ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇದು ಯಾಕೆ ಹಿಂಗೆ?

ನಮಸ್ಕಾರ,

ನನಗೆ ಒಂದು ವಿಷಯ ಯಾವಾಗಲೂ ಕಾಡ್ತಾ ಇರುತ್ತೆ.

ರೂಪ ಎಂಟರ್‍ಪ್ರೈಸಿಸ್---- (ಇದನ್ನ ಓದುವುದು ರೂಪಾ ಅಂತ)

ಇದನ್ನ ಇನ್ನೂ ಸ್ವಲ್ಪ ಬಿಡಿಸಿ ಹೇಳಬೇಕಂದರೆ...

ರೂಪ ಅಂದರೆ ಅಂದವನ್ನು ವರ್ಣಿಸುವ ಪದ ಹೌದು ತಾನೆ?

ರೂಪಾ ಅಂದರೆ ಒಂದು ಹೆಸರು
ಬೆಂಗಳೂರಿನ ಬಹುತೇಕ ನಾಮ ಫಲಕಗಳಲ್ಲಿ ಈ ರೀತಿ (ರೂಪ ಅಂತ)ದೋಷಗಳನ್ನು ಕಂಡಿದ್ದೇನೆ.
ಇದು ಯಾಕೆ ಹೀಗೆ....

ಹೀಗೊಂದು ಪತ್ರ

ಹಿಂಗ್ಯಾಕೆ ನಮ್ಮೂರಲ್ಲೇ ಆಗುತ್ತೆ? ಎಂಬ ಲೇಖನಕ್ಕೆ ನನ್ನ ಪತ್ರ (thatskannada.com)

ಶಾಸ್ತ್ರಿಯವರೇ,

ನಾನೂ ನಿಮ್ಮ ಹಾಗೆ ಪಾಶ್ಚಿಮಾತ್ಯ ದೇಶದಲ್ಲಿರುವವನೇ (ಇಂಗ್ಲಂಡ್). ಆದರೇ ನನ್ನ ಅನುಭವ ನಿಮ್ಮ ಲೇಖನಕ್ಕೆ ತೀರ ತದ್ವಿರುದ್ಧ. ನನಗೇ ಇಲ್ಲಿನ ಖಾಲಿ ರಸ್ತೆಗಳು (ನಮ್ಮ ದೇಶದಲ್ಲಿ ಕರ್ಫೂ ಆದಾಗ ಮಾತ್ರ ಕಾಣುವಂಥಹ), ತುಂಬ ಕೃತಕವಾಗಿ Good Morning, Good evening, BYE, ಮತ್ತು ಮಾತು ಮಾತಿಗೆ Thanks, Sorry, excuse me ಎನ್ನುವುದನ್ನು ಕೇಳಿ ತಲೆ ಚಿಟ್ಟು ಹಿಡಿಯುತ್ತದೆ.

ನಾವು ನಮ್ಮ ದೇಶದ ಏರೋಪ್ಲೇನ್ ಹತ್ತಿದಾಗ ನಮ್ಮ ಸಂಕೋಚಗಳನ್ನೆಲ್ಲ ಬಿಟ್ಟು, ಪಾಶ್ಚಾತ್ಯರ ಢಾಂಬಿಕ (pseudo)ನಯ-ನಾಜೂಕುಗಳನ್ನು ಬಿಟ್ಟು ಹಗುರಾಗುತ್ತೇವೆ, ಅದಕ್ಕೆಂದೇ ಹತ್ತು ಸಾರಿ ಗಗನಸಖಿಯರನ್ನು ಕರೆಯುತ್ತೇವೆ. ಫಾರಿನ ಏರ್-ಲೈನಿನಲ್ಲಿ ಯಾಕೆ ಹೀಗಾಗೋಲ್ಲ ಅಂತ ಕೇಳ್ತೀರಲ್ಲಾ, ಒಂದು ಸಲ ಬಿಟ್ಟು ಎರಡು ಸಲ ಗಗನಸಖಿಯರನ್ನು ಕರೆದು ನೋಡಿ, ಕಂದು ಚರ್ಮದ ನಮ್ಮ ಬಣ್ಣದ ಬಗ್ಗೆ ತಮ್ಮತಮ್ಮಲ್ಲೇ ಮಾತಾಡಿಕೊಳ್ಳುತ್ತಾರೆ, ಅದಕ್ಕೆ ನಾವು ನೀವೆಲ್ಲ ಸುಮ್ಮನಿರುವುದು.

ಇನ್ನು ಕಸದ ಬುಟ್ಟಿಯಲ್ಲಿ ಬೀಸಾಕುವುವುದರ ವಿಚಾರಃ ದಿನಕ್ಕೆ ಸಾವಿರಾರು ಬಾರಿ CCTVಯಲ್ಲಿ ನಮ್ಮನ್ನು ರೆಕಾರ್ಡ್ ಮಾಡುವ ಈ Big Brother ಪಾಶ್ಚಾತ್ಯ ದೇಶಗಳಲ್ಲಿ ಕಸ ಬೀಸಾಕಿದರೆ ಕೌನ್ಸಿಲ್ನಿಂದ ತಪ್ಪಿಸಿಕೊಳ್ಳುವ ಛಾನ್ಸೇ ಇಲ್ಲ, ಮೇಲಾಗಿ ಕಸಕ್ಕೆ ಸಾವಿರಾರು ರೂಪಾಯಿ ದಂಡತೆರಬೇಕಾದ ಪರಿಸ್ಥಿತಿ. ನಮ್ಮ ದೇಶವಿನ್ನೂ Big Brother ಆಗಿಲ್ಲ ಸ್ವಾಮಿ, ಅದಕ್ಕೇ ಹಾಯಾಗಿ ನಾವು ಪಾನ್-ಬೀಡಾ ತಿಂದು ರಸ್ತೆಗಳಲ್ಲಿ ಆರಾಮವಾಗಿ ಉಗಿಯುತ್ತೇವೆ.

ಒಂದು ಭೇಲ್-ಪುರಿಗೆ ಇಲ್ಲಿ ಇಂಗ್ಲಂಡಿನಲ್ಲಿ ನಾನು ಕೊಡುವುದು ಕೇವಲ ೩೦೦ ರೂಪಾಯಿ ಮಾತ್ರ (ನಿಮ್ಮ ಅಮೇರಿಕದಲ್ಲಿ ಎಷ್ಟು ಅಂತ ಗೊತ್ತಿಲ್ಲ). ಭಾರತದಲ್ಲಿ ನೀವು ಅಷ್ಟು ದುಡ್ಡು ಕೊಟ್ಟು ತಿನ್ನುವಿರಾದರೆ, ಅಮೇರಿಕದಲ್ಲಿ ಸಿಗುವುದಕ್ಕಿಂತ ಚೆನ್ನಾಗಿ, ಶುಚಿಯಾಗಿ ಮಾಡಿ ಇನ್ನೂ ಜಾಸ್ತಿ quantity ಕೊಡುತ್ತಾರೆ. ಆದರೆ ನಿಮಗೆ ಭಾರತಕ್ಕೆ ಬರುತ್ತಿದ್ದಂತೆ , ಅಯ್ಯೋ, ಭೇಲ್-ಪುರಿಗೆ ೧೫ ರೂಪಾಯಿಯೇ, ೧೦ ರೂಪಾಯಿಗೆ ಸಿಗುತ್ತಿತ್ತಲ್ಲ ಅಂತ ಚಡಪಡಿಸುತ್ತೀರಿ. ಸುಮ್ಮನಿರಿ ಸಾರ್, ಈ ಥರ ಮಾತಾಡುವ NRIಗಳನ್ನು ದಿನನಿತ್ಯ ಕೇಳಿಸಿಕೊಳ್ಳುತ್ತಲೇ ಇರುತ್ತೇನೆ, ಬ್ಲಾಗುಗಳಲ್ಲಿ ಓದುತ್ತಲೇ ಇರುತ್ತೇನೆ.

ಇನ್ನು STOP ಸಿಗ್ನಲ್-ಗಳ ವಿಚಾರಃ ಪ್ರತಿ ಮೂಲೆಯಲ್ಲಿರುವ CCTVಗಳು, ಜೇಬನ್ನೆಲ್ಲ ಬರಿದು ಮಾಡುವ ಇನ್ಸುರನ್ಸ್ ಪಾಲಿಸಿಗಳು, ಸಣ್ಣ ತಪ್ಪಿಗೂ ಡ್ರೈವಿಂಗ್ ಲೈಸನ್ಸನ್ನೇ ರದ್ದು ಮಾಡುವ ಕಾನೂನುಗಳು - ಏಲ್ಲ ರಸ್ತೆಗಳು ಖಾಲಿ ಇದ್ದಾರೂ ಯಾವನಿಗೆ ಸ್ವಾಮಿ STOP ಸಿಗ್ನಲ್ ದಾಟಿ ಕಾರ್ ಓಡಿಸುವ ಧೈರ್ಯವಾಗುತ್ತೆ?

ದತ್ತ ಪೀಠ-ಕೋಮು ಸೌಹಾರ್ದದತ್ತ ..

ರಾಜ್ಯದಿಂದ ಬಹಳಷ್ಟು ಜನ ಮಾಲೆ ಧರಿಸಿ 'ಅಯ್ಯಪ್ಪ'ದರ್ಶನಕ್ಕೆ ಕೇರಳಕ್ಕೆ ಹೋಗುವರು.ವರ್ಷದಿಂದ ವರ್ಷಕ್ಕೆ 'ಓಂ ಶಕ್ತಿ'ಗೆ ಹೋಗುವ ಹೆಂಗಸರೂ ಜಾಸ್ತಿಯಾಗುತ್ತಿದ್ದಾರೆ.ಹೀಗೇ ನಮ್ಮಲ್ಲೂ 'ದತ್ತಮಾಲೆ'ಧರಿಸಿ ಬಾಬಾ ಬುಡಾನ್ ಗಿರಿಗೆ ಹೋಗುವ ವ್ರತ ಸುರುಮಾಡಿದ್ದಾರೆ.ಇದಕ್ಕೇ ಉತ್ತಮ ಸವಲತ್ತು ನೀಡಿ ಬಾಕಿ ರಾಜ್ಯಗಳಿಂದ ನಮ್ಮಲ್ಲಿಗೆ ಭಕ್ತರು ಬರುವಂತೆ ಮಾಡಬಹುದಲ್ವ

ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'

ಶಂಕರಬಟ್ಟರ ಬರವಣಿಗೆಯನ್ನು ಮೆಚ್ಚುವವರಿಗೆ ಸಿಹಿ ಸುದ್ದಿ. ಅವರ ಇನ್ನೊಂದು ಹೊಸ ಹೊತ್ತಿಗೆ 'ಕನ್ನಡ ನುಡಿ ನಡೆದು ಬಂದ ದಾರಿ'ಬಂದಿದೆ.
ಏನಪ್ಪ ಇದರ ಮೇಲ್ಮೆ ಅಂದರೆ ಇದು ಅವರು ಹೊಸದಾಗಿ ನೆಗಳಿರುವ ಕನ್ನಡದ ಬರಹದಲ್ಲಿ ಈ ಹೊತ್ತಿಗೆಯನ್ನು ಬರೆಯಲಾಗಿದೆ.

ನನ್ನ ಕೆಲವು ಹಳೆಯ ಚುಟುಕುಗಳು...

ವಿರಹ

ಮರೆತರೂ ಮರೆಯುವೆ ನಿನ್ನ,
ಮರೆಯಲಿ ಹ್ಯಾಂಗೆ ? ಆ ನಿನ್ನ ಕಂಗಳನ್ನ,
ಚೆಂದುಟಿಗಳನ್ನ,
ಪ್ರೀತಿ ತುಂಬಿದ ಆ ನೋಟವನ್ನ,
ವಿರಸ ತುಂಬಿದ ಎದೆಗೆ,
ಸರಸ ತಂದ, ಆ ನಿನ್ನ ಮಾತುಗಳನ್ನ..

ನೀರೆ

ಮನದ ಮರಳುಗಾಡಿನಲಿ,
ಬಂದೆ ನೀ ಓಯಸಿಸ್ನಂತೆ..
ಆದರೂ, ಒಮ್ಮೆ ದಣಿವಾರಿಸಿಕೊಂಡು,
ಬಹಳ ದಿನ ಕಳೆಯಲಾರೆ, ನಾ ಒಂಟೆಯಂತೆ..

ವಿಪರ್ಯಾಸ

ನವರಾತ್ರಿಯ ಹತ್ತನೇ ದಿನ

ಇಂದು ನವರಾತ್ರಿಯ ಹತ್ತನೇ, ಹಾಗೂ ಕಡೆಯ ದಿವಸ. ವಿಜಯ ದಶಮಿ. ರಾಮ ರಾವಣನನ್ನು ಕೊಂದು, ವಿಜಯ ಪಡೆದ ದಿನವೆಂದೂ, ದೇವಿ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿದ ದಿನವೆಂದೂ ನಾವು ಈ ದಿನವನ್ನು ಆಚರಿಸುತ್ತೇವೆ.

ಭೂಮಿಯನ್ನು ಹಂಚಿಕೊಳ್ಳುವ ಬಗೆಗಳು!

ಭೂಮಿಯನ್ನು ಹಂಚಿಕೊಳ್ಳುವ ಬಗೆಗಳು!

ಕಳೆದ ಭಾನುವಾರ ಶಿವಮೊಗ್ಗದಲ್ಲಿ ಯು.ಆರ್.ಅನಂತಮೂತೀಯವರು ನನ್ನ 'ಮರಳಿ ಬರಲಿದೆ ಸಮಾಜವಾದ!' ಪುಸ್ತಕವನ್ನು ಬಿಡುಗಡೆ ಮಾಡುತ್ತಾ, ಇಂದಿನ ಸಂದರ್ಭಕ್ಕೆ ಮುಖ್ಯವೆನಿಸುವ ಅನೇಕ ಮಾತುಗಳನ್ನಾಡಿದರು. ಸಮಾಜವಾದ ಕುರಿತಂತೆ ಹೊಸದೆನ್ನುವಂತಹ ಒಳನೋಟಗಳನ್ನು ನೀಡಿದರು. ಇಂದಿನ ರಾಷ್ಟ್ರ ಮತ್ತು ರಾಜ್ಯ ರಾಜಕಾರಣ ಕುರಿತಂತೆ ತಮ್ಮದೇ ವೈಯುಕ್ತಿಕ ಅಭಿಪ್ರಾಯಗಳನ್ನು ದಾಖಲಿಸಿದರು. ಬೆಂಗಳೂರಿನಲ್ಲಿ ಕೌಟುಂಬಿಕವಾದ ತುರ್ತು ಕೆಲಸವಿರುವುದರಿಂದ ಆದಷ್ಟು ಬೇಗ ಸಮಾರಂಭದಿಂದ ತಮ್ಮನ್ನು ಕಳಿಸಿಕೊಡಬೇಕೆಂದು ಹೇಳಿದ್ದ ಅವರು; ಸಮಾರಂಭಕ್ಕೆ ಬಂದಿದ್ದ ಜನಸಮೂಹವನ್ನು ನೋಡಿ, ಈ ಜನ ಸಮೂಹದ ಮಧ್ಯೆ ಬೆರೆತಿದ್ದ ತಮ್ಮ ಓರಿಗೆಯ ಅನೇಕ ಸಮಾಜವಾದಿ ಮಿತ್ರರ ಎದುರಿನಲ್ಲಿ ವಿನೀತರಾದಂತೆ, ಕಾಲ ಮರೆತು ಸಮಾರಂಭ ಮುಗಿಯುವವರೆಗೂ ಕೂತರು! ತಮ್ಮ ಭಾಷಣದ ನಂತರವೂ ಎದ್ದು ಬಂದು ಇತರರ ಮಾತುಗಳಿಗೆ ಪ್ರತಿಕ್ರಿಯಿಸುವ ಸಡಗರ ತೋರಿದರು... ಒಂದೆರಡು ತಿಂಗಳುಗಳ ಹಿಂದೆ 'ಆವರಣ' ಹಗರಣದ ಸಂದರ್ಭದಲ್ಲಿ ತಮ್ಮ ಮೇಲೆ ನಡೆದಿದ್ದ 'ಆಕ್ರಮಣ'ದ ಬಗ್ಗೆ ನನ್ನೊಡನೆ ಮಾತಾಡುತ್ತಾ, 'ನನಗೆ 75 ವರ್ಷ ಎಂಬುದು ನೆನಪಿರಲಿ ನಾಗಭೂಷಣ;ಇದನ್ನೆಲ್ಲ ಸಹಿಸುವುದು ಕಷ್ಟ...' ಎಂದು ಖಿನ್ನರಾಗಿ ಹೇಳಿದ್ದ ಅನಂತಮೂರ್ತಿ ಇವರೇನಾ ಎಂದು ಆಶ್ಚರ್ಯ ಪಡುವಷ್ಟು ಉತ್ಸಾಹ - ಆಸಕ್ತಿಗಳಿಂದ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು - ಅದೂ ಹಿಂದಿನ ಸಂಜೆಯವರೆಗೆ ಹೆಗ್ಗೋಡಿನಲ್ಲಿ ಒಂದು ವಾರದ 'ನೀನಾಸಂ' ಸಾಂಸ್ಕೃತಿಕ ಶಿಬಿರದ ನಿರ್ದೇಶಕತ್ವ ವಹಿಸಿದ ಬಳಲಿಕೆಯ ನಂತರವೂ!

ಅವರ ಮಾತುಗಳನ್ನು ಕೇಳಲು ಬಂದಿದ್ದ ಜನಸಮೂಹ ಕೂಡ ಕಥೆ - ಉಪಕಥೆ - ದೃಷ್ಟಾಂತ - ನೆನಪು - ಉಲ್ಲೇಖಗಳನ್ನು ಹದವಾಗಿ ಬೆರೆಸಿ ಅವರು ಮಾಡಿದ ಭಾಷಣದ ಮೋಡಿಗೊಳಗಾದಂತೆ ಅಲುಗಾಡದೆ ಕೂತಿತ್ತು. ರಾಜೇಂದ್ರ ಚೆನ್ನಿಯವರು ತಮ್ಮ ನಂತರದ ಪ್ರತಿಕ್ರಿಯೆಯಲ್ಲಿ ಇದನ್ನು ಉಪನಿಷತ್ (ಗುರುವಿನ ಹತ್ತಿರವೇ ಕೂತು ಕೇಳುವ) ಶೈಲಿಯ ವಿಚಾರ ಮಂಡನೆ ಎಂದದ್ದು ಸ್ವಲ್ಪ ಅತಿಯಾಯಿತೆನಿಸಿದರೂ, ಅನಂತಮೂರ್ತಿಯವರು ಆಂದಿನ ಆ ಲೋಹಿಯಾ - ನೆಹರೂ ಕಾಲದ ರಾಜಕಾರಣ ಹಾಗೂ ಇಂದಿನ ಈ ದೇವೇಗೌಡ - ಯಡಿಯೂರಪ್ಪ ರಾಜಕಾರಣದ ಮಧ್ಯೆ ಕಳೆದು ಹೋಗಿರುವ ಮೌಲ್ಯ ಪ್ರಜ್ಞೆ ಹಾಗೂ ರಾಜಕೀಯ ಕೌಶಲ್ಯಗಳ ವಿವೇಚನೆ ಮಾಡುತ್ತಾ, ಸಮಕಾಲೀನ ರಾಜಕಾರಣದ ಭಿತ್ತಿಯಲ್ಲಿ ಹೊಸ ಸಮಾಜವಾದದ ಚಿತ್ರ ಬಿಡಿಸಿದ ರೀತಿ ತಲೆ ತೂಗುವಂತಿತ್ತು. ಮುಖ್ಯವಾಗಿ ಸಮಯ ಪ್ರಜ್ಞೆಯ ರಾಜಕೀಯ ಹಾಗೂ ಸಮಯ ಸಾಧಕ ರಾಜಕೀಯಗಳ ನಡುವಣ ವ್ಯತ್ಯಾಸಗಳನ್ನು ಸೋದಾಹರಣವಾಗಿ ವಿಷದೀಕರಿಸುವ ಮೂಲಕ ಇಂದಿನ ರಾಜಕೀಯವನ್ನು ಗ್ರಹಿಸುವ, ಮೌಲ್ಯಮಾಪನ ಮಾಡುವ ಬಗೆಯನ್ನು ಅವರು ತಮ್ಮದೇ ಸೃಜನಶೀಲ ವಿಚಾರ ಮಂಡನೆಯ ಶೈಲಿಯಲ್ಲಿ ವಿವರಿಸಿದರು. ಲೋಹಿಯಾರ ಆಗಿನ ನೆಹರೂ ವಿರೋಧ ಹಾಗೂ ಕಾಂಗ್ರೆಸ್ಸೇತರವಾದ ಸಮಯ ಪ್ರಜ್ಞೆಯ ಉದಾಹರಣೆಗಳಾದರೆ, ದೇವೇಗೌಡರ ಈಗಿನ ಜಾತ್ಯತೀತೆಯ ಹುಯಿಲು ಸಮಯ ಸಾಧಕ ರಾಜಕಾರಣದ ಉದಾಹರಣೆಗಳೆಂದರು. ತಮ್ಮ ಗೆಳೆಯ ಜಾರ್ಜ್ ಫ‌ರ್ನಾಂಡೀಸ್ ಇಂತಹುದೇ ಸಮಯ ಸಾಧಕ ರಾಜಕಾರಣ ಮಾಡಿ ಸಮಾಜವಾದದ ವಿಶ್ವಾಸಾರ್ಹತೆಯನ್ನು ಹಾಳುಗೆಡಹಿದ್ದನ್ನು ಹೇಳಲು ಅವರು ಮರೆಯಲಿಲ್ಲ.

ನವರಾತ್ರಿಯ ಒಂಬತ್ತನೆಯ ದಿನ

ಇವತ್ತು ನವರಾತ್ರಿಯ ಒಂಬತ್ತನೆಯ ದಿವಸ. ಮಹಾನವಮಿ. ಆಯುಧಪೂಜೆ. ಎಷ್ಟೋ ಕನ್ನಡಿಗರಿಗೆ ಸರಸ್ವತೀ ಪೂಜೆಯೂ ಇಂದೇ. ಇವತ್ತು ಕರ್ನಾಟಕದ ಒಬ್ಬ ವಾಗ್ಗೇಯಕಾರರ ರಚನೆ ನೋಡೋಣ.

ನವರಾತ್ರಿಯ ಎಂಟನೇ ದಿನ

ಇಂದು ನವರಾತ್ರಿಯ ಎಂಟನೇ ದಿನ. ದುರ್ಗಾಷ್ಟಮಿ. ಬಂಗಾಳದಲ್ಲಿ ಇಂದು ದುರ್ಗಾ ಪೂಜೆಯ ಸಂಭ್ರಮವೋ ಸಂಭ್ರಮ. ಅಂದಹಾಗೆ, ಸಂಗೀತ ಪ್ರಪಂಚಕ್ಕೆ ಬಂದಾಗ, ಮೂರು ರಾಜ್ಯಗಳ ಹೆಸರುಗಳು ರಾಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅವು ಕರ್ನಾಟಕ, ಬಂಗಾಳ, ಮತ್ತು ಗುಜರಾತ್. ಇವುಗಳ ಬಗ್ಗೆ ಮತ್ತೊಮ್ಮೆ ಯಾವಾಗಲಾದರೂ ಬರೆಯುವೆ.