ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ಟೇಟಸ್ ಕತೆಗಳು (ಭಾಗ ೧೦೮೪)- ಮೂಲ

ರಾಮರಾಯರು ತುಂಬಾ ಯೋಚನೆಯಲ್ಲಿ ಹಾಗೆ ಗೋಡೆಗೊರಗಿ ಕುಳಿತುಬಿಟ್ಟಿದ್ದರು. ಅವರನ್ನು ಯಾವತ್ತೂ ಹಾಗೆ ನೋಡಿದವರಲ್ಲ ಅವರ ಜೀವದ ಗೆಳೆಯ ಭೀಮರಾಯರು. "ನನ್ನ ಮಕ್ಕಳು ಹೀಗೆ ಆಗ್ತಾರೆ ಅಂತ ಅಂದುಕೊಂಡಿರಲೇ ಇಲ್ಲ. ಊರಲ್ಲೇ ಬೆಳೆದು ಓದಿ ಒಳ್ಳೆಯ ವಿದ್ಯೆ ಪಡೆದವರು ಊರು ಬಿಡೋದ್ದಕೆ ಸಿದ್ಧವಾಗಿದ್ದಾರೆ. ಈ ನೆಲವನ್ನು ನಂಬಿದವರು ಮಾರಾಟ ಮಾಡಿ ದೇಶ ಬಿಡುವುದಕ್ಕೆ ಯೋಚನೆ ಮಾಡ್ತಾ ಇದ್ದಾರೆ.

Image

ಬನಾನ ರೈಸ್

Image

ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕರಿಬೇವು ಹಾಕಿ, ಹಸಿಮೆಣಸು ಸಿಗಿದು ಹಾಕಿ ಒಗ್ಗರಣೆ ಮಾಡಿಕೊಂಡು ಅನ್ನ ಹಾಕಿ ಮಗುಚಿ ಬೇಕಷ್ಟು ಉಪ್ಪು ಹಾಕಿ ನಂತರ ಸಣ್ಣಗೆ ಹೆಚ್ಚಿದ ಬಾಳೆಹಣ ್ಣನ ಹೋಳುಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಈಗ ಬನಾನ ರೈಸ್ ತಿನ್ನಲು ರೆಡಿ.

ಬೇಕಿರುವ ಸಾಮಗ್ರಿ

ಸಣ್ಣಗೆ ಹೆಚ್ಚಿಕೊಂಡ ನೇಂದ್ರ ಬಾಳೆಹಣ್ಣಿನ ಹೋಳುಗಳು ೧/೨ ಕಪ್, ಬೆಳ್ತಿಗೆ ಅನ್ನ ೧ ಕಪ್, ಒಣಮೆಣಸು ೧, ಹಸಿ ಮೆಣಸು ೨, ಉದ್ದಿನಬೇಳೆ ೧ ಚಮಚ, ಸಾಸಿವೆ ೧ ಚಮಚ, ಎಣ್ಣೆ ೪ ಚಮಚ, ಕರಿಬೇವು ೪ ಎಸಳು, ಉಪ್ಪು ರುಚಿಗೆ ತಕ್ಕಷ್ಟು.

ನಿಷ್ಪಾಪಿ ಸಸ್ಯಗಳು (ಭಾಗ ೬೬) - ಬಳ್ಳಿ ಹುಲ್ಲು

ಹಬ್ಬಗಳು ಸಾಲುಸಾಲಾಗಿ ಎದುರಿಗಿದ್ದು ನಮ್ಮ ಹರ್ಷ ಹೆಚ್ಚಿಸುತ್ತಿವೆ. ಈ ಸಂದರ್ಭದಲ್ಲಿ ಕೆಲವು ಪತ್ರಗಳು, ಪುಷ್ಪಗಳು ಪೂಜೆಗೆ ಸಲ್ಲುವುದನ್ನು ನಾವು ಕಾಣಬಹುದು. ಗರಿಕೆ, ಸಣ್ಣ ಜರಿ ಸಸ್ಯ, ಬಿಲ್ವ, ಎಕ್ಕ, ವೀಳ್ಯ, ಕಲ್ಲುಹೂ, ತುಳಸಿಯಂತೆ ಕೆಲವೆಡೆ ಲವ್ ಗ್ರಾಸ್ ಎಂಬ ಹುಲ್ಲೊಂದನ್ನೂ ಬಳಸುತ್ತಾರೆ ಗೊತ್ತಾ? ಇದು ಯಾವ ಹುಲ್ಲೆಂದು ಆಶ್ಚರ್ಯವೇ?

Image

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೧೩

ಪಂಜೆ ಮಂಗೇಶರಾಯರ ಮಕ್ಕಳ ಪದ್ಯಗಳು ಮಾಲಿಕೆಯಲ್ಲಿ ಈ ವಾರ ನಾವು ‘ಡೊಂಬರ ಚೆನ್ನೆ' ಎನ್ನುವ ದೀರ್ಘ ಕವಿತೆಯ ಕೊನೆಯ ಭಾಗವನ್ನು ಪ್ರಕಟ ಮಾಡಲಿದ್ದೇವೆ. ಈ ಮೂಲಕ ಪಂಜೆಯವರು ಬರೆದ ಕೆಲವು ಮಕ್ಕಳ ಪದ್ಯಗಳನ್ನು ಈಗಿನ ತಲೆಮಾರಿಗೆ ಪರಿಚಯಿಸುವ ಕೆಲಸ ಮಾಡಿದ್ದೇವೆ. ಇದರೊಂದಿಗೆ ಈ ಸರಣಿ ಮುಕ್ತಾಯವಾಗುತ್ತದೆ.

Image

ದುಷ್ಟ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಅಗತ್ಯ

ಎಲ್ಲ ರಾಷ್ಟ್ರಗಳು ಅಭಿವೃದ್ಧಿಯ ಮತ್ತೊಂದು ಮಜಲನ್ನು ಏರಲು ಸತತವಾಗಿ ಪ್ರಯತ್ನಿಸುತ್ತಿವೆ ಮತ್ತು ಇದರಲ್ಲಿ ಯಶಸ್ವಿಯಾದಾಗ ಸಾಧನೆಯನ್ನು ಸಂಭ್ರಮಿಸುತ್ತವೆ. ಇದು ಸ್ವಾಭಾವಿಕವೂ ಹೌದು. ಭಾರತದಲ್ಲೂ ಕಳೆದ ಕೆಲ ವರ್ಷಗಳಿಂದ ಮೂಲ ಸೌಕರ್ಯ ವಿಸ್ತರಣೆಯಲ್ಲಿ ಮಹತ್ವದ ಬೆಳವಣಿಗೆ ಆಗಿರುವುದನ್ನು ಅಂತಾರಾಷ್ಟ್ರೀಯ ವಲಯವೇ ಒಪ್ಪಿಕೊಂಡಿದೆ. ವಿಶ್ವದಲ್ಲೇ ಅತಿ ದೊಡ್ಡ ರೈಲ್ವೆ ಜಾಲವನ್ನು ಹೊಂದಿರುವ ಹೆಗ್ಗಳಿಕೆ ಭಾರತದ್ದು.

Image

ದೇವರು ಮತ್ತು ಗಲಭೆಗಳು

ಗಣೇಶೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ನಡೆಯುವ ಗಲಭೆಗಳಿಗೆ ಕಾರಣವೇನಿರಬಹುದು ಮತ್ತು ಯಾರ ನಡುವೆ ಈ ಗಲಭೆಗಳು ನಡೆಯುತ್ತವೆ. ಇದೊಂದು ವಿಚಿತ್ರ ಮತ್ತು ಮಿಲಿಯನ್ ಡಾಲರ್ ಪ್ರಶ್ನೆ.

Image

ಸ್ಟೇಟಸ್ ಕತೆಗಳು (ಭಾಗ ೧೦೮೩)- ಮಾತುಕತೆ

ಇವತ್ತು ಸಮುದ್ರ ರಾಜ ಮಾತಾಡಿದ. ಅವನಲ್ಲಿ ಮಾತನಾಡದೆ ತುಂಬಾ ದಿನವಾಗಿತ್ತು. ಇತ್ತೀಚಿಗೆ ನನ್ನ ಅವನ ಭೇಟಿ ಆಗಿರಲೇ ಇಲ್ಲದಿದ್ದರೆ. ಆಗಾಗ ಹೋಗಿ ಕುಶಲೊಪರಿ ವಿಚಾರಿಸಿಕೊಂಡು ಅಲ್ಲಿಂದ ಹೊರಟು ಬರ್ತಾ ಇದ್ವಿ. ಇವತ್ತು ಅವನನ್ನ ಭೇಟಿಯಾದಾಗ ನನ್ನ ಮುಂದಿನ ಬದುಕಿನ ಬಗ್ಗೆ ಅವನಲ್ಲಿ ಪ್ರಶ್ನೆಗಳನ್ನು ಕೇಳುತ್ತಾ ಅವನಿಂದ ಉತ್ತರವನ್ನು ಬಯಸ್ತಾ ಹೋದೆ. ಅವನು ಮಾತನಾಡುತ್ತಿರಲಿಲ್ಲ.

Image

ವಿಕಸಿತ ಭಾರತ

ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರೀಯಸಿ” ಎಂಬ ಪರಮ ಶ್ರೇಷ್ಠವಾದ ಮಾತು ಮಾಂಡೂಕ ಉಪನಿಷತ್ ನಲ್ಲಿದೆ. ನಾವು ಹುಟ್ಟಿದ ದೇಶ ಸ್ವರ್ಗಕ್ಕಿಂತ ಶ್ರೇಷ್ಠವೆಂದೇ ಈ ಶ್ಲೋಕದ ಸಂದೇಶ. ದೇಶದ ಬಗ್ಗೆ ಗೌರವ ಮತ್ತು ಅಭಿಮಾನ ಇರಲೇ ಬೇಕಾದುದು ನಮ್ಮೆಲ್ಲರ ಸಹಜ ಕರ್ತವ್ಯ. ಜನರ ಜೀವನ ಮಟ್ಟ ಹಿಮಾಲಯದೆತ್ತರ ಏರಲು ಭಾರತ ಎಲ್ಲ ಕ್ಷೇತ್ರಗಳಲ್ಲೂ ವಿಕಸನ ಹೊಂದಬೇಕು.

Image