಳನ್ನ ರನ್ ಮಾಡಿ.

(ಗಮನಿಸಿ: ಇಲ್ಲಿ $ ಅನ್ನೋದು ನಿಮ್ಮ ಕನ್ಸೋಲಿನಲ್ಲಿನ ಪ್ಮ್ರಾಂಟ್.)

1) ಮೊದಲಿಗೆ ನುಡಿ ಫಾಂಟ್ ಡೌನ್ ಲೋಡ್ ಮಾಡಿ

$ wget http://freeganita.com/ka/NUDI%20KVK%20E.TTF  

(ಈ ಫಾಂಟ್ ಹೆಸರಿನಲ್ಲಿರುವ ಬಿಡಿ ಪದಗಳನ್ನ ಒಂದು ಗೂಡಿಸಿದರೆ ಸೂಕ್ತ  ಅದನ್ನ ಈ ಕೆಳಕಂಡ ಹಾಗೆ ಮಾಡ ಬಹುದು)

$mv NUDI\ KVK\ E.TTF NUDI_KVK_E.TTF

2) ಡೌನ್ ಲೋಡ್ ಮಾಡಿದ ಫಾಂಟನ್ನ ಫಾಂಟ್ ಡೈರೆಕ್ಟರಿಗೆ ಹಾಕಿ. (ನಿಮ್ಮ User
ಡೈರೆಕ್ಟರಿಯಲ್ಲೂ ಒಂದು ಫಾಂಟ್ ಡೈರೆಕ್ಟರಿ ಇರುತ್ತದೆ. ಕೆಳಗಿನ ಡೈರೆಕ್ಟರಿಯಲ್ಲಿ
ಫಾಂಟ್ ಹಾಕುವುದರಿಂದ ನಿಮ್ಮ ಕಂಪ್ಯೂಟರಿನಲ್ಲಿ ಕೆಲಸ ಮಾಡುವ ಇತರೆ Userಗಳು ಮತ್ತೆ
ಇದೆಲ್ಲವನ್ನ ಮಾಡಬೇಕಿಲ್ಲ.)

$ sudo mv NUDI_KVK_E.TTF /usr/share/fonts/truetype/ttf-kannada-fonts

3) ನಿಮ್ಮ ಕಂಪ್ಯೂಟರಿನ ಫಾಂಟ್ ಕ್ಯಾಶೆಯನ್ನ ಅಫ್ದೇಟ್ ಮಾಡಿ

$ sudo fc-cache -v

ಇದಾದ ನಂತರ, ನಿಮ್ಮ ಬ್ರೌಸರ್ ಅನ್ನು ಕ್ಲೋಸ್ ಮಾಡಿ ಮತ್ತೆ ಪ್ರಾರಂಭಿಸಿ. ಈಗ ವೆಬ್ಸೈಟನ್ನ ಸಂಪರ್ಕಿಸಿದಾಗ ಕನ್ನಡ ಅಕ್ಷರಗಳು ಓದಲಿಕ್ಕಾಗ್ತದೆ.

ಉದಾಹರಣೆಗೆ :  freeganita.com

Rating
No votes yet

Comments