ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!

ಅನಂತಮೂರ್ತಿಯವರಿಗೆ ಬೇಸರವಾಗಿದೆ. ಕೋಪವೂ ಬಂದಂತಿದೆ. ತಾವಿನ್ನು ಸಾರ್ವಜನಿಕವಾಗಿ ಸಾಹಿತ್ಯ ಚರ್ಚೆ ಮಾಡುವುದಿಲ್ಲವೆಂದು ಅವರು ಘೋಷಿಸಿದ್ದಾರೆ. ದಯವಿಟ್ಟು ಹಾಗೆ ಮಾಡಬೇಡಿ ಎಂದು ಅವರ ಶಿಷ್ಯರೂ ಅಭಿಮಾನಿಗಳೂ ಬೇಡಿಕೊಳ್ಳುತ್ತಿದ್ದಾರೆ. ಈ ರಾದ್ಧಾಂತಕ್ಕೆಲ್ಲ ಕಾರಣಗಳು: ಇತ್ತೀಚೆಗೆ ಬೆಂಗಳೂರಿನಲ್ಲಿ ಭೈರಪ್ಪನವರ 'ಆವರಣ' ಕೃತಿ ಕುರಿತು ಎನ್.ಎಸ್.ಶಂಕರ್ ಬರೆದಿರುವ 'ಆವರಣದ ಅನಾವರಣ' ಎಂಬ ಪುಸ್ತಕದ ಬಿಡುಗಡೆ ಸಂದರ್ಭದಲ್ಲಿ ಅವರಾಡಿದ ಮಾತುಗಳು ಪತ್ರಿಕೆಗಳಲ್ಲಿ ವರದಿಯಾಗಿರುವ ರೀತಿ ಹಾಗೂ ಇದನ್ನು ಆಧರಿಸಿ ಒಂದೆರಡು ಪತ್ರಿಕೆಗಳು ಇವರ ವ್ಯಕ್ತಿತ್ವದ ಮೇಲೆ ವ್ಯವಸ್ಥಿತವಾಗಿ ನಡೆಸಿರುವ ದಾಳಿ.
ಎಲ್ಲವನ್ನೂ 'ಬಿಸಿ ಬಿಸಿ' ಸುದ್ದಿಯಾಗಿ ಪರಿವರ್ತಿಸಿ ಓದುಗರಿಗೆ ಉಣಬಡಿಸುವ ಚಾಳಿ ಬೆಳೆಸಿಕೊಂಡಿರುವ ಇತ್ತೀಚಿನ ವ್ಯಾಪಾರಿ ಪತ್ರಿಕೋದ್ಯಮಕ್ಕೆ ರಾಜಕಾರಣ, ಸಾಹಿತ್ಯ, ಸಂಸ್ಕೃತಿ ಎಲ್ಲ ಒಂದೇ. ಹಾಗಾಗಿಯೇ, ಸಾಹಿತ್ಯ-ಸಂಸ್ಕೃತಿಗಳಿಗೆ ಸಂಬಂಧಪಟ್ಟ ಸಮಾರಂಭಗಳಿಗೆ ವಿಶೇಷ ಒಲವು ಅಥವಾ ತರಬೇತಿಯುಳ್ಳ ವರದಿಗಾರರನ್ನು ಕಳಿಸುವ ಪರಿಪಾಠ ಎಂದೋ ನಿಂತು ಹೋಗಿದೆ. ಇಂತಹ ಪರಿಸ್ಥಿಯಲ್ಲಿ ವಿಚಾರ ಸಂಕಿರಣಗಳಲ್ಲಿ ಮಾತನಾಡುವವರು, ಸೂಕ್ಷ ಸಾಹಿತ್ಯ ಚಿಂತನೆ ಅಥವಾ ಚರ್ಚೆಗೆ ಚಾಲನೆ ನೀಡುವ ಮುನ್ನ ಎರಡು ಬಾರಿ ಯೋಚಿಸಿ ಮಾತುಗಳನ್ನಾರಂಭಿಸುವಂತಾಗಿದೆ. ಏಕೆಂದರೆ, ಮಾರನೆಯ ಬೆಳಿಗ್ಗೆ ಯಾವದೋ ಒಂದು ಪತ್ರಿಕೆ ತನ್ನ ಮಾರುಕಟ್ಟೆ ದೃಷ್ಟಿಯಿಂದಲೋ ಅಥವಾ ತಾನು ನಂಬಿರುವ ರಾಜಕೀಯ ಸಿದ್ಧಾಂತದ ದೃಷ್ಟಿಯಿಂದಲೋ, ಪ್ರಚೋದಕ ಶೀರ್ಷಿಕೆ ಕೊಟ್ಟು ಅವನ ಮಾತುಗಳನ್ನು ತಿರುಚಿಯೋ, ಸಂದರ್ಭ ಕಿತ್ತು ಉಲ್ಲೇಖಿಸಿಯೋ ವಿವಾದ ಸೃಷ್ಟಿಸುವ; ಅಥವಾ ಬೇಕೆಂದೇ ಆ ಮಾತಿನ ಮಹತ್ವವನ್ನೇ ಹಾಳು ಮಾಡುವ ರೀತಿಯಲ್ಲಿ ವರದಿ ಮಾಡುವ ಸಾಧ್ಯತೆಗಳು ಇಂದು ಹೆಚ್ಚಿವೆ. ಹೀಗಾಗಿ ಸಮಾರಂಭದ ವರದಿಗೆ ಯಾವ ಪತ್ರಿಕೆಯವರು ಮತ್ತು ಯಾವ ವರದಿಗಾರರು ಬಂದಿದ್ದಾರೆ ಎಂದು ಪತ್ತೆ ಹಚ್ಚಿ ಮಾತನಾಡಬೇಕಾದ ದುಃಸ್ಥಿತಿ ನಮ್ಮ ಸಾಂಸ್ಕೃತಿಕ ಲೋಕಕ್ಕೆ ಒದಗಿ ಬಂದಿದೆ! ಇದು ಬಹುತೇಕ ಸಂದರ್ಭಗಳಲ್ಲಿ ಅಸಾಧ್ಯವಾದುದರಿಂದ, ಪತ್ರಕರ್ತರಿದ್ದ ಸಮಾರಂಭಗಳಲ್ಲಿ ಸೂಕ್ಷ್ಮ ವಿಚಾರಗಳನ್ನು ಮಾತನಾಡದಿರುವುದು, ಚರ್ಚಿಸದಿರುವುದು ಒಳ್ಳೆಯದೆಂದು ಕೆಲವರು ಭಾವಿಸತೊಡಗಿದ್ದರೆ ಆಶ್ಚರ್ಯವಿಲ್ಲ.

ಸ"ಪದ": ಗುಣಾಣು

ಗುಣಾಣು ಎನ್ನುವ ಶಬ್ದ ಕೇಳಿದ್ದೀರಾ? ಇದರ ಜನಪ್ರಿಯ ಪರ್ಯಾಯ ಪದ ಯಾವುದು? ವೈಜ್ಞಾನಿಕ ಪದ ಎನ್ನುವುದು ಸುಳಿವು. ಗೊತ್ತಾಗದಿದ್ದರೆ ಈ ಲೇಖನ ಓದಿ.
http://vijaykarnatakaepaper.com/pdf/2007/06/18/20070618a_008101002.jpg

ನೊಣಗಳಿಗೆ ದೀರ್ಘಾಯುಸ್ಸು -ಮನುಷ್ಯರಿಗೂ?

ನೊಣಗಳ ಆಯುಸ್ಸು ಹೆಚ್ಚಿಸಲು ವಿಜ್ಞಾನಿಗಳಿಗೆ ಸಾಧ್ಯವಾಗಿದೆ? ಇದನ್ನು ಸಾಧಿಸಿದ್ದು ಹೇಗೆ? ಇದರಿಂದ ಏನು ಲಾಭ?
ಲೇಖನ ಓದಿ-ನೇಟ್‍ನೋಟ-ಸುಧೀಂದ್ರ ಹಾಲ್ದೊಡ್ಡೇರಿ
http://vijaykarnatakaepaper.com/pdf/2007/06/18/20070618a_008101002.jpg

ಪಲ್ಲಕ್ಕಿ ಚಿತ್ರದಲ್ಲಿ ಇರುವ ಉತ್ತಮ ಅಂಶಗಳು..

ಬಹು ನಿರೀಕ್ಷಿತ ಪ್ರೇಮ್ ಚಿತ್ರ ಪಲ್ಲಕ್ಕಿಯನ್ನು ಹಿಂದಿನ ಯಶಸ್ವಿ ಚಿತ್ರಗಳ ದೃಷ್ಟಿಯಲ್ಲಿ ನೋಡಿದರೆ ಸಾಮನ್ಯ ಚಿತ್ರ ಅನಿಸಬಹುದು,
ನಿರ್ದೇಶಕ ನರೇಂದ್ರ ಬಾಬು ಚಿತ್ರದಲ್ಲಿ ಹೊಸತೇನು ಕೊಟ್ಟಿಲ್ಲ ಎಂದು ಎಲ್ಲರಿಗೂ ಚಿತ್ರ ನೋಡಿದ ಕೂಡಲೆ ಅನಿಸುತ್ತದೆ, ಎಕೆಂದರೆ

ಪ್ರಕೃತಿಯೇ ಪಾಠಶಾಲೆ (ಇ-ಲೋಕ-27)(18/6/2007

 ಪ್ರಕೃತಿಯಿಂದ ನಾವು ಕಲಿಯಬೇಕಾದ್ದು ಬಹಳವಿದೆ. ಈ ಜಗತ್ತಿನ ಪ್ರತಿ ಜೀವಿಯೂ ಒಂದು ಅದ್ಭುತ. ಹಾಗೆ ನೋಡಿದರೆ ನಮ್ಮ ಸುತ್ತಲಿನ ಪ್ರತಿವಸ್ತುವೂ ಒಂದು ಪ್ರ್‍ಆಕೃತಿಕ ಕಲಾಕೃತಿ.ಇದು ತಡವಾಗಿಯಾದರೂ ನಮ್ಮ ತಂತ್ರಜ್ಞರಿಗೆ ಹೊಳೆದಿದೆ.

ಅಪ್ಪನ ದಿವಸಕ್ಕೆ ಏನು ವಿಶೇಷ?

"ಅಪ್ಪ" ಅಂದರೆ ಬಾಯಲ್ಲಿ ನೀರೂರುತ್ತದೆಯೇ? ಹೌದು, "ಅಪ್ಪ"ದ ರುಚಿ ನಿಮಗೆ ಗೊತ್ತಿದ್ದರೆ! ಓದಿ:ಶ್ರೀವತ್ಸ ಜೋಷಿಯವರು ಅಪ್ಪನ ದಿನ ವಿಕದಲ್ಲಿ ಪ್ರಕಟಿಸಿದ ಬರಹ:
http://vijaykarnatakaepaper.com/pdf/2007/06/17/20070617a_008101003.jpg

ಎಲ್ಲೆಲ್ಲೂ ಸಂಗೀತವೇ...

ರಾತ್ರಿ ಝೀ,ಸ್ಟಾರ್ ಪ್ಲಸ್, ಸೋನಿ ಟಿ.ವಿ. ನೋಡಿ ಜೇಸುದಾಸ್ ಅವರು ಹಾಡಿದ ಹಾಡು ನೆನಪಾಯಿತು.
ಒಂದರಲ್ಲಿ Voice of India, ಇನ್ನೊಂದರಲ್ಲಿ Challenge SaReGaMaPa, ಮತ್ತೊಂದರಲ್ಲಿ Indian Idol, ಜತೆಜತೆಯಲ್ಲೇ ಬಿತ್ತರವಾಗುತ್ತಿದೆ.

ಕೆಲವು ವಚನಗಳು

೧) ಬಲ್ಲಿದನು ಬೆಲ್ಲವನು
ಹೊಂದಿಹನು
ಇಲ್ಲದವನ ಮನೆಗೆ
ಇರುವೆಯೂ ಹತ್ತದೂ ಕಾಣಾ ಭರತೇಶ

೨) ಹಣದ ಕುಪ್ಪರಿಗೆ ಏರಿದವನಿಗೆ
ಮಣ್ಣ ಗಂಧ ತಿಳಿಯದು
ಹೆಣದ ಪಕ್ಕದಲಿ ಎನಿತು
ಕೂತರೂ ಹೊರಡದು ಮಾತು ಕಾಣಾ ಭರತೇಶ

ಸಂಪದದಲ್ಲಿ spam ಕಂಡುಬಂದಲ್ಲಿ ಗಮನಕ್ಕೆ ತನ್ನಿ

ಓದುಗರೆ,

ಸಂಪದದಲ್ಲಿ spam ಕಂಡುಬಂದಲ್ಲಿ ಕೂಡಲೆ [:http://sampada.net/contact|ನಿರ್ವಾಹಕರ ಗಮನಕ್ಕೆ ತನ್ನಿ]. ಬಾಟ್ ಗಳು ಹಾಗೂ ಸ್ಕ್ರಿಪ್ಟುಗಳ ಬಲ್ಕ್ ಹೊಡೆತಗಳಿಗೆ ಸಂಪದ ಹೊರತಾದರೂ ಪ್ರಜ್ಞಾಪೂರ್ವಕವಾಗಿ ಸ್ಪ್ಯಾಮ್ ಮಾಡಿದರೆ ಅದನ್ನು ಅಳಿಸಿಹಾಕಬೇಕಷ್ಟೆ - ಫಿಲ್ಟರ್ ಮಾಡಲಾಗದು . ಹೀಗಾಗಿ ಇಂತಹ ಸ್ಪಾಮ್ ಕಂಡುಬಂದಲ್ಲಿ ಕೂಡಲೆ ನಿರ್ವಹಣೆ ತಂಡದ ಗಮನಕ್ಕೆ ತನ್ನಿ - ಕೂಡಲೆ ಅಳಿಸಿಹಾಕಲಾಗುವುದು.

ಇದಲ್ಲದೆ ನಕಲಿ ಪ್ರೊಫೈಲುಗಳು ನಿಮ್ಮ ಗಮನಕ್ಕೆ ಬಂದಲ್ಲಿ ಅಥವ ಫ್ಲೇಮ್ ಮಾಡೋದಕ್ಕಾಗಿಯೇ ಸೃಷ್ಟಿಸಿದಂತಹ ಐಡಿ ಗಳು ಕಂಡಲ್ಲಿ ಕೂಡ ಗಮನಕ್ಕೆ ತರಬಹುದು.

- ನಿರ್ವಹಣೆ ತಂಡದ ಪರವಾಗಿ,