ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕೋಮುಗಲಭೆಗಳಲ್ಲಿ ಸಾಯುವುದು ಮನುಷ್ಯರು

ವರ್ತಮಾನದ ಸೋಷಿಯೋಪೊಲಿಟಿಕಲ್ (ಸಮಾಜೋರಾಜಕೀಯ?) ಸಂದರ್ಭದ ಅತಿದೊಡ್ಡ ಸಮಸ್ಯೆ ಎಂದರೆ ನಮಗರಿವಿಲ್ಲದಂತೆಯೇ ನಾವು ಜಾತೀವಾದಿಗಳೋ, ಮತೀಯವಾದಿಗಳೋ, ಕೋಮುವಾದಿಗಳೋ ಆಗಿಬಿಡುವುದು. ಅಂದರೆ ನಿರ್ದಿಷ್ಟ ವಾದವೊಂದನ್ನು ಸಮರ್ಥಿಸಲು ಹೊರಡು ಅದರ ಕುರುಡು ಸಮರ್ಥಕರಾಗಿಬಿಡುವ ಇಲ್ಲವೇ ಯಾವುದೋ ಒಂದು ವಾದವನ್ನು ಟೀಕಿಸಲು ಹೊರಟು ಅದರ ಕುರುಡು ವಿಮರ್ಶಕರಾಗಿಬಿಡುವುದು. ಕರ್ನಾಟಕದಲ್ಲಿ ಕೋಮುವಾದಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಎಲ್ಲಾ ಚರ್ಚೆಗಳಲ್ಲಿಯೂ ಈ ಅತಿಯನ್ನು ಕಾಣಬಹುದು.

ಗೈಮ್ ಕನ್ನಡದಲ್ಲಿ ಲಭ್ಯ

gaim in Kannada

ಮುಕ್ತ ತಂತ್ರಾಂಶವಾದ - [:http://gaim.sourceforge.net/|ಗೈಮ್ multi protocol instant messaging client] ಈಗ [:http://dev.sampada.net/wiki/Gaim_Kannada_Translation|ಕನ್ನಡದಲ್ಲಿ ಲಭ್ಯ]. ಹಿಂದಿನ ವಾಕ್ಯದಲ್ಲಿ ಬರೆದ ಟೆಕ್ನಿಕಲ್ ಪದವನ್ನೋದಿ ಯಾರೂ ಮೂರ್ಛೆ ಹೋಗಿರಲಿಕ್ಕಿಲ್ಲ ಎಂದು ಭಾವಿಸಿ ಅದರರ್ಥ ವಿವರಿಸಲು ಪ್ರಯತ್ನಿಸುತ್ತೇನೆ:

ನಿಮ್ಮ ಕಂಪ್ಯೂಟರಿನಲ್ಲಿ ಯಾಹೂ ಮೆಸೆಂಜರ್ ಬಳಸೇ ಇರುತ್ತೀರ. ಇಲ್ಲದಿದ್ದರೆ ಗೂಗಲ್ ಟಾಲ್ಕ್ ಅಂತೂ ಬಳಸಿರುತ್ತೀರ. ಇವಕ್ಕೆ instant messaging ಎನ್ನುತ್ತಾರೆ. ಇಂತಹ ಹಲವು ಇನ್ಸ್ಟಂಟ್ ಮೆಸ್ಸೇಜಿಂಗ್ ಪ್ರೋಗ್ರಾಮುಗಳಾಗಿಬಿಟ್ಟರೆ ಪ್ರತಿಯೊಂದು ಪ್ರೋಟೋಕಾಲ್ ಗೂ (ಅಂದ್ರೆ ಯಾಹೂ, ಗೂಗಲ್, MSN, AOL, ICQ ಮುಂತಾದವಕ್ಕೆ) ನೀವು ತಲಾ ಒಂದೊಂದು ಪ್ರೋಗ್ರಾಮು install ಮಾಡಿಕೊಂಡು ಅವುಗಳೊಂದಿಗೆ ಗುದ್ದಾಡಬೇಕಾಗುತ್ತದೆ.
ನಿಮ್ಮ ಕೆಲವು ಸ್ನೇಹಿತರು ಯಾಹೂ ಬಳಸಿದರೆ ಮತ್ತು ಹಲವರು ಗೂಗಲ್ ಟಾಲ್ಕ್ ಬಳಸುತ್ತಿರುತ್ತಾರೆ.

ಗೈಮ್ ಈ ಪರಿಸ್ಥಿತಿಯನ್ನು ತಿಳಿಯಾಗಿಸುತ್ತದೆ. ಹೇಗೆ? ನಿಮಗೆ ಎಲ್ಲ ಪ್ರೋಟೋಕಾಲ್ ಗಳಿಗೂ ಒಂದೇ ಮೆಸ್ಸೆಂಜರನ್ನು ಒದಗಿಸಿ! ಉದಾಹರಣೆಗೆ, ಯಾಹೂ, ಎಮ್ ಎಸ್ ಎನ್, ಗೂಗಲ್ ಟಾಲ್ಕ್ ಎಲ್ಲಕ್ಕೂ ಒಂದೇ ಪ್ರೋಗ್ರಾಮು ಬಳಸಿ ನೀವು ನಿಮ್ಮ ಸ್ನೇಹಿತರೊಂದಿಗೆ ಚ್ಯಾಟ್ ಮಾಡಬಹುದು! "ನಿಜವೇ? ಹೀಗೂ ಇದೆಯೇ?" ಎಂದು ಹಲವರು ನನಗೆ ಕೇಳಿದ್ದುಂಟು. :-)
ಕಳೆದ ಹಲವು ವರ್ಷಗಳಿಂದ ನಾನು ಮತ್ತು ನನ್ನ ಕೆಲವು ಲಿನಕ್ಸ್ ತಿಳಿದ ಸ್ನೇಹಿತರು ಇದನ್ನೇ ಬಳಸುತ್ತಾ ಬಂದಿದ್ದೇವೆ. ನಮಗಿದು ದಿನನಿತ್ಯದ ಸಂಗತಿ - ಹಾಗಾಗಿ ಇದರ ಬಗ್ಗೆ ಹೇಳುವಾಗ excitement usually ಕಡಿಮೇನೆ :-)

ಅದೇನೆ ಇರಲಿ - ಗೈಮ್ ಲಿನಕ್ಸ್ ಮತ್ತು ವಿಂಡೋಸ್ ಎರಡರಲ್ಲೂ ಬಳಸಬಹುದಾದಂತ ತಂತ್ರಾಂಶ. ಉಪಯೋಗಿಸಿ ನೋಡಿ.

ಕನ್ನಡದಲ್ಲಿ ಗೈಮ್ ಕುರಿತು ಹೆಚ್ಚಿನ ಮಾಹಿತಿಗೆೆ ಕೆಳಗಿನ ಪುಟ ನೋಡಿ:
[:http://dev.sampada.net/wiki/Gaim_Kannada_Translation]

ಅನುವಾದಗಳ Credits - [:http://translate.sampada.net] ನಲ್ಲಿ ಅನುವಾದಗಳಲ್ಲಿ ತೊಡಗಿಕೊಂಡಿರುವ ಎಲ್ಲ ಉತ್ಸಾಹಿ ಕನ್ನಡಿಗರದ್ದು.

ಓದುಗರ ಗಮನಕ್ಕೆ: ಚಿತ್ರದಲ್ಲಿ ಸ್ನೇಹಿತರ ಪಟ್ಟಿಯಲ್ಲಿರುವ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಬ್ಲರ್ ಮಾಡಲಾಗಿದೆ. ಹಾಗೆಯೇ ಇರುತ್ತದೆ ಅಂದುಕೊಂಡುಬಿಡಬೇಡಿ ಮತ್ತೆ :P

ಎ.ಆರ್.ರೆಹಮಾನ್ ಕನ್ನಡಕ್ಕೆ

ಗೆಳೆಯರೆ ನಿಮಗೆ ಗೊತ್ತಿರಬಹುದು ದಕ್ಷಿಣ ಭಾರತದ ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಸಜನಿ ಎಂಬ ಕನ್ನಡ ಚಿತ್ರದ ಸಂಗೀತ ನಿರ್ದೇಶನದ ಭಾರವನ್ನು ಹೊತ್ತಿದ್ದಾರೆ.ಎಲ್ಲರ ಹಾಗೆ ನನಗೂ ಹರ್ಷ ಮತ್ತು ಹಾಡುಗಳನ್ನು ಕೇಳುವ ಕುತೂಹಲ ಎರಡೂ ಇತ್ತು.

ಮುಕ್ತ ತಂತ್ರಾಂಶ ಅನುವಾದ ಕುರಿತು.....ಬನ್ನಿ ಕೈ ಜೋಡಿಸಿ

ನಾನು ಲೀನಕ್ಸ್ ಕನ್ನಡೀಕರಣಕ್ಕೆ ಕೈ ಹಾಕಿದ್ದು ಸೆಪ್ಟೆಂಬರ್ ಮೊದಲ ವಾರದಲ್ಲಿ . ಆಗ ಸುಮಾರು ೧೬೦೦೦ ಶಬ್ದ/ವಾಕ್ಯಗಳಿದ್ದವು ಸುಮಾರು ೫೦೦೦ ದಷ್ಟು ಅನುವಾದ ಪೂರ್ತಿಗೊಂಡು ಅನುಮೋದಿಸಲ್ಪಟ್ಟಿದ್ದವು.

ಕವನ-ಕಾವ್ಯ ಬರೆಯುವುದನ್ನು ಕಲಿಯಿರಿ.

ಹೀಗೂ ಒಂದು ಪುಸ್ತಕವೇ ? ಮೊನ್ನೆ ಒಂದು ಪುಸ್ತಕದ ಅಂಗಡಿಗೆ ಹೋದಾಗ Teach yourself writing poetry ಎಂಬ ಪುಸ್ತಕವೊಂದನ್ನು ಕೊಂಡು ತಂದೆ. ನನಗೇನೂ ಕಾವ್ಯ-ಕವಿತೆ ಬರೆಯುವುದು ಇಲ್ಲವಾದರೂ ಪುಸ್ತಕದಲ್ಲಿ ಏನಿರಬಹುದು ಎಂಬ ಕುತೂಹಲದಲ್ಲಿ ತಂದೆ. ( ಕಾದಂಬರಿ ಬರೆವ ಬಗ್ಗೆಯೂ ಒಂದು ಪುಸ್ತಕವಿದೆ) .

ಟೆಕ್ಕಿಗಳೇ ಸಹಾಯ ಮಾಡಿ! ಟೈಮಿಲ್ಲ.

ನನ್ ಹತ್ರ ಇವಾಗೊಂದಿಷ್ಟು ದುಡ್ಡಿದೆ, ಒಂದು ಒಳ್ಳೇ ಎಸ್ಸೆಲ್ಲಾರ್ ಕೆಮೆರಾ ಖರೀದಿ ಮಾಡುವಷ್ಟು. ಒಂದೆರಡು ಡಿಜಿಟಲ್ ಕೆಮೆರಾಗಳೂ ಸೇರಿದಂತೆ ನನ್ನ ಬಳಿ ಹಲವಾರು ಕೆಮೆರಾಗಳೇನೋ ಇವೆ. ಆದ್ರೆ ಡಿಜಿಟಲ್ ಎಸ್ಸೆಲ್ಲಾರ್ ಕೆಮೆರಾ ಖರೀದಿಸಲು ಇನ್ನೊಂದಿಷ್ಟು ತಿಳುವಳಿಕೆ ಬೇಕಾಗಿದೆ. ಅರವಿಂದರೊಮ್ಮೆ ಈ ಬಗ್ಗೆ ಬರೆದಿದ್ದರು. ಅವರಿಂದ ಇನ್ನೊಂದಿಷ್ಟು ಮಾಹಿತಿ ದೊರಕೀತೇನೋ. ನನ್ ಕೈಲಿರೋ ದುಡ್ದು ಖಾಲಿಯಾಗುವುದರೊಳಗೆ ಒಳ್ಳೇ ಕೆಮೆರಾ ಖರೀದಿಸಲು ಮಾಹಿತಿ ಕೊಡಿ.

ಮಂಕುತಿಮ್ಮನ ಕಗ್ಗ

ಹೆಸರು ಹೆಸರೆಂಬುದೇಂ? ಕಸುರು ಬೀಸುವ ಗಾಳಿ |
ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ?||
ಶಿಶುವಾಗು ನೀಂ ಮನದಿ, ಹಸುವಾಗು,ಸಸಿಯಾಗು|
ಕಸಬೊರಕೆಯಾಗಿಳೆಗೆ - ಮಂಕುತಿಮ್ಮ ||