ಎರಡು ಗಝಲ್ ಗಳು....

ಎರಡು ಗಝಲ್ ಗಳು....

ಕವನ

ಗಝಲ್ ೧

ಜೂಜು ಬಿಡುತ ಬಾಳಲಿ ಕುಳಿತು ಹಾಡುವೆ ಸಖಿ

ಕದ್ದು ನಡೆಯದಿರು ತನುವ ಅರಿತು ಕಾಡುವೆ ಸಖಿ

 

ಪಂಥದೊಳು ಸಾಗಿದರೆ ಸುಖವು ಸಿಗುವುದೆ ಹೇಳು

ಮೌನದೊಳು ಹುಸಿ ಮುನಿಸು ಮರೆತು ಬೇಡುವೆ ಸಖಿ

 

ಸಂಸಾರ ಆಟದೊಳು ಕಹಿಯಾಳ ನಿನ್ನೊಳು ಮಾತ್ರವೆ 

ಅವಸರದ ಬಾಳಿನೊಳು ಸವಿಯ ಕಲೆತು ನೋಡುವೆ ಸಖಿ

 

ತಪ್ಪುಗಳೆ ಸಿಗುತಿರಲು ಒಪ್ಪುಗಳು ಬರದಿರದೇ ಇಂದು

ಫಲವಿರುವ ಪ್ರೀತಿಯೊಳು ಕೈತುತ್ತು ಮಾತು ನೀಡುವೆ ಸಖಿ

 

ಹೃದಯದೊಳಗೆ ಬೆರೆಯುತಲೆ ಬಾಳಲು ಚೆಂದವೋ ಈಶಾ

ಮೋಸ ವಂಚನೆಯ ತೊರೆಯುತ ಬೆರೆತು ಕೂಡುವೆ ಸಖಿ

***

ಗಝಲ್ ೨

ಕಲಿಯುತ್ತಿರು ಕಲಿಯುತ್ತಲೇ ಜನರಿಗಿಂದು ಚುಚ್ಚದಿರು ಮನುಜ

ತಿಳಿಯದೇ ದಿನವೆಲ್ಲ ತಿಳಿದಿರುವೆನೆಂದು ಹೇಳುತ್ತಾ ಮೆರೆಯದಿರು ಮನುಜ

 

ಕೂಲಿನಾಲಿ ಮಾಡಿಯಾದರೂ ಹೊಟ್ಟೆ ಹೊರೆಯುವುದು ಗೊತ್ತಿಲ್ಲವೆ

ಜೀವನದಲ್ಲಿ ಯಾವುದನ್ನೂ ಅಭ್ಯಾಸಿಸದೆ ನೀನೆಂದೂ ತೆಗಳದಿರು ಮನುಜ

 

ಉಪ್ಪಿನ ಕಾಯಿಯಲ್ಲಿ ಹುಳುವಾದಂತೆ ಬಾಳುವುದು ವ್ಯರ್ಥವಲ್ಲವೆ

ಸುತ್ತ ಮುತ್ತಲ ಊರಿನವರಿಗೆಲ್ಲರಿಗು ಗೊತ್ತಿರುವನಂತೆ ತಿರುಗದಿರು ಮನುಜ

 

ಹೊಸಗನ್ನಡದ ಸಂಸ್ಕಾರದ ರೀತಿಯ ನಿಯಮಗಳು ತಿಳಿದಿಲ್ಲವೆ

ಹಳತ್ತಿನ ಮಲ್ಲಿಗೆಯ ಸುವಾಸನೆಯ ಪರಿಮಳಕ್ಕೆ ಕುಣಿಯದಿರು ಮನುಜ

 

ನುಡಿಗಳೆಲ್ಲವೂ  ತೂಕದಿಂದ ಕೂಡಿರುತ್ತದೆ ಬಲ್ಲೆಯಾ ಈಶಾ 

ಮಾತನಾಡಿ ಬರೆಯುವಾಗ ತಪ್ಪಿಯೂ ಸಭ್ಯತೆಯ ಮೀರದಿರು ಮನುಜ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್