ಮುಕ್ತ ಸಂವಾದಗಳ ಅವಶ್ಯಕತೆ

ಮುಕ್ತ ಸಂವಾದಗಳ ಅವಶ್ಯಕತೆ

Comments

ಬರಹ

ಇತ್ತೀಚಿನ ಕೆಲವು ತಿಂಗಳುಗಳಲ್ಲಿ SLB/URA ಮತ್ತು ಬಂಜಗೆರೆ/ತುಂಬಿದಕೆರೆ ವಿಷಯ ಬಿಸಿಬಿಸಿ ಚರ್ಚೆಯಾಗುತ್ತಿರುವುದು ತುಂಬಾ ಸಂತೋಷದ ಸಂಗತಿ.

ನಿಜವಾಗಿಯೂ ನಾನು ಬ್ಲಾಗರನಾಗಲು ಕಾರಣವೇ ಮಾನ್ಯ URA ಯವರ ಹಾಗೂ ಅವರ ಮೇಲಿನ ವಾಕ್ ದಾಳಿ.

ಬ್ಲಾಗ್ ಲೋಕದಲ್ಲಿ ನಮಗೆ ಮನಸ್ಸಿಗೆ ಬಂದದ್ದನ್ನು ಬರೆದು ಪ್ರಕಟಿಸುವ ಮುಕ್ತ ಅವಕಾಶ ಮಾತ್ರವಲ್ಲ, ಇತರರ ಬ್ಲಾಗುಗಳ ಮೇಲೂ ಕಾಮೆಂಟಿಸುವ ಅವಕಾಶವಿದೆ - ಯಾವ ತರಹದ ಕತ್ತರಿ ಪ್ರಯೋಗದ ಭಯವಿಲ್ಲದೆ.

ಈ ರೀತಿ ಮುಕ್ತ ಸಂವಾದಗಳು ನಡೆಯುವುದರಿಂದ ನಮ್ಮ ತರ್ಕಶಕ್ತಿ, ಪ್ರತಿಭಟನಾಶಕ್ತಿಗಳು ಹರಿತವಾಗುತ್ತವೆ ಎಂದು ನನ್ನ ನಂಬಿಕೆ.

ಪ್ರತಿವಾದಿಗಳನ್ನು ಮನಒಲಿಸಿ ಗೆಲ್ಲುವುದು ಬಹಳ ಕಷ್ಟಸಾಧ್ಯ.

ಹಾಗೆಂದು ಅವರನ್ನು ತೀರ ಮೂದಲಿಸಿ ಅವರ ವಾದಗಳನ್ನು ಅತಿಯಾಗಿ ಖಂಡನೆ ಮಾಡಿ ಅವರ ಬಾಯಿಯನ್ನೇ ಸದಾಕಾಲಕ್ಕೂ ಬಂದ್ ಮಾಡುವುದೂ ಅಪೇಕ್ಶಣೀಯವಲ್ಲವೆಂದು ನನ್ನ ಅನಿಸಿಕೆ.

ಉದಾಹರಣೆಗೆ: ಶ್ರೀ DS ನಾಗಭೂಷಣರು ತಮ್ಮ ಸುದೀರ್ಘವಾದ ಲೇಖನಗಳನ್ನು ಪ್ರಕಟಿಸುವುದನ್ನೇ ನಿಲ್ಲಿಸಿದ್ದಾರೆ.

ಅದೇ ರೀತಿ ಮಾನ್ಯ ಜೋಸೆಫ್ ರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರ ವಾದ ಸರಿ ಇರಲಿ ತಪ್ಪಿರಲಿ, ಅವರ ಶೈಲಿ, ಕನ್ನಡಭಾಷೆಯ ಮೇಲಿನ ಅವರ ಪ್ರಭುತ್ವ, ವಿಷಯ ಮಂಡನೆ, ಇತ್ಯಾದಿಗಳು ಪ್ರಶಂಸಾರ್ಹ.

ಇವರೆಲ್ಲರೂ ಚರ್ಚೆಗೆ ವಿಷಯಗಳನ್ನು ಒದಗಿಸಿದ್ಚರಿಂದಲೇ ಅಲ್ಲವೇ ನಮ್ಮ ತಲೆಗೆ ಕೆಲಸ ಸಿಕ್ಕಿದ್ದು!

ದಾಸಶ್ರೇಶ್ಟರು ಹಾಡಿದ ಹಾಗೆ ನಿಂದಕರಿರಬೇಕು. ಕವಿವರ್ಯರು (ಬೇಂದ್ರೆ ?) ಹೇಳಿದ ಹಾಗೆ ಹಂದಿಗಳಿದ್ದರೆ ಊರು ಕೇರಿಗಳು ಶುದ್ದವಾಗಿರುತ್ತವೆ.

ಆದ್ದರಿಂದ ಸಹ್ರದಯ ಬ್ಲಾಗ್ಗರ್ ಗಳೇ ನಿಮ್ಮಲ್ಲಿ ನನ್ನ ನಮ್ರವಾದ ವಿನಂತಿ: ಇನ್ನೊಬ್ಬರ ವಾದಗಳನ್ನು ಖಂಡನೆ ಮಾಡುವ ಆತುರದಲ್ಲಿ ಅವರ ಬಾಯಿಯನ್ನೇ ಕಟ್ಟಿಹಾಕದಿರೋಣ.

ಒಂದೇಕೈಯಲ್ಲಿ ಚಪ್ಪಾಳೆ ಸಾಧ್ಯವಿಲ್ಲ ಅಲ್ಲವೇ?

ಬಲವಾದ opposition party ಇದ್ದರೆ ಮಾತ್ರ democracy ಚೆನ್ನಾಗಿ ಕೆಲಸಮಾಡುತ್ತದೆ.

ಎಲ್ಲವೂ ಏಕಮುಖವಾಗಿ, ವಾದಮಂಡನೆ, ಖಂಡನೆಗಳು ನಿಂತುಹೋದರೆ ಸಂಪದದ ಸ್ವಾರಸ್ಯವೇ ಕಡಿಮೆಯಾಗಿಬಿಡುವ ಅಪಾಯವಿದೆ.

ಹಾಗಾಗದಂತೆ ಜಾಗರೂಕರಾಗಿರೋಣ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet