ಹೆಸರು ಬೇಕು?
ಹೆಸರು ಬೇಕು ನಮಗೆ
ಕೂಗಿ ಕರೆಯುವುದಕೆ
ನಮ್ಮ ಇರುವನು
ದೃಢೀಕರಿಸುವುದಕೆ
ಗುರುತಿಸಬೇಕೆಂಬ
ನಮ್ಮ ಹಂಬಲಕ್ಕೆ
ಬೆನ್ನು ತಟ್ಟಿ ಪ್ರೋತ್ಸಾಹಿಸ
ಬೇಕೆಂಬ ಛಪಲಕ್ಕೆ
ದಾರಿ ತೋರುವವಂಗೆ
ತಪ್ಪುಗಳ ತಿದ್ದುವವಂಗೆ
ವಿಧ್ಯೆ ಕಲಿಸುವವಂಗೆ
ಹೆಸರು ಬೇಕೆ ಬೇಕು
ದಿಟ್ಟ ಪರಿಶ್ರಮವಿಟ್ಟು
ಸಂದ ಪ್ರತಿಫಲವನ್ನು
ಸಾಧನೆಯ ಮುಖವೆಂದು
ಜಗಕೆ ತಿಲಿಸುವುದಕೆ
- Read more about ಹೆಸರು ಬೇಕು?
- Log in or register to post comments