ಹೆಸರು ಬೇಕು?
ಹೆಸರು ಬೇಕು ನಮಗೆ
ಕೂಗಿ ಕರೆಯುವುದಕೆ
ನಮ್ಮ ಇರುವನು
ದೃಢೀಕರಿಸುವುದಕೆ
ಗುರುತಿಸಬೇಕೆಂಬ
ನಮ್ಮ ಹಂಬಲಕ್ಕೆ
ಬೆನ್ನು ತಟ್ಟಿ ಪ್ರೋತ್ಸಾಹಿಸ
ಬೇಕೆಂಬ ಛಪಲಕ್ಕೆ
ದಾರಿ ತೋರುವವಂಗೆ
ತಪ್ಪುಗಳ ತಿದ್ದುವವಂಗೆ
ವಿಧ್ಯೆ ಕಲಿಸುವವಂಗೆ
ಹೆಸರು ಬೇಕೆ ಬೇಕು
ದಿಟ್ಟ ಪರಿಶ್ರಮವಿಟ್ಟು
ಸಂದ ಪ್ರತಿಫಲವನ್ನು
ಸಾಧನೆಯ ಮುಖವೆಂದು
ಜಗಕೆ ತಿಲಿಸುವುದಕೆ
ಪ್ರೀತಿಸುವವಂಗೆ,
ಧ್ವೇಷಿಸುವವಂಗೆ,
ಕಷ್ಟ ಕಾರ್ಪಣ್ಯಗಳ
ನೀಡುವವಂಗೆ ಬೇಕು
ಮೆಟ್ಟಿದ ಮಜಲುಗಳ,
ನಿಲುವುಗಳ, ಭಾವಗಳ,
ಕಲ್ಪನೆಗಳ, ಕನಸುಗಳ
ಹಾದಿಗೆ ಬೇಡವೆ ಹೆಸರು
*****
ವಕ್ರ ವ್ಯಾಕರಣಗಳ ತಿಳಿಸಿ ಸಹಕರಿಸುವವರಿಗೆ ನನ್ನಿ.
ಚಂದಿನ
ಕೂಗು... ಎನ್ನ ಮನುಕುಲಕೆ!!!
http://www.koogu.blogspot.com
Rating