ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರತಿದಿನದ ನರಕ

ಸರಿಯಾಗಿ ಒಂದು ವಾರದ ಮೇಲಾಯ್ತು ಆಫೀಸಿಗೆ ಬಂದು ಮತ್ತು ಮಾನಿಟರಿನ ಮುಖ ನೋಡಿ, ಮೌಸ್ ಮೈದಡವಿ, ಕೀ ಬೋರ್ಡಿನ ಕೀಲಿ ಕುಟ್ಟಿ.ಇಲ್ಲಿನ ಬದುಕೆ ವಿಚಿತ್ರ, ಗೋಡೆಯ ಮೇಲಿನ ಕ್ಯಾಲೆಂಡರಿನ ದಿನಗಳು ಬದಲಾಗುತ್ತವೆಯೆ ವಿನಾಃ ಬದುಕಲ್ಲಾ! ಪ್ರತಿದಿನವು ಅದೇ ರಾಗ, ಅದೇ ಎಕತಾನತೆ, ಮತ್ತದೆ ಚಕ್ರ..

ಕನ್ನಡ ಬಲಾಗುಗಳ ಕೊಂಡಿಗಳು, ನಿಮ್ಮ ಕೊಂಡಿ ಸೇರಿಸಿ.

ತುಂಬಾ ದಿವಸಗಳ ಹಿಂದೆ, http://kannadablogs.co.nr ಬಗ್ಗೆ ಬರೆದಿದ್ದೆ. ಕೆಲ Technical ತೊಂದರೆಗಳಿತ್ತು. ಈಗ ಅದು ಅಗದಿ ಕೆಲಸ ಮಾಡುತ್ತಿದೆ. ನಿಮ್ಮ ಕೊಂಡಿ/URL ಸೇರಿಸಲು ಮರೆಯಬೇಡಿ.

ನನ್ನಿ,
ಸಂಗನ.

ಬೇಕಲದಲ್ಲಿ ಸೂರ್ಯಾಸ್ತ

ಕಾಸರಗೋಡಿನಲ್ಲಿ ಬೇಕಲ ಕೋಟೆ ಎಂದು ಪ್ರಾಚೀನ ಕೋಟೆಯಿದೆ, ಸಮುದ್ರಕ್ಕೆ ಹೊಂದಿಕೊಂಡು. ಬಾಂಬೆ ಚಿತ್ರದ 'ತೂಹೀ ರೇ' ಹಾಡಿನಲ್ಲಿ ಈ ಜಾಗ ಕಾಣಲು ಸಿಗುತ್ತದೆ. ಈ ಚಿತ್ರ ಅಲ್ಲಿನ ಬೀಚ್ ನಲ್ಲಿ ತೆಗೆದದ್ದು.

ವಂದನೆಗಳು,

ವಸಂತ್ ಕಜೆ 

ಬೆಂಡೇಕಾಯಿ ಫಿಶ್ ಕರಿ!

ನಮ್ಮ ಬ್ರಹ್ಮಚಾರಿ ಮಹೇಶರು ಲಿಂಬೆ ಹಣ್ಣಿನ ಚಿತ್ರಾನ್ನ ಮಾಡಿ ತಿಂದು, ಅದಕ್ಕೊಂದು ಮುಕ್ತಿ ಕೊಡಿಸಿದ ಸ್ವಾರಸ್ಯ ಹೇಳುತ್ತಾ ಹೋದಂತೆ, ಸಾಯಂಕಾಲ ಆರು ಗಂಟೆಯ ಹಸಿವು ಇನ್ನಷ್ಟು ಚುರುಗುಟ್ಟಿ, ಬಾಯಲ್ಲಿ ನೀರೂರಿ, ಅದರ ಮುಂದುವರಿದ ಭಾಗವೋ ಎಂಬಂತೆ ನಾಲಿಗೆ ಇದ್ದಕ್ಕಿದ್ದಂತೆ ಬೆಂಡೇಕಾಯಿ ಫಿಶ್ ಕರಿಯ ರುಚಿಯನ್ನು ನೆನಪಿಸಿ ಲೊಚಗುಟ್ಟಿತು. ಇವತ್ತು ಮನೆಯಲ್ಲಿ ಇದನ್ನು ಮಾಡಬೇಕು ಅಂದುಕೊಂಡು ನಾಲಿಗೆಯನ್ನು ಸಂತೈಸಿದೆ.

ಹೆಸರು ವಿಚಿತ್ರವಾಗಿದೆಯಲ್ಲ? `ಬೆಂಡೇಕಾಯಿ ಫಿಶ್ ಕರಿ!' ಬೆಂಡೇಕಾಯಿ ಎಂಬ ವೆಜ್ಜೂ ಫಿಶ್ ಎಂಬ ನಾನ್ವೆಜ್ಜೂ ಸೇರಿ ಆಗುವ ವಿಚಿತ್ರ `ಆಶೆ' (ಪದಾರ್ಥ) ಇದಿರಬೇಕು ಎಂದುಕೊಳ್ಳುತ್ತಿದ್ದೀರಾ? ನಿಲ್ಲಿ. ಇಲ್ಲಿ ಬೆಂಡೇಕಾಯಿಯೇ ಪ್ರಧಾನ. ಫಿಶ್ ಗಿಶ್ ಏನೂ ಇಲ್ಲ.

ಬೆಂಗಳೂರಿನಲ್ಲಿರುವ ಗುಜರಾತಿಗಳು ಈ ರೀತಿಯ ಪದಾರ್ಥವೊಂದನ್ನು ಮಾಡುತ್ತಾರೆ ಎನ್ನುತ್ತಾ, ನಮ್ಮ ಸಂಬಂಧಿಕರೊಬ್ಬರು ಒಂದು ದಿನ ಮಾಡಿ ಬಡಿಸಿದ್ದೇ ಈ ಒಂದು ಹೊಸ ಪದಾರ್ಥ ಚಿಂತಾಮಣಿಗೆ ಕಾರಣ! ಏನಿಲ್ಲ, ಎಳೆಯ, ಸಣ್ಣ ಸಣ್ಣ ಬೆಂಡೇಕಾಯಿಗಳನ್ನು ಅದರ ಬಾಲದಿಂದ ಬುಡದ ಚೊಟ್ಟಿನವರೆಗೆ ಮಧ್ಯಭಾಗದಲ್ಲಿ ಸೀಳಬೇಕು. ಸೀಳುವುದೆಂದರೆ ಪೂರ್ತಿ ಅಲ್ಲ, ಚೊಟ್ಟಿನವರೆಗೆ ಮಾತ್ರ. ಚೊಟ್ಟು ಹಾಗೇ ಇರಲಿ. ನಂತರ ಮೆಣಸಿನಪುಡಿ, ಹುಳಿಪುಡಿ, ಉಪ್ಪು ಹದವಾಗಿ ಸೇರಿದ ಮಿಶ್ರಣವನ್ನು ಬೆಂಡೇಕಾಯಿಯ ಬಾಲದಿಂದ ಬುಡದವರೆಗೆ -ಅಥವಾ ವೈಸ್ ವರ್ಸಾ- ತೆಳ್ಳಗೆ ತುಂಬಿ (ಹುಳಿಪುಡಿ ಇರದಿದ್ದರೆ ಡ್ರೈ ಮಾಡುವಾಗ ನಿಂಬೇಹಣ್ಣಿನ ರಸ ಹಾಕಿದರೂ ಸಾಕು). ಬಾಣಲೆಗೆ ಸ್ವಲ್ಪ ಕಡಲೇಕಾಯಿ ಎಣ್ಣೆ ಸುರಿದು ಈ ಬೆಂಡೇಕಾಯಿಗಳನ್ನು ಹಾಕಿ ಡ್ರೈ ಮಾಡಿ. ಬೆಂಡೇಕಾಯಿ ಬಾಡಿ ಬಸವಳಿವವರೆಗೆ, ಹಸಿರು ಬಣ್ಣ ನಸುಗಪ್ಪು ಬಣ್ಣಕ್ಕೆ ತಿರುಗುವವರೆಗೆ ಡ್ರೈ ಮಾಡಬೇಕು. ಆನಂತರ ಅನ್ನಕ್ಕೆ ಕಲಸಿಕೊಂಡಾದರೂ ತಿನ್ನಿ, ಊಟದ ಮಧ್ಯೆಯಾದರೂ ತಿನ್ನಿ, ಬರೀ ಬಾಯಲ್ಲೇ ತಿನ್ನಿ. ಆಹಾ! ಎಂಥ ಮಧುರ ರುಚಿಯಿದೂ!

ಜೀವ-ಭಾವ

ಭಾವದ ಕಡಲಿನ ಮೊರೆತಕ್ಕೆ ಸಿಕ್ಕಿ
ಜೀವವ ತಣಿಸಲು ಹೊರಟೆ
ಅಲೆಗಳಬ್ಬರದಿ ಮೂಕಾಗಿ ನಿಂತಿದೆ ಹ್ರುನ್ಮನ
ಎನೊಂದು ಅರಿಯದಂತೆ

ಮಂಥನ (ಈ ಟೀವಿ ಕನ್ನಡದಲ್ಲಿ ಬರುವ ಮಂಥನ ಧಾರಾವಾಹಿಯ ಬಗ್ಗೆ ನನ್ನ ಮನಸ್ಸಿನ ಭಾವ)

ಮನದೊಳಗಣ ಮಂಥನ
ವೈಚಾರಿಕತೆಯ ಚಿಂತನ
ಬಿಡು ನಿನ್ನ ವ್ಯಸನ
ಮಾಡಿಕೊ ಇದ ನೀ ಪಚನ
ಅಳವಡಿಸಿಕೊ ಇದರ ಸಿಂಚನ
ಬಾಳು ಆಗುವುದು ಹಸನ

ಮನದ ಹಸಿರು

ಹಸಿರು ಇಲ್ಲವಾಗಿದೆ ಮನದಲ್ಲಿ
ಬೇಕದಕೆ ಭಾವವೆಂಬ ಪತ್ರಹರಿತ್ತು
ಅದರೊಡಗೂಡೆ ಚಿಗುರುವುದದರ ಉಸಿರು
ಮೂಡುವುದು ಸೌಖ್ಯದ ಕೊಸರು

ಕಾಡು

ಮಾನವ ಕಡಿದ ಕಾಡು
ಮಾಡಿದ ಅದನು ನಾಡು
ಬಿಟ್ಟನು ಅಲ್ಲಿ ಬೀಡು
ಕೊನೆಗುಂಟಾಯಿತು ಕ್ರೌಡು