ವಾನಪ್ರಸ್ಥ
ಹಿಂದೆ ರಾಜ ಮಹಾರಾಜರು ವಯಸ್ಸಿಗೆ ಬಂದ ಮಕ್ಕಳಿಗೆ ಮದುವೆ ಮಾಡಿ,ರಾಜ್ಯಭಾರ ಅವರಿಗೆ ಹೊರಿಸಿ ವನವಾಸಕ್ಕೆ ಹೋಗುತ್ತಿದ್ದರಂತಲ್ವಾ?
೨೦-೨೫ ವಯಸ್ಸಿಗೆ ರಾಜರಾದವರು ೪೦-೪೫ ವಯಸ್ಸಿಗೆ ತನ್ನ ಮಗನಿಗೆ ರಾಜ್ಯವನ್ನು ಒಪ್ಪಿಸಬೇಕು. ಕೇವಲ ೨೦ ವರ್ಷವಷ್ಟೇ ರಾಜ್ಯ ನೋಡಿಕೊಳ್ಳುವುದು. ಅದರಲ್ಲೂ ೫-೧೦ ವರ್ಷ ಯುದ್ಧದಲ್ಲಿ ಕಳೆದಿದ್ದರೆ, ಪಾಪ, ನೆಮ್ಮದಿಯಲ್ಲಿ (ಅಂತಃ)ಪುರದಲ್ಲಿ ಕಳೆಯಲು ಸಮಯವೆಲ್ಲಿ?
ಅಷ್ಟು ದೊಡ್ಡ ಅರಮನೆ ಇದೆ. ಒಂದು ಕೋಣೆಯಲ್ಲಿ ತನ್ನ ರಾಣಿಯರೊಂದಿಗೆ ಇರಲು ಬಿಡಬಹುದಿತ್ತಲ್ವಾ? ಯಾಕೆ ವಾನಪ್ರಸ್ಥ?
ರಾಜ್ಯದಲ್ಲಿದ್ದರೆ ಗೌಡರಂತೆ ಮಗನಿಗೆ ನೆಟ್ಟಗೆ ರಾಜ್ಯಭಾರ ಮಾಡಲು ಬಿಡುತ್ತಿರಲಿಲ್ಲವೆಂದೇ?
ಕೃತಯುಗದಲ್ಲಿ ಮಾನವನ ಆಯುಸ್ಸು ೪೦೦ ವರ್ಷ,ತ್ರೇತಾಯುಗದಲ್ಲಿ ೩೦೦ ವರ್ಷ,
ದ್ವಾಪರದಲ್ಲಿ ೨೦೦ ವರ್ಷವಂತೆ.
೫೦ ವರ್ಷದೊಳಗೆ ಮಗನಿಗೆ ಪಟ್ಟಕಟ್ಟಿದ ರಾಜ, ಉಳಿದ ೧೦೦-೨೦೦ ವರ್ಷ
ಆಯುಸ್ಸಲ್ಲಿ ‘ನನ್ನ ಕಾಲದಲ್ಲಿ ಹಾಗೆ ಇತ್ತು.. ನಾನು ಹೀಗೆ ಮಾಡಿದೆ..’ಎಂದು ವಟಗುಟ್ಟುತ್ತಾ ಇದ್ದಿರಬಹುದು. ಅರಮನೆ ಸಿಬ್ಬಂದಿ ಎಷ್ಟೂ ಅಂತ ಕೇಳಲು ಸಾಧ್ಯ?
ಅವರು ಕುತಂತ್ರ ಮಾಡಿ ವಾನಪ್ರಸ್ಥ ರೂಲ್ಸ್ ತಂದಿರಬಹುದೇ?
ಅರಮನೆಯ ಭೂರಿ ಭೋಜನದಿಂದ ಕೊಲೆಸ್ಟ್ರಾಲ್,ಬಿ.ಪಿ.,ಶುಗರ್..ಎಲ್ಲಾ ಏರಿ,
ಅಲ್ಲಿ ನೋವು, ಇಲ್ಲಿ ನೋವು ಎಂದು ರಾಜವೈದ್ಯರಿಗೆ ದಿನವೂ ಹಿಂಸೆ ಕೊಡುತ್ತಿದ್ದರು ಕಾಣುತ್ತದೆ. ಈ ಕಾಟ ತಪ್ಪಿಸಲು ವನವಾಸ,ಗೆಡ್ಡೆಗೆಣಸು,ಯೋಗ,ಧ್ಯಾನ, ಡೈರೆಕ್ಟ್ ಮೋಕ್ಷ ಎಂದೆಲ್ಲಾ ಪುಸಲಾಯಿಸಿ ಕಳುಹಿಸುತ್ತಿರಬಹುದೇ?
ಆದದ್ದಾಯಿತು. ಆ ಕಾಲ ಮುಗೀತು.
ಇನ್ನು ಈ ಕಾಲದ ‘ರಾಜ’ಕಾರಣಿಗಳ.. .. .. ಇಲಕ್ಷನ್ ಮುಗಿಯಲಿ..
-ಗಣೇಶ.
Comments
ಉ: ವಾನಪ್ರಸ್ಥ
In reply to ಉ: ವಾನಪ್ರಸ್ಥ by savithru
ಉ: ವಾನಪ್ರಸ್ಥ