ಪ್ರಕೃತಿ
ಬರಹ
ನೀ ಸೂರ್ಯ-ನಿನ್ನ ಆಗಮನ,
ಜೀವಜಂತು-ಲೊಕವೆಲ್ಲಾ ಪ್ರಕಾಶಮಾನ|
ನೀ ಗಾಳಿ-ನಿನ್ನ ಚಲನೆ,
ಇಳೆಯ ತುಂಬಾ ತಂಪು ಸಿಂಚನೆ|
ನೀ ನದಿಸಾಗರ-ನಿನ್ನ ಓಡುವಿಕೆ,
ಸಕಲ ಜೀವರಾಶಿಗಳ ಉದ್ದಾರಕೆ|
ನೀ ಗಿಡಮರ-ನಿನ್ನ ದ್ಯೇಯ,
ಭೂಮಿ ಇರಲಿ ಸದಾ ಹಸಿರುಮಯ|
ನೀ ಚಂದ್ರ- ನಿನ್ನ ನೆರಳು,
ಭುವಿಗೆಲ್ಲಾ ಬೆಳದಿಂಗಳು|
ನಾ ಮನುಜ-ನಿಮ್ಮೆಲ್ಲರ ಅಂಶ,
ಪರೋಪಕಾರ,ನಿಸ್ವಾರ್ಥ
ಜೀವನ-ಇದೇ ಸತ್ಯಾಂಶ!!