ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬೆಂಗಳೂರು ಅಂದ್ರೆ... ಏನೋ ಅಂದುಕೊಂಡಿದ್ದೆ

ಬೆಂಗಳೂರು ಅಂದ್ರೆ ಸುಂದರ ನಗರಿ ಎಂದುಕೊಂಡಿದ್ದೆ. ಆದ್ರೆ ಈಗ ಗೊತ್ತಾಗುತ್ತಿದೆ. ಬೆಂಗಳೂರು ಎಂಥಹ ಮಯಾ ನಗರಿಯೆಂದು. ಬೆಂಗಳೂರು ಹೇಗಿದೆ ಎಂದು ಯಾರಾದ್ರೂ ನನ್ನಲ್ಲಿ ಕೇಳಿದರೆ ನನ್ನ ಉತ್ತರ ಹೀಗಿರುತ್ತದೆ. ಬೆಂಗಳೂರು ಧೂಳು ಮಯ ಪ್ರದೇಶ, ಇಲ್ಲಿನ ಹವಾಗುಣ ದಿನೇ ದಿನೇ ಹದಗೆಡುತ್ತದೆ. ಮನೆಯಿಂದ ಹೊರಗೆ ಬಂದರೆ ಕಾಣುವುದು ಬಿಕ್ಷುಕರ ಹಾವಳಿ.

ಪ್ರಜಾಪ್ರಬುತ್ವದಲ್ಲಿ ಮತದಾನದ ಹಕ್ಕು

ಇ೦ದು ರಾಷ್ಟ್ರಪತಿಯ ಚುನಾವಣೆ ನಡೆಯುತ್ತಿದೆ. ಇಬ್ಬರು ಘಟಾನುಘಟಿ ಅಬ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ. ಈ ಅಬ್ಯರ್ಥಿಗಳ ಹಿನ್ನೆಲೆಯ ಬಗ್ಗೆ ಅನೇಕ ಸ್ವಾರಸ್ಯಕರ ಚರ್ಚೆಗಳು ನಡೆದಿವೆ ಮತ್ತು ಈ ಚುನಾವಣೆ ಕೆಲವೊ೦ದು ವಿಚಿತ್ರ ಸನ್ನಿವೇಶಗಳನ್ನೂ ಸೃಷ್ಠಿಸಿದೆ.

ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

ಅಚ್ಚ ಕನ್ನಡ ಪದಗಳ ಶಬ್ದಕೋಶ ಓದಿ, ಈ ಹಿಂದೆ ಬ್ಲಾಗಿಸಿದ ಉತ್ತರ ಕರ್ನಾಟಕ ಮಿನಿ ಶಬ್ದಕೋಶವನ್ನು ಬರೆಯುತ್ತಿದ್ದೇನೆ. ಇನ್ನೂ ಮುಂದ ಬೆಳಸೂ ವಿಚಾರ ಐತಿ, ಆ ಮಾತು ಬ್ಯಾರೆ.

ಅ:
ಅಗದೀ, ಅಗದಿ
: ತುಂಬ. ಉದಾ: ಅಂವ ಅಗದೀ ಛೊಲೊ ಇದ್ದಾನ
ಅಡಸಳ ಬಡಸಳ: ಅವ್ಯವಸ್ಥ
ಅಂವ: ಆತ

ಆ:
ಆಕಿ: ಅವಳು

ಉ:
ಉತ್ತತ್ತಿ: ಒಣ ಖರ್ಜೂರ

ಕ:
ಕಾಲ್ಮಡಿ: ಮೂತ್ರವಿಸರ್ಜನೆ

ನಯಾಗರಾ ಫಾಲ್ಸ್ ಮತ್ತು ಮಸಾಲೆದೋಸೆ ಗಾಡಿ!

  ಕಳೆದ ತಿಂಗಳು ಅಮೆರಿಕೆಯ ಪೂರ್ವ ಕರಾವಳಿಗೆ ನೆಂಟರ ಮದುವೆಗೆಂದು ಹೋಗಬೇಕಾಗಿತ್ತು. ಹೇಗೂ ಅಲ್ಲಿಯವರೆಗೆ ಹೋಗುವೆನಲ್ಲ, 
ಮತ್ತೆ ಐನೂರು ಮೈಲಿ ಯಾವ ಲೆಕ್ಕ ಎಂದು, ನಯಾಗರಾ ಫಾಲ್ಸ್ ಗೂ ಹೋಗುವ ಪ್ರೋಗ್ರಾಮ್ ಹಾಕಿದ್ದಾಯಿತು. 
 
ನಯಾಗರಾ ಫಾಲ್ಸ್ ಎರಡು ದೇಶಗಳಲ್ಲಿ ಹರಡಿಕೊಂಡಿರುವ ಜೋಡಿ-ನಗರ. ನಡುವೆ ನಯಾಗರ ನದಿ.

ಮುಕ್ತ ಸಂವಾದಗಳ ಅವಶ್ಯಕತೆ

ಇತ್ತೀಚಿನ ಕೆಲವು ತಿಂಗಳುಗಳಲ್ಲಿ SLB/URA ಮತ್ತು ಬಂಜಗೆರೆ/ತುಂಬಿದಕೆರೆ ವಿಷಯ ಬಿಸಿಬಿಸಿ ಚರ್ಚೆಯಾಗುತ್ತಿರುವುದು ತುಂಬಾ ಸಂತೋಷದ ಸಂಗತಿ.

ನಿಜವಾಗಿಯೂ ನಾನು ಬ್ಲಾಗರನಾಗಲು ಕಾರಣವೇ ಮಾನ್ಯ URA ಯವರ ಹಾಗೂ ಅವರ ಮೇಲಿನ ವಾಕ್ ದಾಳಿ.

ಬ್ಲಾಗ್ ಲೋಕದಲ್ಲಿ ನಮಗೆ ಮನಸ್ಸಿಗೆ ಬಂದದ್ದನ್ನು ಬರೆದು ಪ್ರಕಟಿಸುವ ಮುಕ್ತ ಅವಕಾಶ ಮಾತ್ರವಲ್ಲ, ಇತರರ ಬ್ಲಾಗುಗಳ ಮೇಲೂ ಕಾಮೆಂಟಿಸುವ ಅವಕಾಶವಿದೆ - ಯಾವ ತರಹದ ಕತ್ತರಿ ಪ್ರಯೋಗದ ಭಯವಿಲ್ಲದೆ.

ಈ ರೀತಿ ಮುಕ್ತ ಸಂವಾದಗಳು ನಡೆಯುವುದರಿಂದ ನಮ್ಮ ತರ್ಕಶಕ್ತಿ, ಪ್ರತಿಭಟನಾಶಕ್ತಿಗಳು ಹರಿತವಾಗುತ್ತವೆ ಎಂದು ನನ್ನ ನಂಬಿಕೆ.

ಪ್ರತಿವಾದಿಗಳನ್ನು ಮನಒಲಿಸಿ ಗೆಲ್ಲುವುದು ಬಹಳ ಕಷ್ಟಸಾಧ್ಯ.

ಹಾಗೆಂದು ಅವರನ್ನು ತೀರ ಮೂದಲಿಸಿ ಅವರ ವಾದಗಳನ್ನು ಅತಿಯಾಗಿ ಖಂಡನೆ ಮಾಡಿ ಅವರ ಬಾಯಿಯನ್ನೇ ಸದಾಕಾಲಕ್ಕೂ ಬಂದ್ ಮಾಡುವುದೂ ಅಪೇಕ್ಶಣೀಯವಲ್ಲವೆಂದು ನನ್ನ ಅನಿಸಿಕೆ.

ಉದಾಹರಣೆಗೆ: ಶ್ರೀ DS ನಾಗಭೂಷಣರು ತಮ್ಮ ಸುದೀರ್ಘವಾದ ಲೇಖನಗಳನ್ನು ಪ್ರಕಟಿಸುವುದನ್ನೇ ನಿಲ್ಲಿಸಿದ್ದಾರೆ.

ಅದೇ ರೀತಿ ಮಾನ್ಯ ಜೋಸೆಫ್ ರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರ ವಾದ ಸರಿ ಇರಲಿ ತಪ್ಪಿರಲಿ, ಅವರ ಶೈಲಿ, ಕನ್ನಡಭಾಷೆಯ ಮೇಲಿನ ಅವರ ಪ್ರಭುತ್ವ, ವಿಷಯ ಮಂಡನೆ, ಇತ್ಯಾದಿಗಳು ಪ್ರಶಂಸಾರ್ಹ.

ಇವರೆಲ್ಲರೂ ಚರ್ಚೆಗೆ ವಿಷಯಗಳನ್ನು ಒದಗಿಸಿದ್ಚರಿಂದಲೇ ಅಲ್ಲವೇ ನಮ್ಮ ತಲೆಗೆ ಕೆಲಸ ಸಿಕ್ಕಿದ್ದು!

ದಾಸಶ್ರೇಶ್ಟರು ಹಾಡಿದ ಹಾಗೆ ನಿಂದಕರಿರಬೇಕು. ಕವಿವರ್ಯರು (ಬೇಂದ್ರೆ ?) ಹೇಳಿದ ಹಾಗೆ ಹಂದಿಗಳಿದ್ದರೆ ಊರು ಕೇರಿಗಳು ಶುದ್ದವಾಗಿರುತ್ತವೆ.

ನಾಡಿಗರು ಯಾರು?

ರಶೀದ್ ತಮ್ಮ ಲೇಖನದಲ್ಲಿ ಐದು ವರ್ಷಗಳ ಹಿಂದೆ ಸುಮತೀಂದ್ರ ನಾಡಿಗರ ಜೊತೆ ಸಂಭಾಷಣೆ ನಡೆಸಿದುದರ ನಿಮಿಷಗಳೆಂದು [:http://mysorepost.wordpress.com/2007/07/18/naadigara-jothe|ಹೀಗೆ ಬರೆದಿದ್ದಾರೆ]:

ರಶೀದ್: ‘ನಾಡಿಗ ಅಂತ ಹೆಸರು ಹೇಗೆ ಬಂತು’ ಅಂತ ಕೇಳಿದೆ.

ಸುಮತೀಂದ್ರ ನಾಡಿಗ್: ‘ನಾವು ಮೂಲದಲ್ಲಿ ತೆಲುಗರು ಹಾಗಾಗಿ ಈ ನಾಡಿಗರು ನಮ್ಮನ್ನು ನಾಡಿಗರು ಅಂತ ಕರೆದರು.ತೆಲುಗಿನಿಂದ ಬಂದ ಎಲ್ಲರನ್ನೂ ಕನ್ನಡಿಗರು ನಾಡಿಗರು ಎಂದು ಕರೆದರು.ಬ್ರಾಹ್ಮಣ ಸಾಬ ಶೂದ್ರ ಎಲ್ಲರಲ್ಲೂ ನಾಡಿಗರಿದ್ದಾರೆ’ ಎಂದರು.

(ರಶೀದ್ ರವರ ಬ್ಲಾಗಿನಿಂದ)

ಇದು ನಿಜವೋ ಸುಳ್ಳೋ ಎಂಬ ವಿಷಯ ಖಾತರಿಪಡಿಸಿಕೊಳ್ಳಲು ಅತಿಶೀಘ್ರವಾಗಿ ನನ್ನನ್ನು ಹಲವರು ಸಂಪರ್ಕಿಸಿದ್ದುದು ಗಾಬರಿಯೂ, ಅಚ್ಚರಿಯೂ ತಂದಿತು. ಆ ಲೇಖನದಲ್ಲಿ "ನಾಡಿಗರು" ಹೆಸರಿನ ಮೂಲವಲ್ಲದೆ ತಲೆ ಕೆರೆದುಕೊಳ್ಳುವ, ತಲೆ ಕೊರೆಯುವ ಹಲವು ವಿಷಯಗಳಿವೆ, ಸರ್ಕ್ಯಾಸಮ್ ಇದೆ. ಅವುಗಳ ಕಡೆಯೂ ಓದುಗರ ಗಮನ ಹೋಗುವುದೆಂದು wish ಮಾಡಬಹುದಷ್ಟೆ.

ಮೀರಾ ಮಾಧವ ರಾಘವ ಚಿತ್ರದ ಹಾಡುಗಳು

ಟಿ. ಎನ್. ಸೀತಾರಾಂ ನಿರ್ದೇಶನದ ಬಹು ನಿರೀಕ್ಷಿತ ಮೀರಾ ಮಾಧವ ರಾಘವ ಚಿತ್ರದ ಹಾಡುಗಳು ಹಂಸಲೇಖರವರ ಸಾರಥ್ಯದಲ್ಲಿ ಸೊಗಸಾಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಎಲ್ಲವನ್ನೂ ಕನ್ನಡಿಗರೇ ಹಾಡಿರುವುದು ವಿಶೇಷ.

ಎಲ್ಲಿರುವೆ???

ಎಲ್ಲಿರುವೆ?

ಬಹು ದಿನಗಳ ಆಸೆ, ಬರೆಯಲು ಮತ್ತೊಂದು ಕವಿತೆ
ಎಷ್ಟು ಪ್ರಯತ್ನಿಸಿದರೂ ಆಗದು - ನನ್ನಲ್ಲಿ ಶಬ್ದಗಳಾ ಕೊರತೆ?

ಹಿಡಿದೆ ಪೆನ್ನು-ಪೇಪರನ್ನು ಬರೆದೇ ತೀರುತ್ತೇನೆಂದು
ತಿಣುಕಿದೆ ಸಾಲೊಂದ ಬರೆಯಲು - ಕವಿತೆ ಮುಗಿಯುವುದೆಂದು?

ಎಷ್ಟು ಹುಡುಕಿದರೂ ಸಿಗದು ಪದಗಳೊಂದು ನೆಟ್ಟಗೆ
ಎಲ್ಲಿ ಹೋಯಿತೆನ್ನ ಸ್ಫೂರ್ತಿ? ಮನವಾಗಿದೆ ಕೊಟ್ಟಿಗೆ