ವಾಹ್, ಮಿಚಿಗನ್ ಸರೋವರ ; ಬದಿಯ ಬೈಕಿಂಗ್ ಹಿಗ್ಗು, ತಲೆಯೆತ್ತಿ ನೋಡೆ, ಚಂದದ ಸೀಗಲ್ ಪಕ್ಷಿ- ಏನು ರಮ್ಯ, ಅದೇನು ಸಂತಸ !

ವಾಹ್, ಮಿಚಿಗನ್ ಸರೋವರ ; ಬದಿಯ ಬೈಕಿಂಗ್ ಹಿಗ್ಗು, ತಲೆಯೆತ್ತಿ ನೋಡೆ, ಚಂದದ ಸೀಗಲ್ ಪಕ್ಷಿ- ಏನು ರಮ್ಯ, ಅದೇನು ಸಂತಸ !

ಬರಹ

ಇಂಥ ಸೊಗಸಾದ ನಿಸರ್ಗಸೌಂದರ್ಯವನ್ನು ನಾವು ಕಂಡಿದ್ದು ಮಿಚಿಗನ್ ಮಹಾಸರೋವರದ ದಂಡೆಯಮೇಲೆ ! ಚಿಕಾಗೋಮಹಾನಗರಕ್ಕೆ ಇದು ಅತ್ಯಂತ ಹತ್ತಿರ. ಪಕ್ಕದಲ್ಲೇ ಪ್ರಖ್ಯಾತ ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದ ಕ್ಯಾಂಪಸ್, ಕಣ್ಣುಹಾಯ್ದಷ್ಟೂ ದೂರದ ಜಲರಾಶಿ. ಮಿಚಿಗನ್ ಸರೋವರ ಕೆಲವೊಮ್ಮೆ ಕೋಡಿಹರಿದರೆ, ಅದರ ಪೂರ್ತಿ ಉಪಯೋಗ ನಾರ್ತ್ ವೆಸ್ಟರ್ನ್ ಕಾಲೇಜಿಗೆ. ಯೇಕೆಂದರೆ, ಅಲ್ಲಿ ಒಂದು ಮಾನವನಿರ್ಮಿತ ಪುಟ್ಟ ಕೆರೆ ಇದೆ. ಅದರಲ್ಲಿ ಒಂದು ಸುಂದರ ನೀರಿನ ಚಿಲುಮೆ ನೀರಿನ ಮಧ್ಯಭಾಗದಲ್ಲಿದ್ದು, ಶೋಭಾಯಮಾನವಾಗಿದೆ.
ಅಮೆರಿಕದಲ್ಲೇ ಪೂರ್ತಿಯಾಗಿ ಹರಡಿಕೊಂಡಿರುವ ಅತಿದೊಡ್ಡ ಸರೋವರಗಳಲ್ಲಿ ಇದು ಮುಖ್ಯ. ವಿಶ್ವವಿದ್ಯಾಲಯಕ್ಕೆ ತಮ್ಮ ಮಕ್ಕಳನ್ನು ದಾಖಲಿಸಲು ಬರುವ ತಂದೆತಾಯಿಗಳಂತೂ ಈ ದೃಷ್ಯವನ್ನು ಕಂಡು ಕ್ಲೀನ್ ಬೋಲ್ಡ್ ಆಗ್ಬಿಡ್ತಾರೆ. ನಾನು ಇದನ್ನು ಗಮನಿಸುತ್ತಿದ್ದೆ !

ಉಳಿದ ನಾಕು ಸರೋವರಗಳು ಕೆನಡಾದೇಶದೊಡನೆ ತಮ್ಮ ನಂಟನ್ನು ಹೊಂದಿವೆ. ಈ ಸರೋವರಕ್ಕೆ ಸೇರುವಂತೆ ಮೊದಲು ಚಿಕಾಗೋನದಿಯ ಹರಿಯುವಿಕೆ ಇತ್ತು. ಆದರೆ ನಗರದ ಅತಿಯಾದ ಯಂತ್ರೀಕರಣದ ಪ್ರಭಾವದಿಂದ ಮಲಿನವಸ್ತುಗಳು, ತ್ಯಾಜ್ಯವಸ್ತುಗಳು ಸರೋವರಕ್ಕೆ ಸೇರಲು ಆರಂಭಿಸಿದಮೇಲೆ, ನಗರಪಿತೃಗಳು ಸಮಾಲೋಚಿಸಿ ಚಿಕಾಗೋನದಿಯ ಹರಿಯುವದಿಕ್ಕನ್ನೇ ಬದಲಾಯಿಸಿದರು. ಇದೊಂದು ಮಾನವನಿರ್ಮಿತ ಅದ್ಭುತಕಾರ್ಯಗಳಲ್ಲೊಂದು. ಇಂತಹ ಅದೆಷ್ಟು ಅದ್ಭುತ ಹೊಸ ಹೊಸ ತಾಂತ್ರಿಕತೆಗಳ ತಾಣವೋ ಈ ಮಹಾನ್ ವಲಸೆಗಾರರ ನಾಡು- ಅಮೆರಿಕ !! ಇದರ ಪೂರ್ಣವಿವರಗಳ ಬಗ್ಗೆ ’ ನೆಟ್” ನಲ್ಲಿ ಸಂಪರ್ಕಿಸಿ.

-ಚಿತ್ರ್ ನಾನೇ ತೆಗೆದದ್ದು.