ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬಾಯಪಾಸ ಹತ್ತಿರ

ನಮಗೆ ಹಿತ್ತಲ ಗಿಡ ಮದ್ದು ಹೌದೋ ಅಲ್ಲವೋ ಗೊತ್ತಿಲ್ಲ, ಆದರೆ ನಮ್ಮ ದೇಶದ ಹಿತ್ತಲಿನಲ್ಲಿ ಬೆಳೆಯುವ ಗಿಡ ಬೇರೆ ದೇಶಕ್ಕೆ ಹೋಗಿ ಮದ್ದು ಮಾಡಿಸಿಕೊಂಡು, ರೂಪಾಂತರವಾಗಿ ಮತ್ತೆ ನಮ್ಮದೇ ದೇಶಕ್ಕೆ "ಇಂಪೋರ್ಟೆಡ್" ಆಗಿ ಬರುವಬಗೆ ಇಲ್ಲಿದೆ ನೋಡಿ. ಸಂತಸದ ವಿಷಯವೆಂದರೆ ಈ ಗಿಡದಿಂದಲಾದರೂ ಲಂಡನ್ನಿನ ಕಂಪನಿಯೊಂದರ ಸೈಟಿನಲ್ಲಿ ಕನ್ನಡವನ್ನು ನೋಡುವಂತೆ ಆಯಿತಲ್ಲ ಎನ್ನುವುದು!

ವಾರ್ತಾ ಚೇಷ್ಟೆಗಳು

ವಿಷಯವೊಂದನ್ನು ಇನ್ನೊಬ್ಬರೆದುರು ಪ್ರಸ್ತುತಪಡಿಸುವಾಗ ವಿಷಯದ ಗಾಂಭೀರ್ಯವನ್ನು ಕಾಯ್ದುಕೊಳ್ಳುವುದು ಹಾಗು ವಿಷಯದ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನು ಹೊಂದಿರುವುದು ಅತ್ಯಂತ ಅವಶ್ಯಕವಲ್ಲವೇ. ವಾರ್ತೆಗಳನ್ನು ಬಿತ್ತರಿಸುವಾಗ ಪ್ರಕಟ ಮಾಡುವಾಗ ಇದಕ್ಕೆ ಹೆಚ್ಚು ಒತ್ತು ಕೊಡಬೇಕು.

೨೦೦೬ ಕ್ಕೆ ವಿದಾಯ, ೨೦೦೭ ಕ್ಕೆ ಸ್ವಾಗತ ! ! ಮತ್ತೊಂದು ನವ ವರ್ಷ ಬರ್ತಿದೆ , ಶುಭ ತರ್ತಿದೆ !

ಈ ದಿನ ಉರುಳಿತು ಕತ್ತಲಾಯಿತು. ನವೋದಯ ಆಯಿತು. ಹೊಸ ಗಾಳಿ, ಹೊಸ ನೋಟ, ಹೊಸ ಭಾವನೆ, ಎಲ್ಲಾ ಹೊಸದೆಂದು ಹೇಳುವ ಮಾತಿನಲ್ಲಿ ಏನೋ ಸಂಭ್ರಮ !

ಸದ್ಧಾಂ ಹುಸೇನಿಗೆ ಗಲ್ಲಾಯ್ತಂತೆ

ಜನರನ್ನು ಸಾಯಿಸುವುದೆಂದರೆ ನಡೆದುಕೊಂಡು(ದು) ಹೋದಷ್ಟೇ ಸುಲಭ ಎಂದು ತಿಳಿದಿದ್ದ ಸದ್ದಾಂ ಹುಸೇನಿಯನ್ನು ಕೋರ್ಟ್ ಮಾರ್ಷಲ್ಲುಗಳ ಬಳಿಕ ನೇತಾಡಿಸಿ ಕೊಲ್ಲಬೇಕೆಂದು ತೀರ್ಮಾನವಾಗಿತ್ತಲ್ಲ..

ಹೊಸವರ್ಷದ ಶುಭಾಷಯ - ಹೀಗೂ ಹೇಳಬಹುದೇ?

ಸಂಪದ ಬಳಗದ ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು.

ಹೊಸ ವರ್ಷದ ಶುಭಾಷಯ ತಿಳಿಸೋದಕ್ಕೆ ಅಂತ ಒಂದು ಕವನ ಬರೆಯೋಣ ಅಂತ ಕುಳಿತೆ. ಇದ್ದಕ್ಕಿದಂತೆ ಒಂದು ಹೊಸ ಯೋಚನೆ ಬಂತು. "ಒಬ್ಬನೇ ಎಲ್ಲರಿಗೂ ಶುಭಾಷಯ ಹೇಳುವ ಬದಲು, ಎಲ್ಲರೂ ಎಲ್ಲರಿಗೂ ಶುಭಾಷಯ ಹೇಳುವಂತಾದರೆ ಎಷ್ಟು ಚೆನ್ನ ಅಂತ". ನನ್ನ ಯೋಚನೆ/ಕಲ್ಪನೆ ಎಷ್ಟರ ಮಟ್ಟಿಗೆ ಸಿಂಧುವೆಂದು ನಿಜಕ್ಕೂ ನನಗೆ ಗೊತ್ತಿಲ್ಲ.

ಚಾಣಕ್ಯ ನೀತಿ

ಓಡುತ್ತಿರುವ ರಥದಿಂದ ಐದು ಕೈಯಳತೆ ದೂರದಲ್ಲಿದ್ದರೆ ಕ್ಷೇಮ. ಹಾಗೆಯೇ ಯೋಧನಿಂದ ಹತ್ತು ಕೈಯಳತೆ ಮತ್ತು ಮದಿಸಿದ ಆನೆಯಿಂದ ಸಾವಿರ ಕೈಯಳತೆ ದೂರದಲ್ಲಿದ್ದರೆ ಕ್ಷೇಮ. ಆದರೆ ದುಷ್ಟ ವ್ಯಕ್ತಿಯಿಂದ ಮಾತ್ರ ಎಷ್ಟು ದೂರವಿದ್ದರೂ ಸಾಲದು. ದುಷ್ಟನ ಸಹವಾಸ ಮಾಡದಿರುವುದೇ ಕ್ಷೇಮ!

ಚಾಣಕ್ಯ ನೀತಿ

ಹೇಗೆ (ಬೆಳಕು ನೀಡದ) ಸಾವಿರಾರು ತಾರೆಗಳಿದ್ದರೂ ರಾತ್ರಿ ಬೆಳಕನ್ನೀಯಲು ಚಂದ್ರನೊಬ್ಬನೇ ಸಾಕೋ,
(ಹಾಗೆ) ಚಾರಿತ್ರ್ಯವಿಲ್ಲದ ನೂರಾರು ಮಕ್ಕಳಿಗಿಂತ ಉತ್ತಮ ಗುಣವುಳ್ಳ ಒಬ್ಬ ಮಗ ಸಾಕು.