ನಾನು ಮತ್ತು ನೆರಳು

ನಾನು ಮತ್ತು ನೆರಳು

ಹಳೆಯದೆಲ್ಲವ ಮರೆತು
ಒಳಗಿಳಿದಿದ್ದ ಬೇರೂ ಕಿತ್ತು
ಮುಖದ ಗುರುತೂ ಸಿಗದಂತೆ
ಹೊಚ್ಚಹೊಸ ಮುಖವಾಡ ತೊಟ್ಟು
ಹೊಸ ಊರಲ್ಲಿ ಹೊಸಹಾದಿ ಹಿಡಿದು
ನಿಶ್ಚಿಂತ ನಡೆದು ಬಿಡೋಣವೆಂದರೆ-

ನಾಕು ಸುತ್ತು ತಿರುಗಿ
ಪರಿಚಯ ಸ್ನೇಹವಾಗುವುದೇ ತಡ,
ಮತ್ತದೇ ಹಳೆಯ ಆಕೃತಿ ಮೂಡಿ
ಭೂತದ ಕುರುಹುಗಳನ್ನೆಲ್ಲ ಕೆದರಿ
ವರ್ತಮಾನದ ನಿಂತ ನೆಲದ ಮೇಲೂ
ಮತ್ತದೇ ಕರಿನೆರಳು ಮೂಡುವುದು ಖಚಿತ;

ಮರೆತಷ್ಟೂ ಮತ್ತೇಕೆ ಕಾಡುವುದು ಮೂಲ?
ಉತ್ತರ ಕೊಡದೇ ಸುಮ್ಮನೇ ನಗುತ್ತಿದೆ ಕಾಲ!

Rating
No votes yet

Comments