ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

ಬರಹ

ಲಿನಕ್ಸ್ ಹಬ್ಬ ಬೆಂಗಳೂರಿನಲ್ಲಿ. ಆಚರಿಸೋಣವೆ?

GNU/Linux habba!

ಹೌದು, ಎಲ್ಲರಿಗೂ ಲಿನಕ್ಸ್ ನ ಔತಣ ಬಡಿಸೋ ಆಸೆ. ಲಿನಕ್ಸ್ ಕನ್ನಡಿಗರಿಗೆ ಹತ್ತಿರ ಆಗಬೇಕು. ಅದನ್ನ ಉಪಯೋಗಿಸೋದು ಸುಲಭ ಆಗಬೇಕು, ನಮ್ಮಲ್ಲಿರೋ ಸಂದೇಹಗಳನ್ನ ನಿವಾರಿಸುವುದಾಗಬೇಕು, ಗ್ನೂ/ಲಿನಕ್ಸ್ ನ ಸ್ವಾತಂತ್ರ್ಯವನ್ನ ಎಲ್ಲರೂ ಮೆಲ್ಲಬೇಕು ಅನ್ನೋದು ನಮ್ಮ ಆಶಯ.

ಸಂಪದಿಗರಿಗೆ, ಲಿನಕ್ಸ್ ಆಸಕ್ತರಿಗೆ ಇಂತಹ ಅವಕಾಶವೊಂದನ್ನು ನೀಡುವ ಉತ್ಸಾಹ ನಮ್ಮದು. ಸಂಪದ ಫೌಂಡೇಶನ್ ವತಿಯಿಂದ ಈ ಕ್ರಾರ್ಯಕ್ರಮ - ಇಂಥದ್ದೊಂದು ಮೊದಲನೆಯದು! ನೀವೂ ಒಂದ್ ಕೈ ಸೇರಿಸ್ತೀರಲ್ಲ?

ಇದಕ್ಕಾಗಿ, ಮುಂದಿನ ತಿಂಗಳು "ಗ್ನೂ/ಲಿನಕ್ಸ್ ಇನ್ಸ್ಟಾಲ್ ಫೆಸ್ಟ್ " (Gnu/Linux Install Fest) ಮಾಡೋಣ ಅಂತ. ಈ ಆಲೋಚನೆಯ ಬಗ್ಗೆ ಚರ್ಚೆ ನಡೆಸುತ್ತ ಒಂದು ಕಾರ್ಯಕ್ರಮದ ರೂಪುರೇಷೆ ತಯಾರಿಸಿದ್ದೀವಿ. ಇನ್ಸ್ಟಾಲ್ ಫೆಸ್ಟ್ , ಲಿನಕ್ಸ್ ಇನ್ಸ್ಟಾಲ್ ಮಾಡೋದರ ಜೊತೆಗೆ , ಹೇಗೆ ಕನ್ನಡವನ್ನ ಲಿನಕ್ಸ್ ನಲ್ಲಿ ಬಳಸೋದು ಅನ್ನೋದನ್ನ ಪ್ರಮುಖವಾಗಿ ನಿಮ್ಮ ಮುಂದಿಡುವ ಪ್ರಯತ್ನ. ಈ ಕಾರ್ಯಕ್ರಮದ ರೂಪುರೇಷೆಗಳನ್ನ ಸಂಪದದ ವಿಕಿ ಪುಟದಲ್ಲಿ ಅಪ್ಡೇಟ್ ಮಾಡ್ತಾ ಇದ್ದೇವೆ. ನೀವೂ ಒಮ್ಮೆ ಕಣ್ಣು ಹಾಯಿಸಿ

ಇದನ್ನ ಕಾರ್ಯರೂಪಕ್ಕೆ ತರಲು ನಿಮ್ಮೆಲ್ಲರ (ಟೆಕಿ ಮಿತ್ರರ) ಸಹಾಯದ ಅವಶ್ಯವಿದೆ. ನೀವು ನಮ್ಮೊಂದಿಗೆ ಸ್ವಯಂಸೇವಕರಾಗಿ ಬಂದು ಲಿನಕ್ಸ್ ಬಗ್ಗೆ ಎಲ್ಲರಿಗೆ ತಿಳಿಸಿ ಕೊಡ್ತೀರಾ? ಹಾಗಿದ್ರೆ ವಿಕಿ ನಲ್ಲಿ ನಿಮ್ಮ ಹೆಸರು ನೋಂದಾಯಿಸಿ. ನಮ್ಮೊಂದಿಗೆ ಚರ್ಚೆಯಲ್ಲಿ ಪಾಲ್ಗೊಳ್ಳಿ. ಟೆಕ್ನಾಲಜಿಯನ್ನ ಆಫ್ ಲೈನ್ ಕೂಡ ಜನರ ಮುಂದಿಡುವ ಈ ಕೆಲಸಕ್ಕೆ ನಿಮ್ಮ ಹೆಗಲು ಸೇರಿಸಿ.

ನಿಮ್ಮ,
ಓಂ ಶಿವಪ್ರಕಾಶ್

~