ಸುದ್ದಿ ಪ್ರಸಾರದಲ್ಲಿ ಎಡವುವ ಪತ್ರಿಕೆ...
ಸ್ಪರ್ದೆಯ ಭರದಲ್ಲಿ ಇಂದಿನ ಮಾದ್ಯಮಗಳು ಗುಣಮಟ್ಟವನ್ನು ಮರೆತಿವೆ. ಪತ್ರಿಕೆಯಲ್ಲಿ ಸುದ್ದಿ ಪ್ರಸಾರವಾಗಬೇಕಾದರೆ ಜಾಹೀರಾತನ್ನು ನೀಡಬೇಕಾಗುತ್ತದೆ. ಹಣಕ್ಕಾಗಿ ಸುದ್ದಿಗಳನ್ನು ಮಾರುತ್ತಿದ್ದಾರೆ. ಮಾದ್ಯಮಗಳು ವ್ಯವಹಾರಕ್ಕೆ ಮಾರು ಹೋಗಿ ಗಾಸಿಪ್ ಹಾಗೂ ಅನಾವಶ್ಯಕ ಸುದ್ದಿಗಳನ್ನೇ ಹೆಚ್ವು ಪ್ರಚಾರ ಮಾಡುತ್ತಿವೆ. ವಿಜಯ ಕರ್ನಾಟಕ ಪತ್ರಿಕೆ ಪ್ರಾರಂಭದಲ್ಲಿ ಎಲ್ಲರ ಮನ ಗೆದ್ದಿತ್ತು. ಅದರಲ್ಲೂ ಪ್ರತ್ಯೇಕವಾಗಿ ಯುವ ಜನರ ಮೆಚ್ವಿನ ಪತ್ರಿಕೆಯಾಗಿತ್ತು. ಆದರೆ ಇತ್ತೀಜೆಗೆ ತುಂಬಾ ಕಳಪೆ ಮಟ್ಟದದಲ್ಲಿ ಪ್ರಕಟವಾಗುತ್ತಿದೆ. ಸುದ್ದಿಗೆ ಯಾವುದೇ ವಿಷಯಗಳಿಲ್ಲದಂತಿದೆ. ಈ ಪತ್ರಿಕೆ ಮತ್ತೆ ಮೊದಲಿನ ತರಹ ಆಗಲು ಸಾದ್ಯವೇ? ಪತ್ರಿಕೆ ಇಂದಲ್ಲ ನಾಳೆ ಮುಳುಗುತ್ತದೆ ಎನ್ನುವ ಭಾವನೆ ವಿಜಯ ಕರ್ನಾಟಕ ಓದುಗರಿಗಾಗುತ್ತದೆ. ವಿಜಯ ಕರ್ನಾಟಕದಂತಹ ಪತ್ರಿಕೆ ಕರ್ನಾಟಕದ ಜನತೆಗೆ ಬೇಕಿದೆ. ಆದರೆ ಅದು ಈಗಿರುವ ಹಾಗೆ ಅಲ್ಲ. ಪತ್ರಿಕೆ ಮೊದಲಿನಂತಾಗಬೇಕು. ಸುದ್ದಿ ವಿಚಾರದಲ್ಲಿ ತಾರತಮ್ಯ ಬೇಕಿಲ್ಲ. ಯಾವುದೋ ಒಂದು ರಾಜಕೀಯ ವರ್ಗಕ್ಕೆ, ಒಂದು ಸಿನಿಮಾಕ್ಕೆ... ಮಾತ್ರವೇ ಪತ್ರಿಕಾ ವಿಷಯಗಳು ಮೀಸಲಾಗಿರದೇ ಅದು ಎಲ್ಲರದೂ ಆಗಬೇಕಿದೆ.