ಇದು ಹೊಸ ಇನ್ನಿಂಗ್ಸ್ ಗುರು

ಇದು ಹೊಸ ಇನ್ನಿಂಗ್ಸ್ ಗುರು

ಕಳೆದ ಕೆಲವು ತಿಂಗಳುಗಳಿಂದ ಇದ್ದ ಚುನಾವಣೆ ಕಾವು ನಿನ್ನೆಯ ಮಳೆಯಿಂದ ತಂಪಾಗಿದೆ. ಆದ್ರೆ ಇವತ್ತು ಬಿ.ಜೆ.ಪಿ ಹೊಸ ಜನ ಶಕ್ತಿಯಾಗಿ ಹೊರ ಹೊಮ್ಮಿದೆ. ಜನತೆ ಅದನ್ನ ನಂಬಿ ಮತ ಹಾಕಿದ್ದಾರೆ.ನಿನ್ನೆ ರಾಜ್ಯಾದಂತ ಬಿ.ಜೆ.ಪಿ ಪಕ್ಷ ಹಬ್ಬ ಆಚರಿಸಿದೆ. ಎಡಿಯೂರಪ್ಪ ರಾಜ್ಯದ ೨೫ನೇ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಕೇವಲ ಒಂದು ವಾರ ಅಧಿಕಾರದ ರುಚಿ ಸವಿದ ಎಡಿಯೂರಪ್ಪ ಈಗ ಪೂರ್ತಿ ೫ ವರ್ಷ ಅಧಿಕಾರ ಚಲಾಯಿಸಲಿದ್ದಾರೆ. ಇವತ್ತು ಅದಕ್ಕಿರುವ ಸವಾಲುಗಳು ಕಡಿಮೆ ಏನಲ್ಲ. ಅವರೊಳಗಿರುವ ಆಂತರಿಕ ಕಚ್ಚಾಟ, ಹಿಂದುತ್ವವಾದಿಗಳು ಅನ್ನೋ ಹಣೆಪಟ್ಟಿ , ಕಾಂಗ್ರೆಸ್ಸ ನಂತಹ ವಿರೋಧಿ ಪಕ್ಷ ಅದಕ್ಕಿರುವ ದೊಡ್ಡ ಸವಾಲು. ಬೆಂಗಳೂರಿನ ಸಮಸ್ಯೆಗಳ ಪಟ್ಟಿಯನ್ನ ನಾನು ನಿಮ್ಮ ಮುಂದಿಡುವ ಹಾಗಿಲ್ಲ ಯಾಕಂಡ್ರೆ ಇದು ಇಡಿಯ ಜಗತ್ತಿಗೆ ಗೊತ್ತಿರುವ ವಿಷಯ. ಇವತ್ತು ನಮ್ಮ ಕನ್ನಡ ನಾಡಿಗಿರುವ ಸಮಸ್ಯೆಗಳು ಕಡಿಮೆ ಏನಿಲ್ಲ. ಇತ್ತೀಚಿನ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪ್ ಗೌಡರ ಹೆಸರಿಡುವ ವಿಚಾರ, ಅಲ್ಲಿ ಕನ್ನಡಿಗರಿಗ ಉದ್ಯೋಗ ಕೊಡಿಸುವ ವಿಚಾರವಿರಬಹುದು, ಕಾವೇರಿ ನದಿ ನೀರಿನ ವಿಚಾರವಿರಬಹುದು, ಬೆಳಗಾವಿ ಗಡಿ ಸಮಸ್ಯೆ ಇರಬಹುದು, ಅಥವಾ ರೈತರ ಆತ್ಮಹತ್ಯಯ ವಿಚಾರ..... ಹೀಗೆ ಸಮಸ್ಯೆಗಳ ಪಟ್ಟಿ ಹನುಮಂತನ ಬಾಲದತರಹ ಬೆಳೆಯುತ್ತಾನೆ ಹೋಗತ್ತೆ. ಈ ಚುನಾವಣೇಲಿ ಜನ ಸಮ್ಮಿಶ್ರ ಸರಕಾರಕ್ಕೆ ಬೇಸತ್ತು ಒಂದು ಪಕ್ಷವನ್ನ ಬಹುಮತದಿಂದ ಆರಿಸಿದ್ದಾರೆ. ಈಗ ಜನತೆ ತಮಗೇನೂ ಬೇಕೇ ಅನ್ನೋದನ್ನ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಅವರ ಕೃಪೆ ಈ ಸಾರಿ ಬಿ.ಜೆ.ಪಿ ಮೇಲೆ ಬಿದ್ದಿದೆ.

ಪ್ರಥಮ ಬಾರಿಗೆ ಅಧಿಕಾರದ ಗದ್ದುಗೆ ಏರಿರುವ ಬಿ.ಜೆ.ಪಿ ಇವನೆಲ್ಲ ಹೇಗೆ ಸ್ವೀಕರಿಸುತ್ತೋ ಅದರ ಮೇಲೆ ಅದರ ಬೆರುಗಳು ಕರ್ನಾಟಕದಲ್ಲಿ ಗಟ್ಟಿಗೊಳ್ಳುತ್ತ ಹೋಗುತ್ತವೆ. ಇವತ್ತು ಬಿ.ಜೆ.ಪಿ ಯಲ್ಲಿ ಅನಂತ ಕುಮಾರ್ ಮತ್ತು ಎಡಿಯೂರಪ್ಪ ಅವರ ಎರಡು ಬೇರೆ ಬಣಗಳಿವೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಇದನ್ನ ಎಡಿಯೂರಪ್ಪ ಹೇಗೆ ನಿಭಾಯಿಸಿಕೊಂಡು ಹೋಗುತ್ತಾರೆ ಅನ್ನುವುದು ಕುತೂಹಲದ ವಿಷಯ. ಇವತ್ತು ಬಿ.ಜೆ.ಪಿ ಅಧಿಕಾರಕ್ಕೆ ಬಂದಿರುವುದು ಕೇವಲ ಹಣದ ಬಲದಿಂದ ಅನ್ನುವ ಮಾತು ಎಲ್ಲ ಪ್ರತಿಪಕ್ಷದವರ ಬಾಯಲಿದೆ. ಈ ಸರಕಾರ ಅವರ ಬಾಯನ್ನು ಕೆಲಸಗಳನ್ನು ಕಾರ್ಯರೂಪಕ್ಕೆ ತಂದು ಬಾಯಿ ಮುಚ್ಚಿಸಬೇಕು.

ಇದಸ್ಟೆ ಅಲ್ಲ, ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಕರ್ನಾಟಕ ಒಂದು ನಿರ್ಣಾಯಕ ಸ್ಥಾನ ವಹಿಸಲಿದೆ ಅನ್ನುವುದನ್ನ ನಾವುಗಳು ಮರೆಯುವಂತಿಲ್ಲ. ಇವತ್ತು ಕಾಂಗ್ರೆಸ್ಸಿನ ಮೇಲಿರುವ ಬೆಲೆ ಹೆಚ್ಚಳದ ಬಿಸಿ ಬಿ.ಜೆ.ಪಿ ಪಾಲಿಗೆ ವರವಾಗಿ ಪರಿಣಮಿಸಿದರೆ ಆಶ್ಚರ್ಯವಿಲ್ಲ.

ಹಾಗಂತ ಬಿ.ಜೆ.ಪಿ ಏನು ಸಜ್ಜನರ ಪಕ್ಷವಲ್ಲ. ಆದ್ರೆ ಈ ಸಾರಿ ಅಧಿಕಾರಕ್ಕೆ ಬಂದವರನ್ನ ಸ್ವಾಗತಿಸೊಣ. ಇಲ್ದೆ ಇದ್ರೆ ಮತ್ತೆ ಚಾಟಿ ಏಟು ಕೊಡೋಕೆ ಮಹಾಜನತೆ ತಯಾರಾಗಿರ್ತಾರೆ.

Rating
No votes yet