ಹೀಗೆ ಕೆಲವು ಪ್ರಸಂಗಳು

ಹೀಗೆ ಕೆಲವು ಪ್ರಸಂಗಳು

ಕಳೆದ ೪ ವರ್ಶಗಳಾಲ್ಲಿ ನಾನು ಕೆಲಸದ ನಿಮಿತ್ತ ಹೊರ ದೇಶಕ್ಕೆ ಪ್ರಯಾಣಿಸಿದಾಗ ಎದುರಿಸಿದ ಕೆಲವು ಪ್ರಸಂಗಗಳು. ಇದು ತಮಾಶೆಂಥ ತಿಳ್ಕೊಡ್ರು ಕೆಲವೊಮ್ಮೆ ನನಗೆ ಆಶ್ಚರ್ಯ ಆಗುತ್ತೆ ಮನುಶ್ಯನ ಆಸೆ ಬಗ್ಗೆ, ಡಾಲರ್ ನ್ ಬಗ್ಗೆ ಇರುವ ಕ್ರೇಜ್ ಬಗ್ಗೆ. Onsite ಬಂದಾಗ ಕಂಪನಿ ೪ ಜನಕ್ಕೆ ಒಂದು apartment ಕೊಡುತ್ತೆ. ೪ ಜನ ರೂಮ್ ನ ಖರ್ಚು ಹಂಚಿಕೊಳ್ಳುತ್ತೇವೆ. ಕಳೆದೆ ೪ ವರ್ಶಗಳಲ್ಲಿ ನಾನು ಹಲವಾರು ಬಾರಿ ಇಲ್ಲಿಗೆ ಬಂದಿದ್ದೇನೆ, ಹಲವರೊಡನೆ ರೂಂ ಹಂಚಿ ಕೊಂಡಿದ್ದೇನೆ.

ಮೊಟ್ಟೆ ಪ್ರಸಂಗ:
ನಿನ್ನೆಯಷ್ಟೇ ನಡೆದದ್ದು, ರೂಮ್ ಅಲ್ಲಿ ಇದ್ದದ್ದು ೫ ಮೊಟ್ಟೆ. ಇರುವವರು ೩ ಜನ. ನಾನು ಟಿ ವೀ ನೋಡ್ತಾ ಇದ್ದೆ .ಸರಿ ನನ್ನ ರೂಮ್ ಮೇಟ್ ನಂದಿ ಮೊಟೆ ಬೇಯಿಸಿ ೨ ಮೊಟ್ಟೆ ತಿನ್ನಲೆಂದು ತಗೊಂಡು ಬಂದ. ಪ್ರದೀಪ್ ಮೊಟ್ತೆ ತರಲು ಹೋದಾಗ ನನಿಗೂ ತಗೊಂಡು ಬರಲು ಹೇಳಿದೆ. ಪ್ರದೀಪ್ ಸ್ವಲ್ಪ ಹೊತ್ತಿನ ನಂತರ ಅಡುಗೆ ಮನೆಯಿಂದ ಬಂದ ನಾನು ತಿಳ್ಕೊಂಡೆ ಇನ್ನು ಮೊಟ್ಟೆ ತಗೋಂಡಿಲ್ವೇನೋ ಅಂಥ. ಸರಿ ನಾನು ಮೊಟ್ಟೇ ತರಲು ಹೋದಾಗ ಪ್ರದೀಪ್ಗೆ ಹೇಳ್ದೆ ಬಾರಪ್ಪ ತಿನ್ನೋಣ ಅಂಥ. ಆದರೆ ಪ್ರದೀಪ್ ಹೇಳ್ದ ಅವನು ೨ ಮೊಟ್ಟೆ ತಿಂದಾಯ್ತು ಎಂದು .ಹೋದೆ ಮೊಟ್ತೆ ತಿಂದೆ ಬಂದು ಟಿ ವಿ ನೋಡ್ತಾ ಕೂತೆ. ಇಲ್ಲಿಯವರೆಗೆ fine, No isusues. ಆದರೆ ಸ್ವಲ್ಪ ಹೂತ್ತಿನ ನಂತರ ನಂದಿ ಓವನ್ ಓಪನ್ ಮಾಡಿದಾಗ ನೋಡ್ತಾನೆ ಅಲ್ಲಿ ಎರಡು ಮೊಟ್ಟೆ ಇದೆ. ಆಮೇಲೆ ಗೊತ್ತಾಯ್ತು ಪ್ರದೀಪ್ ಗುರುವಾರ ಮೊಟ್ತೆ ತಿನ್ನೋಲ್ಲ ಅಂಥ.

ಎಣ್ಣೆ ಪ್ರಸಂಗ
ಈ ಪ್ರಸಂಗ ನಡೇದಾಗ ರೂಂ ಅಲಿ ಇದ್ದದು ಕೇವಲೆ ೩ ಜನ. ೪ ನೇಯವನು ಒಂದು ವಾರದಲ್ಲಿ ಬರುವವನಿದ್ದ.
ರೂಂ ಅಲಿ ಎಣ್ಣೆ ಮುಗಿದು ಹೋಗಿತ್ತು. ಸಾಯಂಕಾಲ ಬರುವಾಗ ನಾನೊಂದು ಎಣ್ಣೆ ಬಾಟಲ್ ತಗೊಂಡು ಬಂದೆ .ಪ್ರದೀಪ್ ಒಂದು ಬಾಟಲ್ ತಗೊಂಡು ಬಂದ. ರೂಂ ಬಿಲ್ ಮಾಡಬೇಕಾದರೆ ಪ್ರದೀಪ್ ಕಮೆಂಟ್ ಬಂತು . Extra ೧ ಲೀಟರ್ ಎಣ್ಣೆ ೪ ನೇ ರೂಂ ಮೇಟ್ ಬಂದ ಮೇಲೆ ಬಿಲ್ ಮಾಡೋಣಾ.

Rating
No votes yet