ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶೀತಲ ಸೇತುವೆ

ದೂರ ಹೋಗುವೆ.
ಮತ್ತೆಂದು ಬರುವೆ..?
ನಿನಗಾಗಿ ನಾ ಕಾದಿರುವೆ.
ಯಾರೊಡನೆ ಹೇಳಲಿ?
ಏನೆಂದು ತಿಳಿಸಲಿ?
ನೀನಿರದ ದಿನಗಳ
ಹೇಗೆ ದೂಡಲಿ..?

ಏಕಳುವೆ ಪ್ರಿಯೆ..,
ನಿನ್ನನಗಲಿ ನಾನೆಲ್ಲಿ ಹೋಗುವೆ
ಕಣ್ಣ ಮುಚ್ಚು ಕಾಣುವೆ
ಮನದಿ ನೆನೆ,ಮಾತನಾಡುವೆ
ಎಲ್ಲಿಯ ದೂರ?
ಯಾವ ಭಯ..?
ಅಗೋ ನೋಡಲ್ಲಿ...!!
ಬರುವನಲ್ಲಿಗೂ ಇಲ್ಲಿಯ ಚಂದಿರ.
ಪಕ್ಷಪಾತಿ,ನಿನ್ನಯ ಬಳಿಗೆ
ಮೊದಲು ಬರುವನಂತೆ..!

ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ..... (ಮತ್ತೊಂದು ಒಗಟಿನ ಪದ)

ಕೆಲದಿನಗಳ ಹಿಂದೆ ಪುರಂದರದಾಸರ ಸುಲಭವಲ್ಲವೋ ಎನ್ನುವ ಕೃತಿಯ ಬಗ್ಗೆ ಬರೆದಿದ್ದೆ. ಸುನಿಲ್ ಅವರು ಅದಕ್ಕೆ ಚೆನ್ನಾಗೆ ವ್ಯಾಖ್ಯಾನ ಕೂಡ ಮಾಡಿದ್ದರು. ಇವತ್ತು ಪುರಂದರ ದಾಸರದ್ದೇ ಇನ್ನೊಂದು ದೇವರನಾಮ. ಸುಲಭವಲ್ಲವೋ  ಮಹದಾನಂದ ಎನ್ನುವ ರಚನೆ ನನಗೆ ಸ್ವಲ್ಪವಾದರೂ ಅರ್ಥವಾಗಿತ್ತು. ಆದರೆ, ಇದು ಪೂರ್ತಿ ಒಗಟಾಗಿದೆ!

ಮಡೆನೂರು ಮಾಡಿದ ಮೋಡಿ

ಮಡೆನೂರು

ಮೇ ೨೦೦೩ರಲ್ಲಿ ವಿಜಯ ಕರ್ನಾಟಕದಲ್ಲಿ ಮಡೆನೂರು ಅಣೆಕಟ್ಟಿನ ಬಗ್ಗೆ ಲೇಖನ ಬಂದಿತ್ತು. ಕೆಲವು ದಿನಗಳ ಬಳಿಕ ದ ಹಿಂದೂ ಪತ್ರಿಕೆಯಲ್ಲೂ ಮಡೆನೂರು ಅಣೆಕಟ್ಟಿನ ಬಗ್ಗೆ ಲೇಖನ ಬಂದಾಗ 'ನೋಡೇಬಿಡಾಣ...' ಎಂದು ನಿರ್ಧಾರ ಮಾಡಿ ನನ್ನ ಪ್ರಥಮ ಜರ್ನಿಗೆ ಅಣಿಯಾದೆ. ಸಹೋದ್ಯೋಗಿ ಪ್ರಶಾಂತ್ ಬರಲು ಒಪ್ಪಿಕೊಂಡ.

ಮಡೆನೂರು ಅಣೆಕಟ್ಟಿನ ಬಗ್ಗೆ ಒಂದಿಷ್ಟು: ಮಡೆನೂರು ಅಣೆಕಟ್ಟನ್ನು ಶರಾವತಿಯ ಉಪನದಿ ಎಣ್ಣೆಹೊಳೆಗೆ ಅಡ್ಡಲಾಗಿ ೧೯೩೯ರಲ್ಲಿ ನಿರ್ಮಿಸಲು ಆರಂಭಿಸಿ ೧೯೪೮ರಲ್ಲಿ ಪೂರ್ಣಗೊಳಿಸಲಾಗಿತ್ತು. ಜೋಗದಿಂದ ನದಿಗುಂಟ ೨೦ಕಿಮಿ ಮೇಲ್ಭಾಗದಲ್ಲಿರುವ ಈ ಅಣೆಕಟ್ಟಿನ ಪ್ರಮುಖ ಉದ್ದೇಶ ಜೋಗದಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ನೀರು ಸರಬರಾಜು ಮಾಡುವುದಾಗಿತ್ತು. ೨ನೇ ಫೆಬ್ರವರಿ ೧೯೪೮ಕ್ಕೆ ವಿದ್ಯುತ್ ಉತ್ಪಾದನಾ ಕೇಂದ್ರ ಮತ್ತು ಅಣೆಕಟ್ಟಿನ ಉದ್ಘಾಟನೆ ನಡೆಯಬೇಕಿತ್ತು ಆದರೆ ಮಹಾತ್ಮಾ ಗಾಂಧಿಯವರ ನಿಧನದಿಂದ ನಡೆಯಲಿಲ್ಲ. ಕೃಷ್ಣರಾಜೇಂದ್ರ ಒಡೆಯರ್ ಹೈಡ್ರೊಎಲೆಕ್ಟ್ರಿಕ್ ಪ್ರೊಜೆಕ್ಟ್ ಎಂದು ನಾಮಕರಣ ಮಾಡಿದ್ದ ವಿದ್ಯುತ್ ಉತ್ಪಾದನಾ ಕೆಂದ್ರವನ್ನು ಮಹಾತ್ಮಾ ಗಾಂಧಿ ಹೈಡ್ರೊಎಲೆಕ್ಟ್ರಿಕ್ ಪ್ರೊಜೆಕ್ಟ್ ಎಂದು ಮರುನಾಮಕರಣ ಮಾಡಿ, ಮಡೆನೂರು ಅಣೆಕಟ್ಟಿನೊಂದಿಗೆ ೨೧ನೇ ಫೆಬ್ರವರಿ ೧೯೪೯ರಲ್ಲಿ ಉದ್ಘಾಟಿಸಲಾಯಿತು. ನಂತರ ೬೦ರ ದಶಕದಲ್ಲಿ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾದಾಗ ಅದರ ಅಗಾಧ ಹಿನ್ನೀರಿನಲ್ಲಿ ಮಡೆನೂರು ಅಣೆಕಟ್ಟು ತನ್ನ ಪ್ರಾಮುಖ್ಯತೆ ಮತ್ತು ಅಸ್ತಿತ್ವ ಎರಡನ್ನೂ ಕಳಕೊಂಡು ಮುಳುಗಿಹೋಯಿತು. ಲಿಂಗನಮಕ್ಕಿ ತನ್ನ ಗರಿಷ್ಟ ಮಟ್ಟ ೧೮೧೯ ಅಡಿ ತಲುಪಿದಾಗ ಮಡೆನೂರು ಅಣೆಕಟ್ಟಿನ ಮೇಲೆ ೧೫ ಅಡಿ ನೀರು ನಿಂತಿರುತ್ತದೆ.

ಕ್ರೂಟ್ಸರ್ ಸೊನಾಟಾ: ಅಧ್ಯಾಯ ನಾಲ್ಕು

“ಹೌದು. ಉದಾತ್ತ ಪ್ರೇಮದ ಕನಸು ಕಾಣುತ್ತಾ, ಪ್ರೀತಿಯ ಹೆಸರು ಹೇಳಿಕೊಂಡು ಹತ್ತು ವರ್ಷ ಅಸಹ್ಯವಾಗಿ ಬದುಕಿದೆ. ನನ್ನ ಹೆಂಡತಿಯನ್ನು ಹೇಗೆ ಕೊಂದೆ--ಹೇಳಬೇಕು. ಅದಕ್ಕೆ ನಾನೆಂಥ ಲಂಪಟ ಎಂದು ತಿಳಿಯಬೇಕು. ನನಗೆ ಅವಳು ಗೊತ್ತಾಗುವ ಮೊದಲೇ ಕೊಂದುಬಿಟ್ಟೆ. ಪ್ರೀತಿ ಕಿಂಚಿತ್ತೂ ಇಲ್ಲದೆ ಮೈಯ ಸುಖವನ್ನು ಮೊದಲ ಬಾರಿಗೆ ಉಂಡಾಗಲೇ ‘ಹೆಂಡತಿ’ಯನ್ನು ಕೊಂದುಬಿಟ್ಟೆ.

ಹಪ್ಪಳ ಎಂದರೆ ಹಲಸಿನ ಹಪ್ಪಳವಯ್ಯಾ

"ವಿಚಿತ್ರಾನ್ನ"ದೊಂದಿಗೆ ಕರಾವಳಿ ಕರ್ನಾಟಕದ ಹಲಸಿನ ಹಪ್ಪಳದ ರುಚಿ ನೋಡಿ. ಶ್ರೀವತ್ಸ ಜೋಷಿಯವರು ತಮ್ಮ ಅಂಕಣದಲ್ಲಿ ಹಲಸಿನ ಹಪ್ಪಳದ ಹಳೆಯ ನೆನಪುಗಳನ್ನು ಬಿಚ್ಚಿದ್ದಾರೆ. ಹಲಸಿನ ಹಪ್ಪಳದ ರುಚಿ ಅಮೋಘ ಎಂದು ತಿಂದವರಿಗೆಲ್ಲಾ ಗೊತ್ತು. ಆದರೆ ನಿಮಗೇನನಿಸುತ್ತೆ? ಯಾವ ಹಪ್ಪಳ ಹೆಚ್ಚು ರುಚಿ? ನಿಮ್ಮ ನೆನಪಿನ ಬುತ್ತಿಯನ್ನೂ ಬಿಚ್ಚಿದರೆ ಸ್ವಾಗತ.

ಬಿಸಿಲಿನ ಬೇಗೆ

ಉತ್ತರ ಕರ್ನಾಟಕದಲ್ಲಿ ಬಿಸಿಲು ಸಿಕ್ಕಾಪಟ್ಟೆ ಜಾಸ್ತಿಯಾಗಿದೆ ಎಂದು ಇವತ್ತಿನ ಬೆಳಿಗ್ಗೆಯ ಪತ್ರಿಕೆಯಲ್ಲಿ ಹಲವರು ಓದಿರುತ್ತೀರಿ. ಬೆಂಗಳೂರಿನಲ್ಲೇ ಶೆಖೆ ಹತ್ತಿರುವಾಗ ಉತ್ತರ ಕರ್ನಾಟಕದ ಪರಿಸ್ಥಿತಿ ಅರ್ಥವಾಗದೆ ಇರದು. ಆದರೆ ನನಗೆ ಕಾಡುವ ಪ್ರಶ್ನೆಯೆಂದರೆ ಕಳೆದ ಹಲವು ವರ್ಷಗಳಲ್ಲಿ ಮಾತ್ರ ಹೀಗಾಗುತ್ತಿದೆಯೋ, ಮುಂಚೆಯೂ ಹೀಗೆಯೇ ಇತ್ತೊ ಎಂಬುದು.

ವಿಫಲ ಕೊಳವೆಬಾವಿ ಮುಚ್ಚುವ ಮುನ್ನ...

ರಾಯಚೂರಿನಲ್ಲಿ ಕೊಳವೆಬಾವಿಗೆ ಬಿದ್ದು ಬಾಲಕ ಅಸುನೀಗಿದ ಬಳಿಕ, ಸರಕಾರ ಎಚ್ಚೆತ್ತುಕೊಂಡು, ವಿಫಲವಾದ ಕೊಳವೆಬಾವಿಗಳನ್ನು ಮುಚ್ಚಿ, ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲು ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ.

ಆತ್ಮ ಸ್ಥೈರ್ಯ

ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ |
ಭಾನು ತಣುವಾದಾನು; ಸೋಮ ಸುಟ್ಟಾನು ||
ಕ್ಷೋಣಿಯೇ ಕರಗೀತು, ಜಗ ಶೂನ್ಯವಾದೀತು |
ಮೌನದಲಿ ಸಿದ್ಧನಿರು -- ಮಂಕುತಿಮ್ಮ
ಗೆಳೆಯರೆ,
ಸಂಪದದಲ್ಲಿ... ನನ್ನ ಬ್ಲಾಗ್ ... ನನ್ನ ಚಟುವಟಿಕೆ...

ಕೋಶದೊಳಗಿನ ‘ಜೀನ್ಸ್’, ಇನ್ನು ಮುಂದೆ ಮಳಿಗೆಯಲ್ಲಿನ ಜೀನಸು!

ವಂಶವಾಹಿ ಜೀನ್ಸ್‍ಗಳ ಬಗೆಗೆ ನಡೆದಿರುವ ಸಂಶೋಧನೆಗಳು ಬಹಳ ಪ್ರಗತಿ ಕಂಡಿವೆ.ಸಂಶೋಧನೆಯಲ್ಲಿ ಕಂಪ್ಯೂಟರುಗಳ ಬಳಕೆ ಜೈವಿಕ ತಂತ್ರಜ್ಞಾನದ ಸಂಶೋಧನೆಯ ಪರಿಯನ್ನೆ ಬದಲಾಯಿಸಿದೆ. ಹೇಗೆಂದು ತಿಳಿಯಲು ಸುಧೀಂದ್ರ ಹಾಲ್ದೊಡೇರಿಯವರ "ನೆಟ್‌ನೋಟ" ಅಂಕಣದ ಈ ವಾರದ

ಚಕ್ರ

ಸಲೂನ್ ಶಾಪಿಗೆ ಬಂದು ಇಪ್ಪತ್ತು ನಿಮಿಷವಾಗಿತ್ತು. ಮೆತ್ತನೆಯ ಸೊಫಾದ ಮೇಲೆ ಕುಳಿತು, "ಫಿಲ್ಮ್ ಫೇರ್" ಓದುತ್ತಿದ್ದೆ. ಎಂದಿನ ಭಾನುವಾರದಂತೆ ಬಹಳ ಜನ. ಕನ್ನಡಿ ಮುಂದಿನ ಒಂದು ಜಾಗ ಖಾಲಿಯಾಗಿತ್ತು. ಕ್ಷೌರಿಕ, "ಸಾರ್" ಎಂದು ಕೂಗಿ ಕರೆದು ಮೆತ್ತನೆಯ ಕುರ್ಚಿಯನ್ನೊಮ್ಮೆ ತಟ್ಟಿ ಕುಳಿತುಕೊಳ್ಳುವಂತೆ ಸನ್ಹೆ ಮಾಡಿದ. ನನ್ನ ಕನ್ನಡಕವನ್ನು ತೆಗೆದು, ಮಡಿಸಿ, ಮುಂದಿದ್ದ ಟೇಬಲ್ ಮೇಲಿಟ್ಟ. ಮುಂದಿನ ಕಪಾಟಿನಿಂದ ಮಡಿಸಿಟ್ಟಿದ್ದ ಹೊದಿಕೆಯನ್ನು ತೆಗೆದು, ಕೊಡವಿ, ನನ್ನ ಮೇಲೆ ಹೊದಿಸಿ, ಕತ್ತಿನ ಹಿಂಬಾಗದಲ್ಲಿ ಕ್ಲಿಪ್ ಹಾಕಿದ. ನನಗೆ ಮೊದಲು ಬಂದು ಹೋದವರಿಗೂ, ಅದನ್ನೆ ಹೊದಿಸಿ, ಕೆಲಸವಾದ ಮೇಲೆ ನೀಟಾಗಿ ಮಡಿಸಿಟ್ಟಿದ್ದನ್ನು ನಾನೇ ನೋಡಿದ್ದೆ!

"ಸಾ(ಶಾ)ರ್ಟ್ ಮಾಡ್ಬೇಕಾ ಸಾರ್?" ಎಂದ. " ಮೀಡಿಯಂ" ಅಂದೆ. ಅವನ ಮಾಮೂಲಿ ಪ್ರಶ್ನೆಗೆ, ನನ್ನ ಮಾಮೂಲಿ ಉತ್ತರ. ಕತ್ತರಿ, ಬಾಚಣಿಗೆ ಹಿಡಿದು ಅವನ ಕಾರ್ಯದಲ್ಲಿ ಮಗ್ನನಾದ, ಕ್ಷೌರಿಕ ರಾಮು. ಅವನು ತಿರುಗಿಸಿದಂತೆ ನನ್ನ ತಲೆಯನ್ನು, ಮೇಲೆ, ಕೆಳಗೆ, ಅತ್ತ, ಇತ್ತ ಆಡಿಸುತ್ತಿದ್ದೆ. ಮಧ್ಯದಲ್ಲಿ ಅವನ ಮಾಮೂಲಿ ಗೊಣಗಾಟ ಕೇಳುತ್ತಿತ್ತು. "ಸಾರ್, ನಿಮ್ಮದು ರಿಂಕಲ್ಸ್ ಜಾಸ್ತಿ. ಕಟ್ ಮಾಡೋದು ಕಷ್ಟ". "ಗುಂಗುರು" ಕೂದಲು ಎಂದು ಹೇಳಲು, ಅವನೇ ಕಂಡು ಹಿಡಿದುಕೊಂಡಿದ್ದ ಇಂಗ್ಲಿಷ್ ಪದ ಅದು! ಅವನಿಗೆ ಗೊತ್ತು, ಹೀಗೆ ಅವನು ಹೇಳುವುದರಿಂದಲೇ, ಅವನಿಗೆ ಎರಡು ರೂಪಾಯಿ ಭಕ್ಷೀಸು, ನನ್ನಿಂದ ಅವನಿಗೆ ಸಿಗುತ್ತಿತ್ತು!