ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೋಂದಾಯಿಸಿ-ಕನ್ನಡಸಾಹಿತ್ಯ.ಕಾಂ ೮ನೇ ವಾರ್ಷಿಕೋತ್ಸವದ ವಿಚಾರಸಂಕಿರಣ


ಪ್ರೀತಿಯ ಸಂಪದ ಸ್ನೇಹಿತರೆ,

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?

ಈಚೆಗೆ 'ಸುದಾ'ವಾರದೋಲೆಯಲ್ಲಿ 'ಹೆಣ್ಹೆತ್ತ'(ಣ್ ಕ್ಕೆ ಹ ಒತ್ತು) ಪದ ನೋಡ್ದೆ. ಇದು ತಪ್ಪು ಬರಹ.
ನಾವು ಉಲಿಯುವಾಗ 'ಹೆಣ್ಣೆತ್ತ'(ಣ ಗೆ ಣ ಒತ್ತು) ಅಂತನೇ ಉಲಿಯಿವುದು.

ಹಾಗೆಯೆ,
 ಬೊಮ್ಮನಳ್ಳಿ,  ಹೆಸರಿಟ್ಟು,  ಬಂದ್ವೋಗು(ಬಂದೋಗು),  ಸಿಮ್ಮ  ಅಂತನೇ ಉಲಿಯುವುದು. ಇವೇ ಸರಿಯಾದ ಬರಹ ರೂಪಗಳು

ಮುಂಗಾರು ಮಳೆಯೇ...

"ಮುಂಗಾರು ಮಳೆ" ಅಂದ ಕೂಡಲೇ ಗೋಲ್ಡನ್ ಸ್ಟಾರ್ ಗಣೇಶನ ನೆನಪಾಗುತ್ತದೆ ಅಲ್ಲವೇ? ಅನಿಸುತಿದೆ ಯಾಕೋ ಇಂದು..ಎಂಬ ಈ ಚಿತ್ರದ ಹಾಡಿನ ಹಾಗೆ ನಮ್ಮೂರಿನ ಮುಂಗಾರು ಮಳೆಯ ಬಗ್ಗೆ ಅನಿಸಿಕೆಗಳು ಹಲವಾರು. ಜೂನ್ ಆರಂಭವಾರ ಅಥವಾ ಮೇ ತಿಂಗಳ ಕೊನೆಯ ವಾರದಲ್ಲೇ ನಮ್ಮೂರಿಗೆ ಮುಂಗಾರು ಮಳೆ ಕಾಲಿಡುತ್ತಿದೆ. ಆಹಾ! ಮೊದಲ ಹನಿ ಇಳೆಗೆ ಬಿದ್ದಾಗ ಹರಡುವ ಮಣ್ಣಿನ ಪರಿಮಳ....ಆಕಾಶದಲ್ಲಿ ಮೋಡ ಕವಿಯುತ್ತಿದ್ದಂತೆ ದುಂಬಿಗಳು ಹಾರಾಡುತ್ತವೆ..ದನಕರುಗಳು 'ಅಂಬಾ' ಎಂದು ಕೂಗುತ್ತಾ ಕೊಟ್ಟಿಗೆ ಸೇರುತ್ತವೆ..ಹೊರಗಿದ್ದ ಬಟ್ಟೆ ಬರೆ, ಕಟ್ಟಿಗೆ ಎಲ್ಲಾ ದಿಢೀರನೆ ಮನೆಯೊಳಗೆ ತಂದು ಹಾಕುವುದು, ಕೋಳಿ ಮರಿಗಳನ್ನು ಬೆಚ್ಚನೆಯ ಗೂಡಿನೊಳಗೆ ನೂಕುವುದು...ಇಂತದೆಲ್ಲಾ ನಮ್ಮ ಹಳ್ಳಿಯಲ್ಲಿ ಸರ್ವೇ ಸಾಮಾನ್ಯ. ಅಲ್ಲಿನ ಮುಂಗಾರು ಮಳೆಯ ಶೃಂಗಾರವೇ ಬೇರೆ. ದಿನವಿಡೀ ಹನಿ ಬಿಡದೆ ಸುರಿಯುವ ಮಳೆ, ಸುತ್ತಲೂ ಜಲಮಯ. ರಾತ್ರಿಯಾದರೇನೋ ಗುಡುಗು ಮಿಂಚುಗಳ ಆರ್ಭಟ. ಗಾಜಿನ ಕಿಟಕಿಗೆ ಮಿಂಚು ಬಡಿಯುವಾಗ, ಗುಡುಗಿಗೆ ಹೆದರಿ, ಕರೆಂಟು ಇಲ್ಲದ ರಾತ್ರಿಯಲ್ಲಿ ಬೆಚ್ಚನೆ ಕಂಬಳಿ ಹೊದ್ದು ಮಲಗಿದ್ದು ಎಲ್ಲವೂ ನೆನಪಿನ ಪುಟದಲ್ಲಿ ಅಳಿಯಲಾರದ ಬರಹಗಳು.

ಪ್ರಸ್ತುತ ನನ್ನ ಪುಟ್ಟ ಹಳ್ಳಿಯ ಪ್ರತೀ ಮಳೆಯನ್ನು ಚೆನ್ನೈಯಲ್ಲಿ ಮಿಸ್ ಮಾಡುತ್ತಿದ್ದೇನೆ. ನಮ್ಮೂರಲ್ಲಿ ಇದೀಗ ಮಳೆ ಹನಿ ಲಾಸ್ಯವಾಡುತ್ತಿರುವ ಈ ವೇಳೆಯಲ್ಲಿ ಇಲ್ಲಿನ ಉರಿ ಬಿಸಿಲಿಗೆ ಬೆವರು ಹರಿಯುತ್ತದೆ. ಸೆಖೆ ಸೆಖೆ ಎಂದು ನಿದ್ದೆ ಮಾಡಲಾಗದ ಸ್ಥಿತಿ, ಕರೆಂಟು ಕೈ ಕೊಟ್ಟರಂತೂ ಹೇಳತೀರದು. ಅಂತೂ ರಾತ್ರಿ ಜಾಗರಣೆ ಮಾಡಬೇಕಾದ ಪರಿಸ್ಥಿತಿ. ಉರಿ ಬಿಸಿಲಿನಲ್ಲಿ ನೀರಿನ ಅಭಾವ ಬೇರೆ, ಪ್ಯಾಕೇಜ್ಡ್‌ ವಾಟರ್ ಕುಡಿದು ಕುಡಿದು "ದೇವದಾಸನ ದಾರು ಬಾಟಲ್‌"ಗಳಂತೆ ನೀರಿನ ಬಾಟಲಿ ಹತ್ತಿರ ಇಟ್ಟು ಕೊಳ್ಳಲೇ ಬೇಕಾಗಿದೆ. (ಇಲ್ಲಿ ಕುಡಿ ನೀರಿಗೆ ಪ್ಯಾಕೇಜ್ಡ್ ವಾಟರ್ ಮಾತ್ರ ಗತಿ!). ಸ್ನಾನಕ್ಕೆ ಉಪ್ಪು ನೀರು. ಮೆಟ್ರೋ ನಗರದ ಜೀವನ ನರಕಮಯ ಎಂದೇ ಹೇಳಬಹುದು. ಆದ್ರೆ ಚೆನ್ನೈ ನಗರಕ್ಕೆ ಬಿಸಿಲೇ ಸೂಕ್ತ ಅಂತ ಅನಿಸುತ್ತದೆ. ಮಳೆ ಬಂದರಂತೂ ಈ ನಗರ ನರಕವಾಗುತ್ತದೆ. ಚರಂಡಿ ನೀರು ರೋಡಿನಲ್ಲಿ ಹರಿಯುತ್ತದೆ. ವಾಹನಗಳ ಟ್ರಾಫಿಕ್, ಕೆಸರೆರೆಚಾಟ ಇವುಗಳನ್ನೆಲ್ಲಾ ಸಹಿಸಿ ಆಫೀಸಿಗೆ ತಲುಪುವಾಗ ಹೈರಾಣಗಿ ಬಿಡುತ್ತೇವೆ.

ಕರಿನೆರಳು

ಕಳೆದು ಹೋಗದಿರು ಜೀವದ ಗೆಳತಿ
ನಿನ್ನ ಗೆಳೆತನ ನನಗೆ ಹಿತ
ಆದರೆ,ನನ್ನ ಅನನುಭವದ ಗೆಳೆತನ
ತಂದಿತು ಆತಂಕದ ಅನುಭವ
ಜೀವದ ಗೆಳತಿ ಕೇಳು ಒಮ್ಮೆ
ನಾ 'ನಲ್ಲ' ನಿನಗೆ 'ಗೆಳೆಯ'
ಆದರೆ ನೀ ನೀನಾಗಬೇಡ ಈ ಧರೆಯ
ಕೊರಳ ಮರುಭೂಮಿಯ ದುನಿಯಾ
ಇಂತಿ ನಿನ್ನವ ಈ ಇಳೆಯ,ಇನಿಯ

ಅನ್ಯ ದಾರಿಯಿಲ್ಲ ಎನಗೆ
ಬಿಡಲು ನಿನ್ನ ಸಲಿಗೆ
ಆ ನೆಪದಲ್ಲಿ ನಾ ಮಾಡಲಿಲ್ಲ ನಿನ್ನ ಸುಲಿಗೆ

ಕನ್ನಡದೊಂದು ಆಟ ಆಡೋಣ ಬನ್ನಿ

ಇವತ್ತು ಮಳೆ ಬರ್ತಾ ಇದ್ದಾಗ ಬೇಡ ಬೇಡ ಅಂದ್ರೂ ನನ್ನ ಬಾಲ್ಯದ ಆಟ ನೆನೆಪಾಗುತ್ತಿದೆ. ಮಳೆ ಬಂತೆಂದರೆ ಸ್ಸಕು ನಮ್ಮ ಅಮ್ಮನ ಮಾಡಿಕೊಡ್ತಿದ್ದ ಬಿಸಿ ಬಿಒಸಿ ಬಜ್ಜಿ ತಿನ್ಕೊಂಡು ಕಾಫಿ ಸವೆದುಕೊಂಡು ಒಂದಾಟ ಆಡ್ತಿದ್ದ್ವಿ.
ಪದ ಗುರುತಿಸೋ ಆಟ ಅದು

ಅಂತಹ ಒಂದು ಆಟ ನಿಮಗೆ ಪದ ಗುರುತಿಸಿ

ಒಂದು ಎರೆಡು ಅಕ್ಕರ ಸೇರಿದರೆ ಕಳುವು ಅಂತ ಅರ್ಥ ಬರುತ್ತೆ

ಮೊದಲ ದಿನ ಮೌನ...

ನನ್ನ ಗೆಳತಿಯೊಬ್ಬಳಿಗೆ ಇತ್ತೀಚೆಗಷ್ಟೇ ಮದುವೆಯಾಗಿದೆ. ಧಾರವಾಡದ ರಪಾಟಿ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಗೆ ಹಳೆಯ ಗೆಳತಿಯರೆಲ್ಲ ಸೇರಿದ್ದೆವು. ಮಾತಿಗೆ ಸಡಗರದ ಸೊಗಸು, ನೆನಪುಗಳ ಅಲಂಕಾರ, ನಗುವಿನ ಉಡುಗೊರೆ. ನಮ್ಮ ನಗು, ಕೇಕೆ, ಉಲ್ಲಾಸ ಕಂಡು ವೇದಿಕೆ ಮೇಲೆ ಗಂಡನೊಂದಿಗೆ ಕೂತಿದ್ದ ಮಾಧವಿ ಸಿಕ್ಕಾಪಟ್ಟೆ ಅಸೂಯೆಪಟ್ಟಿದ್ದಳು. ಅಲ್ಲಿಂದಲೇ ನಮ್ಮ ಮೊಬೈಲ್‌ಗಳಿಗೆ ಫೋನ್‌ ಮಾಡಿ, ’ನನ್ನ ಒಬ್ಬಾಕಿನ್ನ ಮ್ಯಾಲೆ ಬಿಟ್ಟು, ನೀವು ಹರಟಿ ಹೊಡಿತಾ ಕೂತಿರೇನ್ರೆ?’ ಎಂದು ತರಾಟೆಗೆ ತೆಗೆದುಕೊಂಡಿದ್ದಳು. ಆದರೂ ಅವಳಿಗೆ ಬಹುತೇಕ ಗೆಳತಿಯರು ಮದುವೆಗೆ ಬಂದಿದ್ದು ಖುಷಿ. ಎಲ್ಲರೂ ನಗುನಗುತ್ತ ಇದ್ದುದನ್ನು ಕಂಡು ಡಬಲ್‌ ಖುಷಿ. ಅದು ನಮಗೆ ಗೊತ್ತಿದ್ದರಿಂದಲೇ, ’ನಿನಗೇನೆ ಜೊತಿಗೆ ಗಂಡ ಅದಾನ. ಇನ್ಮೇಲೆ ನಮ್ಮ ಹಂಗ ನಗೋ ಹಂಗಿಲ್ಲ. ಮದುವೆಯಾಗವರ್ಗೆ ನಮ್ಮುನ್ನ ನಗಾಕ ಬಿಡ ಮಾರಾಯ್ತಿ’ ಎಂದು ಫೋನ್‌ನಲ್ಲೇ ಗದರಿಸಿ ನಮ್ಮ ಮಾತು-ಕತೆ ಮುಂದುವರೆಸಿದ್ದೆವು.

ಈಗ ಮಾಧವಿ ಗಂಡನ ಮನೆಗೆ ಹೊರಟಿದ್ದಾಳೆ. ಬೆಳಿಗ್ಗೆಯಿಂದ ಮುಖದಲ್ಲಿ ಮಂಕು. ಹುಟ್ಟಿ ಬೆಳೆದ ಮನೆ ಬಿಟ್ಟು ಹೋಗಬೇಕು. ಹೊಸ ಜಾಗದಲ್ಲಿ ಹೇಗೋ ಏನೋ ಎಂಬ ಅಳುಕು. ಆಕೆ ಬದುಕಬೇಕಾಗಿರುವುದು ಅಪರಿಚಿತ ವ್ಯಕ್ತಿಗಳೊಂದಿಗೆ, ಅಪರಿಚಿತ ಮನೆಯಲ್ಲಿ. ಯಾರ ಮನಸ್ಸು ಹೇಗೋ ಏನೋ. ಮಾತು ಆಡಿದರೆ ಕಷ್ಟ, ಆಡದಿದ್ದರೂ ಕಷ್ಟ ಎಂಬ ಅರಿವಿನಿಂದ ಕಂಗಾಲಾಗಿದ್ದಳು.

ನಾವೆಲ್ಲ ಸಮಾಧಾನ ಹೇಳಿದೆವು. ’ಬದುಕಿನ ಅನಿವಾರ್ಯ ಅಂಗ ಇದು ಮಾಧು. ಸುಮ್ಮನಿರು, ನೀನು ಹೇಗಿರ್ತೀಯೋ ಎಲ್ಲ ಹಾಗೇ ಆಗ್ತದ. ಮನಸ್ಸು ಗಟ್ಟಿ ಮಾಡ್ಕೋ. ಗೌರವದೊಂದಿಗೆ ಮಾತಾಡು. ಆದರೆ, ಯಾರಾದ್ರೂ ನಿನ್ನ ವಿಧೇಯತೆ ಮೇಲೆ ಸವಾರಿ ಮಾಡಕ್ಕೆ ಬಂದ್ರೆ ಮಾತ್ರ ಸುಮ್ಮನೇ ಸಹಿಸಿಕೋಬ್ಯಾಡ. ಒಮ್ಮೆ ಸುಮ್ಮನಿದ್ದರೆ ಮುಂದೆ ಅದೇ ರೂಢಿ ಆಗ್ತದೆ’ ಎಂದೆಲ್ಲ ಮಹಾ ಅನುಭವಸ್ಥರಂತೆ ಮಾತನಾಡಿದೆವು. ಹಳೆಯ ನೆನಪುಗಳನ್ನು ಮತ್ತೊಮ್ಮೆ ಹೊರ ತೆಗೆದು ಹಂಚಿಕೊಂಡೆವು. ನಾವೂ ಆಕೆಯೊಂದಿಗೆ ಕಣ್ಣೀರು ಹಾಕಿದೆವು. ಆಕೆಯನ್ನು ಹತ್ತಿಸಿಕೊಂಡ ಗಾಡಿ ಕಾಣದಾದಾಗ ಎಂಥದೋ ಖಾಲಿ ಭಾವ.

ಬಿಸಿಲ ಹಣ್ಣು

ಮೂರಲ್ಲ ನೂರಲ್ಲ
ಮುನ್ನೂರು ಜೊತೆ ಕಣ್ಣು
ನೆಟ್ಟಿದ್ದು ಮಾತ್ರ
ಎರಡು ಜೊತೆ

ನೆರಿಗೆ ಕೆನ್ನೆ, ಮುದುಡಿದ ಮೈ
ಥೇಟ್ ಚಂಪಕ್ಕಜ್ಜಿ ಹಾಗೇ...
ಆ ದಡಿಸೆರಗಿನ ಅಡಿಗೊಮ್ಮೆ ಮೂಗರಳಿಸುವಾ?
ತೇಲಿತೇನೋ ಅರಳಿಟ್ಟು, ಮೆಂತೆಹಿಟ್ಟಿನ ಘಮಲು

ಓಹ್ ಹಳದಿ ಪೇಟಾ?
ಎಷ್ಟು ದಿನವಾಯಿತಲ್ಲವೇ-
ತಂಬಾಕಿನ ಪರಿಮಳ
ಬೀಡಿ ಕಟ್ಟುವ ಮೋಡ ನೋಡಿ
ಜೊತೆಗೆ ಬೆವರ ಸಾಲುಗಳ. . .

ಏನೇ ಹೇಳಿ,

ಮಹಿಳೆಯರ ಪಾಲ್ಗೊಳ್ಳುವಿಕೆ

ನನ್ನ ಬರಹಗಳಾದ ’ದ್ರಾವಿಡ ಶಬ್ದ.....’ ಮತ್ತು ’ಒತ್ತಕ್ಷರಗಳು....’ ಇತ್ಯಾದಿ ವಿಷಯಗಳ ಚರ್ಚೆಯಲ್ಲಿ ಮಹಿಳೆಯರ ಪಾತ್ರ ಕಾಣುತ್ತಿಲ್ಲ. ಮಹಿಳೆಯರಿಗೆ ಇದಱಲ್ಲಿ ಒಲವಿಲ್ಲವೆ? ಅಥವಾ ಇದಱಲ್ಲಿ ಪ್ರಯೋಜನವಿಲ್ಲವೆಂದು ಮಹಿಳೆಯರ ಭಾವನೆಯೇ? ಮಹಿಳಾ ಸದಸ್ಯರಿಂದ ಉತ್ತರದ ನಿರೀಕ್ಷೆಯಲ್ಲಿದ್ದೇನೆ.