ಸಾತೋಪಂಥ್ ಸರೋವರ
ಸಾತೋಪಂಥ್ ಸರೋವರ ಹಿಮಾಲಯದ ಮಡಿಲಲ್ಲಿ ಅನೇಕ ಪರ್ವತ ಶಿಖರಗಳ ಮಧ್ಯೆ ಸ್ಥಿತವಾಗಿರುವ ಒಂದು ಸಣ್ಣ ಸರೋವರ. ಇದು ಚೌಕಂಭಾ, ನೀಲಕಂಠ್ , ಪಾರ್ವತಿ, ಸ್ವರ್ಗರೋಹಿಣಿ ಮುಂತಾದ ಅನೇಕ ಪರ್ವತಗಳ ನಡುವಿನ ಕಣಿವೆಯಲ್ಲಿರುವ ಈ ಸರೋವರ ಬಹಳ ಪವಿತ್ರ ಸ್ಥಳ. ತ್ರಿಕೋನಾಕಾರದಲ್ಲಿರುವ ಈ ಸರೋವರದ ಮೂರು ತುದಿಗಳಲ್ಲಿ ತ್ರಿಮೂರ್ತಿಗಳು ಸ್ಥಿತವಾಗಿರುವರೆಂದು ನಂಬಿಕೆ.
ಸಾತೋಪಂಥ್ ಯಾತ್ರೆ ಬದರಿನಾಥದಿಂದ ಪ್ರಾರಂಭವಾಗುತ್ತದೆ. ಅಲ್ಲಿಂದ ೩ಕಿ.ಮೀ. ದೂರದಲ್ಲಿ ಮಾನಾ ಎಂಬ ಹಳ್ಳಿ ಸಿಗುತ್ತದೆ. ಇಲ್ಲಿಂದ ಮುಂದೆ ಜನ ಸಂಚಾರ ಇರುವುದಿಲ್ಲ. ರಾತ್ರಿ ತಂಗಲು ಟೆಂಟ್ ಗಳನ್ನೂ, ತಿನ್ನಲು ಆಹಾರವನ್ನೂ ಕೊಂಡೊಯ್ಯಬೇಕಾಗುತ್ತದೆ. ೨೫ಕಿ.ಮೀ. ದೂರದಲ್ಲಿರುವ ಈ ಸರೋವರಕ್ಕೆ ಹೋಗಿಬರಲು ನಮಗೆ ಬೇಕಾಗಿದ್ದು ೫ ದಿನಗಳು.
ದಾರಿ ಬಹಳ ದುರ್ಗಮವಾಗಿದ್ದು ಕೊರೆಯುವ ಚೆಳಿಯಲ್ಲಿ ಹಿಮನದಿಗಳ ಮೇಲೆ ಜಾರುತ್ತಾ, ಬೀಳುತ್ತ, ಉರುಳುವ ಬಂಡೆಗಳ ನಡುವೆ ಸಾಗಬೇಕಾಗುತ್ತದೆ. ದಾರಿಯಲ್ಲಿ ದೂರದ ಬೆಟ್ಟಗಳಲ್ಲಿ ಆಗುತ್ತಿರುವ ಅವಲಾಂಚೆಗಳ ಸದ್ದು ಗುಡುಗಿನಂತೆ ಕೇಳಿಸುತ್ತಿರುತ್ತದೆ.
ಇನ್ನೊಂದು ವಿಶೇಷವೇನೆಂದರೆ ಪಾಂಡವರು ಸ್ವರ್ಗಕ್ಕೆ ಹೊರಟದ್ದು ಈ ದಾರಿಯಲ್ಲೇ ಅಂತೆ. ಸಾತೋಪಂಥ್ ಸರೋವರದವರೆಗೂ ತಲುಪಿದ್ದು ಬರೀ ಧರ್ಮರಾಯ ಮಾತ್ರ. ಸ್ವರ್ಗರೋಹಿಣಿ ಹಿಮನದಿಯ ಮೇಲೆ ನಡೆದು ಹೋದಾಗ ಅವನಿಗೆ ಸ್ವರ್ಗದ ಮೆಟ್ಟಿಲುಗಳು ಕಂಡವಂತೆ. ನಮಗಂತೂ ಸಾತೋಪಂಥದ ದಾರಿಯೇ ಭೂಮಿಯ ಮೇಲಿನ ಸ್ವರ್ಗ ಎನಿಸಿತು.
- Read more about ಸಾತೋಪಂಥ್ ಸರೋವರ
- 8 comments
- Log in or register to post comments