ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾನು ಯಾವ ಆತ್ಮ

ಪುಣ್ಯ ಕಾರ್ಯ ಮಾಡಿದವ ಪುಣ್ಯಾತ್ಮ
,

ಪಾಪಗಳನ್ನು ಮಾಡಿದವ ದುರಾತ್ಮ


ಪಾಪವನ್ನು ಮೆಟ್ಟಿ, ಪುಣ್ಯವನ್ನು ಕಟ್ಟಿ

ನೆಡೆದಾಡಿದವ ಇಳೆಯೊಳಗೆ ಮಹಾತ್ಮ

ದೇಶಕ್ಕಾಗಿ ಮಡಿದವ ಹುತಾತ್ಮ,

ಇದರೊಳಗೆ ನಾನ್ಯಾರೆಂದು ತಿಳಿಯದವ ನಿರಾತ್ಮ||

ನನ್ನ ಕಾವ್ಯ

ಇದ್ದಿದ್ದರೆ ಈಗಲೂ

ದುಶ್ಯಂತನಂತ ಗಂಡು,

ಶಾಕುಂತಲೆಯಂತ ಹೆಣ್ಣು,


ಆ ದುಂಬಿ ಹಾಡು,

ಹಚ್ಚ ಹಸಿರು ಕಾಡು,

ಆಗುತ್ತಿತ್ತು ನನ್ನ ಕಾವ್ಯ,

"ಅಭಿಜ್ಞಾನಶಾಕುಂತಲೆ"ಗಿಂತ

ಇನ್ನೂ ನವ್ಯ-ಭವ್ಯ||

ಬಹು ಏಕಾಂಗಿಗಳು

ಉದ್ಯನವನದಲ್ಲಿ ಎಲ್ಲಾ ಕಡೆ
ಬರೀ ಜೊಡಿಗಳು,
ಬಡಪಾಯಿ ದುಂಬಿಯನು
ಅಹ್ವಾನಿಸಿದವು ಹೂವುಗಳು|
ಆಕಾಶದೆಲ್ಲಿಡೆ ಮಿನುಗುತಿವೆ
ನೂರಾರು ತಾರೆಗಳು,
ಒಬ್ಬೊಂಟಿ ಚಂದ್ರನನು
ಸಂತೈಸುತಿದೆ ಭೂಮಿಕರುಳು|
ಕಡಲ ತೀರದಲಿ ಕಚ್ಚಿಕೊಂಡಿವೆ
ಪ್ರೇಮಿಗಳ ಮೈಮನಸ್ಸು,
ಏಕಾಂಗಿ ಸೂರ್ಯನ ಆರೈಸಿದೆ
ಮೋಡಗಳ ಚಲಿಸು-ಬಿರುಸು|
ಏಕಾಂಗಿ-ಒಂದಲ್ಲ,ಒಬ್ಬನಲ್ಲ,
ದುಂಬಿ,ಚಂದ್ರ,ಸೂರ್ಯ ಹೀಗೆ

ಪ್ರಕೃತಿ

ನೀ ಸೂರ್ಯ-ನಿನ್ನ ಆಗಮನ,

ಜೀವಜಂತು-ಲೊಕವೆಲ್ಲಾ ಪ್ರಕಾಶಮಾನ|

ನೀ ಗಾಳಿ-ನಿನ್ನ ಚಲನೆ,

ಇಳೆಯ ತುಂಬಾ ತಂಪು ಸಿಂಚನೆ|

ನೀ ನದಿಸಾಗರ-ನಿನ್ನ ಓಡುವಿಕೆ,

ಸಕಲ ಜೀವರಾಶಿಗಳ ಉದ್ದಾರಕೆ|

ನೀ ಗಿಡಮರ-ನಿನ್ನ ದ್ಯೇಯ,

ಭೂಮಿ ಇರಲಿ ಸದಾ ಹಸಿರುಮಯ|

ನೀ ಚಂದ್ರ- ನಿನ್ನ ನೆರಳು,

ಭುವಿಗೆಲ್ಲಾ ಬೆಳದಿಂಗಳು|

ನಾ ಮನುಜ-ನಿಮ್ಮೆಲ್ಲರ ಅಂಶ,

ರವಿ-ಕವಿ

ರವಿ ಹಾರುತ ಹಾರುತ ಮೇಲಕೆ,

ಭಾನ ಬೆಳಕು ಪೃಥ್ವಿಗೆ|

ಕವಿ ಹಾಡುತ-ಹಾಡುತ ತನ್ನ ಕವಿತೆಗೆ,

ಪ್ರೀತಿ-ಪ್ರೆಮ ಎಲ್ಲರ ಬಾಳಿಗೆ|

ರವಿಯೇ ಕವಿಯಾಗಿ,

ಸ್ನೇಹದ ಸುಧೆಯಾಗಿ

ಬರೆದ ಈ ಓಲೆಯ ನಿಮಗಾಗಿ!!

ರಾಜಕೀಯ

ನಾ ಕಂಡೆ ಒಂದು ರಾಜಕೀಯದ ಕನಸು

ನನಗಾಗಿತ್ತು ಆಗ ಎಂಬತ್ತರಾ ವಯಸ್ಸು,


ಕಾಣಲು ಇಂಥಹ ಕನಸು,ಮರೆತನು ಮುದಿವಯಸು|


ಮುಂದುವರಿಯಿತು ನನ್ನ ಕನಸು--


ನಾನಾದೆ ಮುಖ್ಯಮಂತ್ರಿ-ಸಿಕ್ಕಿತು ಪದವಿ,


’ನೀವೇ ರಾಜ್ಯವನ್ನಾಳಿ,ನೀವೇ


ರಾಜ್ಯವನ್ನಾಳಿ’ಎಂದು ಎಲ್ಲರ ಮನವಿ|

ಈ ಬ್ಲಾಗಿಗಿನ್ನು ಸಮ್ಮರ್ ಹಾಲಿಡೇ!

ಸ್ನೇಹಿತರೆ ನನ್ನ ಹೊಸ ಆಫೀಸ್‌ನಲ್ಲಿ ಏನು ಮಾಡಿದರೂ ಸಂಪದ ಓಪನ್‌ ಆಗ್ತಾ ಇಲ್ಲ. ಹೊರಗಡೆ ಬಂದು ಬರೆಯಲು ನನಗೆ ಪುರುಸೊತ್ತು ಇಲ್ಲ. ಹಾಗೇನೆ ಎಲ್ಲರಿಗೂ ಬೇಸಿಗೆ ರಜೆ ಇದೆ ನಂಗೆ ಇಲ್ವಾ ಅಂತಾ ಬ್ಲಾಗ್ ಕೂಡಾ ರಗಳೆ ಮಾಡುತಿತ್ತು. ಇವೆಲ್ಲದರ ಪರಿಣಾಮವಾಗಿ ನಾನು ಈ ಬ್ಲಾಗಿಗೆ ಒಂದಿಷ್ಟು ದಿನ ರಜೆ ಘೋಷಿಸಿದ್ದೇನೆ. ಇಷ್ಟು ದಿನದ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

ಕನ್ನಡದಲ್ಲಿ ಹೆಸರು ಬರೆಯೋದು ಹ್ಯಾಂಗ್ರೀ????

ರೀ..ಐಟಿ ಪಂಡಿತರುಗಳೇ.....ದಯವಿಟ್ಟು ನಮ್ಮ ಹೆಸರನ್ನು ಕನ್ನಡದಲ್ಲಿ ಬರೋಹಾಗೆ ಹ್ಯಾಗ್ ಮಾಡೊದ್.. ಸ್ವಲ್ಪ ಹೇಳಿಕೊಡ್ರಲಾ...i mean log in name.. ಧನ್ಯವಾದಗಳು...