ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ತೊಗಲುಗೊಂಬೆಯಾಟದ ಚಾಣಾಕ್ಷ - ಬೆಳಗಲ್ಲು ವೀರಣ್ಣ - ಮುಂದುವರೆದ ಲೇಖನ

ಬೆಳಗಲ್ಲು ವೀರಣ್ಣನವರ ತಂಡ ಸಮಕಾಲೀನ ಸಮಸ್ಯೆಗಳಿಗೆ ಅಪಾರವಾಗಿ ಸ್ಪಂಧಿಸಿದೆ. ಅದರಲ್ಲಿಯೂ ಸ್ವಾತಂತ್ರ್ಯ ಸಂಗ್ರಾಮ, ಬಾಪು, ಪ್ರವಾದಿ ಬಸವೇಶ್ವರ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ಪ್ರಯೋಗಗಳು ತೊಗಲುಗೊಂಬೆಯಾಟದಲ್ಲಿ ಪ್ರದರ್ಶನಗೊಂಡಿದ್ದು, ಮಹತ್ವದ ಸಾಧನೆಗಳಾಗಿವೆ.

ಬೆಂಗಳೂರಿನಲ್ಲಿ ಮೈಕೇಲ್ ಕಪ್ಲಾನ್

[http://blogs.msdn.com/michkap/archive/2008/01/16/7101598.aspx|ಮೈಕೇಲ್ ಕಪ್ಲಾನ್] ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ತಂತ್ರಾಂಶಗಳ ಜಾಗತೀಕರಣ ವಿಭಾಗದಲ್ಲಿ ಪ್ರಮುಖ ಹುದ್ದೆಯಲ್ಲಿರುವ ತಂತ್ರಜ್ಞರು. ತಂತ್ರಾಂಶ ಜಾಗತೀಕರಣ ವಿಷಯದಲ್ಲಿ ಕೆಲಸ ಮಾಡುತ್ತಿರುವವರು ಮಾತ್ರವಲ್ಲದೆ ಈ ವಿಷಯದಲ್ಲಿ ಆಸಕ್ತಿ ಹೊಂದಿರುವ ಎಲ್ಲರಿಗೂ ಇವರ ಹೆಸರು ಪರಿಚಯವಿದೆ.

ಇತ್ತೀಚಿನ ಅತಿ ನಿರೀಕ್ಷೆಯ ಮತ್ತು ಬಹುಚರ್ಚಿತ ಕನ್ನಡ ಚಿತ್ರ " ಗಾಳಿಪಟ " ..ಚಿತ್ರದ ನನ್ನ ವಿಮರ್ಷೆ...!!!

" ಗಾಳಿಪಟ "...ಸ೦ಭಾಷಣೆ / ಅಭಿನಯಗಳೇ ಜೀವಾಳ.

ಕಥೆಯೇ ಇಲ್ಲದೇ...ಸಣ್ಣ ಎಳೆಯೊ೦ದನ್ನು ಹಿಡಿದು ಅದರ ಸುತ್ತ ಚೇತೋಹಾರೀ ಘಟನೆಗಳನ್ನು ಹೆಣೆದು...ಚೇತೋಹಾರಿ ಮತ್ತು ಮನ ಮುಟ್ಟುವ ಸ೦ಭಾಷಣೆಗಳನ್ನು ಸಕಾಲಿಕವಾಗಿ ಅಳವಡಿಸಿ..ಕಲಾವಿದರಿ೦ದ ಮತ್ತು ತ೦ತ್ರಜ್ನ್ಯರಿ೦ದ ಅತ್ತ್ಯುತ್ತಮವೆನ್ನುವ೦ತ ಕೆಲಸ ಪಡೆದು...ಮಾಡಿದ ಚಿತ್ರವೇ .." ಮು೦ಗಾರು ಮಳೆ ".

ಗೆಳತಿ

ಗೆಳತಿಯೊಬ್ಬಳಿದ್ದಳು
ಬೀಳ್ಕೊಟ್ಟು ಬಂದೆ
ತುಂಬು ಕೊಡ ಬಾವಿಗಿಳಿಸಿದಂತೆ
ಬಿಟ್ಟು ಬಿಟ್ಟು..

ಎಲ್ಲಿ ಸಿಕ್ಕಿದಳೆಂದು
ಯಾರು ಕೇಳಿದರೆ ಗೊತ್ತಿಲ್ಲ
ಎಲ್ಲಿ ಹೋದರೂ ಬರುತ್ತಿದ್ದಳು
ನೆರಳಂತೆ

ಮುಂಜಾವೊ ಮುಸ್ಸಂಜೆಯೊ
ಜೊತೆಯಲ್ಲೆ ಇದ್ದಳು
ಮೌನವೊ ಮಾತೋ ಬೇಧವಿಲ್ಲದೆ
ಕುಳಿತಿದ್ದಳು

ಅತ್ತು ಕರೆದಾಗ ಬಿಗಿದಪ್ಪಿ

ನೆನಪು

ಅಂದು ಮಧ್ಯಾಹ್ನ ಮಳೆಗೇನೋ ಅರಿವಿಲ್ಲ
ನೆನೆದವರ ಪರವಿಲ್ಲ
ಯಾರೋ ಗುನುಗುತ್ತಿದ್ದ ಪ್ರೇಮಿ..
ನನಗೇಕೋ ಚಿತ್ತಚಂಚಲ..

ಕಣ್ಣೆಲ್ಲ ಮಂಜು, ಮಳೆಹನಿ
ರೆಪ್ಪೆಯೊಳಗೆ ಹೊರಟುನಿಂತ ನೀನು
ಕೇಳುತ್ತಿದ್ದುದ್ದೊಂದೆ ಕೊಡೆ ಮೇಲೆ ಬಿದ್ದ ನೀರು..
ಮತ್ತೆ ಭಾವನೆ ಅದಕ್ಕಿಂತ ಭಾರ !

ನಿಂತೆ !ಕುಸಿದಂತೆ ಭೂಮಿ !
ಮತ್ತದೇ ತವಕ,ಹೋಗಲಾರೆನೋ ಎಂದು..
ಸಾವರಿಸಿ ಓಡಿದ್ದ ನನಗೆ

ಮೈಸೂರು ಫಿಲ್ಮ್ ಸೊಸೈಟಿ ಸ್ಕ್ರೀನಿಂಗ್

ಮೈಸೂರು ಫಿಲ್ಮ್ ಸೊಸೈಟಿ ಸ್ಕ್ರೀನಿಂಗ್

ಚಿತ್ರ: Hukkle
ನಿರ್ದೇಶಕ: Gyorgy Palfi

(ಹಂಗೆರಿ/೨೦೦೨/ಕಲರ್/೭೮ ನಿಮಿಷ)
೨೬, ಜನವರಿ ೨೦೦೮
ಶನಿವಾರ ಸಾಯಂಕಾಲ ೬ ಗಂಟೆಗೆ

ನಮನ ಕಲಾ ಮಂಟಪ




ಮೈಸೂರು.

ಎರಡು ಬಗೆಯ ಜನರು!!

ಈ ಮೊದಲು ಮೂರು ಬಗೆಯ ಜನರ ಬಗ್ಗೆ ಬರೆದಿದ್ದೆ. ಅದಕ್ಕೇ ಇರಬೇಕು, ಇದ್ದಕ್ಕಿದ್ದಂತೆ, ಇಂದು ಇನ್ನೊಂದು ಸುಭಾಷಿತ ನೆನಪಿಗೆ ಬಂತು. ಇದರಲ್ಲಿ ಎರಡು ಬಗೆಯ ಜನರನ್ನು ಸುಭಾಷಿತಕಾರ ಬಣ್ಣಿಸುತ್ತಾನೆ.


ಕಲಿಕೆ ತಗಾದೆಗೆ ಹಣವಿಹುದು ಗರುವಕೆ ಕೆಡುಕನ ಶಕುತಿಯೋ ಕಂಡವರ ಕಾಡಲಿಕೆ
ಸಾಧುಗಳಿಗಾಗುವುದದು ತಿರುವುಮುರುವು-ಅರಿವಿಗೆ,ಕೊಡಲಿಕೆ ಮತ್ತು ಕಾಪಿಡಲಿಕೆ

ಜಾಗತಿಕ ರಾಜಕಾರಣದ ಕೈಗೊಂಬೆಯಾಗಿರುವ ಟಿ.ವಿ.ಮಾಧ್ಯಮ

ಜಾಗತಿಕ ರಾಜಕಾರಣದ ಕೈಗೊಂಬೆಯಾಗಿರುವ ಟಿ.ವಿ.ಮಾಧ್ಯಮ

ದೂರದರ್ಶನ ಭಾರತಕ್ಕೆ ಬಂದು ಅರ್ಧ ಶತಮಾನವಾಗುತ್ತಲಿದ್ದರೂ, ಅದೊಂದು ಜನಪ್ರಿಯ ಮಾಧ್ಯಮವಾಗಿ ಬೆಳೆಯತೊಡಗಿದ್ದು ಹದಿನೈದು ವರ್ಷಗಳಿಂದೀಚೆಗಷ್ಟೇ - ಜಗತ್ತು ಇದ್ದಕ್ಕಿದ್ದಂತೆ ಎಲ್ಲ ಗಡಿ ರೇಖೆಗಳನ್ನೂ ಧಿಕ್ಕರಿಸಲು ನಿರ್ಧರಿಸಿದಂತೆ ತೋರುತ್ತಿರುವ ಪ್ರಸ್ತುತ ಜಾಗತೀಕರಣ ಘಟ್ಟದ ಅಂತಾರಾಷ್ಟ್ರೀಯ ಒಪ್ಪಂದಗಳು ಜಾರಿಯಾಗತೊಡಗಿದ ನಂತರ. ರಾಷ್ಟ್ರೀಯ ಟಿ.ವಿ. ಎನಿಸಿರುವ ದೂರದರ್ಶನ ನಿಧಾನವಾಗಿ ಬಣ್ಣಕ್ಕೆ ತಿರುಗಿ, 1985ರಿಂದ 1995ರವರೆಗೆ ಒಂದು ದಶಕದ ಕಾಲ ತನ್ನ ಸೋಪ್ ಅಪೇರಾಗಳು ಮತ್ತು ರಾಮಾಯಣ - ಮಹಾ ಭಾರತ - ಚಾಣಕ್ಯ ಇತ್ಯಾದಿ ಮಹಾ ಧಾರಾವಾಹಿಗಳ ಮೂಲಕ ಸರಿ ಸುಮಾರು ಎಲ್ಲ ಮಧ್ಯಮ ವರ್ಗಗಳ ಮನೆಗೆ ಒಂದು ಸಾಂಸ್ಕೃತಿಕ ಸಾಧನವೆಂಬಂತೆ ಟಿ.ವಿ. ಸೆಟ್ಟುಗಳಿಗೆ ಪ್ರವೇಶ ದೊರಕಿಸಿಕೊಟ್ಟಿತು. ನಂತರ ಬಂದ ಉಪಗ್ರಹ ಟಿ.ವಿ., ಕಳೆದ ಹತ್ತು ವರ್ಷಗಳಲ್ಲಿ ಭಾರತೀಯ ಬದುಕಿನ ಲಂಗರುಗಳನ್ನೇ ಬದಲಿಸಬಲ್ಲಷ್ಟು ಪ್ರಭಾವಶಾಲಿಯಾಗಿ ಬೆಳೆದಿದೆ. ಹಿಂದೊಮ್ಮೆ ತಿರುಗಿ ನೋಡಿದಾಗ ಈ ಎಲ್ಲ ಬೆಳವಣಿಗೆಗಳು ವ್ಯವಸ್ಥಿತ ಯೋಜನೆಯೊಂದರ ಪ್ರಕಾರವೇ ನಡೆದುವೇನೋ ಎಂದು ಆಶ್ಚರ್ಯಪಡುವಷ್ಟು ಅನುಕ್ರಮಣಿಕೆಯಲ್ಲಿವೆ!

ಟಿ.ವಿ. ಭಾರತಕ್ಕೆ ಬಂದದ್ದು ಮೂಲತಃ ಒಂದು ಶೈಕ್ಷಣಿಕ ಸಾಧನವಾಗಿ. ನಿರ್ದಿಷ್ಟವಾಗಿ ಗ್ರಾಮಾಂತರ ಅಭಿವೃದ್ಧಿಯ ಸಾಧನವಾಗಿ. ದೂರದರ್ಶನಕ್ಕೆ ಇತ್ತೀಚಿನವರೆಗೆ - ಅದು ವಾಣಿಜ್ಯೀಕರಣಕ್ಕೆ ಒಳಗಾಗುವವರೆಗೆ - ಹಣ ಒದಗಿಸುತ್ತಿದ್ದುದು ಗ್ರಾಮಾಂತರ ಅಭಿವೃದ್ಧಿ ಖಾತೆಯೇ ಎಂದು ಕೇಳಿದ್ದೇನೆ. ಭಾರತದ ನವೋದಯದ ಬಹು ದೊಡ್ಡ ಸಮೂಹ ಸಾಧನವಾಗಿ ಬೆಳೆದ ರೇಡಿಯೋದ ತಮ್ಮನಂತೆ ಹುಟ್ಟಿದ ದೂರದರ್ಶನ, ದೇಶ ಕಟ್ಟುವ ಉಮೇದಿನಲ್ಲಿದ್ದ ಸ್ವಾತಂತ್ರ್ಯೋತ್ತರ ಭಾರತದ ಎಲ್ಲ ಸಮೂಹ ಸಾಧನಗಳಂತೆ (ಖಾಸಗಿ ಸ್ವಾಮ್ಯದ ಪತ್ರಿಕೆಗಳೂ ಸೇರಿದಂತೆ) ಮಾಹಿತಿ, ಮನರಂಜನೆ ಹಾಗೂ ಶಿಕ್ಷಣಗಳನ್ನು ತನ್ನ ಗುರಿಗಳೆಂದು ಘೋಷಿಸಿಕೊಂಡು ತನ್ನ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುತ್ತಿತ್ತು. ಆದರೆ, 1977ರಲ್ಲಿ ನಡೆದ ಜೆ.ಪಿ. ನೇತೃತ್ವದ ಸ್ವಾತಂತ್ರ್ಯೋತ್ತರ ಭಾರತದ ಮೊದಲ ಪೂರ್ಣ ಪ್ರಮಾಣದ ರಾಜಕೀಯ ಸ್ಥಿತ್ಯಂತರ, ಅನೇಕ ಏಳು ಬೀಳುಗಳು ಹಾಗೂ ರೂಪಾಂತರಗಳ ನಂತರ ಚಂದ್ರಶೇಖರ್ ಪ್ರಧಾನ ಮಂತ್ರಿತ್ವದ ಪ್ರಯೋಗದೊಂದಿಗೆ ಅಂತಿಮವಾಗಿ ಅವಸಾನಗೊಂಡಿತಲ್ಲ; ಆಗ ಭಾರತದ ನವೋದಯದ ಆದರ್ಶಗಳನ್ನು ಕುರಿತ ಅಪನಂಬಿಕೆ ಆರಂಭವಾಗಿ, ಪರ್ಯಾಯ ಆದರ್ಶ - ನಂಬಿಕೆಗಳ ಹುಡುಕಾಟದಲ್ಲಿ ತೊಡಗಿದ ಸಂದಿಗ್ಧ ಕಾಲದಲ್ಲಿ ರಾಷ್ಟ್ರ ತನ್ನ ರಾಜಕೀಯ ಒತ್ತಡಗಳಿಂದ ಹೊರ ದಾರಿ ಕಂಡುಕೊಂಡದ್ದು, ದೂರದರ್ಶನದ 'ಪೌರಾಣಿಕ' ಧಾರಾವಾಹಿಗಳ ಮೂಲಕ! ಅರ್ಥಾತ್, ಸ್ವತಂತ್ರ ಭಾರತದ 'ಸೆಕ್ಯುಲರ್' ರಾಜಕಾರಣ ಉಂಟು ಮಾಡಿದ ಒತ್ತಡಗಳು ಆ ಹೊತ್ತಿಗೆ ಎಷ್ಟು ಸಂಕೀರ್ಣ ಹಾಗೂ ಶಕ್ತಿಯುತವಾಗಿದ್ದುವೆಂದರೆ, ಅದು ಪೋಷಿಸಿ ಬೆಳೆಸಿದ್ದ ರೇಡಿಯೋದಂತಹ ಸರಳ ಮಾಧ್ಯಮದ ಮೂಲಕ ಅವು ವ್ಯಕ್ತವಾಗಲಾರದೆ ಇನ್ನೂ ಹೊಸ ಮಾಧ್ಯಮವಾಗಿ ರಾಷ್ಟ್ರಕ್ಕೆ ಅಷ್ಟು ಪರಿಚಯವಾಗದಿದ್ದ ದೂರದರ್ಶನದ ಗುರಿ ಮತ್ತು ಮಾರ್ಗಗಳನ್ನೇ ಅವು ಬದಲಿಸಿಬೇಕಾಯಿತು! ಇಷ್ಟು ವರ್ಷ ಸೆಕ್ಯುಲರ್ ರಾಜಕಾರಣದ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಪಕ್ಷದ ನರಸಿಂಹ ರಾಯರ ಪ್ರಧಾನ ಮಂತ್ರಿತ್ವದ ಕಾಲದಲ್ಲೇ ಈ ದೂರದರ್ಶನ ತನ್ನ ಭೌತಿಕ ವ್ಯಾಪ್ತಿಯನ್ನು ಅಪಾರವಾಗಿ ಬೆಳೆಸಿಕೊಂಡಿತಲ್ಲದೆ, ಸೆಕ್ಯುಲರ್ ರಾಜಕಾರಣದ ಅಸ್ತಿವಾರಗಳೇ ಅಲ್ಲಾಡಿಹೋಗುವಂತಹ ರಾಜಕೀಯ ವಾತಾವರಣವನ್ನು ಸೃಷ್ಟಿಸುವಂತಹ ಆಧುನಿಕ ರಾಜಕೀಯ ಸಾಧನವಾಗಿಯೂ ಪರಿವರ್ತಿತವಾಯಿತು. ಈ ಬೆಳವಣಿಗೆಯನ್ನು, ಸ್ಥೂಲವಾಗಿ ನೋಡಿದಾಗ ರಾಷ್ಟ್ರದ ಅವೈದಿಕ ರಾಜಕಾರಣದ ಹವ್ಯಾಸಿ ಪ್ರಯೋಗದಂತೆ ತೋರುತ್ತಿದ್ದ ಕಾಂಗ್ರೆಸ್, ತನ್ನ ರಾಜಕೀಯ ತಾರ್ಕಿಕ ಅಂತ್ಯವನ್ನು ಕಂಡುಕೊಂಡ ಕಥೆಯನ್ನಾಗಿಯೂ ಗ್ರಹಿಸಬಹುದಾಗಿದೆ. ಅದೇನೇ ಇರಲಿ, ದೂರದರ್ಶನ ಭಾರತದ ರಾಷ್ಟ್ರೀಯ ರಾಜಕಾರಣದೊಂದು ಪ್ರಬಲ ಅಂಗವಾಗಿ ಬೆಳೆಯಲಾರಂಭಿಸಿದ ಹೊತ್ತಿನಲ್ಲೇ ಕಾಕತಾಳೀಯವೆಬಂತೆ ಉಪಗ್ರಹ ಟಿ.ವಿ., ಶೀತಲ ಸಮರೋತ್ತರ ಏಕ ಧೃವ ಜಗತ್ತಿನ (ಅಂತಾರಾಷ್ಟ್ರೀಯ) ರಾಜಕಾರಣದ ಒಂದು ಪ್ರಬಲ ಅಂಗವಾಗಿ ಭಾರತದಲ್ಲಿ ಅವತರಿಸಿತು.

ಸಹಾಯ

ತುಂಬ ಸರ್ತಿ ಸಂಪದದಲ್ಲಿ ನನ್ನ photo ಬದಲಾಯಿಸಲು ಪ್ರಯತ್ನಿಸಿ, ಸೋತಿದ್ದೇನೆ...ಯಾರಾದರು ದಯಮಾಡಿ ಸಹಾಯ ಮಾಡುವಿರ..