ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದೃಶ್ಯ ೨

ದೃಶ್ಯ ೨
[ದುಷ್ಟಬುದ್ಧಿಯ ಮನೆಯ ಒಂದು ಕೊಠಡಿಯಲ್ಲಿ ಅವನು ಚಿಂತಾಕ್ರಾಂತನಾಗಿ ಕುಳಿತುರುವನು.]

ದುಷ್ಟ:- ಈ ಕುಂತಳೇಂದ್ರಂಗೆ ಸುತರಿಲ್ಲ ರಾಜ್ಯಮೆನ
ಗೇಕಾಧಿಪತ್ಯಮಾಗಿರ್ದಪುದು, ಮುಂದಿವಂ
ಭೂಕಾಂತನಾದಪಂ ಗಡ! ವಿಪ್ರರೆಂದ ನುಡಿ
ತಪ್ಪದದು! ಎನ್ನಾತ್ಮಜರ್ಗೆ ಬೇಕಾದ
ಸಂಪದಂ ಬಯಲಾಗು ಪೋದಪುದೇ? ಗಾಲವನು
ಏನೆಂದ! ದುಷ್ಟಬುದ್ಧಿಯ ನಾಮವನ್ವರ್ಥ
ವಾಗದಿರೆ ಎನ್ನ ಬಾಳಿದು ವ್ಯರ್ಥ! ಎನ್ನಿಳೆಗೆ,
ಎನ್ನಾತ್ಮಜರ್ಗೆ ಮುಡುಪಾದ ಈ ಪೊಳಲಿಂಗೆ
ಅವನೊಡೆಯನಾಗುವನೆ. ಇಲ್ಲ, ಎಂದೂ ಇಲ್ಲ!
ವಿಪ್ರನಾಡಿದ ಮಾತು ಪುಸಿಯಪ್ಪುವಂತೆಸಗಿ
ಚಾಂಡಾಲರಿಂದಾ ತರಳನಂ ಕೊಲ್ಲಿಪೆಂ!
ಅರಸುಗುವರಿಯನೆನ್ನ ಮುದ್ದು ಮಗ ಮದನಂತೆ
ಕೈಹಿಡಿಸಿ ಪಟ್ಟಗಟ್ಟುವೆನವಗೆ. ಕಿಂಕರನು
ಕಟುಕರಿನ್ನೇಕಿನ್ನು ತರಲಿಲ್ಲ. ಕಾಲೊಳಿಹ
ಕಂತಕವ ಕಿತ್ತಹೊರತೆನಗೆ ಸುಖವಿಲ್ಲ.
ಎನ್ನ ಬಾಳಿನ ಶಾಂತಿ ಬಾಲಕನ ಕೊಲೆಯಲ್ಲಿ
ಮಲಗಿಹುದು. [ಮದನ ವಿಷಯೆ ಬರುವರು]

ಮದನ:- ಅಪ್ಪಾ, ಆ ಬಾಲಕನು ಯಾರು?

ವಿಷಯೆ:- ನಮ್ಮ ಜೊತೆಗಾಡುವವರಾರಿಲ್ಲ. ಅವನಿದ್ದ
ರಾಟವಾಡಲು ಆಗುತಿತ್ತಪ್ಪಾ. ಕರೆಸವನ.
ದುಷ್ಟ:- (ಮಗಳನ್ನು ಎತ್ತಿಕೊಂಡು) ಕರೆಸುವೆನು ತಾಳಮ್ಮ ಎನ್ನ ಮುದ್ದಿನ ಗಿಣಿಯೆ.

[ದುಷ್ಟಬುದ್ಧಿಯ ಹೆಂಡತಿ ತಾರಕಾಕ್ಷಿಯು ಬಂದು]

ತಾರ:- ಕರ್ಣನಂ ಮೀರಿಹಳು ದಾನದಲಿ, ವಿಷಯೆ
ಇಂದೊಂದು ರನ್ನದಲರನು ಯಾರಿಗೋ ಕೊಟ್ಟು ಬಂದಿಹಳು!
ವಿಷಯೆ:- ಯಾರಿಗಿಲ್ಲಪ್ಪಾ ಅವನಿಗೇ!
ನೀಕರೆದು ದಾರಿಯಲಿ ಮಾತನಾಡಿದೆಯಲ್ಲಾ
ಅವನಿಗೇ?
ತಾರಾ:- ಮುಂದವನೆ ಗಂಡನಾಗುವನೇನೋ ನಿನಗೆ?
ದುಷ್ಟ:- ಕೇಳಿದೆಯ ತಾರಾ ಪುರೋಹಿತನು
ಪೇಳ್ದುದನು? ಬೀದಿಯಲಿ ಸಂಚರಿಪ ದೇಸಿಗನು
ಮುಂದೆಮ್ಮ ನಾಡಿಗೆ ದೊರಯಪ್ಪನಂತೆ.
ತಾರಾ:- ಸರಿ, ಗಾಲವನ ಮಾತು. ಕಟ್ಟುಕತೆಗಳ ಕಾಲ
ವೆಂದರಿತನೇನವನು?
ದುಷ್ಟ:- ತಪ್ಪುವದೆ ಹೇಳು
ವಿಪ್ರರೆಂದಾಮಾತು. ಗಾಲವನು ಪ್ರಾಕೃತನೆ?
ತಾರಾ:- ಅವನ ಹಣೆಯಲ್ಲಿ ಬರೆದಂತಾದರೇನಮಗೆ?
ದುಷ್ಟ:- ಯೋಚಿಸಾಡುವೆ ಏನು? ಬಹುದೂರವಿಹುದೆನ್ನ
ನೋಟ.ಹೆಂಗಸು ನೀನು! ನಿನಗೇನು ಗೊತ್ತು?
ಈ ಕುಂತಳೇಂದ್ರಂಗೆ ಸುತರಿಲ್ಲ. ನಮ್ಮ ಮಗ
ಮದಂಗೆ ಪಟ್ಟಾಭಿಷೇಕವಂ ಮಾಡಿ
ಅರಗುವರಿಯಂ ತಂದು ಮದುವೆಯಂ ಮಾಡಿ
ಆತನರಸನಾಗಬೇಕೆಂಬಾಸೆ ಎನಗಿಹುದು
ನನ್ನ ನಿನ್ನೊಳಗಿರಲಿ ಬಯಲಾಗದಿರಲಿ ಇದು.
ಅದಕೆ ಬೇಕಾದೆಲ್ಲ ಯತ್ನಗಳ ನೆಸಗುವೆನು.
ನರಕವಾದರು ಸರಿಯೆ ಈಜುವೆನು ಪೂಣ್ಕಿಯಿದು!
ಹಿಂದಿನಿಂದೆಲ್ಲವನು ನಿನಗೊರೆವೆ. ಮಕ್ಕಳನು

ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ.

ತಮ್ಮಲ್ಲನೇಕರು ಆಗಲೇ ಪತ್ರಿಕೆಗಳಲ್ಲಿ ವಿದ್ಯಾನಂದ ಶೆಣೈ ನಿಧನರಾದ ಸುದ್ದಿಯನ್ನು ಒದಿರಬಹುದು. ಕಳೆದ ಕೆಲ ದಿನಗಳಿಂದ ಮಿದುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ೯:೦೫ ಕ್ಕೆ ನಮ್ಮೆಲ್ಲರನ್ನು ಅಗಲಿದರು.

ಪುಸ್ತಕ ನಿಧಿ - ಮಾಸ್ತಿ ವೆಂಕಟೇಶ ಅಯ್ಯಂಗಾರರ ಅದ್ಭುತ ಕತೆಗಳು

ಈ ಪುಸ್ತಕದಲ್ಲಿ ನೀವು ಸ್ವಲ್ಪ ಮೋಸ ಹೋಗುವ ಸಾಧ್ಯತೆಗಳಿವೆ . ಇದು ನಿಜಕ್ಕೂ ಅನೇಕ ಕಥಾಸಂಕಲನಗಳ ಸಂಕಲನ . ಒಂದು ಪುಸ್ತಕ ಮುಗಿಯಿತು ಎಂದು ತಿಳಿಯಬಹುದು . ನಂತರ ಒಂದೆರಡು ಖಾಲಿ ಪುಟಗಳ ನಂತರ ಇನ್ನೊಂದು ಶುರುವಾಗುತ್ತದೆ ಆಯಾ ಭಾಗದ ಪರಿವಿಡಿಗಳೂ ಬೇರೆ. ಒಟ್ಟು ೫೬೭ ಪುಟಗಳ ಪುಸ್ತಕ ಎಂಬುದನ್ನು ಮರೆಯಬೇಡಿ.

ರಶೀಧರ 'ಬ್ಲಾಗಂಬರಿ'

ಸಂಪದದಲ್ಲಿ ಬ್ಲಾಗಂಬರಿ
ಮೈಸೂರು ಆಕಾಶವಾಣಿಯ [:http://sampada.net/user/rasheed|ರಶೀಧರ] ಪರಿಚಯ ನಿಮಗೆ [:http://mysorepost.wordpress.com|ಮೈಸೂರು ಪೋಸ್ಟಿನಿಂದ], ಹಾಗೂ [:http://sampada.net/article/3215|ಸಂಪದದಲ್ಲಿ ಅವರು ಬರೆದ] [:http://sampada.net/article/3154|ಕೆಲವು ಕವನಗಳಿಂದ] ಆಗಿರಬಹುದು. ಈಗವರು ಹೊಸತೊಂದು ಪ್ರಯೋಗಕ್ಕೆ 'ಕೈ' ಹಾಕಿದ್ದಾರೆ. [:http://blogambari.sampada.net|ಅದುವೇ 'ಬ್ಲಾಗಂಬರಿ']. ಅವರೇ ಹೇಳುವಂತೆ:

`ಬ್ಲಾಗಂಬರಿ 'ಎಂಬುದು ಕಾದಂಬರಿ ಮತ್ತು ಬ್ಲಾಗ್ ಎಂಬ ಎರಡು ನಾಮ ಪದಗಳ ವರ್ಣಸಂಕರದಿಂದ ಉಂಟಾದ ಕನ್ನಡ ಸಾಹಿತ್ಯದ ಒಂದು ವಿನೂತನ ತಳಿ.ಕನ್ನಡ ಸಾಹಿತ್ಯದ ಹೊಸ ಹೇಸರಗತ್ತೆ!

ಈ ಹೇಸರಗತ್ತೆಯ ಹುಟ್ಟುವಿಕೆಯ ಜೆನೆಟಿಕ್ ಇಂಜಿನೀಯರಿಂಗಿಗೆ ಬೇಕಾದ ತಂತ್ರಜ್ಞಾನದ ಜೋಡಿಕೆ ಸಂಪದದಲ್ಲೇ ನಡೆದಿದ್ದು. ನಿರ್ವಹಣೆಯ ಭಾರ [:http://ismail.sampada.net|ಇಸ್ಮಾಯಿಲರದ್ದು]. ರಶೀಧರ ಬರಹ ಅದರ ಆತ್ಮ.

[:http://blogambari.sampada.net/|ನೋಡಿ, ಕಾಮೆಂಟು ಮೂಲಕ ಪ್ರೋತ್ಸಾಹಿಸಿ] - ಹೇಗನ್ನಿಸಿತೆಂದು ಇಲ್ಲೂ ಬರೆದು ತಿಳಿಸಿ.

ಕತೆ ಹೇಳಿದ ಕತೆ

ಒಂದು ಕತೆ ಹೇಳ್ತೀನಿ ಅಂತ ಗೆಳೆಯ ಶುರು ಮಾಡಿದ. ಅವನು ಎಷ್ಟೋ ವರ್ಷಗಳ ಹಿಂದೆ ಯಾವುದೋ ಊರಿನಲ್ಲಿ ಕಗ್ಗತ್ತಲ ನಡುರಾತ್ರಿ ಗೊತ್ತಿಲ್ಲದ ಊರೊಂದರ ಹೊರಗೆ ಬಸ್ಸು ಕೆಟ್ಟು ಹೋದಾಗ ಅಲ್ಲೇ ಪಕ್ಕದಲ್ಲಿ ಇದ್ದ ಒಂದು ಗುಡಿಸಿಲಿನಂದ ಹೊರಬಂದ ಒಬ್ಬ ಮುದುಕನ ಬಗ್ಗೆ.

ಪುಸ್ತಕ ನಿಧಿ (೧೦) - ಕಂಪ್ಯೂಟರ್ ಕುರಿತು ಅದ್ಭುತ ಪುಸ್ತಕ

ಕಂಪ್ಯೂಟರ್ ತಜ್ಞರೂ ಸಾಹಿತ್ಯಾಸಕ್ತರೂ ಕವಿಯೂ ಆಗಿರುವವರೊಬ್ಬರು ಕಂಪ್ಯೂಟರ್ ಕುರಿತು ಬರೆದ ಅದ್ಭುತ ಪುಸ್ತಕ ಇಲ್ಲಿದೆ . (ಪುಸ್ತಕ - ಕಂಪ್ಯೂಟರ್‌ಗೊಂದು ಕನ್ನಡಿ , ಲೇಖಕರು ಡಾ. ಸಿ. ಪಿ. ರವಿಕುಮಾರ್ ) ಪರಿವಿಡಿ ನೋಡಿದರೇ ನಿಮಗೆ ಪುಸ್ತಕ ಹೇಗಿದ್ದೀತು ಎಂಬ ಕಲ್ಪನೆ ಬಂದೀತು.

ವೇಗದ ಬೆನ್ನೇರಿ ಬಂತು ಗಣಕವಿಲಾಸ .

ಬ್ರಹ್ಮ ಬರೆದಿದ್ದೇನು ನಿಮ್ಮ ಜಿನೋಮ್‌ನಲ್ಲಿ

ಅಕ್ಕ ತಮ್ಮರ ಅನುಬಂದದ ಗೀತೆ

ತವರು ಮನೆಗೆ ಬಾರೆ ನನ್ನ ಅಕ್ಕಯ್ಯ   

ತಂದು  ನಿಂತಿರುವ ಗಾಡಿಯ ನಿನ್ನ ತಮ್ಮಯ್ಯ

ಅಕ್ಕಯ್ಯ ನನ್ನ ಅಕ್ಕಯ್ಯ   ಅಪ್ಪ ಅಮ್ಮ ನಿಲ್ಲದ ನನ್ನ

ತುಪ್ಪ ಅನ್ನ ಹಾಕಿ ಸಾಕಿದೆ ಅಕ್ಕಯ್ಯ "ಪಲ್ಲವಿ"

ನಾಲ್ಕು ಜನ ಮಕ್ಕಳಲ್ಲ ಕೇಳು ಅಕ್ಕಯ್ಯಅವರೊಳಗೆ

 ನಾ ಮಗನಾಗೆ ನಾಲ್ಕು ದಿನ ನಿನ್ನ ಸೇವೆ ಮಾಡುವೆ ನಿನಗೆ

ಪುಸ್ತಕ ನಿಧಿ - ಭಜನೆಗಳು ಕೀರ್ತನೆಗಳು ಇತ್ಯಾದಿ (ವಿವರಣೆ ಸಹಿತ)

ದಾಸ ಸಾಹಿತ್ಯದಲ್ಲಿ , ಭಜನೆ ಕೀರ್ತನೆಗಳಲ್ಲಿ ಅಸಕ್ತಿ ಉಳ್ಳವರಿಗೆ ಇಲ್ಲಿ ನಿಧಿಯೇ ಇದೆ ಎನ್ನಬಹುದು. ಅನೇಕ ಕೀರ್ತನೆಗಳು , ಭಜನೆಗಳು , ಉಗಾಭೋಗಾದಿಗಳು , ಇನ್ನೂ ಏನೇನೋ ಇಲ್ಲಿ ವಿವರಣೆ ಸಹಿತ ವಿಂಗಡಣೆಯೊಂದಿಗೆ ಸುಮಾರು ೧೫೦೦ ಪುಟಗಳಷ್ಟು ಇದೆ. ನಿಮಗೆ ಆಸಕ್ತಿ ಇದ್ದಲ್ಲಿ . ಈ ಲಿಂಕುಗಳನ್ನು ನೋಡಿ . ಆಸಕ್ತರಿಗೂ ತಿಳಿಸಿ. ಭಜನಕೌಸ್ತುಭ ಭಾಗ - ೧, ೩, ೪ ಇಲ್ಲಿವೆ .

ಪುಸ್ತಕನಿಧಿ - ಕನ್ನಡದ ಬಾವುಟ

ಈ ಪುಸ್ತಕ ಕನ್ನಡ ಸಾಹಿತ್ಯ ಪರಿಷತ್ತಿನದು . ಬೆಲೆ ಸುಮಾರು ೧೫ ರೂಪಾಯಿ ಇದ್ದು ಚಾಮರಾಜಪೇಟೆಯ ಸಾಹಿತ್ಯಪರಿಷತ್ ಕಛೇರಿಯಲ್ಲಿ ಸಿಗುತ್ತದೆ. ಅಂತರ್ಜಾಲದಲ್ಲಿ ಇಲ್ಲಿ ಇದೆ.

ಎಲ್ಲಿಯವರೆಗೆ?

ಎಲ್ಲಿಯವರೆಗೆ ಶಾಂಪೂ ಮತ್ತು ಸೋಪುಗಳ ಕಂಪೆನಿಗಳು 'ಇದರಲ್ಲಿ ಪ್ರೊಟೀನ್ ಇದೆ, ನಿಮ್ಮ ಕೂದಲನ್ನು ಬಲಗೊಳಿಸಿ ಚರ್ಮಕ್ಕೆ ಕಾಂತಿ ನೀಡುತ್ತದೆ' ಎಂದು ಆಶ್ವಾಸನೆ ನೀಡುತ್ತಾ ಮಾರಾಟ ಮಾಡ್ತವೆ?