ಲಿನಕ್ಸಾಯಣ - ೯ - ಸ್ಮೈಲ್ ಪ್ಲೀಸ್

ಲಿನಕ್ಸಾಯಣ - ೯ - ಸ್ಮೈಲ್ ಪ್ಲೀಸ್

ಅರಮನೆ ಚಿತ್ರದಲ್ಲಿ ಗಣೇಶ್ "ಸೈಲ್ ಪ್ಲೀಸ್" ಅಂದಂಗೆ ಇವನೇನಪ್ಪಾ ಶುರು ಹಚ್ಕೊಂಡಿದಾನೇ ಅಂದ್ಕೊಂಡ್ರಾ? ಯಾಕಾಗ ಬಾರದು.

ಲಿನಕ್ಸ್ ನಲ್ಲಿ ನಿಮ್ಮ ವೆಬ್ ಕ್ಯಾಮರಾಗಳು "ಔಟ್-ಆಫ್-ಬಾಕ್ಸ್" ಅಂದರೆ ಯಾವುದೇ ಡ್ರೈವರ್ ಗಳನ್ನ ಇನ್ಸ್ಟಾಲ್ ಮಾಡಬೇಕಾದ ಕಿರಿ ಕಿರಿಯಿಲ್ಲದೆ ಉಪಯೋಗಿಸೋ ಕಾಲ ಬಂದದ್ದಾಗಿದೆ.

ಉಬುಂಟುವಿನಲ್ಲಿ  ಪ್ರೊಗ್ರಾಮ್ ಗಳನ್ನ ಹೇಗೆ ಇನ್ಸ್ಟಾಲ್ ಮಾಡೋದು ಅಂತ ಹೇಳಿದ್ದೆನಲ್ಲಾ. ಅದನ್ನ ಉಪಯೋಗಿಸಿ ಕೊಂಡು "Cheese" ಅನ್ನುವ ತಂತ್ರಾಂಶವನ್ನ ಇನ್ಸ್ಟಾಲ್ ಮಾಡಿಕೊಳ್ಳಿ.

 

ಇದು Applications -> Graphics ಈ ಮೆನುವಿನಲ್ಲಿ ನಿಮಗೆ ಮುಂದೆ ಸಿಗುತ್ತದೆ. ಇದನ್ನ ಕ್ಲಿಕ್ಕಿಸಿದಾಕ್ಷಣ ನಿಮ್ಮ ವೆಬ್ ಕ್ಯಾಮೆರದ ದೃಷ್ಟಿಪಟಲ ನಿಮ್ಮ ಭಾವಚಿತ್ರವನ್ನ ನಿಮ್ಮ ಪರದೆಯ ಮುಂದೆ ತರಲಾರಂಬಿಸುತ್ತದೆ.
ಕೆಳಗಿನ ಚಿತ್ರದಲ್ಲಿ, ಕಚೇರಿಯಿಂದ ಮನೆಗೆ ವಾಪಸ್ ಬರುವಾಗ ನನ್ನ ಲ್ಯಾಪ್ ಟಾಪ್ ನಲ್ಲಿದ್ದ ವೆಬ್ ಕ್ಯಾಮ್ ಉಪಯೋಗಿಸಿ ತೆಗೆದ ರಸ್ತೆಯ ಚಿತ್ರವಿದೆ. ಕೆಳಗೆ ಮೊದಲು ತೆಗೆದ ಬಾವಚಿತ್ರಗಳೂ ಕಾಣ್ತವೆ. 
ನನ್ನ ಕ್ಯಾಮೆರಾವನ್ನ ೧೮೦ ಡಿಗ್ರಿ ತಿರುಗಿಸ ಬಹುದಾದ್ದರಿಂದ ನಾನು ರಸ್ತೆಯ ವಿಡಿಯೋ ಕೂಡ ತಗೀಲಿಕ್ಕೆ ತಕರಾರಿಲ್ಲ. ಹೌದು ಇದೇ "ಚೀಸ್" ಉಪಯೋಗಿಸಿ.
ಮತ್ತೆ " ಸೈಲ್ ಪ್ಲೀಸ್"

 

Rating
No votes yet

Comments