ಆರೋಗ್ಯ ಬೇಕೇ ? ಔಷಧ ಕಹಿಯಾಗಿದೆ !

ಆರೋಗ್ಯ ಬೇಕೇ ? ಔಷಧ ಕಹಿಯಾಗಿದೆ !

ಆರೋಗ್ಯ ಬೇಕೆ ? ಔಷಧಿ ಕಹಿಯಾಗಿದೆ !
ಭೈರಪ್ಪನವರ ಆವರಣ ಸಾಕಷ್ಟು ಬಿಸಿ ಎಬ್ಬಿಸಿದೆ, ಸೆಕ್ಯುಲರಿಸ್ಟರು (ಹಿಂದೂ ಧರ್ಮದಲ್ಲಿದ್ದುಕೊಂಡು ಈ ಧರ್ಮ ಕೊಡಮಾಡಿರುವ ಎಲ್ಲಾ ಸ್ವಾತಂತ್ರವನ್ನೂ ಆನಂದಿಸುತ್ತಾ ಮುಸಲ್ಮಾನರ ಬೀಸು ಕತ್ತಿಗೆ ಸಿಗದಂತೆ ಮುನ್ನೆಚ್ಚರಿಕೆವಹಿಸಿರುವ ಹೇಡಿ, ದೇಶದ್ರೋಹಿ, ನಯವಂಚಕರ ಗುಂಪು) ಮುಸಲ್ಮಾನರಾದರೋ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾದ ಕಥೆಯ ನೆವದಲ್ಲಿ ದುಂಡಾವರ್ತಿ ತನಕ್ಕಿಳಿದವರು ಆವರಣದ ವಿರುದ್ಧ ಏನೂ ಪ್ರತಿಕ್ರಯಿಸದೆ ಕಾಲುಚಾಚಿಕೊಂಡು ಕೂತಿದ್ದಾರೆ. ಈ ಸೆಕ್ಯುಲರಿಸ್ಟ್ ಎಂಬ ಬಾಡಿಗೆ ಹಂತಕರಿರುವಾಗ ತಾವೇಕೆ ವೃಥಾ ಜಗಳಕ್ಕಿಳಿಯಬೇಕೆಂಬ ವಿವೇಕ ವಿರಬಹುದೋ?
ವೈದಿಕ-ಬೌದ್ಧ-ಶೈವ-ಶಾಕ್ತ-ವೈಷ್ಣವ-ಜೈನ ಇತ್ಯಾದಿ ಶಾಖೆಗಳವರು ತಮ್ಮೊಳಗೆ ಕಾದಾಡಿ ಪರಸ್ಪರರ ಮಂದಿರಗಳನ್ನು ನಾಶ ಮಾಡಿರುವುದು ಕೊಲೆಗಡುಕತನದಲ್ಲಿ ತೊಡಗಿರುವು ಇತಿಹಾಸದಲ್ಲಿ ಸಾಬೀತಾಗಿದೆ ಎಂದೂ ಬೊಬ್ಬೆ ಇಡುತ್ತಿದ್ದಾರೆ, ಇರಬಹುದು, ಆದರೆ ಆವರಣದಲ್ಲಿ ಬಿಚ್ಚಿಡಲಾಗಿರುವ ಸಂಗತಿಗಳಿಗೂ ಇದಕ್ಕೂ ಸಂಬಂಧವಿಲ್ಲ.
ಟಿಪ್ಪುಸುಲ್ತಾನ ಕನ್ನಡ ದ್ರೋಹಿ ಎಂಬ ವಿಚಾರ ಚರ್ಚಿತವಾದಾಗ, ಐತಿಹಾಸಿಕ ಹಾಗೂ ಇನ್ನಿತರ ಲಭ್ಯವಿರುವ ಸಾಂದರ್ಭಿಕ ಸಾಕ್ಷ್ಯಗಳ ಆಧಾರದದಮೆಲೆ ಟಿಪ್ಪುವಿನ ಕನ್ನಡ , ಹಿಂದೂ-ಭಾರತ ವಿರೋಧಿ ಕ್ರಮಗಳನ್ನು ಚರ್ಚಿಸದೆ, ನೀವೆಂಥಾ-ನಾವೆಂಥಾ ಕನ್ನಡಿಗರು, ಸಾಹಿತಿ, ಕನ್ನಡ ಚಳುವಳಿಗಾರರ ಮಕ್ಕಳು ಆಂಗ್ಲ ಶಾಲೆಗೆ ಹೋಗುತ್ತಿಲ್ಲವೇ, ಆಂಗ್ಲರ ವೇಶ-ಭೂಷಣ ಧರಿಸುವವರೆಂಥಾ ಕನ್ನಡಿಗರು ಇತ್ಯಾದಿ ಸಲ್ಲದ ವಿಚಾರಗಳೇ ಪ್ರಾಮುಖ್ಯತೆ ಪಡೆದು, ಎಂದೋ ನಡೆದುಹೋದ ಘಟನೆಗಳನ್ನು ಈಗ ಚರ್ಚಿಸುವ ಅಗತ್ಯವೇನು ಎಂದೆಲ್ಲಾ ಆಕ್ಷೇಪಿಸಿ ತಿಪ್ಪೆ ಸಾರಿಸಲಾಯಿತು. ಅಲ್ಲದೆ ಟಿಪ್ಪುವಿನ ಕನ್ನಡ ಹಾಗೂ ಹಿಂದೂ ವಿರೋಧಿ ನೀತಿಗಳನ್ನು ಅಲ್ಲವೆನಿಸುವಂತಹ ಕೆಲವು ಕ್ಷುಲ್ಲಕ ಉದಾಹರಣೆಗಳನ್ನೂ ಸೆಕ್ಯುಲಿಸ್ಟರು ಮುಂದುಮಾಡುತ್ತಿದ್ದಾರೆ. ಈ ಅಪವಾದಗಳು, (ಎಕ್ಸೆಪ್ಶನ್) ಮೂಲವಿಚಾರವನ್ನು ಸಮರ್ಥಿಸುತ್ತವೆ ಎಂಬ ಸಾಮಾನ್ಯ ಜ್ಞಾನವೂ ಈ ಸೆಕ್ಯುಲರಿಸ್ಟರಿಗಿಲ್ಲದಿರುವುದು ನಗೆಪಾಟಲಿನ ಸಂಗತಿ.
ಆವರಣದಬಗ್ಗೆ ಕಕರು-ಮಕರು ವಿಮರ್ಶೆಗಳು ಬರುತ್ತಿವೆ ಎಂದು ಭೈರಪ್ಪನವರು ಹೇಳಿರುವುದು ಸಮರ್ಪಕವಾಗಿದೆ. ಸೆಕ್ಯುಲರಿಸ್ಟರು ಇಲ್ಲೂ ಸಹ ಎಂದಿನಂತೆ ವಿಷಯಾಂತರ ಮಾಡಿ ಹಾದಿ ತಪ್ಪಿದ್ದಾರೆ ತಪ್ಪಿಸುತ್ತಿದ್ದಾರೆ. ಭಾರತದೊಳಗೆ ಹುಟ್ಟಿದ ಅನೇಕ ಧರ್ಮಗಳು ತಮ್ಮೊಳಗೆ ಹೊಡೆದಾಡಿಕೊಂಡಿರುವುದಕ್ಕೂ, ಇಸ್ಲಾಮಿಕ್ ದಾಳಿಕೋರರಿಗೂ ಅನೇಕ ವ್ಯತ್ಯಾಸಗಳಿವೆ.
೧. ಭಾರದಲ್ಲಿ ಹುಟ್ಟಿರುವ ಯಾವ ಧರ್ಮದಲ್ಲೂ, ತಮ್ಮ ಧರ್ಮವನ್ನು ಒಪ್ಪದವರನ್ನು ಹೊಡಿ-ಬಡಿ-ಕೊಲ್ಲು-ಕಡಿ, ಮಂದಿರಗಳನ್ನು ನಾಶಮಾಡು, ಹೆಂಗಸರನ್ನು ಮಕ್ಕಳನ್ನು ಅಪಹರಿಸು, ಅತ್ಯಾಚಾರಮಾಡು, ಗುಲಾಮರನ್ನಾಗಿಸಿಕೋ ಎಂದು ಹೇಳಿಲ್ಲ. ಯಾವುದೇ ಧರ್ಮಸ್ಥಾಪಕನಾಗಲೀ ಅಥವಾ ಅದನ್ನ್ನು ಪ್ರಚಾರಮಾಡುವ ಧಾರ್ಮಿಕ ನಾಯಕನಾಗಲೀ ಹಿಂಸೆಯನ್ನು ಪ್ರಚೋದಿಸಿಲ್ಲ. ಆದರೆ ಇವೆಲ್ಲಾ ನಡೆದಿರುವುದು ಕೆಳ ಮಟ್ಟದ ಅಜ್ಞಾನೀ-ಅತ್ಯುತ್ಸಾಹಿ-ಆಶೆಬುರುಕ ಹಿಂಬಾಲಕರಿಂದ. ಮಹಾತ್ಮಾ ಗಾಂಧಿಯವರು ಹುಟ್ಟು ಹಾಕಿದ ಅಹಿಂಸಾತ್ಮಕ-ಪ್ರತಿಭಟನೆ, ಸತ್ಯಾಗ್ರಹ, ಕೈಮೀರಿ ಹಿಂಸಾಚಾರಕ್ಕೆ ತಿರುಗಿದಂತೆ. ಆದರೆ ಇಸ್ಲಾಂ ಈಥರದ್ದಲ್ಲ, ಅದರ ಸಂಸ್ಥಾಪಕ ಹಾಗೂ ಅದರ ಪರಿಪಾಲಕರು ಹಿಂಸಾಮಾರ್ಗವನ್ನು, ಬೇಟೆಗಾರತನವನ್ನು ತಮ್ಮ ಮತ ಗ್ರಂಥಗಳಲ್ಲಿಯೇ ಹುದುಗಿಸಿದ್ದಾರೆ, ಆಡಿ ತೋರಿಸಿದ್ದಾರೆ, ಮಾಡಿಯೂ ತೋರಿಸಿದ್ದಾರೆ ಮಾದರಿಯಾಗಿ ನಿಂತಿದ್ದಾರೆ. ಈ ಹಿಂಸಾ ಮಾರ್ಗದಿಂದ ತಮ್ಮವರು ವಿಚಲಿತರಾಗದಂತೆ ಆಮಿಷಗಳನ್ನೊಡ್ಡಿದ್ದಾರೆ, ಶಿಕ್ಷೆಯಭಯವನ್ನೂ ಬಿತ್ತಿದ್ದಾರೆ.
೨. ಎಂದೋ ನಡೆದ ಘಟನೆಗಳನ್ನು ಮತ್ತೆ ಈಗ ಕೆದಕುವುದು ಸರಿಯೇ ? ಈ ಪ್ರಶ್ನೆಯನ್ನು ಹಿಂದೂಗಳು ಕೇಳುವಂತಿಲ್ಲ, ಪ್ರತಿನಿತ್ಯ ಒಬ್ಬನಲ್ಲ ಒಬ್ಬ ವಿಚಾರವಾದಿ ಹಿಂದೂ ಸಮಾಜದಲ್ಲಿದ್ದ ಅನಿಷ್ಟಗಳ ಕುರಿತಾಗಿ ಭಾಷಣ ಬಿಗಿಯುತ್ತಲೇ ಇರುತ್ತಾನೆ, ಪುಸ್ತಕಗಳನ್ನು , ಲೇಖನಗಳನ್ನು ಪ್ರಕಟಿಸುತ್ತಲೇ ಇರುತ್ತಾರೆ. ನದೆದುಹೋದ ಕಹಿ ಘಟನೆಗಳ ಪುನರ್ ಪ್ರದರ್ಷನಗಳನ್ನೇರ್ಪಡಿಸುತ್ತಲೇ ಇರುತ್ತಾರೆ. ಹಿಂದೂ ಸಮಾಜದಲ್ಲಿರುವ ಅನಿಷ್ಟಗಳಾದ ಜಾತಿ-ವೈಷಮ್ಯಗಳು, ಅಸ್ಪೃಷ್ಯತೆ, ಬಾಲ್ಯವಿವಾಹ, ಸತೀ-ಪದ್ಧತಿ, ಸ್ತ್ರೀಯರ ಹಕ್ಕಿನ ವಂಚನೆ ಇವು ಹಿಂದೂ ‘ಧರ್ಮ-ಗ್ರಂಥಗಳಲಿ’ ಹೇಳಿಲ್ಲ ಕೆಲವು ವಿವಾದಾಸ್ಪದ ಸಂಗತಿಗಳು ‘ಸ್ಮೃತಿ’ಗಳಲ್ಲಿ, (ಸ್ಮೃತಿಗಳ ಸಂಖ್ಯೆಯೂ ಸಾಕಷ್ಟಿದೆ) ದಾಖಲಾಗಿವೆ, ಈ ಸ್ಮೃತಿಗಳು ಸರ್ವಕಾಲಕ್ಕು ಸರ್ವ ದೇಶಕ್ಕೂ ಮಾನ್ಯವಾದವೇನಲ್ಲ, ಅಲ್ಲದೆ ಇವುಗಳನ್ನು ಬದಲಾಯಿಸುವ, ಬಹಿಷ್ಕರಿಸುವ, ತಿರಸ್ಕರಿಸುವ, ಪರಿಷ್ಕರಿಸುವ ಸ್ವಾಂತಂತ್ರ ಹಿಂದೂಗಳಿಗಿದೆ ಈ ಸ್ವಾತಂತ್ರವನ್ನು ಹಿಂದೂಗಳು ಉಪಯೋಗಿಸಿಕೊಳ್ಳುತ್ತಲೂ ಇದ್ದಾರೆ, ಸುಧಾರಣೆ ನಿಧಾನವಾಗಿದ್ದರೂ ಕುಂಟುತ್ತಲಾದರೂ ಸಾಗಿದೆ. ಆದರೆ ಇಸ್ಲಾಂ ನಲ್ಲಿ ಅದರ ಬೊಧನೆಗಳ ಸಂಕಲನಗಳಲ್ಲಿರುವ ಒಂದೇ ಒಂದು ವಾಕ್ಯವನ್ನು ಬದಲಿಸುವುದಿರಲಿ ಬದಲಾಗುತ್ತಿರುವ ಸಮಾಜಿಕ ಸಂದರ್ಭಗಳ ಹಿನ್ನೆಲೆಯಲ್ಲಿ ಪ್ರಶ್ಣಿಸುವ, ಪುನರ್ ವ್ಯಾಖ್ಯಾನಿಸುವ ಹಕ್ಕಾದರೂ ಇದೆಯೆ.

೩. ಹಿಂದೂವಿಗೆ ಮತಾಂತರಗೊಳ್ಳುವ, ಧರ್ಮಾಂತರಗೊಳ್ಳುವ ಹಕ್ಕಿದೆ. ಇದು ನಮ್ಮ ಸ್ವಾತಂತ್ರಾನಂತರದ ಸಂವಿಧಾನ ದತ್ತಹಕ್ಕಲ್ಲ. ‘ಭಾರತೀಯತೆಯ’ ಜನ್ಮಸಿದ್ಧ ಹಕ್ಕು. ತನ್ನ ರುಚಿಗೊಪ್ಪುವ, ತನ್ನ ಸಾಮರ್ಥ್ಯಕ್ಕೆ ತಕ್ಕಂತಹ ಉಪಾಸನಾ ಮಾರ್ಗವನ್ನು ತಾನು ಅನುಸರಿಸಬಹುದು, ತನ್ನದೇ ಅದ ಹೊಸಮಾರ್ಗಒಂದನ್ನು ಪ್ರವರ್ತಿಸಲೂ ಬಹುದು,ಆದರೆ ಇಸ್ಲಾಂ ಬಿಟ್ಟು ಹೋದವರಿಗೆ ಕನಿಷ್ಠಶಿಕ್ಷೆ ಮರಣ ದಂಡನೆ. ಆದರೂ ಅನೇಕರು ಇಸ್ಲಾಂ ತೊರೆದು ದೇಶಾಂತರ ಹೋಗಿ ಜೀವ ಉಳಿಸಿಕೊಂಡಿದ್ದಾರೆ ಅಥವಾ ಗುಪ್ತವಾಗಿದ್ದಾರೆ. ಆಹ್ಮದೀಯ ಪಂಥದಗತಿ ? ಸೂಫೀಗಳು ತಿನ್ನುತ್ತಿರುವ ನೋವು ಬಲ್ಲಿರಾ ?

೪. ಸಮಾಜವಾದ, ಸಮಾನತೆ ಇಸ್ಲಾಂ ನ ಗರಿಮೆ ಎನ್ನುವುದಾದರೆ ಆ ಸಮಾಜದಲ್ಲಿ ಗುಲಾಮೀ ಪದ್ಧತಿ ಯಾಕಿತ್ತು ? ಶಿಯಾ-ಸುನ್ನಿ ಕಲಹ ? ಇರಾನ್-ಇರಾಕ್-ಕುವೈತ್ ಸಂಘರ್ಷಗಳೇಕೆ ನಡೆಯುತ್ತಿವೆ ? ಆಫ್ರಿಕಾದ ಇಸ್ಲಾಮಿಕ್ ದೇಶಗಳಲ್ಲಿನ ಹಸಿವಿನ ಸಾವು ಅರಬ್ಬರ ಕಣ್ಣು ತೆರೆಸಿಲ್ಲ ಯಾಕೆ ? ಇಡೀ ವಿಶ್ವದಲ್ಲಿ ಪ್ರಜಾಪ್ರಭುತ್ವದ ಗಾಳಿಬೀಸುತ್ತಿದ್ದರೆ ಮುಸ್ಲಿಂ ರಾಷ್ಟ್ರಗಳಲ್ಲಿನ್ನೂ ರಾಜವಂಶಗಳೋ, ಸರ್ವಾಧಿಕಾರಗಳೋ ಯಾಕಿವೆ ? ಭಾರತೀಯ ಮುಸಲ್ಮಾನರೊಂದಿಗೆ ಅರಬ್ಬರು ವೈವಾಹಿಕ ಸಂಬಂಧ ಬೆಳೆಸಿಯಾರೇ ? ( ಮುದಿ ‘ಅರಬ್ ಶೆಖ್’ ಎಳೆವಯಸ್ಸಿನ ಹೆಣ್ಣುಗಳೊಂದಿಗೆ ಅಗುವ ಹೈದರಾಬಾದ್ ಮದುವೆಗಳಲ್ಲ)
೫.ಮುಸಲ್ಮಾರ ದುರಾಕ್ರಮಣದ ಕಥೆ ಕೇವಲ ಮಧ್ಯ-ಕಾಲೀನ ಭಾರತದ್ದು ಮಾತ್ರವಲ್ಲ, ಈಚೀಚೆಗಿನ ನಮ್ಮ ಕಣ್ಣ ಮುಂದೆ ನಡೆದ ಜಮ್ಮುವಿನಲ್ಲಿ ರಘುನಾಥ ದೇವಾಲಯದ ಮೇಲಿನ ಆಕ್ರಮಣ, ಗುಜರಾತಿನಲ್ಲಿ ಸ್ವಾಮಿನಾರಾಯಣ ದೇವಾಲಯದಲ್ಲಿನ ಚಕಮಕಿ, ನಮ್ಮಲ್ಲೇ ವಾಡಿಯಲ್ಲಿ ಚರ್ಚ್ನಮೇಲೆ ಬಾಂಬ್ ಸ್ಫೋಟ, ಸಾಲದಕ್ಕೆ ಕಾಶ್ಮೀರದ ಹಜರತ್ ಬಾಲ್ ಮಸೀದಿ ಪ್ರಕರಣ, ಮಾಲೇಗಾವ್, ಹೈದರಾಬಾದ್ ಮಸೀದಿಗಳಲ್ಲಿನ ಸ್ಪೋಟ, ಕಾಶಿಯ ಸಂಕಟ ಮೋಚನ ಮಂದಿರದ ಮೇಲಿನ ದಾಳಿ, ಬಾಂಬೇ-ಬಾಂಬು, ಬೆಂಗಳೂರಿನ ಭಾರತೀಯ ವಿಜ್ಞಾನಮಂದಿರದಲ್ಲಿ ನಡೆದ ದಾಳಿ, ಗೊದ್ರಾ ಘಟನೆ, ಇವುಗಳನ್ನು ಗಮನಿಸಿದರೆ ಮುಸಲ್ಮಾನರು ತಮ್ಮ ‘ಇಸ್ಲಾಂ ತತ್ವ’ಗಳನ್ನು, ತಮ್ಮ ನಾಯಕನ ಆಚಾರ ವಿಚಾರಗಳನ್ನು ಜತನದಿಂದ ಕಾಯ್ದುಕೊಂಡು ಬಂದಿದ್ದಾರೆ ಎಂದು ಗೊತ್ತಾಗುತ್ತದೆ ಹಾಗೂ ಇಸ್ಲಾಂ ಎಂಥಾ ಬಲಿಷ್ಠ ಎಂದೂ ಪ್ರಮಾಣಿಸುತ್ತಿದ್ದಾರೆ ಎಂಬುದು ಕೂಡ.
೬. ಪಾಕೀಸ್ತಾನದ ಕ್ರಿಕೆಟಿಗ ಇಮ್ರಾನ್ ಖಾನ್, ‘ಇಸ್ಲಾಮಿಕ್ ಉಗ್ರರು’ ಎಂಬ ಪದ ಬಳಕೆಯಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಾ, ಶ್ರೀಲಂಕಾದಲ್ಲಿ ಕಾದಾಡುತ್ತಿರುವ ಎಲ್.ಟಿ.ಟಿ.ಇ. ಯವರನ್ನು ಹಿಂದೂ ಉಗ್ರರೆಂದೇಕೆ ಕರೆಯುವುದಿಲ್ಲ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಯಾರಾದರೂ ಏನಾದರು ಉತ್ತರ ಕೊಟ್ಟಿದ್ದಾರೋ ಗೊತ್ತಿಲ್ಲ. ಎಲ್.ಟಿ.ಟಿ.ಇ. ಗುಂಪಿನವರು ಯಾವುದೆ ಹಿಂದೂ ಮತ ಗ್ರಂಥಗಳಿಂದ ಪ್ರೇರಿತರಾಗಿಲ್ಲ. ಅವರು ಇತರ ಧರ್ಮದವರ ಗುಡಿ-ಮಂದಿರಗಳ ಮೇಲೆ ದಾಳಿ ಮಾಡಿಲ್ಲ. ತಮ್ಮ ವಿರೋಧಿಗಳ ಹೆಂಗಸರ ಮೆಲೆ ಅತ್ಯಾಚಾರ ಮಾಡಿಲ್ಲ. ಅಲ್ಲದೆ ಅವರ ಹೋರಾಟದಲ್ಲಿ ಹಿಂದೂಗಳಲ್ಲದೇ ಇತರ ಮತಗಳವರೂ ಇದ್ದಾರೆ. ಅವರ ಹೋರಾಟದಲ್ಲಿ ಸಾಯುವವರಿಗೆ ಯಾರೂ ೭೨ ಅಕ್ಷತ ಯೋನಿ ಕನ್ಯೆಯರ ಆಶೆ ತೋರಿಸಿಲ್ಲ. ರುಚಿಕರ ಮದ್ಯ ದೊರೆಯುವ ಸ್ವರ್ಗವನ್ನು ಕೊಡಮಾಡಿಲ್ಲ.
೭. ಕನ್ನಡದಲ್ಲಿ ಬರೆಯುತ್ತಿರುವ ಮುಸ್ಲಿಂ ಸಾಹಿತಿಯೊಬ್ಬರು, ಕುವೆಂಪುಅವರು ಒಂದುಕಡೆ ‘ಆವರು ಸಾಬರಾದರೂ ಒಳ್ಳೆಯವರು’ ಎಂದು ಬರೆದಿದ್ದಾರೆ, ಏನಿದರ ಅರ್ಥ ಎಂದು ಆಕ್ಷೇಪಿಸಿದ್ದಾರೆ. ಸಾಬರೆಲ್ಲಾ ಕೆಟ್ಟವರೇ ಇರುತ್ತಾರೆಯೇನು ಎಂಬ ಧ್ವನಿ. ಇಲ್ಲಿ ಮುಖ್ಯವಾಗಿ ಅರ್ಥಮಾಡಿಕೊಳ್ಳಬೇಕಾದುದು ಒಂದಾನೊಂದು ಪದ-ನುಡಿಗಟ್ಟು ಹುಟ್ಟಲು ಅದಕ್ಕೆ ಸರಿಹೊಂದುವ, ತಾಳೆಯಾಗುವ ಸಂದರ್ಭವಿರುವುದೇ ಆಗಿರುತ್ತದೆ. ಅರ್ಥಾತ್ ನಮ್ಮ ಸಮಾಜದಲ್ಲಿ ಮುಸಲ್ಮಾನರು ನಡೆದುಕೊಂಡಿರುವ, ನಡೆದುಕೊಳ್ಳುತ್ತಿರುವ ರೀತಿ ನೀತಿ ಈ ಮಾತು ಹುಟ್ಟಲು ಕಾರಣವಾಗಿದೆ ಎಂಬ ಸತ್ಯವನ್ನು ಈ ಬುದ್ಧಿಜೀವಿ ಲೇಖಕನಿಗೆ ಮನವರಿಕೆಯಾಗಿಲ್ಲ ! ಆದರೆ ಈ ಮಾತು ಇಂದಿಗೂ ಚಾಲ್ತಿಯಲ್ಲಿದೆ, ಎಂದರೆ ಮುಸಲ್ಮಾನರು ಬದಲಾಗಿಲ್ಲ, ಅಗುವುದೂ ಇಲ್ಲ ! ಈ ಮುಸ್ಲಿಂ ಲೇಖಕ ಅದೇ ಉಸಿರಿನಲ್ಲಿ ಕುವೆಂಪು ಅವರನ್ನೂ ಮತೀಯವಾದಿ ಲೇಖಕ ಎಂದೂ ನಾಮಕರಣ ಮಾಡಿದ್ದಾನೆ. ಇದರ ಅರ್ಥ ಸ್ಪಷ್ಟ ಹಿಂದೂ ಸಂಸ್ಕೃತಿಯಲ್ಲಿ ಅಭಿಮಾನ ಪ್ರೀತಿ ಹೊಂದಿದ ಎಲ್ಲರೂ ಮತೀಯವಾದಿಗಳು. ಸೆಕ್ಯುಲರ್ ಪದವಿಗೆ ಅರ್ಹತೆ ಎಂದರೆ ಹಿಂದೂ ವಿರೋಧಿ ನೀತಿ. ಹಂಪಿಯಲ್ಲಿದ್ದ ಈ ಲೇಖಕ ಬಹುಷ: ‘ನರಸಿಂಹ ವಿಗ್ರಹ ಧ್ವಂಸಿ ಕುಲ’ ದ ಹೆಮ್ಮೆಯ ವಾರಸುದಾರನೆಂಬುದರಲ್ಲಿ ಸಂಶಯವಿಲ್ಲ.
೮. ನಮ್ಮ ಪೂರ್ವಿಕರು ಮಾಡಿದ ತಪ್ಪುಗಳ ತಪಶೀಲು ನಮ್ಮಲ್ಲಿಲ್ಲದಿದ್ದರೆ ನಾವು ತಿದ್ದಿಕೊಂಡು ನಡೆಯುವ ಸೌಲಭ್ಯದಿಂದ ವಂಚಿತರಾಗುತ್ತೇವೆ. ತಮ್ಮ ಚರಿತ್ರೆಯಲ್ಲಿ ಯಾವ ತಪ್ಪೂ ನಡೆದೇ ಇಲ್ಲದಿರುವುದರಿಂದ ತಾವು ತಿದ್ದಿಕೊಳ್ಳಬೇಕಾದ್ದೇನೂ ಇಲ್ಲ ಎಂಬ ಹುಂಬತನದಲ್ಲಿ ಮುಸಲ್ಮಾನರು ಮೆರೆಯುತ್ತಿದ್ದಾರೆ, ಅಪವಾದಗಳೂ ಇಲ್ಲದಿಲ್ಲ, ಒಳ್ಳೆಯ ಮುಸಲ್ಮಾನರೂ ಇದ್ದಾರೆ ಅವರ ಸಂಖ್ಯೆ, ಅವರ ಸಮಾಜದಲ್ಲಿ ಅವರ ಪ್ರಭಾವ ಎನೂ ಇಲ್ಲದಷ್ಟು, ಕ್ಷೀಣ, ಹೀಗಾಗಿ ಇತಿಹಾಸದ ಅವಲೋಕನೆ, ತಿರುಚದ ಇತಿಹಾಸದ ಸತ್ಯ ದರ್ಶನ ಬಹಳ ಮುಖ್ಯವಾದದ್ದು, ಕಾದಂಬರಿಯ ರೂಪ ಹೊದ್ದ, ಇತಿಹಾಸ ಅದರ ಸತ್ಯ-ದರ್ಶನ ಮಾಡಿಸಿದ ಭೈರಪ್ಪನವರಿಗೆ ಭಾರತೀಯರೆಲ್ಲರೂ ಆಭಾರಿಯಾಗಿರಬೇಕು. ಇದು ಮುಸಲ್ಮಾನರ ವಿರುದ್ಧ ಎಬ್ಬಿಸಿರುವ ಚಿತಾವಣೆ ಎನ್ನುವುದು ಸರಿಯಲ್ಲ. ಈ ಕೃತಿಯಿಂದ ಆತ್ಮ ನಿರೀಕ್ಷಣೆ ಮುಸಲ್ಮಾನರಲ್ಲಿ ಸಾಧ್ಯವಾದರೆ ಭೈರಪ್ಪನವರು ಗೆದ್ದಂತೆ. ಆದರೆ ಮುಸಲ್ಮಾನರಲ್ಲಿ ಹೀಗೊಂದು ಚಿಂತನೆ ಹುಟ್ಟಲು ಸೆಕ್ಯುಲರ್ ವಾದಿಗಳು ಬಿಟ್ಟಾರೆ ?

ನನ್ನ ಮುಸಲ್ಮಾನ ಮಿತ್ರರೊಬ್ಬರು ಒಮ್ಮೆ ‘ಕಾಫಿರ್’ ಎಂಬ ಶಬ್ದ ಹಾಗೂ ಆ ಶಬ್ದದಿಂದ ಮುಸಲ್ಮಾನರಿಗೆ ಮುಸ್ಲಿಮೇತರರಲ್ಲಿ ಉಂಟಾಗಿರುವ ಅಸಹನೆಯ ಕುರಿತು ಮಾತನಾಡುತ್ತಾ ‘ಧರ್ಮಾಚರಣೆಯ ವಿಶಯದಲ್ಲಿ ಬಲವಂತ ಸಲ್ಲದು’ ಎಂಬ ಮಾತನ್ನು ಪ್ರವಾದಿ ಮೊಹಮ್ಮದರೇ ಹೇಳಿದ್ದಾರೆ ಅದನ್ನು ನಮ್ಮ ಜನ ಅರ್ಥಮಾಡಿಕೊಂಡಿಲ್ಲ ಎಂದು ಅಲವತ್ತುಕೊಂಡರು. ನನಗೆ ಇದರ ಹಿಂದು ಮುಂದಿನದೇನೂ ಗೊತ್ತಿರಲಿಲ್ಲವಾದ್ದರಿಂದ ಸುಮ್ಮನಾದೆ. ನಂತರ ಇಸ್ಲಾಂ ಕುರಿತ ಅನೇಕ ಲೇಖನಗಳನ್ನು ಓದಿದೆ. ಹೌದು ಮೊಹಮ್ಮದರು ಹೀಗೆ ಹೇಳಿರುವುದು ಉಂಟು, ಆದರೆ ಯಾವಾಗ ಈ ಮಾತನ್ನು ಹೇಳಿದ್ದಾರೆ ಹಾಗೂ ಈ ಮಾತನ್ನು ಹೇಳಿದ ನಂತರ ಇದಕ್ಕೆ ವಿರುದ್ಧವಾದ ಯಾವ ಯಾವ ಮಾತುಗಳನ್ನು ಹೇಳಿದ್ದಾರೆ ಎಂದು ಪರಿಶೀಲಿಸಿದಾಗ ಇಸ್ಲಾಂ ಏಕೆ ಅಸಹಿಷ್ಣುವಾಗಿದೆ ಏಕೆ ಬೇಟೆಗಾರನಾಗಿದೆ ಎಂಬುದೂ ತಿಳಿಯಿತು.
ತಾವು ಬಲಹೀನರಾಗಿದ್ದು, ಮಕ್ಕಾದಿಂದ ಮದೀನಾಗೆ ಓಡಿ ಹೋಗಬೇಕಾಗಿ ಬಂದಾಗ ತಮ್ಮ ಉಳಿವಿಗಾಗಿ ‘ತಂತ್ರಗಾರಿಕೆ’ ಯಾಗಿ ಈ ಮಾತನ್ನು ಹೇಳಿದ್ದಾರೆ, ಆದರೆ ನಂತರ ತಾವು ಸಾಕಷ್ಟು ಬಲ ವೃದ್ಧಿಮಾಡಿಕೊಂಡು ಮರಳಿದಾಗ ಕಾಫಿರರನ್ನು ಏನುಮಾಡಬೇಕೆಂದು ಹೇಳಿದ್ದಾರಲ್ಲದೆ ಮಾಡಿಯೂ ತೋರಿಸಿದ್ದಾರೆ. ನಮ್ಮ ಮುಸಲ್ಮಾನ ಬಂಧುಗಳ- ಪೂರ್ವೀಕರು ಇದನ್ನು ಚಾಚೂ ತಪ್ಪದೆ ಆಚರಿಸಿದರು. ನಮ್ಮ ಮುಸಲ್ಮಾನ ಬಂಧುಗಳಿಗೆ- ಈ ಬಗ್ಗೆ ಈಗಲೂ ಹೆಮ್ಮೆ ಇದೆ ಅಲ್ಲದೆ ಸೂಕ್ತ ಅವಕಾಶಕ್ಕಾಗಿ ಕಾಯುತ್ತಲೂ ಇದ್ದಾರೆ. ಹೆಚ್ಚಿಗೆ ಹಿಂದಕ್ಕೆ ಹೋಗಬೇಕಾದ ಅಗತ್ಯವಿಲ್ಲ, ಹೈದರಾಬಾದ್ ನಿಜಾಮನ ಆಡಳಿತದಲ್ಲಿ ರಜಾಕಾರರ ಹಾವಳಿಯ ಬಗ್ಗೆ ಆ ಭಾಗದಲ್ಲಿ ಈಗಲೂ ಬದುಕುಳಿದಿರುವ ವಯೋ ವೃದ್ಧರು ಸಾಕ್ಷಿ ಹೇಳಬಲ್ಲರು, ತಮಿಳುನಾಡು ಹಾಗೂ ಕರ್ನಾಟಕಕ್ಕೆ ಅಧಿಕ ಸಂಖ್ಯೆಯಲ್ಲಿ ವಲಸೆ ಬಂದು ನೆಲಸಿರುವ ತೆಲುಗು ಭಾಷಿಕರ ಕುಟುಂಬಗಳು ಈ ‘ಕಿರಾತಕರ’ ಶುದ್ಧ ಇಸ್ಲಾಮೀ ನಡವಳಿಕೆಗೆ ಸಾಕ್ಷಿ. ಇತಿಹಾಸವನ್ನು ತಪ್ಪು ತಪ್ಪಾಗಿ ತಿಳಿದುಕೊಂಡರೆ, ನಮ್ಮ ಸಂಸ್ಕೃತಿಗೆ ನಾವೇ ದ್ರೋಹಮಾಡಿದಂತೆ. ಸೆಕ್ಯೂಲರಿಸ್ಟರು ಅರಿತೂ-ಅರಿಯದೆಯೂ ಮಾಡುತ್ತಿರುವ ದೇಶದ್ರೋಹ ಇನ್ನಾದರೂ ನಿಲ್ಲಲಿ. ಮುಸಲ್ಮಾನರ ಶುದ್ಧ ಇಸ್ಲಾಮೀ ನಡವಳಿಕೆ ಎಂದರೆ ಅದು ಅವರು ಮನುಕುಲಕ್ಕೆ ಇಡುತ್ತಿರುವ ಕೊಳ್ಳಿ..

Rating
No votes yet

Comments