ಬಜೆಟ್‌(ಮುಂಗಡಪತ್ರ)ನಲ್ಲಿ ಏನಿರಬೇಕು?

ಬಜೆಟ್‌(ಮುಂಗಡಪತ್ರ)ನಲ್ಲಿ ಏನಿರಬೇಕು?

ಬರಹ

ಸಂಪದಿಗ ಬಂಧುಗಳೇ,

ಜುಲೈ ೧೭ಕ್ಕೆ ಕರ್ನಾಟಕದ ಮುಂಗಡಪತ್ರ ಮಂಡನೆಯಾಗುತ್ತಿದೆ. ಜನಪ್ರಿಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಧಂಡಿಯಾಗಿ ಹಣ ನೀಡುವ ಪರಿಪಾಠ ಪ್ರತಿ ವರ್ಷ ನಡೆಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ವರ್ಷದ ಮುಂಗಡಪತ್ರದಲ್ಲಿ ನಿರ್ಲಕ್ಷ್ಯಿತ ವಿಷಯಗಳ ಬಗ್ಗೆಯೂ ರಾಜ್ಯ ಸರ್ಕಾರದ ಗಮನ ಸೆಳೆಯಬೇಕಿದೆ.

ಅಖಿಲ ಭಾರತ ಕನ್ನಡ ಸಮ್ಮೇಳನ ನಡೆಸುವುದಕ್ಕೆ ಹಣ ನಿಗದಿ ಮಾಡುವಲ್ಲಿ ಮಾತ್ರ ಕನ್ನಡ ಕಾಳಜಿ ವ್ಯಕ್ತವಾದರೆ ಸಾಲದು. ಬಳ್ಳಾರಿಯಲ್ಲಿ ಸರ್ಕಾರಿ ಶಾಲೆ ಕುಸಿದು ಮಗುವೊಂದು ತೀರಿಕೊಂಡಿದೆ. ಕನ್ನಡ ಶಾಲೆಗಳ ಮೂಲಸೌಕರ್ಯ ಉತ್ತಮಗೊಳ್ಳಬೇಕು. ಕನ್ನಡದ ಉತ್ತಮ ಪ್ರಕಟಣೆಗಳಿಗೆ ಹಣ ನೀಡಬೇಕಿದೆ. ಖಾಸಗಿ ಎಫ್‌.ಎಂ. ಚಾನೆಲ್‌ಗಳು ಬೆಂಗಳೂರು, ಮಂಗಳೂರು ಮತ್ತು ಮೈಸೂರು ಹೊರತುಪಡಿಸಿ ರಾಜ್ಯದ ಇತರ ನಗರಗಳಿಗೂ ಹರಡಬೇಕು. ಬೀಜ ಬ್ಯಾಂಕ್‌, ಸೌರ ವಿದ್ಯುತ್‌, ವಿದ್ಯುತ್‌ ಚಾಲಿತ ಬೈಕ್‌-ಕಾರ್‍ಗಳ ಬಗ್ಗೆ ಖಚಿತ ಯೋಜನೆಗಳು ಮೂಡಿಬರಬೇಕು.

ಉದಾಹರಣೆಗೆ ಹೇಳುವುದಾದರೆ, ಮೈಸೂರು ವಿಶ್ವವಿದ್ಯಾಲಯ ಸಂಪಾದಿಸಿರುವ ಕನ್ನಡ ನಿಘಂಟು ಹಣಕಾಸಿನ ಕೊರತೆಯಿಂದ ಎಲ್ಲರಿಗೂ ತಲುಪುತ್ತಿಲ್ಲ. ಇಂಥ ಕೆಲಸಗಳಿಗೆ ಬಜೆಟ್‌ನಲ್ಲಿ ಹಣ ನಿಗದಿಯಾಗುವಂತೆ ಒತ್ತಡ ಹೇರಬೇಕಿದೆ. ಸಂಪದ ಬಂಧುಗಳು ಇಂತಹ ಇನ್ನಷ್ಟು ವಿಷಯಗಳನ್ನು ಈ ಅಂಕಣದ ಮೂಲಕ ಪ್ರಸ್ತಾಪಿಸಿದರೆ, ಅವನ್ನು ಕ್ರೋಡೀಕರಿಸಿ ಸರ್ಕಾರಕ್ಕೆ ತಲುಪಿಸಬಹುದು.

- ಚಾಮರಾಜ ಸವಡಿ
chamarajs@gmail.com

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet