ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ

ನಮ್ಮ ನಾಡಿನ ರಾಜಕೀಯ ಹದಗೆಟ್ಟಿದೆ. ರಾಜಕಾರಣಿಗಳಿಂದಾಗಿ ಎಲ್ಲ ಕೊಳೆತು ನಾರುತ್ತಿದೆ. ನಮ್ಮ ನಾಡಿನ ಜನರ ಕಷ್ಟ ಕಾರ್ಪಣ್ಯಕ್ಕೆ ಕೊನೆಯೇ ಇಲ್ಲದಂತಾಗಿದೆ. ಇವೆಲ್ಲಾ ನಿಜವೇ. ಆದರೆ, ಇದನ್ನೇ ಎಷ್ಟು ದಿನಾಂತ ಹೇಳ್ಕೊಂಡಿರೋಕೆ ಆಗತ್ತೆ ಹೇಳಿ. ಸಿಟ್ಟು ವಿಷಾದ ಇರಲಿ, ಕನಿಷ್ಟ ಬೋರಾದರೂ ಆಗಬೇಕಲ್ಲವ? ಬೋರು ಆಗತ್ತೆ ಅಂತೀರ? ಅದನ್ನ ನಾನೂ ಒಪ್ಪತೀನಿ. ಯಾಕಂದರೆ ಜನ ಮತ ಹಾಕೋದನ್ನ ಬಿಟ್ಟಿಬಿಟ್ಟಿದ್ದಾರೆ ನೋಡಿ, ಅದಕ್ಕೆ. ಇವೆಲ್ಲಾ ಮಾತು ಮತ್ತೆ ಮತ್ತೆ ಹೇಳೋಕೆ ನಾನು ಹೊರಟಿಲ್ಲ. ಅದನ್ನೆಲ್ಲಾ ಮೀರಿದ್ದು, ಅದರ ಹಿಂದಿಂದು, ಅದರ ಬುಡದಲ್ಲಿ ನನಗೆ ಕಾಣೋ ಒಂದೆರಡು ವಿಷಯ ಹೇಳ್ತೀನಿ.

ಮೊದಲನೇದಾಗಿ, ರಾಜಕಾರಣಿಗಳು ನಮನಿಮಗಿಂತ ಜಾಸ್ತಿ ಧೂರ್ತರಲ್ಲ. ಹುಬ್ಬೇರಿಸಬೇಡಿ. ಅವರು ದೇವತೆಗಳೂ ಅಲ್ಲ. ಅವರ ಧೂರ್ತತೆಗೂ ನಮ್ಮ ಧೂರ್ತತೆಗೂ ಒಂದು ಸಣ್ಣ ವ್ಯತ್ಯಾಸ ಇದೆ. ನಮ್ಮ ಧೂರ್ತತೆಯಿಂದ ನಾಕಾರು ಜನಕ್ಕೆ ತೊಂದರೆ ಆಗಬಹುದು. ಅವರ ಧೂರ್ತತೆಯಿಂದ ಲಕ್ಷಾಂತರ ಜನಕ್ಕೆ ತೊಂದರೆ ಆಗತ್ತೆ. ನಮ್ಮ ಧೂರ್ತತೆ ಹೆಚ್ಚೇನೂ ಪರಿಣಾಮ ಬೀರದೇ ಇರಬಹುದು. ಅವರ ಧೂರ್ತತೆ ತುಂಬಾ ಕ್ರೂರವಾಗತ್ತೆ. ಆಯ್ತ? ಅವರು ನಮನಿಮಗಿಂತ ಜಾಸ್ತಿ ಧೂರ್ತರಲ್ಲ. ಕೈಯಲ್ಲಿ ಅಧಿಕಾರ ಇದ್ದಾಗ ನಮ್ಮಷ್ಟೇ ಧೂರ್ತತನ ಅವರು ತೋರಿಸದಿರೂ ಅದರ ಪರಿಣಾಮ ಹೆಚ್ಚು ಘೋರ. ಅವರ ಏನು ಮಾಡಿದರೂ ನಡೆಯೋದರಿಂದ, ಧೂರ್ತತೆ ಹೆಚ್ಚು ಬಳಸ್ತಾರೆ ಅನ್ನೋದು ಕೂಡ ನಿಜವೆ. ಆದರೆ, ನಮನಿಮಗಿಂತ ಜಾಸ್ತಿ ಧೂರ್ತರಲ್ಲ.

ಬೆಂಗಳೂರಿಗೆ ಶ್ರದ್ಧಾಂಜಲಿ

ಬೆಂಗಳೂರೆಂಬ ಮಾಯಾನಗರಿ ತನ್ನ ತೆಕ್ಕೆಯೊಳಕ್ಕೆ ಎಲ್ಲಾರನ್ನು ಸೆಳಿತಾನೇ ಇದೆ. ಆದ್ರೆ ಸ್ನೇಹಿತರೆ ಈ ಊರಿನ ಜೀವನದ ಅಂತಃಸತ್ವ ನಶಿಸಿಹೋಗಿ ಕಾಲವೇ ಆಯ್ತು ಅನ್ಸುತ್ತೆ.

"ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?

"ಅವನಿಗೆ ಆ ಊರಿನಲ್ಲಿ ೫ ಎಕರೆ ಗದ್ದೆ ಮತ್ತು ೮ ಎಕರೆ ಹೊಲ ಇದೆ."
ಇಲ್ಲಿ ಹೊಲ ಮತ್ತು ಗದ್ದೆ ಈ ಪದಗಳಿಗಿರುವ ವ್ಯತ್ಯಾಸವೇನು?

ಬೇಕನ್ (bacn) - ಅಂತರ್ಜಾಲದಲ್ಲಿ ಈಗ ಹೊಸ ಪದ

ಬೇಕನ್ (bacn) ಇದೊಂದು ಅಂತರ್ಜಾಲದಲ್ಲಿ ಈಗ ಹೊಸ ಪದ !!! ಅಂದ್ರೆ SPAM ಅಷ್ಟು ಕೆಟ್ಟದಲ್ಲ, EMAIL ಅಷ್ಟು ಉಪಕಾರಿಯಲ್ಲ. ಬೇಕು , ಅದ್ರೆ ಸದ್ಯಕಂತು ಬೇಡ ಅನ್ನುವ ಸಂದೇಶಗಳು ಈ ಗುಂಪಿಗೆ ಸೇರುತ್ತವೆ !!!

ಇದು ಕುರುಕ್ ತಿಂಡಿಗಳ ತರಹ - ನೆಂಜಿಕೊಳ್ಳೊಕೆ ಬೇಕಾಗುವಂತಹ ಸಂದೇಶಗಳು ...

ಹೆಚ್ಹಿನ ವಿಷಯಗಳಿಗೆ ಈ ಕೊಂಡಿಗಳನ್ನು ನೋಡಿ :-

ನೀರಿನ ಸಮಸ್ಯಗೆ ಒಂದು ಪರಿಹಾರ !!

ಭೂಮಿಯ ಶೇಕಡ ೭೫ ಬಾಗ ನೀರಲ್ಲಿ ತುಂಬಿರಬೇಕಾದರೆ, ಹಾಗು ಭಾರತ ದೇಶದ ಸುತ್ತಲು ನೀರು ಆವರಿಸಿರುವಾಗ. ನಮ್ಮಲ್ಲಿ ನೀರಿನ ಸಮಸ್ಯ ಯಾಕೆ ?

ಪರಿಹಾರ :

ಈ ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಲು ಆಗದಿರಲು ಕಾರಣ ?? ನಾವುಅ ಯಾಕೆ ಈ ರೀತಿ ಮಾಡಬಾರದು. ಆದರೆ ಈ ರೀತಿ ಪ್ಲಾಂಟ್ ಸೃಷ್ಟಿಸಲು ವೆಚ್ಚವು ಅಧಿಕ ಎಂದು ಕೇಳ್ಪಟ್ಟೆ.

ಊರು, ಅಜ್ಜಿ, ಮಳೆ ಮತ್ತು ಅಜ್ಜನ ನೆನಪು...

ಸಾಗರದಲ್ಲಿ ಬೆಳಗ್ಗೆ ಬಸ್ಸಿಳಿದಾಗಿನಿಂದ ಜಿಟಿಜಿಟಿ ಮಳೆ. ರಸ್ತೆ,ರಸ್ತೆಬದಿಯ ಹುಲ್ಲು ಹಾಸು, ಹೂಳುತುಂಬಿದ ಕೆರೆಯ ಮುಕ್ಕಾಲು ಭಾಗ ತುಂಬಿದ ಜೊಂಡುಹುಲ್ಲು, ಮಳೆಯಿಂದ ತುಂಬಿದ ಮಧ್ಯಭಾಗದಲ್ಲಿ ಅರಳುಮೊಗ್ಗಾದ ಕಮಲಗಳು.. ಸುತ್ತ ಮಾತಿಲ್ಲದೆ ಜೊತೆಯಾಗಿ ನಿಂತ ಬಿಳಿಬಿಳಿ ಕಟ್ಟಡಗಳು ಕೆರೆಯಾಚೆಗಿನ ರಸ್ತೆಯಂಚಿನ ದೊಡ್ಡ ದೊಡ್ಡ ಮರಗಳು ಎಲ್ಲವೂ ಮಳೆಯ ಸೋನೆಗೆ ಮೈಯೊಡ್ಡಿ ಸೊಂಪಾಗಿ ಕಾಣುತ್ತಿತ್ತು. ತುಂಬ ದಿನಗಳ ನಂತರ ಊರಿಗೆ ಹೋಗಿದ್ದೆ. ಎಲ್ಲ ಅವತ್ತು ೧೫ ವರ್ಷಗಳ ಮುಂಚೆ ಒಂದು ಮಳೆಗಾಲದಲ್ಲಿ ನಾನು ಹೊರಟಾಗ ಇದ್ದಂತೆಯೇ ಕಂಡರೂ ಎಲ್ಲ ಬೇರೆಯೇ ಅಂತ ಗೊತ್ತಾಗುತ್ತಿತ್ತು. ಕಳೆದಕಾಲದೊಡನೆ ಬದಲಾದ ಊರು ಮತ್ತು ನಾನು..

ಅಜ್ಜಿಗೆ ಸ್ವಲ್ಪ ಹುಷಾರಿರಲಿಲ್ಲ. ನನಗೆ ನೋಡಲೇಬೇಕೆನ್ನಿಸಿತ್ತು. ಎಷ್ಟೇ ಫೋನಿನಲ್ಲಿ ಮಾತಾಡಿದರೂ ನನ್ನ ಸ್ವರದ ಅಂದಾಜಿನ ಮೇಲೆ ಮಾತನ್ನು ಊಹಿಸುವ ಇಳಿವಯಸ್ಸಿನ ಅರೆಕಿವುಡು. ನನಗೆ ಅವಳ ಜೊತೆಕೂತು ಮಾತುಕತೆ ಹೊಸೆಯಬೇಕಿತ್ತು. ಬೆನ್ನ ಹಿಂದೆ ಜಗ್ಗಿನಿಂತ ಎಲ್ಲ ಕೆಲಸಗಳನ್ನೂ ರಿಕ್ವೆಸ್ಟ್ ಮಾಡಿ ಬದಿಗೆ ಸರಿಸಿ ರಾತ್ರಿ ಬಸ್ಸು ಹತ್ತಿದೆ. ಹಣ್ಣು ಮುಖದ ತುಂಬ ಹೂನಗೆ ಹೊತ್ತವಳು ಕಾದಿದ್ದಳು.. ಯಾವಯಾವುದೋ ವಿಷಯದಲ್ಲಿ ಶುರುವಾದ ಎಲ್ಲ ಮಾತಿನ ಹಾದಿಗಳೂ ಸಾವಿನ ಮನೆಯ ಜಗುಲಿಗೇ ಹೋಗಿ ಸೇರುತ್ತಿತ್ತು. ಅವಳ ಓರಗೆಯವರನೇಕರು, ಚಿಕ್ಕವರು ಮತ್ತು ದೊಡ್ಡವರು ಸಾಕಷ್ಟು ಜನ ಗಂಟು ಮೂಟೆ ಕಟ್ಟಿದ್ದರು. ಒಬ್ಬೊಬ್ಬರು ಹೋದಾಗಲೂ ಮೊದಲ ಆತಂಕ ನೆಕ್ಸ್ಟ್ ನಾನೇ ಏನೋ ಅನ್ನುವುದೇ. ಎರಡನೆಯದು ಯಾವ ಬಗೆಯ ಸಾವು..? ಆಸ್ಪತ್ರೆಯಲ್ಲಿ ಜೀವರಸವನ್ನೂ(ಗ್ಲೂಕೋಸ್) ಹಿಂಡುವ ನೋವಿನೊಂದಿಗೆ ಜೀವದೊಳಗೆ ಬಿಟ್ಟುಕೊಳ್ಳುತ್ತಾ ಬಿಡಲಾರದೆ ಜೀವ ಬಿಡುವುದೋ, ಇಲ್ಲಾ ಮನೆಯಲ್ಲಿ ಬೆಳಿಗ್ಗೆ ತಿಂಡಿ, ಸ್ನಾನ ಚಾ ಆಗಿ ಅಡಿಕೆ ಕುಟ್ಟಿಕೊಂಡು ಎಲೆ ನೀವಿ ಸುಣ್ಣ ಹಚ್ಚುವಾಗ ಗೊತ್ತಾಗದಂಗೆ ಜೀವ ಹೋಗುವುದೋ.. ನೇರವಾಗಿ ಹೀಗೇ ಆಗಲಿ ಎನ್ನುವ ಧೈರ್ಯವಿಲ್ಲವಾದರೂ ಅವಳ ಮನಸ್ಸಿನ ತುಂಬ ಕಾಡಿನಿಂತ ಆಸೆ ಅದೇ.. ಚಿಕ್ಕಂದಿನ ನೆನಪುಗಳಿಂದ ಹಿಡಿದು ಇವತ್ತಿನ ಮಾತ್ರೆಗಳು, ಡಾಕ್ಟರವರೆಗೆ, ಎಲ್ಲ ಮಾತಾಡುತ್ತ ಕೂತೆವು. ನಾಲ್ಕೈದು ಲೋಡು ಕವಳ ಖರ್ಚಾಯಿತು. ಅಂಗಳದಲ್ಲಿ ಮಳೆ ನಮ್ಮ ಮಾತಿಗೆ ಹನಿ ಹಾಕುತ್ತಿತ್ತು.ನಾನು ವಿಮಾನದಲ್ಲ್ ಊರುಗಳಿಗೆ ಹೋಗುವುದನ್ನು ಮತ್ತೆ ಮತ್ತೆ ಕೇಳಿದಳು. ಅವಳಿಗೆ ವಿಮಾನದಲ್ಲಿ ಹೋಗಿನೋಡಬೇಕೆಂಬಾಸೆ ಆದರೆ ಭಯ :)

ಪ್ರೀತಿಎಂಬ ಬೆಳಕು

ಪ್ರೀತಿ ಎಂಬ ಬೆಳಕು ಕಂಡೆ ನಿನ್ನ ಕಣ್ಣಲಿ
ಬೀರಿದೆ ಇಂದು ಕಿರಣವಾಗಿ ನನ್ನ ಜೀವನದಲ್ಲಿ
ಬೆಳಗಿದೆ ದೀಪವಾಗಿ ನನ್ನ ಮನದಲ್ಲಿ
ಮಸುಕದಿರಲಿ ಕಿರಣ,ಆರದಿರಲಿ ಬೆಳಕು ಎಂದು
ಬೇಡುವೆ ಆ ದೇವರಲ್ಲಿ..
ನಮ್ಮ ಪ್ರೀತಿಯು ಆಗಲಿ ಜೀವನಕೆ ದಾರಿದೀಪವಾಗಿ
ಬೆಳಗಲಿ ಶಾಶ್ವತವಾಗಿ.

ಸಂಪದ ಕ್ಕೆ ...ಜೈ!

ಈವತ್ತಿಂದ ನಾನು ಬರೀಬೇಕು ಅಂದುಕೊಡಿದೀನಿ. ಅದೂ ಕನ್ನಡದಲ್ಲಿ. ಅದೂ.......ಸಂಪದದಲ್ಲಿ.

ಕನ್ನಡದ ಬಗ್ಗೆ ನನ್ನ ಓದು ತುಂಬಾ ಮುಂಚೆನೇ ನಿಂತು ಹೋಗಿತ್ತು. ಈಗ ಮತ್ತೆ ಆಸಕ್ತಿ ಬಂದಿದೆ.. ಸಂಪದದ ಕಾರಣ! ಸಂಪದ ಕ್ಕೆ ಒಂದು ದೊಡ್ಡ ಜೈ!