ಸಾತೋಪಂಥ್ ಸರೋವರ
ಸಾತೋಪಂಥ್ ಸರೋವರ ಹಿಮಾಲಯದ ಮಡಿಲಲ್ಲಿ ಅನೇಕ ಪರ್ವತ ಶಿಖರಗಳ ಮಧ್ಯೆ ಸ್ಥಿತವಾಗಿರುವ ಒಂದು ಸಣ್ಣ ಸರೋವರ. ಇದು ಚೌಕಂಭಾ, ನೀಲಕಂಠ್ , ಪಾರ್ವತಿ, ಸ್ವರ್ಗರೋಹಿಣಿ ಮುಂತಾದ ಅನೇಕ ಪರ್ವತಗಳ ನಡುವಿನ ಕಣಿವೆಯಲ್ಲಿರುವ ಈ ಸರೋವರ ಬಹಳ ಪವಿತ್ರ ಸ್ಥಳ. ತ್ರಿಕೋನಾಕಾರದಲ್ಲಿರುವ ಈ ಸರೋವರದ ಮೂರು ತುದಿಗಳಲ್ಲಿ ತ್ರಿಮೂರ್ತಿಗಳು ಸ್ಥಿತವಾಗಿರುವರೆಂದು ನಂಬಿಕೆ.
ಸಾತೋಪಂಥ್ ಯಾತ್ರೆ ಬದರಿನಾಥದಿಂದ ಪ್ರಾರಂಭವಾಗುತ್ತದೆ. ಅಲ್ಲಿಂದ ೩ಕಿ.ಮೀ. ದೂರದಲ್ಲಿ ಮಾನಾ ಎಂಬ ಹಳ್ಳಿ ಸಿಗುತ್ತದೆ. ಇಲ್ಲಿಂದ ಮುಂದೆ ಜನ ಸಂಚಾರ ಇರುವುದಿಲ್ಲ. ರಾತ್ರಿ ತಂಗಲು ಟೆಂಟ್ ಗಳನ್ನೂ, ತಿನ್ನಲು ಆಹಾರವನ್ನೂ ಕೊಂಡೊಯ್ಯಬೇಕಾಗುತ್ತದೆ. ೨೫ಕಿ.ಮೀ. ದೂರದಲ್ಲಿರುವ ಈ ಸರೋವರಕ್ಕೆ ಹೋಗಿಬರಲು ನಮಗೆ ಬೇಕಾಗಿದ್ದು ೫ ದಿನಗಳು.
ದಾರಿ ಬಹಳ ದುರ್ಗಮವಾಗಿದ್ದು ಕೊರೆಯುವ ಚೆಳಿಯಲ್ಲಿ ಹಿಮನದಿಗಳ ಮೇಲೆ ಜಾರುತ್ತಾ, ಬೀಳುತ್ತ, ಉರುಳುವ ಬಂಡೆಗಳ ನಡುವೆ ಸಾಗಬೇಕಾಗುತ್ತದೆ. ದಾರಿಯಲ್ಲಿ ದೂರದ ಬೆಟ್ಟಗಳಲ್ಲಿ ಆಗುತ್ತಿರುವ ಅವಲಾಂಚೆಗಳ ಸದ್ದು ಗುಡುಗಿನಂತೆ ಕೇಳಿಸುತ್ತಿರುತ್ತದೆ.
ಇನ್ನೊಂದು ವಿಶೇಷವೇನೆಂದರೆ ಪಾಂಡವರು ಸ್ವರ್ಗಕ್ಕೆ ಹೊರಟದ್ದು ಈ ದಾರಿಯಲ್ಲೇ ಅಂತೆ. ಸಾತೋಪಂಥ್ ಸರೋವರದವರೆಗೂ ತಲುಪಿದ್ದು ಬರೀ ಧರ್ಮರಾಯ ಮಾತ್ರ. ಸ್ವರ್ಗರೋಹಿಣಿ ಹಿಮನದಿಯ ಮೇಲೆ ನಡೆದು ಹೋದಾಗ ಅವನಿಗೆ ಸ್ವರ್ಗದ ಮೆಟ್ಟಿಲುಗಳು ಕಂಡವಂತೆ. ನಮಗಂತೂ ಸಾತೋಪಂಥದ ದಾರಿಯೇ ಭೂಮಿಯ ಮೇಲಿನ ಸ್ವರ್ಗ ಎನಿಸಿತು.
ಚಿತ್ರಗಳಿಗಾಗಿ ಸಂದರ್ಶಿಸಿ: http://picasaweb.google.com/keerthi.kiran.m/Satopanth/
ದಾರಿಯಲ್ಲಿ ಸಿಗುವ ಪ್ರಮುಖ ಸ್ಥಳಗಳು:
ಲಕ್ಷ್ಮೀವನ: ಸುಮಾರು ೫೦ ಭೋಜವೃಕ್ಷಗಳಿಂದ ಕೂಡಿದ ಸಣ್ಣ ಸ್ಥಳ. ಮೊದಲ ಕ್ಯಾಂಪ್ಸೈಟ್. ಕುಬೇರ ಪರ್ವತ, ಕೋನಾಲಿಂಗ್ ಶಿಖರ, ಅಲಕಾಪುರಿ, ಬಾಂಗ್ಲಾಂಗ್ ಹಿಮಗಡ್ಡೆಗಳು ಕಾಣಸಿಗುತ್ತವೆ. ದ್ರೌಪದಿಯ ಅಂತ್ಯವಾದ ಸ್ಥಳ.
ಅಲಕಾಪುರಿ ಮತ್ತು ಬಾಂಗ್ ಲಾಂಗ್ ಗ್ಲೇಶಿಯರ್ ಗಳು.
ಲಕ್ಷ್ಮೀವನ
ಬಲಪಾಠೀ: ಭೀಮನ ಗಧೆಯನ್ತಹ ದೊಡ್ಡ ಕಲ್ಲನ್ನು ಕಾಣಬಹುದು. ಭೀಮ ಕೊನೆಯುಸಿರೆಳೆದ ಸ್ಥಳ.
ಬಲಪಾಠೀ
ಸಹಸ್ರಧಾರಾ: ಸುಮಾರು ೧ಕಿ.ಮೀ. ದಾರಿಯಲ್ಲಿ ಸಾವಿರಾರು ಜಲಪಾತಗಳು ಕಾಣಸಿಗುತ್ತವೆ. ನಕುಲ ಸಹದೇವರ ಅವಸಾನವಾದ ಸ್ಥಳ.
ಸಹಸ್ರಧಾರಾ
ಚಕ್ರತೀರ್ಥ: ಅರ್ಜುನ... ಎರೆಡನೇ ಕ್ಯಾಂಪ್ಸೈಟ್. ಚೌಕಂಭ, ಬಾಲಾಕುನ್, ಸಾತೋಪಂಥ್ ಗ್ಲೇಶಿಯರ್ , ನೀಲಕಂಠ್ ನಡುವೆ ಇರುವ ಸುಂದರ ಸ್ಥಳ. ಇಲ್ಲಿಂದ ಸಾತೋಪಂತ್ ೬ಕಿ.ಮೀ. ಮಾತ್ರ.
ಚಕ್ರತೀರ್ಥ, ನೀಲಕಂಠ್
ಸಾತೋಪಂಥ್ ಸರೋವರ
ಸ್ವರ್ಗದ ಮೆಟ್ಟಿಲುಗಳು
ನಾನು.
adventure, badrinath, high altitude lake, himAlaya, satopanth, travel, trekking
Comments
ಉ: ಸಾತೋಪಂಥ್ ಸರೋವರ
In reply to ಉ: ಸಾತೋಪಂಥ್ ಸರೋವರ by sumanajois
ಉ: ಸಾತೋಪಂಥ್ ಸರೋವರ
ಉ: ಸಾತೋಪಂಥ್ ಸರೋವರ
In reply to ಉ: ಸಾತೋಪಂಥ್ ಸರೋವರ by ನೇಸರ
ಉ: ಸಾತೋಪಂಥ್ ಸರೋವರ
In reply to ಉ: ಸಾತೋಪಂಥ್ ಸರೋವರ by keerthi2kiran
ಉ: ಸಾತೋಪಂಥ್ ಸರೋವರ
ಉ: ಸಾತೋಪಂಥ್ ಸರೋವರ
ಉ: ಸಾತೋಪಂಥ್ ಸರೋವರ
ಉ: ಸಾತೋಪಂಥ್ ಸರೋವರ