ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇದೇ ಅಂತರಂಗ ಶುದ್ಧಿ…!

ಆತ್ಮಸಾಕ್ಷಿ - ಆತ್ಮವಿಮರ್ಶೆ - ಆತ್ಮಾವಲೋಕನ - ಎಂದರೆ ಏನು ? ಅದಕ್ಕಿರುವ ಮಾನದಂಡಗಳೇನು ? ಅದನ್ನು ಸಾಧಿಸುವುದು ಹೇಗೆ ? ಅದಕ್ಕಾಗಿ ಅಧ್ಯಯನ, ಚಿಂತನೆ, ಜ್ಞಾನದ ಅವಶ್ಯಕತೆ ಇದೆಯೇ ?

Image

ಸ್ಟೇಟಸ್ ಕತೆಗಳು (ಭಾಗ ೧೦೮೮)- ಮೂರ್ತಿ

ಮಣ್ಣಿನ ಮೂರ್ತಿಯೊಂದು ತಯಾರಾಗಿತ್ತು. ಅದಕ್ಕೆ ಜೀವ ನೀಡಬೇಕಾಗಿತ್ತು. ಹಾಗಾಗಿ ಎಲ್ಲರೂ ಸೇರಿ ಅದಕ್ಕೆ ಜೀವವನ್ನು ನೀಡಿ, ಲಿಂಗವನ್ನು ನಿರ್ಧಾರ ಮಾಡಿದರು. ಅದಾದ ನಂತರ ಆ ಮೂರ್ತಿಗೆ ಹೇಗೆ ಬದುಕಬೇಕು ಅನ್ನೋದು ಗೊತ್ತಿರ್ಲಿಲ್ಲ. ಸುತ್ತಮುತ್ತ ನೋಡಿ ತಿಳಿಬೇಕಿತ್ತು. ಜಾತಿಯ ಹಣೆಪಟ್ಟಿ ಏರಿತು, ಧರ್ಮದ ಅಫೀಮು ತುಂಬಿಸಲಾಯಿತು.

Image

ನಾದ ಸ್ವಾಧ್ಯಾಯ

ಇಂದು ಪಾತಂಜಲ ಯೋಗ ಸೂತ್ರದ ಎರಡನೆಯ ಪಾದ, ಎರಡನೇ ಮೆಟ್ಟಿಲು, ನಾಲ್ಕನೇ ಉಪಾಂಗದಲ್ಲಿ ಬರುವ ಮೂರನೇ ಸ್ವಾಧ್ಯಾಯ, ನಾದ ಸ್ವಾಧ್ಯಾಯದ ಬಗ್ಗೆ ತಿಳಿದುಕೊಳ್ಳೋಣ. ವಿಜ್ಞಾನದಲ್ಲಿ ಹೇಳುತ್ತೇವೆ ಅಣುಗಳು ಯಾವಾಗಲೂ ಕಂಪಿಸುತ್ತಾ ಇರುತ್ತವೆ. ಘನ ವಸ್ತುವಿನಲ್ಲಿ ಕಂಪಿಸುತ್ತದೆ. ದ್ರವ ವಸ್ತುವಿನಲ್ಲಿ ಪರಿಮಿತಿ ಒಳಗೆ ಚಲಿಸುತ್ತದೆ. ಅನಿಲದಲ್ಲಿ ಹೆಚ್ಚು ದೂರ ಚಲಿಸುತ್ತದೆ.

Image

ಒಂದು ಒಳ್ಳೆಯ ನುಡಿ - 271

* ನಮ್ಮಜೊತೆ ಇಲ್ಲದವರ ಬಗ್ಗೆ  ತಲೆಕೆಡಿಸಿಕೊಳ್ಳದಿರೋಣ ; ಇರುವವರ ಜೊತೆ ಹಾಯಾಗಿರೋಣ ! ಯಾಕೆಂದರೆ ಈ ಬದುಕು, ಹುಟ್ಟಿದ ನಂತರದ ಬಾಲ್ಯ, ಯೌವನ, ಮುಪ್ಪಿನೊಂದಿಗೆ ಮುಗಿದು ಹೋಗುತ್ತದೆ !

Image

ಕನ್ಯಾಕುಮಾರಿ ಮತ್ತು ಇತರ ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಗೊರೂರು ರಾಮಸ್ವಾಮಿ ಅಯ್ಯಂಗಾರ್
ಪ್ರಕಾಶಕರು
ಐಬಿಎಚ್ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. 70/-

ಗೊರೂರು ರಾಮಸ್ವಾಮಿ ಅಯ್ಯಂಗಾರರ ವೈವಿಧ್ಯಮಯವಾದ 10 ಕತೆಗಳು ಈ ಸಂಗ್ರಹದಲ್ಲಿವೆ. ಹಳ್ಳಿಯ ಬದುಕನ್ನು ತನ್ನ  ಬರಹದಲ್ಲಿ ಸೊಗಸಾಗಿ ಚಿತ್ರಿಸಿದವರು ಇವರು. ಸುಲಲಿತವಾಗಿ ಓದಿಸಿಕೊಂಡು ಹೋಗುವುದೇ ಗೊರೂರರ ಕತೆಗಳ ವಿಶೇಷತೆ. ಜೊತೆಗೆ ಇವು ಸುಮಾರು 60 ವರುಷಗಳ ಮುಂಚೆ ಬರೆದ ಕಥೆಗಳಾದರೂ ಇವೆಲ್ಲದರ ಸಂದೇಶಗಳು ಇಂದಿಗೂ ಪ್ರಸ್ತುತ.

ಬದುಕಿ ಬಿಡಬೇಕು ತೀವ್ರವಾಗಿ ಸಾಯುವ ಮುನ್ನ...

ಹೀಗೆ ಬಹಳ ಹಿಂದಿನಿಂದಲೂ ಮತ್ತು ಈಗಲೂ ಸಹ ಅನೇಕ ತತ್ವಜ್ಞಾನಿಗಳು, ಸಾಹಿತಿಗಳು, ಪತ್ರಕರ್ತರು, ವಿರಹಿಗಳು, ಭಾವನಾ ಜೀವಿಗಳು,  ಮುಂತಾದವರು ಆಗಾಗ ಹೇಳುತ್ತಲೇ ಇರುತ್ತಾರೆ. ಏಕೆಂದರೆ ಬದುಕಿನ ಮುಂದಿನ ಉಳಿದ ದಿನಗಳು ಎಷ್ಟಿವೆಯೋ ಯಾರಿಗೂ ತಿಳಿದಿಲ್ಲ.

Image

ಗೋಳಿಬಜೆ

Image

ಮೈದಾ ಹಿಟ್ಟು, ಕಡಲೆ ಹಿಟ್ಟು, ಉಪ್ಪುಗಳನ್ನು ಸೇರಿಸಿ, ಮೊಸರಿನಲ್ಲಿ ಗಟ್ಟಿಯಾಗಿ ಕಲಸಿಡಿ. ಈ ಮಿಶ್ರಣಕ್ಕೆ ಹಸಿ ಮೆಣಸಿನಕಾಯಿ, ಶುಂಠಿಯ ತುರಿ, ಕರಿಬೇವಿನ ಸೊಪ್ಪು, ತೆಂಗಿನ ಕಾಯಿಯ ಚೂರುಗಳು, ಜೀರಿಗೆ, ಸಕ್ಕರೆ, ಅಡುಗೆ ಸೋಡಾ ಬೆರೆಸಿ ಚೆನ್ನಾಗಿ ಕಲಕಿ ದೋಸೆ ಹಿಟ್ಟಿಗಿಂತ ಗಟ್ಟಿಯಾದ ಮಿಶ್ರಣ ತಯಾರಿಸಿ ಅರ್ಧ ಗಂಟೆ ಇಡಿ. ನೆನೆಸಿದ ಮಿಶ್ರಣದಿಂದ ನಿಂಬೆ ಗಾತ್ರದ ಹಿಟ್ಟನ್ನು ಕಾದ ಎಣ್ಣೆಯಲ್ಲಿ ಹಾಕಿ ಹೊಂಬಣ್ಣ ಬರುವವರೆಗೆ ಕರಿಯಿರಿ.

ಬೇಕಿರುವ ಸಾಮಗ್ರಿ

ಮೈದಾ ಹಿಟ್ಟು - ೨ ಕಪ್, ಕಡಲೆ ಹಿಟ್ಟು - ಅರ್ಧ ಕಪ್, ಮೊಸರು - ೨ ಕಪ್, ಕತ್ತರಿಸಿದ ಹಸಿಮೆಣಸಿನಕಾಯಿ - ೮ ತುಂಡುಗಳು, ಶುಂಠಿಯ ತುರಿ - ೧ ಚಮಚ, ಕತ್ತರಿಸಿದ ಕರಿಬೇವಿನ ಎಲೆಗಳು - ೩ ಚಮಚ, ತೆಂಗಿನಕಾಯಿಯ ಚಿಕ್ಕ ತುಂಡುಗಳು - ೧೦, ಜೀರಿಗೆ - ೩ ಚಮಚ, ಸಕ್ಕರೆ - ೧ ಚಮಚ, ಅಡುಗೆ ಸೋಡಾ - ಅರ್ಧ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ.

ಸ್ಟೇಟಸ್ ಕತೆಗಳು (ಭಾಗ ೧೦೮೭)- ಸರಪಣಿ

ಜನರ ಹಕ್ಕಿನ ಸಂರಕ್ಷಣೆಯ ಪ್ರಜಾಪ್ರಭುತ್ವದ ಉಳಿಸುವಿಕೆಗೆ ದೊಡ್ಡ ಕಾರ್ಯಕ್ರಮದ ಆಯೋಜನೆಯಾಗಿತ್ತು. ದೊಡ್ಡವರ ಮುಂದೆ ನಮ್ಮ ಜಿಲ್ಲೆ ಅದ್ಭುತ ಅಂತಾ ಬಿಂಬಿಸಿಕೊಳ್ಳಬೇಕಿತ್ತು. ಆ ಕಾರಣಕ್ಕೆ ಹಲವು ಸಾವಿರ ಜನರ ಮಾನವ ಸರಪಣಿ ಕಾರ್ಯಕ್ರಮ ಯೋಜನೆಯೂ ಆಗಿತ್ತು. ಉದ್ದೇಶ ಪ್ರಜಾ ಪ್ರಭುತ್ವ ಉಳಿಸಬೇಕೆನ್ನುವುದು.

Image