ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ತರಲೆ(ಪ್ರಶ್ನೆ)ಗಳು... (2)

ತರಲೆ(ಪ್ರಶ್ನೆ)ಗಳು...

ಗುಡ್ಡಗಾಡಿನ ರಸ್ತೆಯ ಮಾರ್ಗದಲ್ಲಿ ಸಾಗುವ ಒಂದು ಟ್ರಕ್(ಲಾರಿ) ಗೆ ಸುರಂಗವನ್ನು ದಾಟಬೇಕಿತ್ತು ಆದರೆ ಟ್ರಕ್ ನ ಬಾಡಿ ಸುರಂಗದ ಮೆಲ್ಚಾವನಿಗೆ ಸ್ವಲ್ಪ ತಾಗುತಿತ್ತು ಆದ್ರೂ ಡ್ರೈವರ್ ತನ್ನ ತಲೆ ಖರ್ಚು ಮಾಡಿ ಟ್ರಕ್ ಸುರಂಗದಿಂದ ಪಾಸ್ ಮಾಡಿದ ಹೇಗೆ....?

ಈಗ ನೀವು ನಿಮ್ಮ ತಲೆ ಖರ್ಚು ಮಾಡಿ........................"

: ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ

ಬಾಣಾವತಿಯ ಮಡಿಲ ಜಾರುಬಂಡಿ

ಘಟ್ಟದ ರಸ್ತೆಯಲ್ಲಿ ಬೈಕ್ ಓಡಿಸೋದು ಅಂದ್ರೆ ನನಗೆ ಯಾವತ್ತೂ ಖುಶಿನೇ. ನಾನು ಪದೆಪದೆ ಹೋಗೋದಕ್ಕೆ ಇಷ್ಟ ಪಡೋದು ಮಲೆಮನೆ ಘಟ್ಟದ ರಸ್ತೆಯಲ್ಲಿ. ಜೋಗದಿಂದ ಹೊನ್ನಾವರದವರೆಗಿನ ೬೨ ಕಿಮೀ ಪ್ರಯಾಣ ಅಂದ್ರೆ ಅದು ಶರಾವತಿಯ ಮಡಿಲ ಜಾರುಬಂಡಿ.
ಬ್ರಿಟಿಶ್ ಬಂಗಲೆಯಂಗಳದಿಂದ ಜೋಗಕ್ಕೊಮ್ಮೆ ಕಣ್ಣು ಹೊಡೆದು ಬೈಕ್ ಹತ್ತಿದರೆ ಮುಂದಿನ ದಾರಿ ನೀಡುವ ಅನುಭವ ಅಪೂರ್ವ. ಮಾವಿನಗುಂಡಿಯಲ್ಲಿ ಒಂದು ರಿಫ್ರೆಶಿಂಗ್ ಚಾ ಕುಡಿಯೋದು ಕಡ್ಡಾಯ. ಎಡ ಭಾಗದಲ್ಲಿ ಬಳುಕುತ್ತ ಹರಿಯುವ ಶರಾವತಿ ಮತ್ತು ಬಲಭಾಗದ ರಾಕ್ಷಸ ಗಾತ್ರದ ಗುಡ್ಡಗಳಿಂದ ಧುಮುಕುವ ಮಲೆಮನೆ ಜಲಪಾತ ಹಸಿರು ತಿರುವುಗಳನ್ನು ಕ್ರಮಿಸುವಾಗಲೆಲ್ಲ ಯಾವ ಕಡೆ ನೋಡಬೇಕೆಂಬ ಗೊಂದಲ ಹುಟ್ಟಿಸುತ್ತವೆ.
ಮಳೆಗಾಲದಲ್ಲಿನ ಮಂಜು, ಕೊರೆವ ಛಳಿಯಲ್ಲಿ ಅಲ್ಲಲ್ಲಿ ಮೈ ಬೆಚ್ಚಗಾಗಿಸಲೆಂದೆ ಇದೆಯೇನೋ ಎನ್ನಿಸುವ ಬಿಸಿಲಿನ ಜಾಗಗಳು, ಸುಡುವ ಬೇಸಿಗೆಯಲ್ಲೂ ಘಟ್ಟದುದ್ದಕ್ಕೂ ತಣ್ಣಗಿನ ಗಾಳಿ. ಇಳಿಸಂಜೆಯಲ್ಲಿ ಹೊರಟರೆ ಸೂರ್ಯ ಹೊನ್ನಾವರದ ಕಡಲಲ್ಲಿ ತಲೆ ಮರೆಸಿಕೊಳ್ಳುವವರೆಗೂ ಹಿಂಬಾಲಿಸುವ ವೇಗ ಅದು ಹೇಗೆ ನಮಗೆ ಬಂತು ಅನ್ನೊದೇ ಆಶ್ಚರ್ಯಕರ.
ಘಟ್ಟ ಇಳಿದ ಮೇಲೂ ರಸ್ತೆಯನ್ನಷ್ಟೇ ನೋಡೋದು ಕಷ್ಟ. ಹೊಳೆಸಾಲಿನ ಹಸಿರು ತೋಟ, ಕರಿಕಲ್ಲಿನ ಗುಡ್ಡ, ದೂರದಲ್ಲಿ ಮಿಂಚುವ ಸಮುದ್ರದ ನೀರು ಎಲ್ಲವೂ ಆ ರಸ್ತೆಗೆ ಮತ್ತೆ ಮತ್ತೆ ಆಹ್ವಾನಿಸುವ ಸಿಹಿ ಆಮಿಷಗಳು.

ಸಂಸ್ಕೃತ ಕಲಿತರೆ ಕನ್ನಡಕ್ಕೇ ಒಳ್ಳೆಯದು

ಸಂಸ್ಕೃತ ಭಾಷೆಯು ಪ್ರಾಚೀನವೂ, ವಿಸ್ತೃತವೂ, ಪರಿಷ್ಕೃತವೂ ಆಗಿರುವ ಭಾಷೆ. ಇದರಲ್ಲಿರುವ ವೈದಿಕ, ಲೌಕಿಕ, ಆಧ್ಯಾತ್ಮಿಕ, ಖಗೋಳ, ಆಯುರ್ವೇದ, ಮನೋವೈಜ್ಞಾನಿಕ ಹಾಗೂ ಮಾನವೀಯ ಸಾಹಿತ್ಯ ಭಂಡಾರವು ಅಪಾರ.

ಹೊಸ ವರ್ಷದ ಹಳೆಯ ನೆನೆಪು

ಹೋದ ವರ್ಷ ನಾನು ಎಷ್ಟೊ೦ದು ಖುಷಿಯಾಗಿದ್ದೆ , ಈ ವರ್ಷ ತು೦ಬಾ ನೋವಾಗುತ್ತಿದೆ ಎನು ಮಾಡುವುದು ಹೊಸ ವರ್ಷ ಬ೦ದರು ಹಳೆಯ ನೆನಪುಗಳ್ನ್ನು ಮರೆಯಲು ಆಗುವುದೆ, ಖ೦ಡಿತ ಇಲ್ಲ...

ಭಕ್ರಿ ಸಮಾರಾಧನೆ

(ಇತ್ತೀಚೆಗೆ ಬಹಳ ದಿನಗಳ ನಂತರ ಭಕ್ರಿ (ಜೋಳದ ರೊಟ್ಟಿ) ತಿಂದದ್ದರ ಪರಿಣಾಮ ಈ ಬರಹ - ಸಂಪದದಲ್ಲಿ ಮೊದಲ ಬ್ಲಾಗು ಕೂಡ!)

ಕೆಲವು ದಿವಸಗಳ ಹಿಂದೆ ನಮ್ಮ ಮನೆಯಲ್ಲಿ ಒಂದು ವಾರ ಪೂರ್ತಿ ಭಕ್ರಿ ಸಮಾರಾಧನೆ. ಹೆಚ್ಚು ಕಡಿಮೆ ಎರಡು ವರ್ಷಗಳಿಂದ ಭಕ್ರಿ ರುಚಿ ಕಾಣದ ನಾಲಿಗೆಗೆ ಭಕ್ರಿ ಔತಣ! ಇಲ್ಲಿ ಸ್ಯಾನ್ ಹೋಸೆಯಲ್ಲಿ ನನ್ನ ಹೆಂಡತಿ ಪಲ್ಲವಿ, ಬೆಂಗಳೂರಿನಲ್ಲಿ ಅವಳಣ್ಣ ರಮೇಶ ಮತ್ತು ಭಾರತ ಯಾತ್ರೆಯಿಂದ ಮರಳುತ್ತಿದ್ದ ಮಿತ್ರ ಪ್ರಮೋದ; ಇವರೆಲ್ಲರ coordination ಇಂದಾಗಿ ನನಗೆ ಭಕ್ರಿ ತಿನ್ನುವ ಯೋಗ ಒದಗಿ ಬಂದಿತ್ತು. ಆ ಭಕ್ರಿಗಳೋ ಕಟಿ ರೊಟ್ಟಿಗಳಾಗಿರದೆ ನನ್ನಮ್ಮನ ತೆಳು ಭಕ್ರಿಗಳಂತಿದ್ದು (ಹರವಿನಲ್ಲಿ ಅಮ್ಮನ ಭಕ್ರಿಗಿಂತ ಚಿಕ್ಕವಾಗಿದ್ದರೂ) ತಿನ್ನುತ್ತಿದ್ದಂತೆ ಒಮ್ಮಿಂದೊಮ್ಮೆಲೆ ೧೫-೨೦ ವರ್ಷಗಳಷ್ಟು ಹಿಂದಿನ ಗುಲ್ಬರ್ಗದ ನಮ್ಮ ಮನೆ, ಅಲ್ಲಿ ಅಡಿಗೆ ಮನೆಯಲ್ಲಿ ನೆಲದ ಮೇಲಿಟ್ಟ ಗ್ಯಾಸಿನ ಮುಂದೆ ಕುಳಿತ ಅಮ್ಮ ಜೋಳದ ಹಿಟ್ಟಿನ ಮಿನಿ ಗುಡ್ಡದಲ್ಲಿ ಒಂದು ತಗ್ಗು ಮಾಡಿ, ಅದೇ ಆಗ ಮರಳಿಸಿದ ಬಿಸಿನೀರ ಸುರಿದು, ಕೈ ಖಡಚಿಯಿಂದ ಚಕಚಕನೆ ಕಲಸಿ ಭಕ್ರಿ ಬಡಿಯಲಿಕ್ಕೆ ಸಿದ್ಧವಾಗುತ್ತಿದ್ದ ದೃಶ್ಯ ಕಂಡಾಗ ಪಲ್ಲವಿ ಮಾಡಿದ ಸೌತೆಕಾಯಿ ರಸಪಲ್ಯಕ್ಕೆ ಅಮ್ಮನ ನೆನಪೂ ಸೇರಿ ಮತ್ತಷ್ಟು ರುಚಿಯಾಯಿತು!

ಹೊಸವರ್ಷದ ಚಿತ್ರಗಳು..

ಕಳೆದ ಹೊಸವರ್ಷಕ್ಕೆ ಕೆಲವು ದಿನಗಳ ಮುಂಚೆ ನಾನು ಇಂಗ್ಲೆಂಡ್ ನಲ್ಲಿದ್ದೆ. ಲಂಡನ್ನಿನ ಹೊಸವರ್ಷಕ್ಕೆ ಹುಡುಗರೆಲ್ಲ ಗುಂಪಾಗಿ ಹೋಗಿದ್ದರು. ನನಗೆ ಅದರಲ್ಲಿ ಅಂಥ ಆಸಕ್ತಿ ಬರಲಿಲ್ಲ. ಆದರೆ ನನಗೆ ಭಾಗವಹಿಸುವುದಕ್ಕಿಂತ ಹೆಚ್ಚು ಸುಡುಮದ್ದಿನ ಪ್ರದರ್ಶನವನ್ನು ಶೂಟ್ ಮಾಡುವುದರಲ್ಲಿ ಆಸಕ್ತಿ ಇತ್ತು. ಈ ವರ್ಷ ಹೋಗಲೇ ಬೇಕೆಂದು ನಿರ್ಣಯವಾಯಿತು. ನಾನು ಮತ್ತು ಸ್ನೇಹಿತ ಅನಿರುದ್ಧ ಹೋಗಿ ಬಂದೆವು. ಸಂಜೆ ಏಳೂಕಾಲರಿಂದ ೧೨ ಗಂಟೆಯವರೆಗೆ ಶೂನ್ಯದ ಆಸುಪಾಸು ಹವಾಮಾನದಲ್ಲಿ ಕಾಲಹರಣ ಮಾಡಿದ್ದಾಯಿತು. ಆಚೀಚೆ ತಿರುಗಾಡಿ ಸ್ವಲ್ಪ ಕ್ರೌಡನ್ನು ನೋಡೋಣವೆಂದರೆ, ಹಿಡಿದ ಜಾಗ ಬಿಟ್ಟರೆ ಮತ್ತೆ tripod ಇಟ್ಟು ಫೋಟೋ ತೆಗೆಯಲು ಸಾಧ್ಯವಿರಲಿಲ್ಲ.
ಅಂತೂ ಇಂತೂ ೧೧:೫೯ ಕ್ಕೆ ಕೌಂಟ್ ಡೌನ್ ಶುರುವಾಯಿತು.
ಆಮೇಲೆ ಸುಮಾರು ೧೪ ನಿಮಿಷಗಳ ಆತಿಶ್ ಬಾಜಿ. ೨೭೯ ಚಿತ್ರಗಳನ್ನು ತೆಗೆದೆ. ಸುಮಾರು ೩ ಸೆಕೆಂಡಿಗೆ ೧ ಚಿತ್ರದ ಸರಾಸರಿಯಂತೆ...

ಮಲೆಯಾಳಿಯೊಬ್ಬ ಹಾಡಿದ ಕನ್ನಡ ಹಾಡು-II

ಸಂಗೀತ: ವಿ.ಹರಿಕೃಷ್ಣ
ಸಾಹಿತ್ಯ: ಜಯಂತ್ ಕಾಯ್ಕಣಿ
ಮೂಲ ಗಾಯಕ: ಸೋನು ನಿಗಮ್
ಚಿತ್ರ: ಗಾಳಿಪಟ

ಹಾಡುವ ನಿಟ್ಟಿನಲ್ಲಿ ನನ್ನ ಮೂರನೇ ಪ್ರಯತ್ನ ;) . ಇಲ್ಲಿಂದ ಕೇಳಬಹುದು:
http://www.esnips.com/doc/9c00c92e-e539-43ea-a6d4-8938d0f509dd/Minchagi-Neenu-Baralu

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ

ನಮ್ಮೂರಿನ ಸಾಮಾನ್ಯ ಅಸಾಮಾನ್ಯರು - ಮುಂದುವರೆದುದು

ಸಾಧನೆಯ ಮಾನದಂಡ ಏನೆಂದು ಎಷ್ಟೋ ಬಾರಿ ಯೋಚಿಸಿದ್ದೇನೆ. ಆದರೆ ಬೇರೆಯವರಿಗಿರಲಿ ಸ್ವತ: ನನಗೇ ಎಲ್ಲ ದೃಷ್ಟಿಯಿಂದ ಸಮಂಜಸವೆನ್ನಿಸಿದ ಉತ್ತರ ಇನ್ನೂ ಹೊಳೆದಿಲ್ಲ. ಶ್ರೀಮಂತನೋ, ಅಧ್ಯಾಪಕನೋ, ರಾಜಕಾರಣಿಯೋ, ಸಂಗೀತಗಾರನೋ ಅಥವಾ ವಾಣಿಜ್ಯೋದ್ಯಮಿಯೋ ಆದರೆ ಮಾತ್ರ ಅದು ಸಾಧನೆಯ ಶಿಖರವೆ?

ಹೊಸ ವರ್ಷಕ್ಕೆ ನನ್ನ ರಿಸಲ್ಯೂಷನ್

ಹೊಸ ವರ್ಷಕ್ಕೆ ನಾನೂ ಒಂದು ರಿಸಲ್ಯೂಷನ್ ಮಾಡಿದೆ. ‘ಸಮಾಜ ಸೇವೆಗೆ ನನ್ನ ಜೀವನವನ್ನು
ಮುಡಿಪಾಗಿಡುವುದು’. ಹೇಗೆ ಯಾವ ರೀತಿ ಸುರುಮಾಡುವುದು ಗೊತ್ತಿರಲಿಲ್ಲ. ಯಾವಾಗ ದಕ್ಷ
ಪೋಲೀಸ್ ಅಧಿಕಾರಿಯೊಬ್ಬರು ರೌಡಿಗಳನ್ನು ನಿಗ್ರಹಿಸಿ,ಸಮಾಜದಲ್ಲಿ ಶಾಂತಿ ಕಾಪಾಡುವ ವೃತ್ತಿ ಬಿಟ್ಟು ರಾಜಕೀಯಕ್ಕೆ ಸೇರಲು ನಿರ್ಧರಿಸಿದರೋ, ನಾನೂ ನನ್ನ ಕೆಲಸ ಬಿಡಲು ತೀರ್ಮಾನಿಸಿದೆ.