ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದೀಪಾವಳಿಯು ಬಂದಿಹುದು..

ಎಲ್ಲರಿಗೂ ದೀಪಾವಳಿ ಹಬ್ಬದ ಮುಂಚಿತವಾದ ಶುಭಾಶಯಗಳು. ದೀಪಾವಳಿಯ ಹಬ್ಬಕೆಂದು ಒಂದು ಕವನ ಬರೆದಿರುವೆನು ಒಮ್ಮೆ ಓದಿರಿ.

ಹಬ್ಬ.. ಹಬ್ಬ.. ಬೆಳಕಿನ ಹಬ್ಬ ದೀಪಾವಳಿಯು ಬಂದಿಹುದು
ನಾಡಿಗೆಲ್ಲ ಸಂಭ್ರಮದ ಸಡಗರವ ಹೊತ್ತು ತಂದಿಹುದು
ಮನೆ ಮನೆಯಲಿ ಬೆಳಗೋ ಹಬ್ಬದ ಹುರುಪಿನ ದೀವಿಗೆ
ನವೀರು ಕಳೆಯ ತಂದಿಹುದು ನಮ್ಮಯ ಈ ಬಾಳಿಗೆ..

ಈ ಪಾಶ್ಚಾತ್ಯರಿಗೆ ಬುದ್ಧಿ ಐತಾ !!

ಅಲ್ಲ, ಈ ಕಾಲ ಅಂದ್ರೇನು, ಚಂದ್ರಲೋಕಕ್ಕೆ ಹೋಗುವ ಕಾಲ, ನೆಲದಮೇಲೆ ನಡೆಯದೇ ಬರೀ ಕಾರಿನಲ್ಲೇ ಓಡಾಡುವಕಾಲ. ಆ ಅಮೆರಿಕಾದವರು ಭಾರತದಿಂದ ಚಂದ್ರಶೇಖರ ಶಾಸ್ತ್ರಿ ಅನ್ನೋರನ್ನ ಈಗ ಹೊಸದಾಗಿ ಕಟ್ಟುತ್ತಿರುವ ವರ್ಲ್ಡ್ ಟ್ರೇಡ್ ಸೆಂಟರ್ ಗೆ ವಾಸ್ತು ಸಲಹೆ ಮತ್ತು ವಾಸ್ತು ಹೋಮ ಮಾಡಲು ಕರೆಸಿಕೊಳ್ಳುತ್ತಿದ್ದಾರಂತೆ. ನೋಡಿ ಇದನ್ನೆಲ್ಲಾ ಯಾರಾದ್ರೂ ನಂಬ್ತಾರಾ ಈ ಕಾಲದಲ್ಲಿ.

ಅನರ್ಥ ಕೋಶ-೨


ಆಕಸ್ಮಿಕ-ಪೂರ್ವ ಸೂಚನೆಯಿಲ್ಲದೆ ಆಗಾಗ ನಡೆಯುವ ಘಟನೆಗಳು. ಉದಾ: ಮಗು
ಆನಂದ ಭಾಷ್ಪ-ಅತ್ತೆ ಸತ್ತಾಗ ಸೊಸೆಗೆ ಬರುವ ಕಣ್ಣೀರು.
ಆಮದು-ಸರ್ಕಾರಿ ಕಚೇರಿಗಳಲ್ಲಿ ಟೇಬಲ್ಲಿನ ಕೆಳಗೆ ಪಡೆಯುವಂತಹದು.
ಆಯುಷ್ಕ್ರರ್ಮ-ಆಯುಷ್+ಕರ್ಮ ಬದುಕಿರುವುದೇ ತಪ್ಪೆಂದು ಭಾವಿಸುವುದು.
ಆಯೋಗ-ಯೋಗದ ಪ್ರಕಾರಗಳಲ್ಲೊಂದು

ಕನಸಿಗೂ ಅರ್ಥವೇ

ಕನಸಿಗೂ ಅರ್ಥವೇ ಈ ಅಡಿ ಬರಹದಲ್ಲಿ ಪ್ರತಿ ಕನಸಿಗೂ ಅರ್ಥ ಅಥವಾ ಅಪಾರರ್ಥ ಇದೆಯೇ ?

ನಿಮ್ಮಲ್ಲಿ ಯಾರದರೂ ಮನಶಾಸ್ತ್ರ ವ್ಯೆದ್ಯರಿದ್ದರೆ ಅಥವಾ ಮನಶಾಸ್ತ್ರದ ಬಗ್ಗೆ ತಿಳಿದಿರುವವರಿದ್ದರೆ ದಯವಿಟ್ಟು ಈ ಬ್ಲಾಗ್ ಉದ್ದೇಶವನ್ನು ಈಡೇರಿಸಿ.

ವಿಪರ್ಯಾಸ

ದಿನವೂ ನೋಡುವಂತೆ, ಈ ದಿನವೂ ಕನ್ನಡ ಪ್ರಭ ಈ-ಪೇಪರ್ ಓದುತ್ತಿದ್ದೆ, ಜಿಲ್ಲಾ ಸುದ್ದಿ ಅಡಿಯಲ್ಲಿ ಒಂದರ ಕೆಳಗೊಂದರಂತೆ ಇರುವ ಎರಡು ಸುದ್ದಿಗಳು ಮನಸ್ಸಿಗೆ ತಟ್ಟಿದವು,

ಮೋದಲ ಸುದ್ದಿ "ಭೀಮಕ್ಕನವರ ಮೈಮೇಲೆ ೧೮೦ ಗ್ರಾಂ ಚಿನ್ನ" (ಈ ಭೀಮಕ್ಕನವರ್ ನಿನ್ನೆ ಲೋಕಾಯುಕ್ತರ ಬಲೆಗೆ ಬಿದ್ದ ಮಿಕ).
ಎರಡನೆಯ ಸುದ್ದಿ "ಸಾಲ ಬಾದೆ ತಾಳಲಾರದೇ ರೈತನ ಆತ್ಮಹತ್ಯೆ".

ನಾನು ಮತ್ತು ನೆರಳು

ಹಳೆಯದೆಲ್ಲವ ಮರೆತು
ಒಳಗಿಳಿದಿದ್ದ ಬೇರೂ ಕಿತ್ತು
ಮುಖದ ಗುರುತೂ ಸಿಗದಂತೆ
ಹೊಚ್ಚಹೊಸ ಮುಖವಾಡ ತೊಟ್ಟು
ಹೊಸ ಊರಲ್ಲಿ ಹೊಸಹಾದಿ ಹಿಡಿದು
ನಿಶ್ಚಿಂತ ನಡೆದು ಬಿಡೋಣವೆಂದರೆ-

ನಾಕು ಸುತ್ತು ತಿರುಗಿ
ಪರಿಚಯ ಸ್ನೇಹವಾಗುವುದೇ ತಡ,
ಮತ್ತದೇ ಹಳೆಯ ಆಕೃತಿ ಮೂಡಿ
ಭೂತದ ಕುರುಹುಗಳನ್ನೆಲ್ಲ ಕೆದರಿ
ವರ್ತಮಾನದ ನಿಂತ ನೆಲದ ಮೇಲೂ
ಮತ್ತದೇ ಕರಿನೆರಳು ಮೂಡುವುದು ಖಚಿತ;

ಎಚ್. ಎನ್ ನರಸಿಂಹಯ್ಯರವರ ಹೋರಾಟದ ಹಾದಿ ಪುಸ್ತಕ

ಇದು ಎಚ್. ಎನ್ ನರಸಿಂಹಯ್ಯರವರು ಎಲ್ಲರಿಗೂ ಚಿರಪರಿಚಿತ, ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾರ್ಥಿಯಾದಾಗಿನಿಂದ ತಮ್ಮ ಜೀವನದ ಕಡೆ ಕ್ಷಣದವರೆಗೆ ಅವರು ಕಂಡ ಹಾದಿ, ನಮ್ಮೆಲ್ಲರಿಗೆ ನೀಡಿದ ಸಲಹೆ ಅವಿಸ್ಮರಣೀಯ. ಅವರ ಬಗ್ಗೆ ಹೆಚ್ಚಿನ ವಿಷಯ ನಿಮಗೆ ತಿಳಿದಿದ್ದರೆ ದಯವಿಟ್ಟು ಈ ಬ್ಲಾಗಿನಲ್ಲಿ ಬರೆಯಿರಿ.

ವಿಶ್ವಾಮಿತ್ರನ ತಪಸ್ಸು ಭಂಗ

ಅವಳು : ಹಲ್ಲೋ ಡಿಯರ್,

ನಾನು : ಓಹೋ ನೀನಾ, ನಮಸ್ಕಾರ

ಅವಳು : ಹೌ ಆರ್ ಯು?

ನಾನು : ನನಗೇನು ಧಾಡಿ, ನೀನ್ಹೆಗೆ ಇದ್ದೀಯ?

ಅವಳು : ಐ ಯಾಮ್ ಸುಪೆರ್ಬ್.

ನಾನು : ಕನ್ನಡ ದಲ್ಲಿ ಮಾತಾಡೆ ಮಾರಾಯ್ತಿ?

ಅವಳು : ಒಹ್ ಮೈ ಗಾಡ್, ನವಂಬರ್ ಪ್ರೆಪರಶನ್ನ್ ಮಾಡ್ತಾ ಇದ್ದೀಯ?

ನಾನು: ಇಲ್ಲ ಕಣೆ ಆಫಿಸ ಕೆಲಸ ಬಿಟ್ಟು ಉಳಿದೆಲ್ಲವೂ ಕನ್ನಡದಲ್ಲೆ,

ಅವಳು : ದೇನ್ ಹೌ ಈಸ್ ಲೈಫ್?

ಹೆಸರು ನೀಡಿ

ನಮಸ್ಕಾರ ಸ್ನೇಹಿತರೇ ನಾವು ಗರ್ಭಗೊರಳಿನ ಅರ್ಬುದ (ಸರ್ವಿಕಲ್ ಕ್ಯಾನ್ಸರ್) ಕಾಯಿಲೆಯ ಬಗ್ಗೆ ಒಂದು ಡಾಕ್ಯುಮೆಂಟರಿ ಪಿಲ್ಮ್ ಮಾಡುತ್ತಿದ್ದೇವೆ. ಇದು ಗ್ರಾಮೀಣ ಜನರಿಗೋಸ್ಕರ ತಿಳುವಳಿಕೆ ನೀಡುವೆ ಉದ್ದೇಶದಿಂದ ಮಾಡುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಈ ಕಾಯಿಲೆ ಹೆಚ್ಚಾಗಿ ಇರುವುದರಿಂದ ಅವರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈ ಪಿಲ್ಮ್ ಮಾಡುತ್ತಿದ್ದೇವೆ.