ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ?

ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ?

ಕೆಲವು ವೆಬ್ ಸೈಟ್ ಗಳನ್ನ ಬರಹ ಉಪಯೋಗಿಸಿಕೊಂಡು ಸಿದ್ದ ಪಡಿಸಲಾಗಿದೆ. ಉದಾಹರಣೆಗೆ ಕರ್ನಾಟಕದ ಹೊಸ ಪಾಸ್ಪೋರ್ಟ್ ನ ವೆಬ್ಸೈಟ್. ಇದರ ಕನ್ನಡ ಪುಟ ಇಲ್ಲಿದೆ.  ಬರಹದಲ್ಲಿ ಎನ್ಕೋಡ್ ಮಾಡಿದ ಈ ಪುಟಗಳನ್ನ ಲಿನಕ್ಸ್ ನಲ್ಲಿ ಓದೋದ್ ಹ್ಯಾಗೆ?

ಅದಕ್ಕೆ ಉತ್ತರ ಇಲ್ಲಿದೆ.  ಮೊದಲು ಕನ್ಸೋಲಿಗೆ ಹೋಗಿ. ನಿಮ್ಮ ಉಬುಂಟುವಿನಲ್ಲಿ ಟರ್ಮಿನಲ್ ಅನ್ನ ಇಲ್ಲಿ ಪಡೀಬಹುದು - Applications -> Accessories -> Terminal.

(ಗಮನಿಸಿ: ಇಲ್ಲಿ $ ಅನ್ನೋದು ನಿಮ್ಮ ಕನ್ಸೋಲಿನಲ್ಲಿನ ಪ್ಮ್ರಾಂಟ್.)

 1) ಮೊದಲಿಗೆ ಬರಹ ಫಾಂಟ್ ಡೌನ್ ಲೋಡ್ ಮಾಡಿ

$ wget http://www.rpobangalore.gov.in/downloads/BRHKANNW.TTF

2) ಡೌನ್ ಲೋಡ್ ಮಾಡಿದ ಫಾಂಟನ್ನ ಫಾಂಟ್ ಡೈರೆಕ್ಟರಿಗೆ ಹಾಕಿ. (ನಿಮ್ಮ User ಡೈರೆಕ್ಟರಿಯಲ್ಲೂ ಒಂದು ಫಾಂಟ್ ಡೈರೆಕ್ಟರಿ ಇರುತ್ತದೆ. ಕೆಳಗಿನ ಡೈರೆಕ್ಟರಿಯಲ್ಲಿ ಫಾಂಟ್ ಹಾಕುವುದರಿಂದ ನಿಮ್ಮ ಕಂಪ್ಯೂಟರಿನಲ್ಲಿ ಕೆಲಸ ಮಾಡುವ ಇತರೆ Userಗಳು ಮತ್ತೆ ಇದೆಲ್ಲವನ್ನ ಮಾಡಬೇಕಿಲ್ಲ.)

 $ sudo mv BRHKANNW.TTF /usr/share/fonts/truetype/ttf-kannada-fonts

3) ನಿಮ್ಮ ಕಂಪ್ಯೂಟರಿನ ಫಾಂಟ್ ಕ್ಯಾಶೆಯನ್ನ ಅಫ್ದೇಟ್ ಮಾಡಿ

$ fc-cache -v

 ಇಲ್ಲಿ sudo ಉಪಯೋಗಿಸದಿದ್ದರೆ, ಲಾಗಿನ್ ಆಗಿರುವ User ನ ಫಾಂಟ್ ಕ್ಯಾಶೆ ಮಾತ್ರ ಅಫ್ದೇಟ್ ಆಗ್ತದೆ.  

$ sudo fc-cache -v

ಇದಾದ ನಂತರ, ನಿಮ್ಮ ಬ್ರೌಸರ್ ಅನ್ನು ಕ್ಲೋಸ್ ಮಾಡಿ ಮತ್ತೆ ಪ್ರಾರಂಭಿಸಿ. ಈಗ ಮೇಲೆ ಹೇಳಿದ ವೆಬ್ಸೈಟನ್ನ ಸಂಪರ್ಕಿಸಿದಾಗ ಕನ್ನಡ ಅಕ್ಷರಗಳು ಓದಲಿಕ್ಕಾಗ್ತದೆ.

 ಸರ್ಕಾರ ಬೈಲಿಂಗ್ಯುಯಲ್ ಫಾಂಟ್ ಗಳನ್ನ ಉಪಯೋಸೋದನ್ನ ನಿಲ್ಲಿಸಿ, ಯುನಿಕೋಡ್ ತಂತ್ರಾಂಶಾಧಾರಿತ ಫಾಂಟ್ಗಳನ್ನ ಬಳಸೋದನ್ನ  ಪ್ರಾರಂಭಿಸ ಬೇಕು. ಇಲ್ಲಾಂದ್ರೆ ಪ್ರತಿಯೊಂದು ವೆಬ್ ಸೈಟ್ ಗೂ ಒಂದೊಂದು ಫಾಂಟ್ ಡೌನ್ಲೋಡ್ ಮಾಡಿಕೊಂಡು ಉಪಯೋಗಿಸ್ಬೇಕಾಗ್ತದೆ. ದಿನಪತ್ರಿಕೆಗಳು ಕೂಡ ಆನ್ಲೈನ್ ನಲ್ಲಿ ಬೈಲಿಂಗ್ಯುಯಲ್ ಫಾಂಟ್ ನಲ್ಲಿರೋದ್ರಿಂದ ಅವನ್ನ ಓದ್ಲಿಕ್ಕೇ ಆಗಲ್ಲ. ಇದು ಕನ್ನಡದ ವೆಬ್ ಸೈಟ್ಗಳಲ್ಲೇ ಏಕೆ? ಬೇರೆ ಭಾಷೆಯ ವೆಬ್ ಸೈಟ್ ಗಳು ಇವತ್ತು ಯುನಿಕೋಡ್ ನಲ್ಲಿವೆ. ಅವರಿಗೆ ತಮ್ಮ ಭಾಷೆಯ ಜನ ವೆಬ್ಸೈಟ್ಗಳ ಉಪಯೋಗ ಸರಳವಾಗಿ ಪಡೀಬೇಕು ಅನ್ನೋ ಅರಿವಿದೆ, ಹೊಸ ತಂತ್ರಾಂಶಗಳನ್ನ ಓದಿ, ಅರಿತು, ಯಾವುದು ನಮ್ಮೆಲ್ಲರಿಗೂ ಹಿತ ಅಂತ ತಿಳಿದು ಕೆಲಸ ಮಾಡೋ ತಾಳ್ಮೆ ಇದೆ. ನಮ್ಮವರಿಗೇನು ಕೋಡೇ? 

Rating
No votes yet

Comments