ಹೇಳೇ ನೀ ಒಮ್ಮೆ...

ಹೇಳೇ ನೀ ಒಮ್ಮೆ...

ಹೇಳೇ ನೀ ಒಮ್ಮೆ...

ಕಣ್ಣಿನಿಂದ ದೂರವಾದ್ರೂ

ನೆನಪಲ್ಲೆ ನಿಂತೇಕೆ ನಲ್ಲೆ?

ವಿರಹ ಧಗೆಯಲಿ

ನೆನಪ ಮಳೆಯಾಗಿ ಬರುವೆಯಲ್ಲೆ?

 

    ನಮ್ಮ ಮಾತು ಮೌನವಾದ್ರೂ

    ನೆನಪಲ್ಲೆ ಮಾತಾಡುವೆಯಲ್ಲೆ!

    ಹಸೆಮಣೆ ಏರದೆ,

    ಆಸೆಯ ಧಾರೆಯ ಸುರಿಸುವೆಯಲ್ಲೆ?

 

ಕರಿಮಣಿ ಮಾಲೀಕ ನಾನಾಗಲು

ನನ್ನ ಕರೆಯದೆ

ಕಣ್ಮರೆಯಾಗಿರುವೆಯಲ್ಲೆ?

 

    ನನ್ನನ್ನೇಕೆ ಕರಿಯಲೊಲ್ಲೆ

    ಹೇಳೇ ನೀ ಒಮ್ಮೆ...

    ನನ್ನ ಮನದನ್ನೆ...

                ---ಅಮರ್

Rating
No votes yet