ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕೊರತೆ...

ಯಾರದೋ ನೆನಪಿದು...

ಇನ್ಯಾರದೋ ಜೊತೆ...

ಎಲ್ಲಿಗೆ ಕೂಗಿದು...

ಇನ್ನೆಲ್ಲಿಯ ವ್ಯಥೆ...

ನಗಲು ಆಗದು...

ಅಳುವೆನೇಕೆ ತಿಳಿಯದು...

ಮುಗಿಯದ ಕಥೆ...

ನಿನ್ನ ಕನಸದು ನನಗೆ ಮರೆಯಲಾಗದು...

ನನ್ನ ಕನಸಿದು ನನಗೆ ಕಾಣದು...

ಜೀವನವಿಡಿ ಬರಿಯ ಪ್ರೀತಿಯದೆ ಕೊರತೆ...

ನನ್ನ ಕವನ...

ಸುಪ್ತ ಮನಸ್ಸಿನ ಆಳದಲ್ಲಿ...

ಮಧುರ ನೆನಪುಗಳ ಬೇರೂರಿ...

ಸಿಹಿ ಮಾತುಗಳೆ ಮರವಾಗಿ...

ಅರ್ಥವಿಲ್ಲದ ಈ ಸ೦ಬ೦ಧದ ಬಳ್ಳಿಯಲ್ಲಿ...

ಅರಳಿದ ಈ ಪ್ರೇಮ ಪುಷ್ಪದ...

ಸುಗ೦ಧದಿ ತು೦ಬಿದ...

ಈ ತ೦ಪು ಸ೦ಜೆಯೆ ನನ್ನ ಕವನ...

ಹಿತನುಡಿ

"ಕಬ್ಬು ಜಗಿದು ತಿನ್ನುವುದು ಪ್ರಕೃತಿ; ರಸ ಹಿಂಡಿ ತೆಗೆದು ಕುಡಿಯುವುದು ಸಂಸ್ಕೃತಿ; ರಸವನ್ನು ಕೊಳೆಯಿಸಿ, ಹೆಂಡ ಮಾಡಿ ಕುಡಿಯುವುದು ವಿಕೃತಿ"

ಕರ್ನಾಟಕ(ಬೆಂಗಳೂರು)ದಲ್ಲಿ ರಣಜಿ ಕ್ರಿಕೆಟ್

ಈ ಸಾಲಿನ ರಣಜಿ ಕ್ರಿಕೆಟ್ಟಿನ ಸುಪರ್ ಲೀಗ್ ಪಂದ್ಯಗಳು ಪ್ರಾರಂಭವಾಗಿವೆ ಮತ್ತು ಮೂರನೆಯ ಸುತ್ತಿನ ಪಂದ್ಯಗಳು ಮುಗಿಯುತ್ತಾ ಬಂದಿವೆ. ಇಲ್ಲ, ನಾನು ಈ ಪಂದ್ಯಗಳ ವಿಶ್ಲೇಷಣೆಯನ್ನು ಮಾಡುವದಿಲ್ಲ. ಆದರೆ ಕರ್ನಾಟಕ ಕ್ರಿಕೆಟನ ಇನ್ನೊಂದು ಮುಖವನ್ನು ಪರಿಚಯ ಮಾಡಲು ಪ್ರಯತ್ನಿಸುತ್ತೇನೆ.

ಹೋಲಿಕೆ...

ನಗುವ ಹೂವು ನಾಚಿದೆ ನಿನ್ನ ಚೆಲುವ ಕ೦ಡು...

ಸುರಿವ ಮಳೆಯು ಹನಿಯುತಿದೆ ನಿನ್ನ ನಗುವ ಕ೦ಡು...

ಹಸಿರು ಹುಲ್ಲಿನ ಹಾಸಿಗೆ ಕಾದಿದೆ ನಿನ್ನ ಪಾದದ ಸೊ೦ಕಿಗೆ...

ನಕ್ಷತ್ರಗಳು ಅಡಗಿವೆ ನಿನ್ನ ಕಣ್ಣ ಮಿ೦ಚಿಗೆ...

ಗಾಳಿಯು ಬೆರಗಾಗಿ ನಿ೦ತಿದೆ ನಿನ್ನ ಸೊ೦ಟ ಬಳುಕೋ ರೀತಿಗೆ...

ಆಗಸವು ತಲೆ ಬಾಗಿ ಬೇಡಿದೆ ನಿನ್ನ ಹೃದಯದಿ ತು೦ಬಿರೊ ಪ್ರೀತಿಗೆ...

ಈಗ ನೀನು ಹೇಳು ನನಗೆ...

ಆಹಾ ಇದು ಎಂಥಾ ಮದುವೆಯಯ್ಯಾ !

ದಿನ ಪೂರ ದುಡಿದ ಮೈಗೆ ಸ್ವಲ್ಪವಾದರೂ ವಿಶ್ರಾಂತಿ ದೊರಕಲೆಂದು ಮತ್ತು ನಾಳೆಗೆ ಮತ್ತೆ ಶ್ರಮದ ದುಡಿಮೆಗೆ ತಯಾರಾಗಲೆಂದು ಕೊಂಚ ಹಾಗೇ ಕಣ್ಣು ಮುಚ್ಚಿದೆ. ಜೋಂಪು ಹತ್ತಲು ಅವಕಾಶವೇ ಆಗಲಿಲ್ಲ. ಕಾರಣ ನನ್ನ ಯಜಮಾನ ಮಾರನೆಯದಿನ ನಡೆಸುವ ಯಾವುದೋ ಹಬ್ಬಕ್ಕೆ ಜೋರಿಯ ತಯಾರಿ ನಡೆಸಿದ್ದ.

ಮಳೆಕಾಡಿನ ಮಡಿಲಲ್ಲಿ ಅಪರೂಪದ ಅಬ್ಬಿ

ಈ ಸಲ ನಮ್ಮ ಸುತ್ತಾಟಕ್ಕೆ ಅಯ್ದುಕೊಂಡದ್ದು ವಾರಾಹಿ ವಿದ್ಯುತ್ ಯೋಜನೆಯ ಆಸುಪಾಸಿನ ಪ್ರದೇಶ. ಸರಿ, ಬೈಕ್ ಹತ್ತಿ ತೀರ್ಥಹಳ್ಳಿ ತಲುಪಿದ್ದಾಯಿತು. ಅಲ್ಲಿಂದ ೨೩ ಕಿಮೀ ದೂರದಲ್ಲಿ ಯಡೂರು, ಅಲ್ಲೊಂದು ಅಪರೂಪದ ಜಲಪಾತವಿದೆ.

ನನ್ನ ಬದುಕಿನ ಹಾದಿ

ಬದುಕಿನ ಬಣ್ಣಕ್ಕೂ ಚಿತ್ತಾರವೇ
ಮನಸಿನ ಕನ್ನಡಿ ಕಾಮ್ಮೋಡವೇ
ಸತ್ಯತಾನು ಎಲ್ಲೆಮುಚ್ಚಿ
ನೋವನೆಲ್ಲ ಎದೆಯಲಿ ಬಚ್ಚಿ
ಮನದಲಿ ನೋವು
ನೋಡಲು ನಲಿವು
ಬದುಕಿನ ಒಲವು
ಕಲಿಯುವ ಮನವು
ನೋವಿನ ಹೊನಲು
ಮಾತಿನ ಹರಿವು
ಇಂಗಿತು ನೋವು ಎದೆಯಾಳದಲಿ
ಬಾಡಿದ ಆಸೆಗಳು
ಬಾಳಿನ ನಡಿಗೆಗಳು

ಸಮರ್ಪಣೆ

ಇದುವರೆಗೂ ಮಾತನಾಡದ ವಿಷಯಗಳಲ್ಲಿ,
ನನಗೆ ದೃಢವಾದ ನಂಬಿಕೆಯಿದೆ.
ನನ್ನ ತೀವ್ರ ಧಾರ್ಮಿಕ ಭಾವನೆಗಳಿಂದ ಮುಕ್ತನಾಗಲು ಬಯಸುತ್ತೇನೆ
ಇದುವರೆಗೂ ಯಾರೂ ಧೈರ್ಯಮಾಡಿ, ಸಮರ್ಥಿಸದ
ಸಮಸ್ಯೆಗಳನ್ನು ಎದುರಿಸುವುದೇ ನನ್ನ ಮುಂದಿನ ಧ್ಯೇಯೋದ್ದೇಶ.

ಈ ವರ್ತನೆ ಅತಿಯಾಯಿತೆನಿಸಿದರೆ, ದೇವರೆ ಕ್ಷಮಿಸು,
ಇಷ್ಟೆ ನಾ ಹೇಳ ಬಯಸುವುದು: