ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭರತ ಖಂಡದ ಸುತ್ತ ಒಂದು ಸುತ್ತು... ನೀರಿನ ಜಾಡು ಹಿಡಿದು

Sharada Prasad
ಅಂದು ಸಂಪೂರ್ಣ ಕಾರ್ಪೋರೇಟ್ ಜಗತ್ತಿನಂತಿದ್ದ ಹೋಟೆಲ್ ಸೆಮಿನಾರ್ ರೂಮಿನಲ್ಲಿ ಇಷ್ಟು ಸ್ಪಷ್ಟ ಕನ್ನಡ ಮಾತನಾಡಿದ್ಯಾರು ಎಂದು ಎಲ್ಲರೂ ತಲೆ ಎತ್ತಿ ನೋಡಿದ್ದರು. ತಂತ್ರಜ್ಞಾನದ ಬಗ್ಗೆ ಹೆಚ್ಚು ಅರಿಯದವರೂ ಸ್ಕ್ರೀನಿನ ಮೇಲೆ ಬಂದು ಹೋಗುತ್ತಿದ್ದ ಗೂಗಲ್ ದುಮ್ಯಾಪುಗಳು, ಅದರೊಂದಿಗೆ ಪ್ರಸಾದ್ ರವರ GPS trail ಎಲ್ಲರ ಗಮನವನ್ನು ಸೆಳೆದಿತ್ತು.

ಇವತ್ತು ಪ್ರಸಾದ್ ಇಡಿಯ ಭರತ ಖಂಡ ಸುತ್ತಿ ಬರಲು ಸಜ್ಜಾಗಿದ್ದಾರೆ. ಅದೂ ತಮ್ಮ ಬೈಕಿನ ಮೇಲೆಯೇ. ಉದ್ದೇಶ ನೀರಿನ ಬಳಕೆ ಹಾಗೂ ಮೂಲಗಳ ಬಗ್ಗೆ, ಒಟ್ಟಾರೆ ಭಾರತದಲ್ಲಿನ ಸದ್ಯದ ನೀರಿನ ಪರಿಸ್ಥಿತಿಯ ಬಗ್ಗೆ ಅಧ್ಯಯನ ನಡೆಸುವುದು. ತಮ್ಮ GPS ಡಿವೈಸ್ ಹಿಡಿದು ಅವರು ಹಿಡಿಯುವ ದಾರಿ ಅಂತರ್ಜಾಲದಲ್ಲಿ ರೆಕಾರ್ಡ್ ಮಾಡುತ್ತ ಹೋಗುವರು. ಜೊತೆಗೆ ತಮ್ಮ ಅನುಭವವನ್ನು ಕನ್ನಡದಲ್ಲಿ ಹಂಚಿಕೊಳ್ಳುವರು.

ಪ್ರಸಾದ್ ಜೊತೆ ಮೊನ್ನೆ ಮಾತನಾಡಿದೆವು. ಮಾತುಕತೆಯ ಕೆಲ ಭಾಗಗಳು ಇಗೋ ನಿಮ್ಮ ಮುಂದಿದೆ. (ಪುಟದ ಕೊನೆ ನೋಡಿ - ಸಂಪೂರ್ಣ ಲೇಖನ ಹಾಗೂ ಮತ್ತಷ್ಟು ಗ್ನು/ಲಿನಕ್ಸ್ ಹಬ್ಬದ ನಂತರ ಹಾಕುವೆ!)

ಪ್ರಸಾದ್ ರವರನ್ನು ಸಂಪರ್ಕಿಸಲು csp@arghyam.org ಗೆ ಇ-ಮೇಯ್ಲ್ ಮಾಡಿ. ಇವರೊಂದಿಗೆ ಅಯಾ ಊರುಗಳಿಂದ ಸ್ನೇಹಿತರೂ ಜೊತೆಗೂಡುತ್ತಿದ್ದಾರೆ. ನಿಮಗೆ ಆಸಕ್ತಿಯಿದ್ದರೆ ನೀವೂ ಜೊತೆಗೂಡಬಹುದು. ಹೆಚ್ಚಿನ ಮಾಹಿತಿಗೆ http://www.indiawaterportal.org/k2k/ ನೋಡಿ.

ಅವರ ಈ ಯಾತ್ರೆ ಶುಭವಾಗಲಿ ಎಂದು ಹಾರೈಸೋಣ, ಕನ್ನಡದವರೊಬ್ಬರಿಂದ ನಡೆಯುತ್ತಿರುವ ಇಂತಹ ಪ್ರಯತ್ನವೊಂದಕ್ಕೆ ನಮ್ಮೆಲ್ಲರ ಪ್ರೋತ್ಸಾಹ ನೀಡೋಣ :-)

ಪ್ರಸಾದ್ ರವರ ಯಾತ್ರೆಗೆ Flag off ಇಂದು, ಬೆಳಿಗ್ಗೆ 9.00 ಕ್ಕೆ,

ಫೋಟೋ ಕೃಪೆ: ಬೆಂಗಳೂರು ಮಿರರ್, ನಿಶಾಂತ್ ರತ್ನಾಕರ್.

ಜಿಲೇಬಿ ಮತ್ತು ಕನ್ನಡ

ಹಲವರು (especially ತಮಿಳರು) ಕನ್ನಡ ಲಿಪಿಯನ್ನು ಜಿಲೇಬಿಯಂತೆ ಕಾಣುತ್ತೆ ಅಂತ ಜರಿಯೋಕೆ ನೋಡ್ತಾರೆ. ಕನ್ನಡದ ಎಲ್ಲ ಅಕ್ಕರಗಳು ಗುಂಡು ಗುಂಡಾಗಿರುವದು ದಿಟ. ಆದರೂ ತಮಿಳನೊಬ್ಬ ಹಂಗಂದಾಗ "ನಿಮ್ಮ ___ಗಿಂತ ಬೆಟರ್ ಆಗಿದೆ" ಅಂತ ತಿರುಗೇಟು ನೀಡಬೇಕು. ಬಿಟ್ಟ ತಾಣ ತುಂಬಿ ಪ್ಲೀಸ್.

ದ್ರಾವಿಡ ಶಬ್ದ ದಕ್ಷಿಣದ ಇತರ ಭಾಷೆಗಳಿಗೆ ಅನ್ವಯಿಸುವುದಿಲ್ಲ

ದ್ರಾವಿಡ ಎಂದರೆ ತಮಿೞ್‍. ತಮಿೞಿಗೆ ಸಂಸ್ಕೃತದಲ್ಲಿ ದ್ರಮಿಡ ಎಂದರು. ಅದೇ ದ್ರವಿಡ ಆಯ್ತು. ದ್ರವಿಡ ಸಂಬಂಧಿ ದ್ರಾವಿಡ ಅಷ್ಟೇ. ಕನ್ನಡಕ್ಕೆ ಸಂಸ್ಕೃತದಲ್ಲಿ ಕರ್ಣಾಟ ಅಂದರು. ಕರ್ಣಾಟಕ (ಗಮನಿಸಿ ಕರ್ನಾಟಕ ಅಲ್ಲ. ಅದು ಸಂಸ್ಕೃತದ ಪ್ರಕಾರ ತಪ್ಪು) ಕನ್ನಡ ಮಾತಾಡುವವರ ಪ್ರದೇಶ. ತೆಲುಗಿಗೆ ಆಂಧ್ರ.

ಆಟೋ ಅಣಿಮುತ್ತುಗಳು - ೩

ನಿನ್ನೆ ಮ್ಯೂಸಿಯಂ ರೋಡಿನಲ್ಲಿ ತೆಗೆದ ಫೋಟೊ.

MOSTLY ವರದಕ್ಷಿಣೆಯಾಗಿ ಕೊಟ್ಟಿದ್ದು ಅನ್ಸುತ್ತೆ.. ಅಲ್ವೇ ?

-------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

http://somari-katte.blogspot.com

ಬಿಜೆಪಿ ಯ ಪ್ರಣಾಳಿಕೆಯಲ್ಲಿನ ಅರ್ಥವಾಗದಿದ್ದ ಅಂಶ

>>"ಸುರಕ್ಷಿತ ಹೆರಿಗೆಗೆ ಕ್ರಮ; ಆಸ್ಪತ್ರೆಯಲ್ಲಿ ಜನಿಸುವ ಪ್ರತಿ ಮಗುವಿಗೆ ರೂ. 1000 ಸಹಾಯ ಧನ."

ಮಗು ಹುಟ್ಟುತ್ತಿದ್ದ ಹಾಗೇ ಅದನ್ನು ಅನಾಥವೆಂದು ಭಾವಿಸುವುದೋ ಅಥವಾ 18 ವರ್ಷದ ನಂತರದ ದೂರಾಲೋಚನೆಯೋ ಅಥವಾ ಬಿಜೆಪಿ ಸರ್ಕಾರ ರಚಿಸಿದಲ್ಲಿ ಮಕ್ಕಳನ್ನು ಸಾಕುವುದು ಅಸಾಧ್ಯವೋ ಏನೋ ತಿಳಿಯಲಿಲ್ಲ. ತಿಳಿಸಿದರೆ ಕೃತಾರ್ಥ.

ನಮ್ಮಲ್ಲಿ ಎಷ್ಟು ಜನ ಓಟು ಹಾಕ್ತೀವಿ??

ರಾಜಕೀಯದ ಬಗ್ಗೆ ತುಂಬಾ ಅಂದ್ರೆ ತುಂಬಾನೇ ಹಗುರವಾಗಿ ಮಾತಾಡೊ ನಾವೆಲ್ಲಾ...ಎಷ್ಟರ ಮಟ್ಟಿಗೆ ನಮ್ಮ ಕರ್ತವ್ಯ ಪಾಲಿಸ್ತಾ ಇದ್ದಿವಿ??? ಚುನಾವಣೆ ಹತ್ತಿರ ಇರೋದ್ರಿಂದ ಬರೀತಾ ಇದ್ದಿನಿ..

ಹೞಗನ್ನಡದ ’ಱ’ ಹಾಗೂ ’ೞ’ ಗಳು ಬೇಕೇ?

ಬೇಕೇ ಬೇಕು. ಈ ಎರಡು ಅಕ್ಷರಗಳು ದ್ರಾವಿಡ ಭಾಷೆಗೆ ವಿಶೇಷವಾದ ಅಕ್ಷರಗಳು. ಇವುಗಳನ್ನು ಕೇವಲ ಸಂಕೇತಗಳನ್ನಾಗಿ ಬೞಸದೆ ’ರ’ ಮತ್ತು ’ಱ’ ನಡುವಿನ ಉಚ್ಚಾರ ವ್ಯತ್ಯಾಸ ಹಾಗೆಯೆ ’ಳ’ ಮತ್ತು ’ೞ’ ನಡುವಿನ ಉಚ್ಚಾರ ವ್ಯತ್ಯಾಸಗಳು ಕೂಡ ಮುಖ್ಯ. ಸಿರಿಗನ್ನಡಂ ಬಾಳ್ಗೆ ಎಂದರೆ ಸಿರಿಗನ್ನಡ ಕತ್ತಿಗೆ ಅಂದರೆ ಸಿರಿಗನ್ನಡ ಕತ್ತಿಗೆ ಬಲಿಯಾಗಲಿ ಎಂದೂ ಆಗುತ್ತದೆ.