ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???

ಬರಹ

ಸಂಸ್ಕೃತಿ ಎಂದ ಕೂಡಲೇ ಎಲ್ಲ ಕನ್ನಡಿಗರು ಹೆಮ್ಮೆಯಿಂದ ಬೀಗತ್ತಿದ್ದ ಕಾಲವೊಂದಿತ್ತು.. ಆ ಅಭಿಮಾನ ಈಗೇಕೋ ನಶಿಸುತಿದೆ ಎಂದು ಅನ್ನಿಸುವುದಿಲ್ಲವೇ?? ನಮ್ಮ ಸಂಸ್ಕೃತಿಯಲ್ಲೇನೂ ಕೊರತೆಯುಂಟಾಗಿಲ್ಲ ಆದ್ರೆ ಅದನ್ನ ಅನುಸರಿಸುವವರ, ಅನುಭವಿಸುವವರ ಕೊರತೆ ಎದ್ದು ಕಾಣುತಿದೆ. ನಾವು ಒಳ್ಲೆಯದೆಲ್ಲವನ್ನು ಒಪ್ಪಿಕೊಳ್ಳಬೇಕು ನಿಜ ಹಾಗಂತ ನಮ್ಮ ತನವನ್ನು ತೊರೆಯಬೇಕೆಂದೇನು ಇಲ್ಲವಲ್ಲ..
ನಮ್ಮ ಜನ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ಇಂದಿನ ವಿಷಯವೇನಲ್ಲ, ಇದಕ್ಕೇನು ಕಾರಣ? ಪರಿಹಾರವೇನು??
ಹಿಂದನಂತೆ ರಾಮಾಯಣ, ಮಹಾಭಾರತದ ಕಥೆ ಹೇಳುವ ಅಜ್ಜ-ಅಜ್ಜಿಯಂದಿರಿಲ್ಲ, ಇದ್ದರೂ ಅದನ್ನು ಕೇಳುವ ತಾಳ್ಮೆ ಮಕ್ಕಳಿಗಿಲ್ಲ. ಮಕ್ಕಳಿಗಿದ್ದರೂ ಅವರ ತಂದೆ-ತಾಯಿ ಬಿಡಬೇಕಲ್ಲ. ಇದು ಸ್ಪರ್ಧಾತ್ಮಕ ಜಗತ್ತು ಎಂಬ ಹಣೆಪಟ್ಟಿ ನೀಡಿ ಮಕ್ಕಳ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದ್ದೇವೆ. ಮಕ್ಕಳಲ್ಲಿ ಅವರ ಭವಿಷ್ಯದ ಬಗೆಗಿನ ಕನಸುಗಳನ್ನು ನಾವು ರೂಪಿಸುವ ಯತ್ನವನ್ನು ಮಾಡುತ್ತಿದ್ದೇವೆಯೋ ಹೊರತು ನಮ್ಮ ಸಂಸ್ಕೃತಿಯ ಹಿನ್ನೆಲೆಯೇನು? ಅದರಲ್ಲಿರುವ ಸ್ವಾರಸ್ಯ ಎಂತದ್ದು? ಎಂಬುದನ್ನು ಹೇಳುವುದನ್ನೆ ಮರೆಯುತ್ತಿದ್ದೇವೆ.

ತುಂಡು ಬಟ್ಟೆಯ ತೊಟ್ಟು ತಿರುಗುವವರು ಒಂದೆಡೆಯಾದರೆ, ಮದ್ಯವ್ಯಸನಗಳ ದಾಸರಾಗಿ ಅದು ತಮ್ಮ ಪ್ರತಿಷ್ಟೆ ತೋರುತ್ತದೆ ಎಂದು ತೂರಾಡುವವರು ಮತ್ತೊಂದು ಕಡೆ. ಇಂಥಹ ವಾತಾವರಣದಲ್ಲಿ ಬೆಳೆವ ಮಕ್ಕಳ ಗತಿ???
ಹಣದ ಹಿಂದೆ ಬಿದ್ದಿರುವ ಜನ, ಮಾನವೀಯತೆಯನ್ನು ಮರೆತಿದೆ, ಸ್ವಂತ ಮಕ್ಕಳು, ತಂದೆ-ತಾಯಿಯರನ್ನೂ ನೋಡಿ ಕೊಳ್ಳಲಾಗದಷ್ಟು ವೇಗದಲ್ಲಿ ಅವರು ಓಡುತ್ತಿದ್ದಾರೆ.
"ಹಣವೇ ಎಲ್ಲ ಮಾನ, ಮಾನವತತ್ವಕ್ಕೆ ಇಲ್ಲಿ ಬೆಲೆಯೇ ಇಲ್ಲ."

ಹೀಗೆ ಸಾಗಿದರೆ ನಾವು ಮುಟ್ಟುವ ದಡವಾದರು ಯಾವುದು?? ಈ ದಾರಿಯಲಿಲ್ಲ ಅಜ್ಜ-ಅಜ್ಜಿಯರ ಆ ನೀತಿ ಕಥೆಗಳು, ಕೇಳುವುದಿಲ್ಲ ಶರಣರು ದಾಸರು ಹೇಳಿದ ಜೀವನದ ಅರ್ಥಗಳು, ಕಾಣುವುದಿಲ್ಲ ಮಾನವ ಬದುಕಿನ ಸಾರ್ಥಕತೆಯ ತತ್ವಗಳು ತೋರುವ ದಾರಿಗಳು. ಇವೆಲ್ಲಾ ಅಂಗವೈಕಲ್ಯತೆಗಳ ರಹಿತ ನಾವು ಸಾಗುತಿರುವುದಾದರೂ ಎಲ್ಲಿಗೆ, ಎಲ್ಲಿಗೆ, ಎಲ್ಲಿಗೆ? ನಮ್ಮ ಬಾಳ ಪಯಣ ಎಲ್ಲಿಗೆ??