ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆಕಾಶದಲ್ಲಿ ಪೋಲೀಸ್ ಪೇದೆ (ಭಾಗ ೨)

(......ಮುಂದುವರಿದಿದೆ)
ಸುಬ್ಬಣ್ಣ ರೇವತಿಗೆ ಮೊದಲಿನಿಂದ ಪರಸ್ಪರ ಪರಿಚಯ ಇರಲಿಲ್ಲ. ಹಾಗಾಗಿಯೇ ಅವಳನ್ನು ನೋಡಿದ್ದೇ ತಡ , ಸುಬ್ಬಣ್ಣ ಅವಳ ಚೆಲುವಿಗೆ ಮರುಳಾಗಿ ಮದುವೆಯಾಗುವ ನಿರ್ಧಾರ ಮಾಡಿದ್ದ. ಗೆಳೆಯಂದಿರ ಹಿತವಚನಗಳನ್ನು , ಇಂಥಾ ಸುಂದರಿ ತನಗೆ ದಕ್ಕಲಿಲ್ಲವಲ್ಲಾ ಎಂಬ ಅಸೂಯೆ ಎಂದೇ ಭಾವಿಸಿ, ಅವಕ್ಕೆ ಲಕ್ಷ್ಯ ಕೊಡದೇ ಮದುವೆ ಆಗಿಯೇ ಬಿಟ್ಟ.

ಆಕಾಶದಲ್ಲಿ ಪೋಲೀಸ್ ಪೇದೆ

ಇದು ಜೇಮ್ಸ್ ಥರ್ಬರನ ಹಾಸ್ಯ ಲೇಖನ ದ ಕರ್ಬ್ ಇನ್ ದ ಸ್ಕೈ ದ ಭಾವಾನುವಾದ.

ಮುಂಬಯಿ ಮೈಸೂರು ಅಸೋಸಿಯೇಷನ್ನಿನ ಪತ್ರಿಕೆ ನೇಸರುವಿನಲ್ಲಿ ೧೯೯೬ರಲ್ಲಿ ಪ್ರಕಟವಾದ ನನ್ನ ಈ ಬರಹವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಇದು ಮೊದಲನೆ ಕಂತು. ಬಾಕಿ ಕಂತುಗಳು ಸದ್ಯದಲ್ಲಿಯೇ ಬರಲಿವೆ........

ಶಂಖನಾದ - ಭಾಗ ಎರಡು

ಈ ಹಿಂದೆ ಸಂಪದದಲ್ಲಿ ನಾನು ಬರೆದಿದ್ದ ಬರಹವೊಂದು, ಸ್ವಲ್ಪ ವಿಸ್ತಾರದೊಂದಿಗೆ ದಟ್ಸ್ ಕನ್ನಡದಲ್ಲಿ ಪ್ರಕಟವಾಗಿದೆ:

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ.... : 

http://thatskannada.oneindia.in/nri/article/2008/0802-my-wife-my-valentine.html

-ಹಂಸಾನಂದಿ

 

ಹಕ್ಕಿಯ ಹಾಡು-ಪಾಡು!

ಹಾರುತಿವೆ ಹಕ್ಕಿಗಳು ತೆರತೆರನಾಗಿ...
ಮುಸುಕಿನ ಬೆಳಗಲಿ ಸ್ವಚಂದದಿ ಹಾರುತಿವೆ..
ಹಾಡುತಿವೆ...
ಚಿಲಿಪಿಲಿ ಎಂದು ಗಾನವಗೈಯುತ....
ಬಣ್ಣ ಬಣ್ಣದ ರೆಕ್ಕೆಗಳ ಬಡಿಯುತ ಹಾರುತಿವೆ...
ಹಾಡುತಿವೆ...

ನಾದ ನಿನಾದವ ಸೂಸುವ
ಮನಕೆ ಮುದ ನೀಡುವ
ಹಕ್ಕಿರವ ಎಷ್ಟೊಂದು ಆನಂದ
ನೋಡುಗನಿಗೆ, ಕೇಳುಗನಿಗೆ ಪರಮಾನಂದ

ಒಂದೆಡೆ "ಬರ್ಡ್ ಫ್ಲೂ" ಬಂದಿದೆ... ಕೊಲ್ಲುತಿದೆ...

ನೀನು ಹಾಡುತ್ತಿರುವ ತನಕ ನೀನೇ ಒಂದು ಹಾಡು

'ನೀನು ಹಾಡುತ್ತಿರುವ ತನಕ ನೀನೇ ಒಂದು ಹಾಡು' ಎನ್ನುತ್ತಾನೆ ಆಧುನಿಕ ಇಂಗ್ಲೀಶ್ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ವಿಮರ್ಶಕ ಎಲ್ಲವೂ ಆಗಿದ್ದ ಟಿ.ಎಸ್.ಎಲಿಯಟ್. ಈ ಮಾತು ಕನ್ನಡದ ಮಟ್ಟಿಗೆ ವರಕವಿ 'ಅಂಬಿಕಾತನಯ ದತ್ತ' ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರಿಗೆ ಹೆಚ್ಚು ಅನ್ವಯಿಸುತ್ತದೆ ಎಂದೇ ಹೇಳಬಹುದು.

ಹಿಮವದ್ಗೋಪಾಲಸ್ವಾಮಿ ಬೆಟ್ಟ, ತಲಕಾಡು, ಮುಡುಕುತೊರೆ ಇತ್ಯಾದಿ.(ಭಾಗ 4)

ಶಿಂಷಾ ನಂತರ ನಮ್ಮ ಪಯಣ ಪಂಚಲಿಂಗೇಶ್ವರನ ಸನ್ನಿಧಿಯೆಂದು ಈಗ ಪ್ರಖ್ಯಾತವಾಗಿರುವ, ಒಂದಾನೊಂದು ಕಾಲದಲ್ಲಿ ನಮ್ಮ ನಾಡನ್ನು ಆಳಿದ ಗಂಗರ ರಾಜಧಾನಿಯಾಗಿದ್ದ ತಲಕಾಡಿನೆಡೆಗೆ ಮುಂದುವರಿಯಿತು. ಬಲುಬೇಗ ಮುಗಿಯಬೇಕಿದ್ದ ಈ ಪಯಣ ಅಧ್ವಾನ ರಸ್ತೆಗಳಿಂದಾಗಿ ತುಸು ತಡವಾಯಿತು.

ಕ್ರಿಕೆಟ್... ಕ್ರಿಕೆಟ್ಟು... ಕ್ರಿ......ಕೆಟ್ಟು!!!

ಕಾಡಿದ ಲೀ, ಕಾಪಾಡಿದ ಮಳೆ; ಮಾನ ಉಳಿಸಿದ ಮಳೆ; ಮಳೆಯಿಂದ ರದ್ದಾದ ಪಂದ್ಯದಲ್ಲಿ ಮಿಂಚಿದ ಲೀ; ವರವಾದ ವರುಣ; ಪಾಯಿಂಟ್ ಹಂಚಿಕೊಂಡ ಭಾರತ-ಆಸ್ಟ್ರೇಲಿಯಾ; ಮಳೆ ಬರದೇ ಹೋಗಿದ್ದರೆ...!

ಸಂಶೋಧನೆಗಳ ಯಶಸ್ಸಿಗೆ ಯುದ್ಧವೂ ಮೂಲವಾಗಬೇಕೆ? ಬ್ಲೂಟೂಥ್‌ನ ಹಿನ್ನೆಲೆಯಲ್ಲಿ ಒಂದು ಲೇಖನ...

ಬ್ಲೂಟೂಥ್ ಅನ್ನುವ ಪದವನ್ನು ಮೊಬೈಲ್ ಫೋನುಗಳ ಕಾಂಟೆಕ್ಸ್ಟ್‌ನಲ್ಲಿ ಈಗೀಗ ಎಲ್ಲರೂ ಕೇಳಿರುತ್ತಾರೆ. ಇದು 1999 ರಲ್ಲಿ ಮೊದಲು ದೊಡ್ಡಮಟ್ಟದಲ್ಲಿ ಚಾಲ್ತಿಗೆ ಬಂದದ್ದು. ಇದನ್ನು ಶುರುವಿನಲ್ಲಿ ಅಭಿವೃದ್ಧಿ ಪಡಿಸಿದ್ದು ಸ್ವೀಡನ್‌ನ ಎರಿಕ್‍ಸನ್ ಕಂಪನಿ. ನಂತರ ಇತರ ಮೊಬೈಲ್ ಫೋನ್ ಕಂಪನಿಗಳು ಬಂಡಿ ಹತ್ತಿಕೊಂಡರು. 2000 ದ ಸುಮಾರಿನಲ್ಲಿ, ಬ್ಲೂಟೂಥ್‌ನಿಂದಾಗಿ ಇನ್ನುಮೇಲೆ ಟಿಕೆಟ್‍ಗಳಿಗೆ ಥಿಯೇಟರ್‌ಗಳ ಮುಂದೆ ಕ್ಯೂ ನಿಲ್ಲಬೇಕಿಲ್ಲ, ನಿಮ್ಮ ಸೆಲ್‌ಫೋನ್‍ನಲ್ಲಿರುವ ಬ್ಲೂಟೂಥ್ ಸಂಪರ್ಕದಿಂದ ಆಟೊಮೆಟಿಕ್ ಆಗಿ ಟಿಕೆಟ್ ಕೊಳ್ಳಬಹುದು, ಅದು ಮಾಡಬಹುದು, ಇದು ಸಾಧ್ಯ, ಎಂತೆಲ್ಲ ಮಾರ್ಕೆಟಿಂಗ್ ಪಿಚ್‌ಗಳಿದ್ದವು. ಆದರೆ, ಕಾಲಾಂತರದಲ್ಲಿ ಬ್ಲೂಟೂಥ್ ತೆಗೆದುಕೊಂಡ ತಿರುವೇ ಬೇರೆ ಇತ್ತು.

ಇತ್ತೀಚಿಗೆ ಬ್ಲೂಟೂಥ್ ಕೃತಕ ಕಾಲುಗಳ ಅಭಿವೃದ್ಧಿಯಲ್ಲೂ ಬಳಸುತ್ತಿದ್ದಾರೆ. ಇದಕ್ಕೆ ಬಲ ಬಂದಿದ್ದು ಮಾತ್ರ ಇರಾಕಿನಲ್ಲಿ ಗಾಯಗೊಳ್ಳುತ್ತಿರುವ ತನ್ನ ಸೈನಿಕರಿಗೆ ಉತ್ಕೃಷ್ಠ ಮೆಡಿಕಲ್ ಸೇವೆ ಮತ್ತು ಆಧುನಿಕ ಸೌಲಭ್ಯಗಳನ್ನು ಕೊಟ್ಟು ಅವರ ಗಾಯವನ್ನು ಮಾಗಿಸಬೇಕು ಎಂದುಕೊಂಡ ಅಮೆರಿಕದ ವ್ಯವಹಾರದಿಂದಾಗಿ. ಕೆಲವೊಮ್ಮೆ ಯುದ್ಧ inevitable. ಹಿಂಸಾವಾದಿಗಳು ಮೇಲ್ಗೈ ಸಾಧಿಸಿದಾಗ ಅವರನ್ನು ಎದುರುಗೊಳ್ಳಲು ಜವಾಬ್ದಾರಿಯುತ ಸರಕಾರಗಳು ಯುದ್ಧ ಮಾಡಲೇಬೇಕು. ಯಾರು ಯಾಕಾಗಿಯಾದರೂ ಯುದ್ಧ ಆರಂಭಿಸಲಿ, ಗುರಿ ಮಾತ್ರ ಆದಷ್ಟೂ ಶತ್ರು ಗುಂಪಿಗೆ (ಸೈನಿಕರಿಗೆ ಮತ್ತು ನಾಗರಿಕರಿಗೆ) ಜೀವಹಾನಿ ಮಾಡುವುದು. ಈಗಿನ ಎಷ್ಟೋ ತಂತ್ರಜ್ಞಾನಗಳು ಅಭಿವೃದ್ಧಿಯಾಗಿದ್ದು ಹಾಗೆ ಹೆಚ್ಚಿಗೆ ಹಿಂಸೆ ಮಾಡುವ ಬಲವನ್ನು ಶೋಧಿಸುತ್ತ. ಇದು ವಿಪರ್ಯಾಸ.

ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ನನ್ನ ಈ ವಾರದ ಅಂಕಣ ಲೇಖನ ಯುದ್ಧ, ಸಂಶೋಧನೆಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಬ್ಲೂಟೂಥ್ ಎಂಬ ವಿಚಿತ್ರ ಹೆಸರು ಸಮೀಪಗಾಮಿ ರೇಡಿಯೊ ತರಂಗಕ್ಕೆ ಅಂಟಿಕೊಂಡದ್ದು, ಮುಂತಾದುವನ್ನು ಕುರಿತಾಗಿದೆ. ಪೂರ್ಣ ಲೇಖನ ಇಲ್ಲಿದೆ:
http://amerikadimdaravi.blogspot.com/2008/02/blog-post.html

ಮುಂಗಾರು ಮಳೆ...

ಪ್ರೀತ್ಸೋ ಹೃದಯ, ಹದಿಹರೆಯದ ಕನಸುಗಳು, ಭಾವನೆಗಳು, ನಿಸ್ವಾರ್ಥ ಒಲವು,
ನೆನಪಿನ ಕಾಣಿಕೆಯಾದ ವಸ್ತುವನ್ನು ಜೋಪಾನವಾಗಿ ಕಾಪಾಡೋದು, ಪ್ರತಿಕ್ಷಣ ಪ್ರೀತಿಯಲ್ಲೇ
ಮುಳುಗಿರುವುದು, ಪ್ರೀತಿ ಪಡೆಯುವ ಪರಿಯನ್ನು ವಿಭಿನ್ನವಾಗಿ ಯೋಚಿಸುವುದು, ಪ್ರೀತಿ ಸಿಗದೆಹೋದರೆ ಮುಂದೆ ಬದುಕು ಇಲ್ಲವೇನೋ ಎಂಬ ಭಾವನೆ...