ಅನರ್ಥ ಕೋಶ-೨

ಅನರ್ಥ ಕೋಶ-೨

ಬರಹ


ಆಕಸ್ಮಿಕ-ಪೂರ್ವ ಸೂಚನೆಯಿಲ್ಲದೆ ಆಗಾಗ ನಡೆಯುವ ಘಟನೆಗಳು. ಉದಾ: ಮಗು
ಆನಂದ ಭಾಷ್ಪ-ಅತ್ತೆ ಸತ್ತಾಗ ಸೊಸೆಗೆ ಬರುವ ಕಣ್ಣೀರು.
ಆಮದು-ಸರ್ಕಾರಿ ಕಚೇರಿಗಳಲ್ಲಿ ಟೇಬಲ್ಲಿನ ಕೆಳಗೆ ಪಡೆಯುವಂತಹದು.
ಆಯುಷ್ಕ್ರರ್ಮ-ಆಯುಷ್+ಕರ್ಮ ಬದುಕಿರುವುದೇ ತಪ್ಪೆಂದು ಭಾವಿಸುವುದು.
ಆಯೋಗ-ಯೋಗದ ಪ್ರಕಾರಗಳಲ್ಲೊಂದು
ಆರತಿ-ತಡವಾಗಿ ಮನೆಗೆ ಬರುವ ಗಂಡನಿಗೆ ಹೆಂಡತಿ ಸತ್ಕರಿಸುವ ಒಂದು ಸಂಪ್ರದಾಯ
ಆಲಾಪ-ಮಕ್ಕಳು ಅಳುವ ರಾಗಗಳಲ್ಲೊಂದು.
ಆಶೀರ್ವಾದ-ಹಿರಿಯರು ಮಕ್ಕಳ ಜೊತೆಗೆ ಮಾಡುವ ವಾದ.
ಆಶುಕವಿತೆ-ಕವಿಗಳಿಗೆ ಬರುವ ಕಾಯಿಲೆ. ಲಕ್ಷಣಗಳು: ಸೀನಿದರೆ ಕವಿತೆ, ಕೆಮ್ಮಿದರೆ ಕವಿತೆ, ನಿಂತರೆ ಕವಿತೆ, ಕುಂತರೆ ಕವಿತೆಗಳ ಸುರಿಮಳೆಯಾಗುತ್ತದೆ.

ಇಕ್ಕಟ್ಟು-ಒಕ್ಕಟ್ಟಿಗಿಂತ ಬಲಶಾಲಿಯಾದುದು.
ಇಜ್ಜೋಡು-ಎರಡು ಜೊತೆ ಜೋಡು. ಜೋಡು=ಚಪ್ಪಲಿ.
ಇಣಕು-ಅಣಕಿಸುವುದು ಅಣಕು ಆದರೆ ಇಣಕಿಸುವುದು ಇಣಕು.
ಇತಿಹಾಸ-ಇತಿ+ಹಾಸ ಕೊನೆಯ ನಗು.
ಇದಿರುತ್ತರ-ಪರೀಕ್ಷೆಗಳಲ್ಲಿ ಇದಿರು ಕುಳಿತವರ ಉತ್ತರಗಳನ್ನು ನೋಡಿ ಬರೆಯುವುದು.
ಇಳಿಹೊತ್ತು-ಬಾರಿನಲ್ಲಿ ಇಳಿಯುವ ಸಮಯ.
-ಸಿದ್ಧರಾಮ ಹಿರೇಮಠ. ಕೂಡ್ಲಿಗಿ