ಟಾಪ್ ಟೆನ್

ಟಾಪ್ ಟೆನ್

ಅವಧಿ (http://avadhi.wordpress.com) ಬ್ಲಾಗ್ ನಿರ್ವಾಹಕರು ಅವರ ಓದುಗರೆಲ್ಲರಿಗೆ ನಿಮ್ಮ ಟಾಪ್ ಟೆನ್ ಪುಸ್ತಕ ಪಟ್ಟಿ ಹೇಳಿ ಎಂದಿದ್ದರು ಕೆಲವು ದಿನಗಳ ಹಿಂದೆ. ಪಟ್ಟಿ ಹೇಳುವುದು ಕಷ್ಟವೇ ಆದರೂ, ಆಗ ನೆನಪಾದವನ್ನು ಅವರಿಗೆ ಬರೆದು ಕಳಿಸಿದ್ದೆ. ಅದನ್ನೆ ಇಲ್ಲಿ ಮತ್ತೆ ಬರೆದಿದ್ದೇನೆ.

ಇದರಲ್ಲಿ ಕೆಲವು ಪುಸ್ತಕಗಳನ್ನು ಓದಿ ವರ್ಷಗಳೇಕೆ, ದಶಕಗಳೇ ಕಳೆದಿವೆ. ಆದರೂ ಅವನ್ನು ಓದಿದಾಗ ಆಗಿದ್ದ ಭಾವದ ನೆನಪಿನಲ್ಲಿ ಬರೆಯುತ್ತಿದ್ದೇನೆ. 

೧. ಪರ್ವ - ಎಸ್.ಎಲ್.ಭೈರಪ್ಪ
೨. ಚೆನ್ನಬಸವನಾಯಕ - ಶ್ರೀನಿವಾಸ
೩. ವೈಶಾಖ - ಚದುರಂಗ
೪.ಶಾಂತಲಾ - ಕೆ.ವಿ.ಐಯ್ಯರ್
೫.ವಂಶವೃಕ್ಷ - ಎಸ್.ಎಲ್.ಭೈರಪ್ಪ
೬.ಪುರುಷೋತ್ತಮ - ಯಶವಂತ ಚಿತ್ತಾಲ
೭.ದುರ್ಗಾಸ್ತಮಾನ- ತ.ರಾ.ಸು
೮. ಹಸಿರು ಹೊನ್ನು - ಬಿ.ಜಿ.ಎಲ್.ಸ್ವಾಮಿ
೯.ಮುಳುಗಡೆ - ನಾ.ಡಿ’ಸೋಜ
೧೦.ನಿರಂತರ - ಕೆ.ಟಿ.ಗಟ್ಟಿ

ಇವು ಅಲ್ಲದೇ, ಇನ್ನೂ ಕೆಲವು ಈ ಪಟ್ಟಿಯಲ್ಲಿ ಇರಬೇಕಾಗಿತ್ತು ಎನ್ನಿಸುತ್ತಿದೆ - ಆದರೆ, ಅವುಗಳನ್ನು ಪೂರ್ತಿ ಓದಿಲ್ಲವಾಗಿ, (ಅಥವಾ ಅವು ಕಥೆಗಳ, ಹರಟೆಗಳ ಸಂಗ್ರಹಗಳಾಗಿರುವುದರಿಂದ, ಒಟ್ಟಿಗೇ ಒಂದೇಸಲ ಕೂತು ಓದದ ಕಾರಣ) ಇಲ್ಲಿ ಸೇರಿಸದೇ ಹೋದೆ (ಉದಾ: ಮಾಸ್ತಿ ಅವರ ಕತೆಗಳು, ಮಂಕುತಿಮ್ಮನ ಕಗ್ಗ, ಅಶ್ವತ್ಥರ ಕತೆಗಳು, ಮೂರ್ತಿರಾಯರ ಹರಟೆಗಳು, ಟಿ.ಕೆ. ರಾಮರಾಯರ ಪತ್ತೇದಾರಿ ನೀಳ್ಗತೆಗಳು ಇತ್ಯಾದಿ).

-ಹಂಸಾನಂದಿ

Rating
No votes yet

Comments