ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

Comments

ಬರಹ

ಇತ್ತೀಚೆಗೆ ಕಾಶ್ಮೀರದಲ್ಲಿ ಅಮರನಾಥ ದೇಗುಲದ ವಿಷಯದಲ್ಲಿ ಭಾರೀ ಗಲಾಟೆಯಾಗಿದೆ, ಆಗುತ್ತಲಿದೆ. ಪ್ರತಿ ವರುಷ ಭಾರೀ ಸಂಖ್ಯೆಯಲ್ಲಿ ಭಕ್ತರು ಭೇಟಿ ಕೊಡುವ ಅಮರನಾಥಕ್ಕೆ ಇಷ್ಟು ದಿನ ಆಗಾಗ ಉಗ್ರಗಾಮಿಗಳ ಕಾಟ ಇತ್ತು. ಆದರೆ ಇವತ್ತು ಅಲ್ಲಿನ ಸರ್ಕಾರ, ಜನರಿಂದಲೇ ತೊಂದರೆ ಶುರುವಾಗಿದೆ. ಸುಖಾ ಸುಮ್ಮನೆ ಅಲ್ಲಿನ ಸರ್ಕಾರ ಮತ್ತು ಕೆಲ ಮುಸ್ಲಿಂ ಸಂಘಟನಳು, ಜನರು ಈ ವಿಷಯದಲ್ಲಿ ಮೂಗು ತೂರಿಸುತ್ತಿವೆ. ಯಾತ್ರೆಗೆ ಬರುವ ಜನರ ಅನುಕೂಲ, ವ್ಯವಸ್ಥೆಗಾಗಿ ಸರ್ಕಾರದಿಂದ ಕೊಡಲ್ಪಟ್ಟ ಜಾಗವನ್ನು ಹಿಂಪಡೆಯುವಂತೆ ಒತ್ತಾಯಿಸಿ ಹಿಂಸಾತ್ಮಕ ಪ್ರತಿಭಟನೆ ಮಾಡಿದ್ದಾರೆ ಕಾಶ್ಮೀರದ ಮುಸ್ಲಿಮರು ಮತ್ತು ಅದರಲ್ಲಿ ಸಫಲರಾಗಿದ್ದಾರೆ. ಇದೇ ರೀತಿ ಹಜ್ ಯಾತ್ರೆಯ ಬಗ್ಗೆ ಅಥವಾ ವ್ಯಾಟಿಕನ್ ಬಗ್ಗೆ ಹಿಂದೂಗಳು ಪ್ರತಿಭಟನೆ ಮಾಡಿದ್ದಾಗಲೀ ಅಥವಾ ಮೂಗು ತೂರಿಸಿದ್ದಾಗಲೀ ಎಲ್ಲೂ ಇಲ್ಲ.

ಅಂತದ್ದರಲ್ಲಿ ಬಹುಸಂಖ್ಯಾತ ಹಿಂದೂಗಳಿರುವ ದೇಶದಲ್ಲಿ ಹಿಂದೂಗಳ ಪವಿತ್ರ ಸ್ಥಳವೊಂದರ ಯಾತ್ರೆಯ structure ನಿರ್ಥರಿಸಲು ಇವರು ಯಾರು? ವಿ.ಎಚ್.ಪಿ. , ಭಜರಂಗದಳ, ಬಿ.ಜೆ.ಪಿ , ಆರೆಸ್ಸಿಸ್ಸಿನ ಕತೆ ಇಲ್ಲಿ ಬೇಡ. ಒಬ್ಬ ಹಿಂದೂ ಆಗಿ ಇದನ್ನು ವಿರೋಧಿಸುವುದಕ್ಕಿಂತ, ಒಂದು ಪ್ರಜಾಪ್ರಭುತ್ವವುಳ್ಳ, ಜಾತ್ಯಾತೀತ ದೇಶದ ಪ್ರಜೆಯಾಗಿ ಇದನ್ನು ಸಮರ್ಥಿಸಿಕೊಳ್ಳುವವರೂ ಇದ್ದಾರೆಂದರೆ ಆಶ್ಚರ್ಯ! ಅದೊಂದು ಪ್ರಾದೇಶಿಕೆ ಸಮಸ್ಯೆ ಎಂದು ತಮ್ಮ ಮೂರ್ಖತನ ತೋರಿಸುವ ಬುದ್ಧಿವಂತರೂ ಇದ್ದಾರೆ. ಇದ್ಯಾಕೆ ಈ ದೇಶ ಹೀಗೆ ಸೋಗಲಾಡಿಗಳ ಬೀಡಾಗಿದೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet