ಬೆಂಗಳೂರು ಅಂದ್ರೆ... ಏನೋ ಅಂದುಕೊಂಡಿದ್ದೆ
ಬೆಂಗಳೂರು ಅಂದ್ರೆ ಸುಂದರ ನಗರಿ ಎಂದುಕೊಂಡಿದ್ದೆ. ಆದ್ರೆ ಈಗ ಗೊತ್ತಾಗುತ್ತಿದೆ. ಬೆಂಗಳೂರು ಎಂಥಹ ಮಯಾ ನಗರಿಯೆಂದು. ಬೆಂಗಳೂರು ಹೇಗಿದೆ ಎಂದು ಯಾರಾದ್ರೂ ನನ್ನಲ್ಲಿ ಕೇಳಿದರೆ ನನ್ನ ಉತ್ತರ ಹೀಗಿರುತ್ತದೆ. ಬೆಂಗಳೂರು ಧೂಳು ಮಯ ಪ್ರದೇಶ, ಇಲ್ಲಿನ ಹವಾಗುಣ ದಿನೇ ದಿನೇ ಹದಗೆಡುತ್ತದೆ. ಮನೆಯಿಂದ ಹೊರಗೆ ಬಂದರೆ ಕಾಣುವುದು ಬಿಕ್ಷುಕರ ಹಾವಳಿ. ಕೈ ಕಾಲು ಎಲ್ಲಾ ಸರಿಯಾಗಿದ್ದರೂ ಅದೆಷ್ಟು ಮಂದಿ ಭಿಕ್ಷೆ ಬೇಡುತ್ತಿರುತ್ತಾರೆ! ಸ್ವಲ್ಪ ರಶ್ ಆದರೂ ಸರಿ ಇಲ್ಲಿನ ಜನ ಕದಿಯೋದಿಕ್ಕೆ ಏನು ಸಿಗುತ್ತೆ ಅಂತ ಕಾಯುತ್ತಿರುತ್ತಾರೆ. ನಮ್ಮ ವಸ್ತುಗಳ ಬಗ್ಗೆ ಸ್ವಲ್ಪ ಕೇರ್ ಲೆಸ್ ಆದರೂ ಕಶ್ಟನೇ...
ಇನ್ನು ಇಲ್ಲಿನ ಆಹಾರದ ಬಗ್ಗೆ ಹೇಳೋದಾದರೆ... ಹೇಗೆ ವರ್ಣಿಸುವುದು ಎಂಬುವುದೇ ತಿಳಿಯುತ್ತಿಲ್ಲ. ನಾವು ಕಾಲಿಗೆ ಹಾಗುವ ಚಪ್ಪಲಿಯಿಂದ ಹಿಡಿದು ಹೊಟ್ಟೆಗೆ ಹಾಕುವ ಆಹಾರವೆಲ್ಲವೂ ಬೀದಿಬದಿಯಲ್ಲಿಯೇ ಸಿಗುತ್ತದೆ. ಬೀದಿಯಲ್ಲಿ ಸಿಗುವ ಆಹಾರವನ್ನು ಶ್ರೀಮಂತರು ಬಡವರೆನ್ನದೇ ಎಲ್ಲರೂ ತಿನ್ನುತ್ತಾರೆ. ಅದರಲ್ಲೂ ರಸ್ತೆ ಪಕ್ಕದಲ್ಲಿ ಅದೂ ಧೂಳುಮಯ ಪ್ರದೇಶದಲ್ಲಿ ಪಾನಿ ಪುರಿ ತಿನ್ನುವ ಜನರನ್ನು ನೋಡುವಾಗ ಅಯ್ಯೋ ಅನ್ನಿಸುತ್ತೆ. ಧೂಳುಮಯ ಆಹಾರಕ್ಕಿಂತ ಹೋಟೆಲ್ ಗೆ ಹೋಗಿ ತಿನ್ನೋಣವೆಂದು ಹೋದರೆ ... ಆ ಮಸಾಲೆ ದೋಸೆಗೆ ಅದೆಷ್ಟು ಏಣ್ಣೆ ಹಾಕುತ್ತಾರೋ.. ದೋಸೆಯಿಂದ ಏಣ್ಣೆ ಇಳಿದು ಹೋಗುತ್ತದೆ. ದಿನವೊಂದಕ್ಕೆ ಒಂದು ಮಸಾಲೆ ದೋಸೆ ತಿಂದರೂ ಆರೋಗ್ಯ ಕೆಡುವುದು ಗ್ಯಾರಂಟಿ.
ಇಲ್ಲಿನ ನೀರಿನ ಬಗ್ಗೆ ಹೇಳಬೇಕೆ?... ನೀರು ಯಾವಾಗ ನೋಡಿದರೂ ಡಿ.ಡಿ.ಟಿ ಪೌಡರ್ ಸ್ಮೆಲ್ ಬರುತ್ತೆ. ಕುಡಿಯಲು ಹೋದರೆ ಕೇರಳದಲ್ಲಿ ಪ್ರಚಲಿತವಾಗಿರುವ ಎಂಡೋಸಲ್ಪಾನ್ ನೆನಪಾಗುತ್ತದೆ. ದಾಹವಾದರೆ ಬಿಸ್ಲರಿನೇ ಲೇಸು. ಬಿಸ್ಲರಿಗೆ ಕೆಮಿಕಲ್ ಹಾಕಿದ್ರೂ ವಾಸನೆ ಅಂತೂ ಇಲ್ಲ.
ಇನ್ನು ಮಹಾನಗರಿಯಲ್ಲಿ ವಾಹನಗಳ ಅರಚಾಟ, ಟ್ರಾಪಿಕ್ ಎಲ್ಲಾ ಮಾಮುಲಿ ಬಿಡಿ. ಅದರ ಬಗ್ಗೆ ಪ್ರಶ್ನೆನೇ ಇಲ್ಲ.
ಬೆಂಗಳೂರಿಗೆ ವಿವಿಧ ಪ್ರದೇಶಗಳಿಂದ ಜನರು ಬರುತ್ತಾರೆ . ವಾಪಸ್ಸು ಊರುಗಳಿಗೆ ಹೋಗುವಾಗ ಹತ್ತು ಹಲವು ಖಾಯಿಲೆಗಳನ್ನು ಕೊಂಡೊಯ್ಯುತ್ತಾರೆ. ನೋಡಲು ಸ್ಟಳಗಳಿವೆ ನಿಜ. ಆದರೆ ಏಕಾಂತ ಕಳೆಯಲು ಅಲ್ಲ.
ಮನಸ್ಸಿಗೆ ಬೇಸರವಾಯಿತಾದರೆ ಏಕಾಂತ ಕಳೆಯಲು ಸೂಕ್ತವಾದ ಯಾವ ಸ್ಥಳನೂ ಇಲ್ಲ. ಎಲ್ಲಿ ಹೋದರೂ ಜನಸಂದಣಿ ತಪ್ಪಿದ್ದಿಲ್ಲ. ... ಹೇಳ ಹೋದರೆ ತುಂಬಾ ಇದೆ. ಅದನ್ನ ಓದುತ್ತಾ ಹೋದರೆ ನಿಮಗೂ ಬೇಸರವಾದೀತು. ಅದಿಕ್ಕೆ ಇಲ್ಲೇ ಮುಗಿಸುತ್ತೇನೆ.
Comments
ಉ: ಬೆಂಗಳೂರು ಅಂದ್ರೆ... ಏನೋ ಅಂದುಕೊಂಡಿದ್ದೆ
ಉ: ಬೆಂಗಳೂರು ಅಂದ್ರೆ... ಏನೋ ಅಂದುಕೊಂಡಿದ್ದೆ